Video: ತೆವಳುತ್ತಾ ಬಂದು ನಡುರಸ್ತೆಯಲ್ಲಿ ಕುಳಿತ ಮಗು, ದೇವರಂತೆ ಬಂದು ರಕ್ಷಿಸಿದ ಬಸ್ ಡ್ರೈವರ್

ಕೇರಳಂನ ಮಲಪ್ಪುರಂನಲ್ಲಿ ನಡೆದ ಘಟನೆಯೊಂದು ಇಡೀ ದೇಶದ ಗಮನ ಸೆಳೆದಿದೆ. ನಡುರಸ್ತೆಯಲ್ಲಿ ತೆವಳುತ್ತಿದ್ದ ಪುಟ್ಟ ಮಗುವನ್ನು ವೇಗವಾಗಿ ಬರುತ್ತಿದ್ದ ಬಸ್ ಚಾಲಕ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. ಬ್ರೇಕ್ ಹಾಕಿ, ಬಸ್ಸಿನಿಂದ ಧಾವಿಸಿ ಮಗುವನ್ನು ಸುರಕ್ಷಿತವಾಗಿ ತಂದ ಚಾಲಕನ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಈ ಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Video: ತೆವಳುತ್ತಾ ಬಂದು ನಡುರಸ್ತೆಯಲ್ಲಿ ಕುಳಿತ ಮಗು, ದೇವರಂತೆ ಬಂದು ರಕ್ಷಿಸಿದ ಬಸ್ ಡ್ರೈವರ್
ಸಾಂದರ್ಭಿಕ ಚಿತ್ರ
Image Credit source: Pixabay

Updated on: Jun 12, 2026 | 9:42 AM

ತಿರುವನಂತಪುರಂ, ಜೂನ್ 12: ನಡು ರಸ್ತೆಯಲ್ಲಿ ಬಂದು ಕುಳಿತಿದ್ದ ಮಗುವನ್ನು ಬಸ್(Bus) ಚಾಲಕರೊಬ್ಬರು ದೇವರಂತೆ ಬಂದು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಕೇರಳಂನ ಮಲಪ್ಪುರಂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೂನ್ 10ರಂದು ನಡೆದಿದೆ.
ವಾಹನಗಳು ಅತಿ ವೇಗವಾಗಿ ಚಲಿಸುವ ಮುಖ್ಯ ರಸ್ತೆಯೊಂದರ ಮೇಲೆ ಕೇವಲ ಮಗುವೊಂದು ಮನೆಯ ಗೇಟ್ ದಾಟಿ ತೆವಳುತ್ತಾ ಬಂದು ರಸ್ತೆಯ ಮಧ್ಯಕ್ಕೆ ಕುಳಿತಿತ್ತು. ಸರಿಯಾಗಿ ಅದೇ ಕ್ಷಣದಲ್ಲಿ ಆ ರಸ್ತೆಯಲ್ಲಿ ಬಸ್ಸೊಂದು ವೇಗವಾಗಿ ಅದೇ ದಾರಿಯಲ್ಲಿ ಬರುತ್ತಿತ್ತು. ಮಗುವಿನ ಸಮೀಪ ಬರುತ್ತಿದ್ದಂತೆ ಏಕಾಏಕಿ ಚಾಲಕ ಬ್ರೇಕ್ ಹಾಕಿದ್ದಾನೆ.

ಆದರೆ, ಬಸ್ಸಿನ ಸ್ಟೀರಿಂಗ್ ಹಿಡಿದಿದ್ದ ಚಾಲಕನ ದೃಷ್ಟಿ ರಸ್ತೆಯ ಮೇಲಿದ್ದ ಆ ಸಣ್ಣ ಮಗುವಿನ ಮೇಲೆ ಬಿತ್ತು. ಧೃತಿಗೆಡದ ಆತ ಅತ್ಯಂತ ವೇಗವಾಗಿ ಪ್ರತಿಕ್ರಿಯಿಸಿ, ಬಸ್ಸಿನ ಎಮರ್ಜೆನ್ಸಿ ಬ್ರೇಕ್ ಒತ್ತಿದ್ದರೆ. ಚಾಲಕನ ಅದ್ಭುತ ನಿಯಂತ್ರಣದಿಂದಾಗಿ ಬಸ್ಸು ಮಗುವಿನಿಂದ ಕೇವಲ ಕೆಲವೇ ಇಂಚುಗಳ ದೂರದಲ್ಲಿ ನಿಂತಿತ್ತು.

