AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಆರ್​ಎಸ್ ಅಧಿಕಾರಿಯ ಮಗಳ ಮೇಲೆ ಅತ್ಯಾಚಾರ, ಕೊಲೆ, ಆ ಅಕ್ಕ ಹಣ ಕೊಟ್ಟಿದ್ರೆ ಇಷ್ಟೆಲ್ಲಾ ಆಗ್ತಿರ್ಲಿಲ್ಲ ಎಂದ ಆರೋಪಿ ರಾಹುಲ್

ದೆಹಲಿಯಲ್ಲಿ ನಡೆದ ಯುಪಿಎಸ್ಸಿ ಆಕಾಂಕ್ಷಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ಮುಂದುವರೆದಿದೆ. ಆರೋಪಿ ರಾಹುಲ್ ಮೀನಾ, ಹಣಕ್ಕಾಗಿ ಈ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮೃತ ಯುವತಿಯ ರಕ್ತಸಿಕ್ತ ಬೆರಳನ್ನು ಬಳಸಿ ಲಾಕರ್ ತೆರೆಯಲು ಯತ್ನಿಸಿದ್ದು ಆತನ ವಿಕೃತ ಮನಸ್ಥಿತಿಯನ್ನು ತೋರುತ್ತದೆ. ಈ ಹಿಂದೆ ಬೇರೆಡೆ ಲೈಂಗಿಕ ದೌರ್ಜನ್ಯ ಎಸಗಿ ಹಣಕ್ಕಾಗಿ ಬೆಟ್ಟಿಂಗ್ ಆಡಿದ್ದ ರಾಹುಲ್, ಯಾವುದೇ ಪಶ್ಚಾತ್ತಾಪವಿಲ್ಲದೆ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.

ಐಆರ್​ಎಸ್ ಅಧಿಕಾರಿಯ ಮಗಳ ಮೇಲೆ ಅತ್ಯಾಚಾರ, ಕೊಲೆ, ಆ ಅಕ್ಕ ಹಣ ಕೊಟ್ಟಿದ್ರೆ ಇಷ್ಟೆಲ್ಲಾ ಆಗ್ತಿರ್ಲಿಲ್ಲ ಎಂದ ಆರೋಪಿ ರಾಹುಲ್
ರಾಹುಲ್ Image Credit source: Aaj Tak
ನಯನಾ ರಾಜೀವ್
|

Updated on: Apr 24, 2026 | 2:29 PM

Share

ನವದೆಹಲಿ, ಏಪ್ರಿಲ್ 24: ದೆಹಲಿಯಲ್ಲಿ ನಡೆದ ಯುಪಿಎಸ್​ಸಿ ಆಕಾಂಕ್ಷಿಯ ಹತ್ಯೆ(Murder) ಮತ್ತು ಅತ್ಯಾಚಾರ ಪ್ರಕರಣದ ತನಿಖೆ ಚುರುಕುಗೊಂಡಿದೆ. ವಿಚಾರಣೆ ವೇಳೆ ಆರೋಪಿ ರಾಹುಲ್ ಮೀನಾ ನೀಡುತ್ತಿರುವ ಹೇಳಿಕೆಗಳು ಆತನ ವಿಕೃತ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ರಾಹುಲ್ ಮೀನಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ಆ ಅಕ್ಕ ಹಣ ಕೊಟ್ಟಿದ್ದರೆ ಈ ರೀತಿ ಪರಿಸ್ಥಿತಿ ಬರುತ್ತಲೇ ಇರಲಿಲ್ಲ ಎಂದು ಆತ ಆ ಯುವತಿಯನ್ನು ಅಕ್ಕ ಎಂದು ಕರೆದಿದ್ದಾನೆ.

ದರೋಡೆ ಮಾಡುವ ಉದ್ದೇಶದಿಂದ ಬಂದಿದ್ದ ತನಗೆ, ಯುವತಿ ಪ್ರತಿರೋಧ ಒಡ್ಡಿದ್ದರಿಂದಲೇ ಈ ಕೃತ್ಯ ನಡೆದಿದೆ ಎಂದು ಆತ ವಾದಿಸಿದ್ದಾನೆ. ನಾನು ಹಣ ಮತ್ತು ಆಭರಣಕ್ಕಾಗಿ ಬಂದಿದ್ದೆ. ಆಕೆ ಕೂಗಾಡಲು ಶುರು ಮಾಡಿದಾಗ ದೀಪದಿಂದ ಹೊಡೆದೆ, ಆಗ ಆಕೆ ಪ್ರಜ್ಞೆ ತಪ್ಪಿದಳು ಎಂದು ಅವನು ವಿವರಿಸಿದ್ದಾನೆ.

