AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನಿಂದ ತಪ್ಪಾಗಿದೆ, ಐಆರ್​ಎಸ್ ಅಧಿಕಾರಿ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಹೇಳಿದ್ದೇನು?

ಐಆರ್​ಎಸ್ ಅಧಿಕಾರಿ ಪುತ್ರಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ರಾಹುಲ್ ಮೀನಾ "ನನ್ನಿಂದ ತಪ್ಪಾಗಿದೆ" ಎಂದು ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ದೆಹಲಿಯಲ್ಲಿ 22 ವರ್ಷದ ಐಐಟಿ ಪದವೀಧರೆ ಮನೆಗೆ ನುಗ್ಗಿ, ಆಕೆಯನ್ನು ಕೊಂದು ಅತ್ಯಾಚಾರ ಎಸಗಿದ್ದಲ್ಲದೆ, ಲಾಕರ್ ದೋಚಿದ್ದ. ನ್ಯಾಯಾಲಯವು ಆರೋಪಿಯನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ನನ್ನಿಂದ ತಪ್ಪಾಗಿದೆ, ಐಆರ್​ಎಸ್ ಅಧಿಕಾರಿ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಹೇಳಿದ್ದೇನು?
ಆರೋಪಿ ರಾಹುಲ್ ಮೀನಾ Image Credit source: Mathrubhumi English
ನಯನಾ ರಾಜೀವ್
|

Updated on: Apr 24, 2026 | 7:21 AM

Share

ನವದೆಹಲಿ, ಏಪ್ರಿಲ್ 24: ‘‘ನನ್ನಿಂದ ಅಪರಾಧವಾಗಿದೆ, ತಪ್ಪು ಮಾಡಿದ್ದೇನೆ’’ ಎಂದು ಐಆರ್​ಎಸ್(IRS) ಅಧಿಕಾರಿಯ ಪುತ್ರಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ರಾಹುಲ್ ಮೀನಾ ಹೇಳಿದ್ದಾನೆ. ಗುರುವಾರ ನ್ಯಾಯಾಲಯವು ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿಯನ್ನು ನಾಲ್ಕು ದಿನಗಳ ಕಾಲ ಕಸ್ಟಡಿಗೆ ವಹಿಸುವಂತೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಪುರಸ್ಕರಿಸಿದೆ.

ಮುಖಕ್ಕೆ ಬಟ್ಟೆಯಿಂದ ಮುಚ್ಚಲಾಗಿದ್ದ ಆರೋಪಿಯನ್ನು ಮಧ್ಯಾಹ್ನ 2.30 ರ ಸುಮಾರಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ರಾಜಸ್ಥಾನದ ಅಲ್ವಾರ್‌ನಲ್ಲಿ ಆರೋಪಿ ಮತ್ತು ಅವನ ಸಹಚರರು ಮತ್ತೊಬ್ಬ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕೆಲವೇ ಗಂಟೆಗಳ ನಂತರ, ಬುಧವಾರ ಬೆಳಗ್ಗೆ 22 ವರ್ಷದ ಐಐಟಿ ಪದವೀಧರೆಯನ್ನು ಕೈಲಾಶ್ ಹಿಲ್ಸ್​ನಲ್ಲಿರುವ ನಿವಾಸದಲ್ಲಿ ಅತ್ಯಾಚಾರ ಮಾಡಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಮೆಡಿಕೋ-ಲೀಗಲ್ ವರದಿಯಲ್ಲಿ (MLC) ತೋರಿಸಿರುವ ಗಾಯಗಳ ಬಗ್ಗೆ ಮ್ಯಾಜಿಸ್ಟ್ರೇಟ್ ಮೀನಾ ಅವರನ್ನು ಕೇಳಿದಾಗ, ಆರೋಪಿಯು ಟೆರೇಸ್‌ನಿಂದ ಇಳಿಯುವಾಗ ಗಾಯಗೊಂಡಿದ್ದೇನೆ ಎಂದು ಹೇಳಿದ್ದಾನೆ. ನ್ಯಾಯಾಲಯದಿಂದ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಯು ತಾನು ತಪ್ಪು ಮತ್ತು ಅಪರಾಧ ಮಾಡಿರುವುದಾಗಿ ಎಂದು ಒಪ್ಪಿಕೊಂಡಿದ್ದಾನೆ.

