ಭಾರತೀಯ ಬ್ಯಾಂಕುಗಳು ವಿಶ್ವದ ಟಾಪ್ 10 ಸ್ಥಾನ ಗಳಿಸುವ ಗುರಿ ಹೊಂದಬೇಕು; ಅಮಿತ್ ಶಾ
'ಕಳೆದ 10 ವರ್ಷಗಳಲ್ಲಿ 53 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಬಡವರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸಲು ಈ ಯೋಜನೆ ರೂಪಿಸಲಾಗಿದೆ. ಭಾರತದ ಬ್ಯಾಂಕ್ಗಳು ಜಗತ್ತಿನ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಬ್ಯಾಂಕಿಂಗ್ ಕುರಿತಾದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.

ಮುಂಬೈ, ಸೆಪ್ಟೆಂಬರ್ 25: ಭಾರತೀಯ ಬ್ಯಾಂಕುಗಳು ಕೇವಲ ಬೆಳವಣಿಗೆಗೆ ಮಾತ್ರ ಯೋಜನೆ ರೂಪಿಸಬಾರದು. ಅದರ ಜೊತೆಗೆ ತಮ್ಮ ಸ್ಕೇಲ್ ಬದಲಿಸಿಕೊಳ್ಳಬೇಕು, ವಿಶ್ವದ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ಗುರಿ ಹೊಂದಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 2047ರ ವೇಳೆಗೆ ಭಾರತವನ್ನು ‘ವಿಶ್ವಗುರು’ವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದಾರೆ. “ಸಂವಿಧಾನವು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸೇರ್ಪಡೆ ಎಂಬ ಮೂರು ರೀತಿಯ ಒಳಗೊಳ್ಳುವಿಕೆಯ ಬಗ್ಗೆ ಮಾತನಾಡುತ್ತದೆ. ಇವು ಭಾರತದ ಬೆಳವಣಿಗೆಯ ಕಥೆಗೆ ಮಾರ್ಗದರ್ಶನ ನೀಡುತ್ತವೆ” ಎಂದು ಅಮಿತ್ ಶಾ ಹೇಳಿದರು.
ಇದನ್ನೂ ಓದಿ: ಒಳನುಸುಳುಕೋರರನ್ನು ರಕ್ಷಿಸುವ ಉದ್ದೇಶದಿಂದ ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ದೇಶದ ಆರ್ಥಿಕ ಬೆಳವಣಿಗೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSME) ಬೆಂಬಲಿಸುವುದು ನಿರ್ಣಾಯಕವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್, ಅದಾನಿ ಗ್ರೂಪ್ ಮತ್ತು ಟೊರೆಂಟ್ ಗ್ರೂಪ್‌ನಂತಹ ದೈತ್ಯರು ಒಂದು ಹಂತದಲ್ಲಿ MSMEಗಳಾಗಿದ್ದವು ಎಂಬುದನ್ನು ಮರೆಯಬಾರದು ಎಂದು ಅಮಿತ್ ಶಾ ಹೇಳಿದರು.
UPA के समय में फोन करके लोन दिलाने वाली ‘फोन बैंकिंग’ होती थी, जिस कारण भारत का बैंकिंग सेक्टर भ्रष्टाचार से ग्रसित था। pic.twitter.com/vFAeqBWXte
— Amit Shah (@AmitShah) September 25, 2025
“ಒಂದು ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅದರಲ್ಲೂ ವಿಶೇಷವಾಗಿ ಭಾರತದಂತಹ ದೇಶದಲ್ಲಿ MSMEಗಳಿಗೆ ಪ್ರಾಮುಖ್ಯತೆ ನೀಡದಿದ್ದರೆ ಅದು ದೇಶದ ಬೆಳವಣಿಗೆಯ ಕಥೆಯನ್ನು ನಿಲ್ಲಿಸುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು. ಈ ಸಂಘಟಿತ ಸಂಸ್ಥೆಗಳಿಗೆ ಯಾರೂ ಸಾಲ ನೀಡದಿದ್ದರೆ, ಭಾರತಕ್ಕೆ ಇಷ್ಟೊಂದು ಕೈಗಾರಿಕಾ ಸಂಸ್ಥೆಗಳು ಇರುತ್ತಿರಲಿಲ್ಲ ಎಂದು ಅಮಿತ್ ಶಾ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




