
ಶ್ರೀಹರಿಕೋಟಾ,ಸೆಪ್ಟೆಂಬರ್ 04: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂಜಾನೆ ಸುರಿದ ಮಳೆಯ ನಡುವೆಯೇ ‘ಜಿಎಸ್‌ಎಲ್‌ವಿ-ಎಫ್17’ ರಾಕೆಟ್ ಮೂಲಕ ಅತ್ಯಾಧುನಿಕ ‘ಇಒಎಸ್-೦5’ ಭೂ ವೀಕ್ಷಣಾ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಈ ಉಪಗ್ರಹವು 26,000 ಕಿಲೋಮೀಟರ್ ಎತ್ತರದಿಂದ ಭಾರತದ ಗಡಿಗಳು ಮತ್ತು ಹವಾಮಾನ ಪರಿಸ್ಥಿತಿಯ ಮೇಲೆ ಹಗಲಿರುಳು ನಿರಂತರ ನಿಗಾ ಇರಿಸಲು ನೆರವಾಗಲಿದೆ.
ಈ ಯೋಜನೆಯು ದೇಶದ ವಿಪತ್ತು ನಿರ್ವಹಣೆ, ಕೃಷಿ ವಲಯದ ಬೆಳವಣಿಗೆ ಮತ್ತು ಗಡಿ ಕಣ್ಗಾವಲಿಗೆ ಅತ್ಯಂತ ನಿರ್ಣಾಯಕ ಶಕ್ತಿಯಾಗಲಿದೆ. ಮೋಡ ಕವಿದ ವಾತಾವರಣದಲ್ಲೂ ನೆಲದ ಮೇಲ್ಮೈಯನ್ನು ನಿಖರವಾಗಿ ಸೆರೆಹಿಡಿಯುವ ಕ್ಯಾಮೆರಾಗಳನ್ನು ಇದು ಹೊಂದಿದ್ದು, ಪ್ರಾಕೃತಿಕ ವಿಕೋಪಗಳ ಮುನ್ಸೂಚನೆ ಪಡೆಯಲು ಅಧಿಕಾರಿಗಳಿಗೆ ನೆರವಾಗಲಿದೆ. ಜೊತೆಗೆ, ಮುಂಬರುವ ಮಾನವಸಹಿತ ಗಗನಯಾನ ಯೋಜನೆಯ ಪೂರ್ವಸಿದ್ಧತೆಗೂ ಈ ಯಶಸ್ಸು ಇಸ್ರೋ ವಿಜ್ಞಾನಿಗಳಿಗೆ ಬಲವಾದ ತಾಂತ್ರಿಕ ವಿಶ್ವಾಸವನ್ನು ತಂದುಕೊಟ್ಟಿದೆ.
ಜಿಎಸ್‌ಎಲ್‌ವಿಯ ಗರಿಷ್ಠ ತೂಕದ ದಾಖಲೆ: ಜಿಎಸ್‌ಎಲ್‌ವಿ ಸರಣಿಯ 19ನೇ ಕಾರ್ಯಾಚರಣೆ ಇದಾಗಿದ್ದು, ಈ ರಾಕೆಟ್ ಹೊತ್ತೊಯ್ದ ಅತ್ಯಂತ ಭಾರವಾದ (2,367 ಕೆಜಿ) ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮತ್ತಷ್ಟು ಓದಿ: ಇಸ್ರೋ ಮುಡಿಗೆ ಮತ್ತೊಂದು ಗರಿ: ಸೆ. 4 ರಂದು ನಭಕ್ಕೆ ಜಿಗಿಯಲಿದೆ ಜಿಎಸ್‌ಎಲ್‌ವಿ-ಎಫ್17 ರಾಕೆಟ್
ಪ್ರತಿ 30 ನಿಮಿಷಕ್ಕೊಮ್ಮೆ ಚಿತ್ರ: ಈ ಉಪಗ್ರಹವು ಸಾಮಾನ್ಯ ದಿನಗಳಲ್ಲಿ ಪ್ರತಿ 30 ನಿಮಿಷಕ್ಕೊಮ್ಮೆ ಹಾಗೂ ಪ್ರವಾಹ ಅಥವಾ ಚಂಡಮಾರುತದಂತಹ ತುರ್ತು ಸಂದರ್ಭಗಳಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ನೈಜ-ಸಮಯದ ಸ್ಪಷ್ಟ ಚಿತ್ರಗಳನ್ನು ರವಾನಿಸುವ ಅಪರೂಪದ ತಂತ್ರಜ್ಞಾನವನ್ನು ಹೊಂದಿದೆ.