ಅಪರಾಧ ಮಾಡಲು ಕಾರಣವೇನೆಂದು ನ್ಯಾಯಾಲಯ ಆರೋಪಿಯನ್ನು ಕೇಳಿದಾಗ, ಲಾಕರ್ ತೆರೆಯಲು ಆಕೆಯ ಬೆರಳಚ್ಚುಗಳು ಅಗತ್ಯವಿತ್ತು ಎಂದು ಮೀನಾ ಹೇಳಿದ್ದಾನೆ. ಐಆರ್​ಎಸ್ ಅಧಿಕಾರಿ ಮತ್ತು ಅವರ ಪತ್ನಿ ಬೆಳಗ್ಗೆ ಮನೆಯಿಂದ ಹೊರಬಂದ ಬಳಿಕ, ಆರೋಪಿ ಮನೆಗೆ ನುಗ್ಗಿದ್ದ, ಕೀಯನ್ನು ಮನೆಯ ಶೂ ರ್ಯಾಕ್​ನಲ್ಲಿ ಇರಿಸಿರುವುದು ಆತನಿಗೆ ತಿಳಿದಿತ್ತು. ಆ ಕೀ ಮೂಲಕ ಆತ ಮನೆಯೊಳಗೆ ಪ್ರವೇಶಿಸಿದ್ದ.

ಮತ್ತಷ್ಟು ಓದಿ: ಎರಡು ದಿನ, ಎರಡು ಅತ್ಯಾಚಾರ, ಒಂದು ಕೊಲೆ, ಐಆರ್​ಎಸ್ ಅಧಿಕಾರಿ ಮಗಳ ಕೊಂದವನು ಸಾಮಾನ್ಯದವನಲ್ಲ

ಆತ ನೇರವಾಗಿ ಐಆರ್​ಎಸ್ ಅಧಿಕಾರಿ ಮಗಳ ಸ್ಟಡಿ ರೂಮ್​ಗೆ ಹೋಗಿದ್ದಾನೆ. ಮೊದಲು ಆಕೆಯ ತಾಯಿಯೇ ಅವನಿಗೆ ಬರಲು ಹೇಳಿದ್ದಾರೆಂದು ಆಕೆಗೆ ತಿಳಿಸಿದ್ದ.ಅವನು ಹೇಗೆ ಒಳಗೆ ಬಂದನೆಂದು ಅವಳು ಪ್ರಶ್ನಿಸಿದಾಗ, ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡಿ ನಂತರ ಅವಳ ಮೇಲೆ ಹಲ್ಲೆ ನಡೆಸಿದ್ದಾನೆ. ಮೊಬೈಲ್ ಫೋನ್ ಚಾರ್ಜರ್ ಕೇಬಲ್ ಬಳಸಿ ಕತ್ತು ಹಿಸುಕಿದ್ದಾನೆ, ಆಕೆ ಪ್ರಜ್ಞೆ ತಪ್ಪಿದ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ, ಬಳಿಕ ಕೆಳ ಮಹಡಿಯಲ್ಲಿರುವ ಲಾಕರ್ ರೂಮ್​ಗೆ ಆಕೆಯನ್ನು ಎಳೆದೊಯ್ದಿದ್ದಾನೆ.

ಬೆರಳುಗಳನ್ನು ಬಯೋಮೆಟ್ರಿಕ್ ಸ್ಕ್ಯಾನರ್‌ಗೆ ಒತ್ತಿ ಅದನ್ನು ಅನ್‌ಲಾಕ್ ಮಾಡಲು ಪ್ರಯತ್ನಿಸಿದ್ದಾನೆ, ಆದರೆ ಆಕೆಯ ಬೆರಳಿಗೆ ರಕ್ತ ಮೆತ್ತಿಕೊಂಡಿದ್ದ ಕಾರಣ ಅದು ಸಾಧ್ಯವಾಗಲಿಲ್ಲ.ನಂತರ ಅವನು ಸ್ಕ್ರೂಡ್ರೈವರ್ ಬಳಸಿ ಲಾಕರ್ ಅನ್ನು ಬಲವಂತವಾಗಿ ತೆರೆದು, ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