ಪಾತಾಳಕ್ಕೆ ಕುಸಿದ ಭಾರತದ ಜಿಡಿಪಿ ದರ: ಆತಂಕದ ಸುನಾಮಿ

ಸಾಧು ಶ್ರೀನಾಥ್​

|

Updated on:Sep 10, 2019 | 11:29 AM

ಕಳೆದ 6 ವರ್ಷಗಳಲ್ಲೇ ಭಾರತದ ಜಿಡಿಪಿ ಬೆಳವಣಿಗೆ ದರವು ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಏಪ್ರಿಲ್-ಜೂನ್ 2019ರ ಜಿಡಿಪಿ ಬೆಳವಣಿಗೆಯ ದರವು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಶೇ.5ಕ್ಕೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಇದರಿಂದ ಪ್ರಮುಖವಾಗಿ ದೇಶೀಯ ಉತ್ಪಾದನಾ ವಲಯದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಉಂಟಾಗಿದ್ದು, ದೇಶೀಯ ಉತ್ಪಾದನಾ ವಲಯ ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ. ಜಿಡಿಪಿ ನಿಧಾನಗತಿಯ ಬೆಳವಣಿಗೆಗೆ ಉತ್ಪಾದನಾ ವಲಯದಲ್ಲಿನ ತೀವ್ರ ಕುಸಿತ ಮತ್ತು ಕೃಷಿ ಉತ್ಪಾದನೆಯ ಕುಸಿತವೇ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. […]

ಪಾತಾಳಕ್ಕೆ ಕುಸಿದ ಭಾರತದ ಜಿಡಿಪಿ ದರ: ಆತಂಕದ ಸುನಾಮಿ
Follow us

ಕಳೆದ 6 ವರ್ಷಗಳಲ್ಲೇ ಭಾರತದ ಜಿಡಿಪಿ ಬೆಳವಣಿಗೆ ದರವು ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಏಪ್ರಿಲ್-ಜೂನ್ 2019ರ ಜಿಡಿಪಿ ಬೆಳವಣಿಗೆಯ ದರವು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಶೇ.5ಕ್ಕೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಇದರಿಂದ ಪ್ರಮುಖವಾಗಿ ದೇಶೀಯ ಉತ್ಪಾದನಾ ವಲಯದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಉಂಟಾಗಿದ್ದು, ದೇಶೀಯ ಉತ್ಪಾದನಾ ವಲಯ ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ.

ಜಿಡಿಪಿ ನಿಧಾನಗತಿಯ ಬೆಳವಣಿಗೆಗೆ ಉತ್ಪಾದನಾ ವಲಯದಲ್ಲಿನ ತೀವ್ರ ಕುಸಿತ ಮತ್ತು ಕೃಷಿ ಉತ್ಪಾದನೆಯ ಕುಸಿತವೇ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಕೃಷಿ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿನ ಕಳಪೆ ಸಾಧನೆಯಿಂದಾಗಿ ಜಿಡಿಪಿ ಬೆಳವಣಿಗೆಯ ದರವು ಜನವರಿ-ಮಾರ್ಚ್ 2018-19ರಲ್ಲಿ 5 ವರ್ಷಗಳ ಕನಿಷ್ಠ 5.8ಕ್ಕೆ ಇಳಿದಿದೆ. ಇದು 20 ತ್ರೈಮಾಸಿಕಗಳಲ್ಲಿ ಅತ್ಯಂತ ಕಡಿಮೆ ಬೆಳವಣಿಗೆಯ ದರವಾಗಿದೆ ಎನ್ನಲಾಗಿದೆ. ಸುಮಾರು 2 ವರ್ಷಗಳ ನಂತರ ಭಾರತದ ಜಿಡಿಪಿ ಅಭಿವೃದ್ಧಿ ದರ ಚೀನಾಕ್ಕಿಂತ ಹಿಂದುಳಿದಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿ

Related Stories

Click on your DTH Provider to Add TV9 Kannada