ಅತ್ಯಾಧುನಿಕ ಕ್ಯಾಮೆರಾ ಕಣ್ಣು: ವಿಸಿಬಲ್, ಇನ್‌ಫ್ರಾರೆಡ್, ಮಲ್ಟಿಸ್ಪೆಕ್ಟ್ರಲ್ ಹಾಗೂ ಹೈಪರ್‌ಸ್ಪೆಕ್ಟ್ರಲ್ ಬ್ಯಾಂಡ್‌ಗಳಲ್ಲಿ ಕಾರ್ಯನಿರ್ವಹಿಸುವ ಸೆನ್ಸರ್‌ಗಳನ್ನು ಇದು ಹೊಂದಿದ್ದು, ಮೋಡ ಕವಿದ ವಾತಾವರಣದಲ್ಲೂ ಸ್ಪಷ್ಟ ಚಿತ್ರ ನೀಡುತ್ತದೆ.
ಪೋಸ್ಟ್
LIFT-OFF!
GSLV-F17 carrying EOS-05 lifts off from Satish Dhawan Space Centre, SHAR, Sriharikota.
Livestreaming:https://t.co/uCaGCKcwuC
For more information:https://t.co/VneB2jgZoY#GSLVF17 #EOS05 #ISRO
— ISRO (@isro) September 3, 2026
ವಿಪತ್ತು ನಿರ್ವಹಣೆ ಹಾಗೂ ಗಡಿ ಭದ್ರತೆ: ಚಂಡಮಾರುತ, ದಿಢೀರ್ ಪ್ರವಾಹ, ಕಾಡ್ಗಿಚ್ಚು ಮತ್ತು ಭೂಕುಸಿತಗಳ ಮುನ್ಸೂಚನೆ ಪಡೆಯಲು ಹಾಗೂ ದೇಶದ ಗಡಿ ಭಾಗಗಳಲ್ಲಿ ಶತ್ರುಗಳ ಚಲನವಲನದ ಮೇಲೆ ಹದ್ದಿನ ಕಣ್ಣಿಡಲು ರಕ್ಷಣಾ ಪಡೆಗಳಿಗೆ ಇದು ನಿರ್ಣಾಯಕ ಶಕ್ತಿಯಾಗಲಿದೆ.
ಕೃಷಿ ಮತ್ತು ಪರಿಸರ ಕ್ರಾಂತಿ: ಬೆಳೆಗಳ ಆರೋಗ್ಯ, ಜಲಾಶಯಗಳ ನೀರಿನ ಮಟ್ಟ, ಅರಣ್ಯ ವ್ಯಾಪ್ತಿ ಹಾಗೂ ನಗರ ಯೋಜನೆಗಳ ನಿಖರ ನಿರ್ವಹಣೆಗೆ ನೀತಿ ನಿರೂಪಕರಿಗೆ ನೈಜ ದತ್ತಾಂಶವನ್ನು ಒದಗಿಸಲಿದೆ.
ಪೋಸ್ಟ್
Mission Success!
GSLV-F17 has successfully accomplished its mission, placing EOS-05 into the intended orbit.
Sharing a few memorable moments from the lift-off.
For more information:https://t.co/VneB2jgZoY#GSLVF17 #EOS05 #ISRO pic.twitter.com/kv0zB6V5Vi
— ISRO (@isro) September 3, 2026
ಹಳೆಯ ಹಿನ್ನಡೆಗೆ ದಿಟ್ಟ ಉತ್ತರ: 2021 ರಲ್ಲಿ ಇದೇ ಮಾದರಿಯ ‘ಇಒಎಸ್-೦3’ ಉಪಗ್ರಹ ಹೊತ್ತೊಯ್ದಿದ್ದ ಜಿಎಸ್‌ಎಲ್‌ವಿ-ಎಫ್10 ರಾಕೆಟ್ ಕ್ರಯೋಜೆನಿಕ್ ಹಂತದಲ್ಲಿ ವಿಫಲವಾಗಿತ್ತು. ಇಂದಿನ ಯಶಸ್ಸು ಇಸ್ರೋದ ಸ್ವದೇಶಿ ಕ್ರಯೋಜೆನಿಕ್ ಎಂಜಿನ್ ಸಾಮರ್ಥ್ಯ ಮತ್ತು ತಾಂತ್ರಿಕ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಿದೆ.