ಬಸ್ಸು ನಿಲ್ಲುತ್ತಿದ್ದಂತೆಯೇ, ಕೃತಜ್ಞತಾ ಭಾವದಿಂದ ಡ್ರೈವರ್ ಬಾಗಿಲು ತೆರೆದು ರಸ್ತೆಯತ್ತ ಧಾವಿಸಿದ್ದಾರೆ. ವಿರುದ್ಧ ದಿಕ್ಕಿನಿಂದ ಬರಬಹುದಾದ ಬೇರೆ ಯಾವುದೇ ವಾಹನಗಳು ಮಗುವಿಗೆ ಡಿಕ್ಕಿ ಹೊಡೆಯುವ ಮುನ್ನವೇ, ಆ ಮಗುವನ್ನು ಎತ್ತಿ ಎದೆಗೆ ಅಪ್ಪಿಕೊಂಡು ಸುರಕ್ಷಿತವಾಗಿ ರಸ್ತೆಯ ಪಕ್ಕಕ್ಕೆ ಕರೆತಂದಿದ್ದಾರೆ.

ಮತ್ತಷ್ಟು ಓದಿ: ಫ್ರೀ ಬಸ್ ಪಾಸ್ ಬೆನ್ನಲ್ಲೇ ರಿಯಾಯಿತಿಯಲ್ಲಿ ಮೆಟ್ರೋ ಪಾಸ್ ನೀಡುವಂತೆ ಬೆಂಗಳೂರು ವಿದ್ಯಾರ್ಥಿಗಳ ಮನವಿ

 

ಮಗುವನ್ನು ಎತ್ತಿಕೊಂಡು ಹತ್ತಿರದ ಮನೆಗೆ ಹೋಗಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಮಗು ಮನೆಯಿಂದ ಹೇಗೆ ಹೊರಗೆ ಬಂತು ಎಂಬುದು ಇನ್ನು ನಿಖರವಾಗಿ ತಿಳಿದುಬಂದಿಲ್ಲವಾದರೂ, ಮಗು ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿರುವುದು ಇಡೀ ದೇಶ ನಿರಾಳವಾಗುವಂತೆ ಮಾಡಿದೆ.

ವಿಡಿಯೋ

ಪ್ರತ್ಯೇಕ ಘಟನೆ: ಮುಂಬೈನಲ್ಲಿ ಬಸ್ ಅಪಘಾತ

ಮುಂಬೈನ ದಾದರ್ ಬಳಿಯ ಪ್ಲಾಜಾ ಸಿನಿಮಾ ಬಳಿ ‘ಬೆಸ್ಟ್’ ಸಂಸ್ಥೆಯ ಬಸ್ಸೊಂದು ನಿಯಂತ್ರಣ ತಪ್ಪಿ ಆಕ್ಟಿವಾ, ಎಲೆಕ್ಟ್ರಿಕ್ ಬೈಕ್ ಮತ್ತು ಕಾರು ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ದುರದೃಷ್ಟಕರ ಘಟನೆಯಲ್ಲಿ 30 ವರ್ಷದ ಡೆಲಿವರಿ ಎಕ್ಸಿಕ್ಯೂಟಿವ್ ನೌಕರರೊಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ವಾಹನವನ್ನು ಮರುಪ್ರಾರಂಭಿಸುವಾಗ ಚಾಲಕ ಆಕಸ್ಮಿಕವಾಗಿ ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಒತ್ತಿದ್ದೇ ಇದಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:28 am, Fri, 12 June 26

Follow Us