ರೇಪ್ ಆರೋಪಿಗೆ ವ್ಯಾಟಿಕನ್ ಸೈ ಅನ್ನುವುದಾದರೆ ಟೆನ್ ಕಮಾಂಡ್ಮೆಂಟ್ಸ್ ಮತ್ತು ಯೇಸು ಬೋಧನೆಗಳ ನಿಲ್ಲಿಸುವುದು ಉತ್ತಮ -ಫಾದರ್ ವಟ್ಟೋಲಿ
ಮುಲಕ್ಕಲ್ ವಿರುದ್ಧ ಮಾತನಾಡಿದ್ದಕ್ಕಾಗಿ ಕ್ಯಾಥೋಲಿಕ್ ಚರ್ಚ್‌ನಿಂದ ಹೊರಹಾಕಲ್ಪಟ್ಟ ಸನ್ಯಾಸಿನಿ ಲೂಸಿ ಕಲಪ್ಪುರ, ಈ ನಿರ್ಧಾರವು ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಚರ್ಚ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೆ ನಾಚಿಕೆಗೇಡಿನ ಸಂಗತಿ ಎಂದೂ ನಾನು ಭಾವಿಸಿದ್ದೇನೆ" ಎಂದು ಹೇಳಿದ್ದಾರೆ.
ಕಳೆದ ಜನವರಿಯಲ್ಲಿ ಕೇರಳದ ಕೆಳ ನ್ಯಾಯಾಲಯವು ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಮುಲಕ್ಕಲ್ ಅವರನ್ನು (Franco Mulakkal) ಅತ್ಯಾಚಾರ ಆರೋಪಗಳಿಂದ ಖುಲಾಸೆಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕೇರಳದ ವಿವಾದಿತ ಸನ್ಯಾಸಿನಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆಗಾಗಿ ನ್ಯಾಯಕ್ಕಾಗಿ ಆಗ್ರಹಿಸಿ ಅಭಿಯಾನದ ನೇತೃತ್ವ ವಹಿಸಿದ್ದ ಸೇವ್ ಅವರ್ ಸಿಸ್ಟರ್ಸ್ (ಎಸ್‌ಒಎಸ್ -Save Our Sisters-SOS) ವೇದಿಕೆಯ ಸಂಚಾಲಕ ಫಾದರ್ ಅಗಸ್ಟಿನ್ ವಟ್ಟೋಲಿ (Fr Augustine Vattoli) ಅವರು ಪ್ರಕರಣದ ಆರೋಪಿ, ಮಾಜಿ ಜಲಂಧರ್ ಬಿಷಪ್, ಫ್ರಾಂಕೋ ಮುಲಕ್ಕಲ್ ಖುಲಾಸೆಗೊಂಡ ನಂತರ ಚರ್ಚ್ ಕರ್ತವ್ಯಕ್ಕೆ ಮರಳುವ ಸಾಧ್ಯತೆ ಕುರಿತಾದ ವರದಿಗಳ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
ಕೊಟ್ಟಾಯಂನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನೀಡಿದ ತೀರ್ಪನ್ನು ವ್ಯಾಟಿಕನ್ ಅಂಗೀಕರಿಸಿದೆ ಮತ್ತು ಮುಲಕ್ಕಲ್ ಅವರಿಗೆ ಪ್ಯಾಸ್ಟರಲ್ ಕರ್ತವ್ಯಗಳಿಗೆ ಮರಳಲು ಅವಕಾಶ ನೀಡುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತವೆ. ಭಾರತದಲ್ಲಿನ ಬಿಷಪ್‌ಗಳೇ ಹೆಚ್ಚಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದರಲ್ಲಿ ವ್ಯಾಟಿಕನ್‌ಗೆ ಯಾವುದೇ ಪಾತ್ರವಿಲ್ಲ, ಆದರೆ ಅದಕ್ಕೆ ಕೇವಲ ಸಹಿ ಮುದ್ರೆ ಒತ್ತುತ್ತಾರೆ ಅಷ್ಟೇ ಎನ್ನುತ್ತಾರೆ ಸೀನಿಯರ್ ಲೂಸಿ ಕಲಾಪ್ಪುರ (Sr Lucy Kalappura).
ಫ್ರಾಂಕೋ ಮುಳಕ್ಕಲ್ ಅವರನ್ನು ಜಲಂಧರ್ ಬಿಷಪ್ ಆಗಿ ವ್ಯಾಟಿಕನ್ ಮರುಸ್ಥಾಪಿಸಿದ್ದೇ ಆದರೆ, ಸಂತ್ರಸ್ತೆ ಮತ್ತು ಇತರ ಸನ್ಯಾಸಿನಿಯರು ಇರುವ ಕಾನ್ವೆಂಟ್ ನೇರವಾಗಿ ಅವರ ಅಧೀನಕ್ಕೆ ಬರುತ್ತದೆ ಎಂದು ಫಾದರ್ ವಟ್ಟೋಲಿ ಹೇಳಿದ್ದಾರೆ. ಇದರಿಂದ “ಅನ್ಯಾಯದ ವಿರುದ್ಧ ನಿಂತಿರುವ ಪ್ರತಿಯೊಬ್ಬರನ್ನು ಮೌನಗೊಳಿಸಲು” ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
“ಹೋರಾಟ ಕೊನೆಗೊಂಡಿಲ್ಲ, ಸಂತ್ರಸ್ತೆ ಈಗಾಗಲೇ ಕೇರಳ ಹೈಕೋರ್ಟ್‌ನ (Kerala High Court) ಮೊರೆ ಹೋಗಿದ್ದಾರೆ. ಆಕೆ ಉಚ್ಛ ನ್ಯಾಯಾಲಯಕ್ಕೆ ಹೋಗಬಹುದು. (Additional District and Sessions Court I in Kottayam) ತೀರ್ಪು ಫ್ರಾಂಕೋ ಮುಳಕ್ಕಲ್ ನಿರಪರಾಧಿ ಎಂದು ಹೇಳಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಕಾನೂನು ಆರೋಪಿಗಳಿಗೆ ಅನುಮಾನದ ಲಾಭವನ್ನು ನೀಡುತ್ತದೆ. ಇಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ಖುಲಾಸೆಗೊಳಿಸಲಾಗಿದೆ, ಅವರು ನಿರಪರಾಧಿ ಎಂಬ ಕಾರಣಕ್ಕಾಗಿ ಅಲ್ಲ” ಎಂದು ಅವರು (Fr Augustine Vattoli) ಹೇಳಿದರು.
ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಮತ್ತು ಆಕೆಯನ್ನು ಬೆಂಬಲಿಸುವ ಐವರು ಸನ್ಯಾಸಿನಿಯರು ಜಲಂಧರ್ ಡಯಾಸಿಸ್ ಅಡಿಯಲ್ಲಿ ಬರುವ ಕುರವಿಲಂಗಾಡುವಿನ ಸೇಂಟ್ ಫ್ರಾನ್ಸಿಸ್ ಮಿಷನ್ ಹೋಮ್‌ನಲ್ಲಿ ನೆಲೆಸಿದ್ದಾರೆ. ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಅಡಿಯಲ್ಲಿ (Witness Protection Scheme) ಅವರಿಗೆ ಪೊಲೀಸ್ ರಕ್ಷಣೆ ಇದೆಯಾದರೂ, ಸನ್ಯಾಸಿನಿಯರು ಚರ್ಚ್‌ನಿಂದ ಒತ್ತಡವನ್ನು ಎದುರಿಸುತ್ತಲೇ ಇದ್ದಾರೆ. ಅವರನ್ನು ದೇಶದ ವಿವಿಧ ಕಾನ್ವೆಂಟ್‌ಗಳಿಗೆ ವರ್ಗಾಯಿಸುವ ಪ್ರಯತ್ನಗಳನ್ನು ಅವರು ವಿರೋಧಿಸಿದ್ದಾರೆ.
- * ಫ್ರಾಂಕೋ ಮುಳಕ್ಕಲ್ ಅವರನ್ನು (Franco Mulakkal) ಮರುಸೇರ್ಪಡೆಗೊಳಿಸಿದರೆ ಪ್ರಕರಣದಲ್ಲಿ ಸಂತ್ರಸ್ತೆ ಸೇರಿದಂತೆ ಇತರರು ಉಳಿದುಕೊಂಡಿರುವ ಕಾನ್ವೆಂಟ್‌ನ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳುತ್ತಾರೆ ಎಂದು ಫ್ರಾಂ ವಟ್ಟೋಳಿ (Fr Vattoli) ನ್ಯೂಸ್ 9 ಗೆ ತಿಳಿಸಿದ್ದಾರೆ. ಅನ್ಯಾಯದ ವಿರುದ್ಧ ನಿಲ್ಲುವ ಪ್ರತಿಯೊಬ್ಬರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಸಾಕ್ಷಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ, ಅವರು ನಿರಪರಾಧಿ ಎಂಬ ಕಾರಣಕ್ಕಾಗಿ ಅಲ್ಲ ಎನ್ನುತ್ತಾರೆ ಫಾ. ವಟ್ಟೋಳಿ.
ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಮತ್ತು ಇತರರ ಮನವಿಯನ್ನು ಹೈಕೋರ್ಟ್ ಸ್ವೀಕರಿಸಿದೆ, ಆದರೆ ವಿಚಾರಣೆಯ ದಿನಾಂಕದ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರ ಪ್ರಕಟಿಸಲಾಗಿಲ್ಲ. ಸಂತ್ರಸ್ತ ಮಹಿಳೆ ಮತ್ತು ಇತರ ಸನ್ಯಾಸಿನಿಯರ ವಿದ್ಯಮಾನದ ಬಗ್ಗೆ ಕೇಳಿದಾಗ, ಅವರು ಇಂತಹ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ.
ಮುಲಕ್ಕಲ್ ವಿರುದ್ಧ ಮಾತನಾಡಿದ್ದಕ್ಕಾಗಿ ಕ್ಯಾಥೋಲಿಕ್ ಚರ್ಚ್‌ನಿಂದ ಹೊರಹಾಕಲ್ಪಟ್ಟ ಸನ್ಯಾಸಿನಿ ಲೂಸಿ ಕಲಪ್ಪುರ, ಈ ನಿರ್ಧಾರವು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ. “ಮೊಟ್ಟಮೊದಲನೆಯದಾಗಿ ನನಗೆ ದುಃಖ ಮತ್ತು ನಿರಾಶೆಯಾಗಿದೆ. ಜೊತೆಗೆ ಇದು ಚರ್ಚ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೆ ನಾಚಿಕೆಗೇಡಿನ ಸಂಗತಿ ಎಂದೂ ನಾನು ಭಾವಿಸಿದ್ದೇನೆ” ಎಂದು ಅವರು ಹೇಳಿದರು.
“ಇದು ಅವರ ನಿಲುವಾಗಿದ್ದರೆ ಹತ್ತು ಅನುಶಾಸನಗಳು (ten commandments) ಮತ್ತು ಯೇಸು ಕ್ರಿಸ್ತನ (Jesus Christ) ಬೋಧನೆಗಳ ಕುರಿತು ಉಪನ್ಯಾಸವನ್ನು ಚರ್ಚ್ ನಿಲ್ಲಿಸಬೇಕು” ಎಂದು ಅವರು ಹೇಳಿದರು.
ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:37 pm, Mon, 13 June 22