AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಉಗ್ರರ ಪ್ರೇಮಪಾಶಕ್ಕೆ ಬಿದ್ದ ಜೈಪುರ ಮಹಿಳೆ: ಜೈಶ್ ಸಂಘಟನೆ ಜೊತೆ ಸಂಪರ್ಕ, ಮದುವೆ ಆಮಿಷ ಒಡ್ಡಿ ಮತಾಂತರಕ್ಕೆ ಯತ್ನ

ಜೈಪುರದ ಮಹಿಳೆಯೊಬ್ಬರನ್ನು ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಆನ್‌ಲೈನ್ ಮೂಲಕ ಪ್ರೇಮಪಾಶಕ್ಕೆ ಸಿಲುಕಿಸಿ, ಮತಾಂತರಗೊಳಿಸಿ, ದೇಶವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳುವ ಪಾಕ್ ಜಾಲದ ಭಾಗವಾಗಿ ಇವರು ಕೆಲಸ ಮಾಡುತ್ತಿದ್ದರು. ಬ್ರೈನ್‌ವಾಶ್ ಮಾಡಿ, 'ಖದೀಜಾ' ಎಂದು ಹೆಸರು ಬದಲಾಯಿಸಿಕೊಂಡಿದ್ದ ಇವರನ್ನು ಸ್ಲೀಪರ್ ಸೆಲ್ ಆಗಿ ಬಳಸಲು ಉಗ್ರರು ಸಂಚು ರೂಪಿಸಿದ್ದರು. ತನಿಖೆ ಮುಂದುವರೆದಿದೆ.

ಪಾಕ್ ಉಗ್ರರ ಪ್ರೇಮಪಾಶಕ್ಕೆ ಬಿದ್ದ ಜೈಪುರ ಮಹಿಳೆ: ಜೈಶ್ ಸಂಘಟನೆ ಜೊತೆ ಸಂಪರ್ಕ, ಮದುವೆ ಆಮಿಷ ಒಡ್ಡಿ ಮತಾಂತರಕ್ಕೆ ಯತ್ನ
ಆರೋಪಿ ಮಹಿಳೆ Image Credit source: NDTV
ನಯನಾ ರಾಜೀವ್
|

Updated on: Jun 23, 2026 | 8:06 AM

Share

ಜೈಪುರ, ಜೂನ್ 23: ಪಾಕಿಸ್ತಾನದ ಕುಖ್ಯಾತ ಭಯೋತ್ಪಾದಕ ಸಂಘಟನೆ ‘ಜೈಶ್-ಎ-ಮೊಹಮ್ಮದ್’ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳ (ATS) ಜೈಪುರದಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಿದೆ. ಆನ್‌ಲೈನ್ ಮೂಲಕ ಭಾರತೀಯರನ್ನು ಸೆಳೆದು, ಮತಾಂತರ(Conversion)ಗೊಳಿಸಿ, ದೇಶವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳುವ ಪಾಕಿಸ್ತಾನದ ದೊಡ್ಡ ಜಾಲವೊಂದು ಈ ಬಂಧನದಿಂದ ಬಯಲಾಗಿದೆ.

ಬಂಧಿತ ಮಹಿಳೆಯನ್ನು ಬಬಿತಾ ಧಕಾಡ್ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಹೆಸರನ್ನು ‘ಖದೀಜಾ’ ಎಂದು ಬದಲಾಯಿಸಿಕೊಂಡಿದ್ದಳು. ಮೂಲತಃ ಗಂಗಾಪುರದವಳಾದ ಈಕೆ ಜೈಪುರದಲ್ಲಿ ಗೃಹಿಣಿಯಾಗಿದ್ದಳು.

ಆಕೆಯ ಮೊಬೈಲ್ ಪರಿಶೀಲಿಸಿದಾಗ ಎರಡು ಸಿಮ್ ಕಾರ್ಡ್‌ಗಳು ಪತ್ತೆಯಾಗಿದ್ದು, ವಾಟ್ಸಾಪ್‌ನಲ್ಲಿ ಹಲವಾರು ಪಾಕಿಸ್ತಾನಿ ನಂಬರ್‌ಗಳು ಹಾಗೂ ವಿದೇಶಿ ವ್ಯಕ್ತಿಗಳೊಂದಿಗೆ ನಿರಂತರವಾಗಿ ಚಾಟ್ ಮಾಡಿರುವುದು ಬೆಳಕಿಗೆ ಬಂದಿದೆ. ಆಕೆಯ ಫೇಸ್‌ಬುಕ್ ಖಾತೆಯ ಗೆಳೆಯರ ಪಟ್ಟಿಯಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಲೋಗೊ, ಮಾರಕಾಸ್ತ್ರಗಳನ್ನು ಹಿಡಿದಿರುವ ಉಗ್ರರ ಪ್ರೊಫೈಲ್‌ಗಳು ಪತ್ತೆಯಾಗಿವೆ.