ಪ್ರಧಾನಿ ಮೋದಿ ಶ್ಲಾಘನೆ
ಇಸ್ರೋದ ಜಿಎಸ್‌ಎಲ್‌ವಿ-ಎಫ್17 ಯಶಸ್ಸು ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ: ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
ಇಒಎಸ್-05(EOS-05) ಭೂ ವೀಕ್ಷಣಾ ಉಪಗ್ರಹವನ್ನು ಹೊತ್ತೊಯ್ದ ಜಿಎಸ್‌ಎಲ್‌ವಿ-ಎಫ್17 ರಾಕೆಟ್‌ನ ಯಶಸ್ವಿ ಉಡಾವಣೆಗೆ ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಈ ಕುರಿತು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಇದು ಇಸ್ರೋದ ಮತ್ತೊಂದು ಅತ್ಯುತ್ತಮ ಸಾಧನೆ ಹಾಗೂ ಇಡೀ ದೇಶಕ್ಕೆ ಹೆಮ್ಮೆಯ ಕ್ಷಣ. ಜಿಯೋಸಿಂಕ್ರೋನಸ್ ಕಕ್ಷೆಯಿಂದ ಭಾರತದ ಮೊದಲ ಸುಧಾರಿತ ಇಮೇಜಿಂಗ್ ಉಪಗ್ರಹವನ್ನು ಕಕ್ಷೆಗೆ ಸೇರಿಸಿರುವುದು ನಮ್ಮ ಬಾಹ್ಯಾಕಾಶ ವಲಯದ ಶ್ರೇಷ್ಠತೆ, ನಾವೀನ್ಯತೆ ಮತ್ತು ನಿರಂತರವಾಗಿ ಬೆಳೆಯುತ್ತಿರುವ ಸಾಮರ್ಥ್ಯಕ್ಕೆ ಸಾಕ್ಷಿ ಎಂದು ಬಣ್ಣಿಸಿದ್ದಾರೆ. ಈ ಮಿಷನ್ ದೇಶದ ಒಟ್ಟಾರೆ ಬಾಹ್ಯಾಕಾಶ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವುದರ ಜೊತೆಗೆ, ಇಸ್ರೋ ಮತ್ತು ಭಾರತೀಯ ಕೈಗಾರಿಕೆಗಳ ನಡುವಿನ ಸಹಭಾಗಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದು ತಿಳಿಸಿದ್ದಾರೆ.
Yet another outstanding achievement by ISRO and a proud moment for our nation.
The successful launch of GSLV-F17 carrying EOS-05, India’s first-ever imaging satellite from Geosynchronous orbit is a reflection of the excellence, innovation and growing capabilities that define… https://t.co/fXzwnSmwAF
— Narendra Modi (@narendramodi) September 4, 2026
ಗಗನಯಾನ ಸೇರಿ ಮುಂದಿನ ಗುರಿಗಳು: ಶ್ರೀಹರಿಕೋಟಾದಿಂದ ಈ ಆರ್ಥಿಕ ವರ್ಷದಲ್ಲಿ ಇದು ಇಸ್ರೋದ ಮೊದಲ ಉಡಾವಣೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮಾನವರಹಿತ ‘ಗಗನಯಾನ’ ಪರೀಕ್ಷಾರ್ಥ ಯಾನಗಳು ಸೇರಿದಂತೆ ಒಟ್ಟು 6 ಬೃಹತ್ ಉಡಾವಣೆಗಳನ್ನು ಕೈಗೊಳ್ಳುವ ಗುರಿ ಹೊಂದಲಾಗಿದೆ ಎಂದು ಇಸ್ರೋ ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:18 am, Fri, 4 September 26