ಮತ್ತಷ್ಟು ಓದಿ: ನನ್ನಿಂದ ತಪ್ಪಾಗಿದೆ, ಐಆರ್​ಎಸ್ ಅಧಿಕಾರಿ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಹೇಳಿದ್ದೇನು?

ಹತ್ಯೆಯ ನಂತರದ ಘಟನೆ ಮತ್ತಷ್ಟು ಭಯಾನಕವಾಗಿವೆ. ಯುವತಿಯ ಕತ್ತು ಹಿಸುಕಿ ಕೊಂದ ನಂತರ, ಆರೋಪಿ ಆಕೆಯನ್ನು ಕೆಳಮಹಡಿಗೆ ಎಳೆದುಕೊಂಡು ಹೋಗಿದ್ದಾನೆ. ಹಣದ ಹಪಾಹಪಿಯಿಂದಾಗಿ ಆತ ಮೃತ ಯುವತಿಯ ರಕ್ತಸಿಕ್ತ ಬೆರಳನ್ನು ಲಾಕರ್‌ನ ಸ್ಕ್ಯಾನರ್‌ಗೆ ಒತ್ತಿ ಅದನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಯುವತಿ ಅಷ್ಟರಲ್ಲೇ ಮೃತಪಟ್ಟಿದ್ದರಿಂದ ಅದು ಸಾಧ್ಯವಾಗಲಿಲ್ಲ. ನಂತರ ಸ್ಕ್ರೂಡ್ರೈವರ್‌ನಿಂದ ಲಾಕರ್ ಒಡೆದು ಆಭರಣಗಳನ್ನು ದೋಚಿದ್ದಾನೆ.

ದೆಹಲಿಗೆ ಬರುವ ಮುನ್ನವೇ ರಾಹುಲ್ ಅಲ್ವಾರ್‌ನಲ್ಲಿ ತನ್ನ ಸ್ನೇಹಿತನ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮೊಬೈಲ್ ಕದ್ದಿದ್ದ. ಪತ್ತೆಹಚ್ಚುವುದನ್ನು ತಡೆಯಲು ಮೊಬೈಲ್‌ಗಳನ್ನು ಮಾರಿ 6,000 ರೂ.ಗೆ ಕ್ಯಾಬ್ ಬಾಡಿಗೆಗೆ ಪಡೆದು ದೆಹಲಿಗೆ ಬಂದಿದ್ದ. ಆ ಹಣದ ಒಂದು ಭಾಗವನ್ನು ಆತ ಆನ್‌ಲೈನ್ ಬೆಟ್ಟಿಂಗ್‌ಗೆ ಬಳಸಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ, ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ಮೀನಾ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸುತ್ತಿಲ್ಲ. ಅ ಮನೆಯವರು ನನಗೆ ದೇವರಂತೆ ಇದ್ದರು, ತುಂಬಾ ಒಳ್ಳೆಯವರು. ಆದರೆ ನನಗೆ ಹಣ ಬೇಕಿತ್ತು, ಈ ಘಟನೆ ಬಳಿಕ ತಾನು ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂದು ತನಗೆ ತಿಳಿದಿತ್ತು, ಆದರೆ ಹಣವನ್ನು ತನ್ನ ಕುಟುಂಬದವರಿಗೆ ತಲುಪಿಸುವ ಅಗತ್ಯ ಹೆಚ್ಚಿತ್ತು ಎಂದು ಹೇಳಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ
ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ
ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್
ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್
ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಸಚಿವ ಭೈರತಿ ಸುರೇಶ್ ಹೇಳಿದ್ದೇನು?
ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಸಚಿವ ಭೈರತಿ ಸುರೇಶ್ ಹೇಳಿದ್ದೇನು?
ಮೆಡಿಕಲ್ ಗಾರ್ಬೇಜ್ ತಾಣವಾಗ್ತಿದೆಯಾ ನೆಲಮಂಗಲ?
ಮೆಡಿಕಲ್ ಗಾರ್ಬೇಜ್ ತಾಣವಾಗ್ತಿದೆಯಾ ನೆಲಮಂಗಲ?
ಫುಟ್​ಪಾತ್ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ
ಫುಟ್​ಪಾತ್ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ
ನಿರ್ಮಾಪಕಿ ಬಳಿಕ ಈಗ ಹಿನ್ನೆಲೆ ಗಾಯಕಿಯಾದ ಗಣೇಶ್ ಪತ್ನಿ ಶಿಲ್ಪಾ
ನಿರ್ಮಾಪಕಿ ಬಳಿಕ ಈಗ ಹಿನ್ನೆಲೆ ಗಾಯಕಿಯಾದ ಗಣೇಶ್ ಪತ್ನಿ ಶಿಲ್ಪಾ