ಪಾಕಿಸ್ತಾನದ ಧರ್ಮಗುರುವೊಬ್ಬ ಫೋನ್ ಮೂಲಕವೇ ಈಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಪ್ರೇರೇಪಿಸುತ್ತಿದ್ದ. ‘ಅಬು-ಉಬೈದಾ’ ಎಂಬ ವ್ಯಕ್ತಿ ಈಕೆಯನ್ನು ಮದುವೆಯಾಗಲು ಬಯಸುತ್ತಾನೆ ಎಂದು ನಂಬಿಸಿ, ಆಕೆಗೆ ನಮಾಜ್ ಮತ್ತು ಕುರಾನ್ ಪಠಿಸಲು ಸೂಚಿಸಲಾಗಿತ್ತು. ಈಕೆಯನ್ನು ನೇಪಾಳ, ಸೌದಿ ಅರೇಬಿಯಾ ಅಥವಾ ಯುಎಇ (ದುಬೈ) ಮಾರ್ಗವಾಗಿ ಪಾಕಿಸ್ತಾನಕ್ಕೆ ಕರೆಸಿಕೊಳ್ಳಲು ಸಂಚು ರೂಪಿಸಲಾಗಿತ್ತು ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ.

ಮತ್ತಷ್ಟು ಓದಿ: ಪ್ರೀತಿ ಪ್ರೇಮದ ಹೆಸರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ: ಲವ್ ಜಿಹಾದ್​​ಗೆ ಬಲಿಯಾದ ಹಿಂದೂ ಯುವತಿ ರೀಟಾ

ಕಂದಹಾರ್ ವಿಮಾನ ಅಪಹರಣದ (IC 814) ಮಾಸ್ಟರ್ ಮೈಂಡ್ ಮಸೂದ್ ಅಜರ್‌ನ ಆಪ್ತರೊಂದಿಗೆ ಈಕೆಯ ಜಾಲಕ್ಕೆ ಸಂಪರ್ಕವಿರುವ ಶಂಕೆ ಇದೆ. ನವೆಂಬರ್ 29, 2016 ರಂದು ಜಮ್ಮುವಿನ ಸೇನಾ ಶಿಬಿರದ ಮೇಲೆ ನಡೆದ ಭೀಕರ ದಾಳಿಯ ಪ್ರಕರಣದಲ್ಲೂ ಈಕೆ ಶಾಮೀಲಾಗಿದ್ದಾಳೆ ಎಂದು ಹೇಳಲಾಗಿದೆ. ಆ ದಾಳಿಯಲ್ಲಿ ಭಾರತದ 6 ಜನ ಸೈನಿಕರು ಮೃತಪಟ್ಟಿದ್ದರು.

ಎಟಿಎಸ್ ಅಧಿಕಾರಿಗಳು ಏನಂತಾರೆ? ಎಟಿಎಸ್ ಎಸ್‌ಪಿ ಮನೀಶ್ ತ್ರಿಪಾಠಿ ಅವರ ಪ್ರಕಾರ, ತನಿಖೆ ಇನ್ನು ಆರಂಭಿಕ ಹಂತದಲ್ಲಿದೆ. ಕಳೆದ 6-7 ತಿಂಗಳುಗಳಿಂದ ಪಾಕಿಸ್ತಾನದ ಜಾಲವು ಈಕೆಯನ್ನು ಸಂಪೂರ್ಣವಾಗಿ ಬ್ರೈನ್ ವಾಶ್ ಮಾಡಿ, ಮತಾಂತರಗೊಳಿಸಲು ಪ್ರಯತ್ನಿಸುತ್ತಿತ್ತು. ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಈಕೆಯನ್ನು ಸ್ಲೀಪರ್ ಸೆಲ್ ಆಗಿ ಬಳಸಿಕೊಳ್ಳುವ ಉದ್ದೇಶ ಹೊಂದಿದ್ದರು. ಸದ್ಯ ಆಕೆಯ ಮೊಬೈಲ್ ಮತ್ತು ಡಿಜಿಟಲ್ ಸಾಧನಗಳ ಹೆಚ್ಚಿನ ತಪಾಸಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್