ದ್ವೇಷ ಭಾಷಣ ಪ್ರಕರಣ: ಕೇರಳದ ಮಾಜಿ ಶಾಸಕ ಪಿಸಿ ಜಾರ್ಜ್​ಗೆ 14 ದಿನಗಳ ನ್ಯಾಯಾಂಗ ಬಂಧನ; ಕೋಮು ದ್ವೇಷ ಸಹಿಸುವುದಿಲ್ಲ ಎಂದ ಪಿಣರಾಯಿ ವಿಜಯನ್

ಏಪ್ರಿಲ್ 29ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಜಾರ್ಜ್ ಮುಸ್ಲಿಮರು ನಡೆಸುವ ಹೋಟೆಲ್​​ನಿಂದ ಆಹಾರ ಸೇವಿಸಬೇಡಿ. ಮುಸ್ಲಿಮರು ಚಹಾದಲ್ಲಿ ಹನಿ ಮದ್ದನ್ನು ಕಲಕಿ ಕೊಡುತ್ತಿದ್ದು...

ದ್ವೇಷ ಭಾಷಣ ಪ್ರಕರಣ: ಕೇರಳದ ಮಾಜಿ ಶಾಸಕ ಪಿಸಿ ಜಾರ್ಜ್​ಗೆ 14 ದಿನಗಳ ನ್ಯಾಯಾಂಗ ಬಂಧನ; ಕೋಮು ದ್ವೇಷ ಸಹಿಸುವುದಿಲ್ಲ ಎಂದ ಪಿಣರಾಯಿ ವಿಜಯನ್
ಪಿಸಿ ಜಾರ್ಜ್ - ಪಿಣರಾಯಿ ವಿಜಯನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 26, 2022 | 10:32 PM

ತಿರುವನಂತಪುರಂ: ದ್ವೇಷ ಭಾಷಣ (Hate speech) ಪ್ರಕರಣದಲ್ಲಿ ಕೇರಳ ಜನಪಕ್ಷಂ (ಸೆಕ್ಯುಲರ್) (Kerala Janapaksham Secular) ನಾಯಕ ಪಿಸಿ ಜಾರ್ಜ್ (PC George) ಅವರಿಗೆ ಗುರುವಾರ ತಿರುವನಂತಪುರಂ ಮೆಜಿಸ್ಟ್ರೇಟ್ 14 ದಿನಗಳ  ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಇಂದು ಬೆಳಗ್ಗೆ ಜಾರ್ಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 29ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಜಾರ್ಜ್ ಮುಸ್ಲಿಮರು ನಡೆಸುವ ಹೋಟೆಲ್​​ನಿಂದ ಆಹಾರ ಸೇವಿಸಬೇಡಿ. ಮುಸ್ಲಿಮರು ಚಹಾದಲ್ಲಿ ಹನಿ ಮದ್ದನ್ನು ಕಲಕಿ ಕೊಡುತ್ತಿದ್ದು ಇದು ಸಂತಾನಶಕ್ತಿ ಕಳೆದುಕೊಳ್ಳಲು ಕಾರಣವಾಗುತ್ತದೆ. ಮುಸ್ಲಿಮರ ಸಂಖ್ಯೆ ಹೆಚ್ಚು ಮಾಡುವುದಕ್ಕಾಗಿ ಅವರು ಮುಸ್ಲಿಮೇತರರಿಗೆ ಈ ರೀತಿ ಮಾಡುತ್ತಿದ್ದಾರೆ ಎಂದಿದ್ದರು. ಅದೇ ವೇಳೆ ಹಿಂದೂ ಮತ್ತು ಕ್ರೈಸ್ತರು ಹೆಚ್ಚೆಚ್ಚು ಮಕ್ಕಳನ್ನು ಹೊಂದಬೇಕು ಎಂದು ಮನವಿ ಮಾಡಿದ್ದರು ಜಾರ್ಜ್. 70 ವರ್ಷದ ಹರೆಯದ ಜಾರ್ಜ್ ಅವರನ್ನು ಏಪ್ರಿಲ್ 30 ರಂದು ಮೊದಲು ಬಂಧಿಸಲಾಯಿತು. ಮೇ 1 ರಂದು ತಿರುವನಂತಪುರಂ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು, ಆದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬುಧವಾರ ಅವರ ಜಾಮೀನನ್ನು ರದ್ದುಗೊಳಿಸಿತು. ಜಾಮೀನು ರದ್ದು ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಕೇರಳ ಪೊಲೀಸರು, ಜಾರ್ಜ್ ಮೇ 8 ರಂದು ಕೊಚ್ಚಿಯಲ್ಲಿ ಮತ್ತೆ ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ವಾದಿಸಿದ್ದಾರೆ.

ಗುರುವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ಪ್ರಾಸಿಕ್ಯೂಷನ್ ಸಲ್ಲಿಸಿದ ಮೇ 8 ರ ಕಾರ್ಯಕ್ರಮದ ವಿಡಿಯೊ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಿದ ನಂತರ ಪಿಸಿ ಜಾರ್ಜ್ ಅನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಈ ಹಿಂದೆ ಮಾಜಿ ಶಾಸಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದ ನ್ಯಾಯಾಧೀಶರು ಪ್ರಾಸಿಕ್ಯೂಷನ್‌ನ ವಾದವನ್ನು ಆಲಿಸಿಲ್ಲ ಎಂದು ಕೇರಳ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.ನ್ಯಾಯಾಲಯದ ಆದೇಶದ ನಂತರ, ಜಾರ್ಜ್ ಅವರನ್ನು ಪೂಜಾಪ್ಪುರ ಪ್ರದೇಶದಲ್ಲಿರುವ ತಿರುವನಂತಪುರಂ ಜಿಲ್ಲಾ ಸಬ್ ಜೈಲಿಗೆ ಕರೆದೊಯ್ಯಲಾಯಿತು.

ಕೋಮು ದ್ವೇಷವನ್ನು ಸಹಿಸುವುದಿಲ್ಲ: ಪಿಣರಾಯಿ ವಿಜಯನ್

ಇದನ್ನೂ ಓದಿ
Image
ಪಿಎಫ್​ಐ ರ್‍ಯಾಲಿಯಲ್ಲಿ ಹಿಂದೂ-ಕ್ರಿಶ್ಚಿಯನ್ನರ ವಿರುದ್ಧ ಘೋಷಣೆ: ಒಬ್ಬನ ಬಂಧನ, ನಾಯಕರ ವಿರುದ್ಧ ದೂರು ದಾಖಲು
Image
ದ್ವೇಷ ಭಾಷಣ: ಪಿಸಿ ಜಾರ್ಜ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ ಕೇರಳ ಪೊಲೀಸ್
Image
ಸೋಲಾರ್ ಹಗರಣದ ಆರೋಪಿಯ ಲೈಂಗಿಕ ಕಿರುಕುಳ ಪ್ರಕರಣ: ಕೇರಳ ಸಿಎಂ ನಿವಾಸದಲ್ಲಿ ಸಿಬಿಐ ಪರಿಶೀಲನೆ
Image
ಭಾಷಣದಲ್ಲಿ ಮುಸ್ಲಿಮರಿಗೆ ಅವಹೇಳನ; ಕೇರಳದ ಹಿರಿಯ ರಾಜಕಾರಣಿ ಪಿ.ಸಿ.ಜಾರ್ಜ್​ ಪೊಲೀಸ್ ಕಸ್ಟಡಿಗೆ

ಕೊಚ್ಚಿ: ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಪ್ರಕರಣಗಳಲ್ಲಿ ರಿಮಾಂಡ್‌ನಲ್ಲಿರುವ ಜನಪಕ್ಷದ ನಾಯಕ ಪಿಸಿ ಜಾರ್ಜ್ ಅವರನ್ನು ‘ರಕ್ಷಿಸುತ್ತಿರುವ’ ರಾಜ್ಯ ಬಿಜೆಪಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಟೀಕಿಸಿದ್ದಾರೆ. ಕಾಕ್ಕನಾಡಿನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ಪಿಣರಾಯಿ, ಜಾರ್ಜ್ ಕೋಮು ವಿಷವನ್ನು ಉಗುಳುತ್ತಿದ್ದಾರೆ. ಬಿಜೆಪಿ ಅವರನ್ನು ರಕ್ಷಿಸುತ್ತಿದೆ. ಬಿಜೆಪಿ ಕುರಿಯ ಅಂಗಿತೊಟ್ಟ ತೋಳ. ಕ್ರಿಶ್ಚಿಯನ್ನರನ್ನು ರಕ್ಷಿಸಲು ಜಾರ್ಜ್‌ಗೆ ಬೆಂಬಲ ನೀಡುತ್ತಿದ್ದೇವೆ ಎಂದು ಬಿಜೆಪಿ ಹೇಳುತ್ತಿದೆ.ಆದರೆ ಕೇರಳದ ಕ್ರಿಶ್ಚಿಯನ್ನರು ಅವರ ನಕಲಿ ಪ್ರೀತಿಯನ್ನು ಅರಿತುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 10:26 pm, Thu, 26 May 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್