AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲಿ ಅಮಾನುಷ ಕೃತ್ಯ: ಬಲವಂತದ ಮತಾಂತರಕ್ಕೆ ತಾಯಿಯೇ ಸಾಥ್​​; ಮಗನ ಮರ್ಮಾಂಗಕ್ಕೆ‌ ಕತ್ತರಿ

ಕೊಡಗು ಜಿಲ್ಲೆಯಲ್ಲೊಂದು ಅಮಾನುಷ ಕೃತ್ಯ ನಡೆದಿದೆ. 9 ವರ್ಷದ ಮಗನನ್ನು ತಾಯಿಯೇ ಬಲವಂತವಾಗಿ ಮತಾಂತರ ಹಾಗೂ ಸುನ್ನತ್ ಮಾಡಿಸಿದ ಆರೋಪ ಕೇಳಿಬಂದಿದೆ. ಅನ್ಯಧರ್ಮದ ವ್ಯಕ್ತಿಗಳ ಜೊತೆ ಸೇರಿ ಕೇರಳದ ಮಸೀದಿಯಲ್ಲಿ ಕೃತ್ಯ ಎಸಗಲಾಗಿದೆ. ಸದ್ಯ ತಂದೆ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಕೊಡಗಿನಲ್ಲಿ ಅಮಾನುಷ ಕೃತ್ಯ: ಬಲವಂತದ ಮತಾಂತರಕ್ಕೆ ತಾಯಿಯೇ ಸಾಥ್​​; ಮಗನ ಮರ್ಮಾಂಗಕ್ಕೆ‌ ಕತ್ತರಿ
ಮತಾಂತರImage Credit source: tv9 kannada
ಗೋಪಾಲ್​ ಸೋಮಯ್ಯ
| Edited By: |

Updated on: Jun 19, 2026 | 7:16 PM

Share

ಕೊಡಗು, ಜೂನ್​​ 19: ಆತ 9 ವರ್ಷದ ಬಾಲಕ. ತಾಯಿಯೇ (Mother) ಸರ್ವಸ್ವ ಅಂದುಕೊಂಡಿದ್ದ. ತಾಯಿ ಜೊತೆಯೇ ವಾಸವಾಗಿದ್ದ. ಆದರೆ ಆ ಮಹಾತಾಯಿ ಮಾಡಿರುವ ಅನಾಚಾರ ಮಾತ್ರ ನಿಜಕ್ಕೂ ಭಯಾನಕ. ಅನ್ಯಧರ್ಮದ ಯುವಕರೊಂದಿಗೆ ಸೇರಿ ಮಗನ (Son) ಮರ್ಮಾಂಗವನ್ನು ಕತ್ತರಿಸಿ ಬಲವಂತದ ಮತಾಂತರ ಮಾಡಿಸಿದ್ದಾಳೆ. ಇಂತಹದೊಂದು ಅಮಾನುಷ ಕೃತ್ಯಕ್ಕೆ ಇಡಿ ಕೊಡಗು ಜಿಲ್ಲೆ ಬೆಚ್ಚಿಬಿದ್ದಿದೆ.

ಮುಖ್ಯಾಂಶಗಳು

  • ಸುನ್ನತ್ ಹೆಸರಲ್ಲಿ ಬಾಲಕನ ಮರ್ಮಾಂಗಕ್ಕೆ‌ ಕತ್ತರಿ
  • ಮಗನನ್ನ ಬಲವಂತದ ಮತಾಂತರಕ್ಕೆ ಸಾಥ್ ನೀಡಿದ ತಾಯಿ
  • ಅನ್ಯಧರ್ಮದ ಯುವಕರ ಬಂಧನ​​

ನಡೆದಿದ್ದೇನು?

ಏನೂ ಅರಿಯದ 9 ವರ್ಷದ ಮುಗ್ಧ ಮಗನನ್ನು ತಾಯಿಯೇ ದುಷ್ಕರ್ಮಿಗಳ ಜೊತೆ ಸೇರಿ ಮರ್ಮಾಂಗ ಕತ್ತರಿಸಿ ಸುನ್ನತ್ ಹೆಸರಿನಲ್ಲಿ ಮತಾಂತರ ಮಾಡಿದ ಆರೋಪ ಕೇಳಿಬಂದಿದೆ. ಕುಶಾಲನಗರ ಪಟ್ಟಣದಲ್ಲಿ ವಾಸವಿರುವ ರಾಜೀವ್ ಮತ್ತು ಸಾಜಿದಾ ದಂಪತಿಗೆ 9 ವರ್ಷದ ಮಗನಿದ್ದಾನೆ. ಸಾಜಿದ ಕಳೆದ ಕೆಲ ವರ್ಷಗಳಿಂದ ಇಲ್ಲಿನ ನಿಸರ್ಗಧಾಮ ಟೂರಿಸ್ಟ್​ ಸೆಂಟರ್​​ ಮಳಿಗೆಯೊಂದಕ್ಕೆ ಸೇಲ್ಸ್​ ಗರ್ಲ್​ ಆಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಪ್ರೀತಿ ಪ್ರೇಮದ ಹೆಸರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ: ಲವ್ ಜಿಹಾದ್​​ಗೆ ಬಲಿಯಾದ ಹಿಂದೂ ಯುವತಿ ರೀಟಾ

ಮಳಿಗೆ ಮಾಲೀಕರಾದ ಸಲೀಂ ಮತ್ತು ಜಲೀಲ್ ಪರಿಚಯವಾಗಿದೆ. ಅವರು ಸಾಜಿದಾ ಮೇಲೆ ಅದೇನು ಪ್ರಭಾವ ಬಿರಿದ್ದಾರೆ ಗೊತ್ತಿಲ್ಲ. ಕಳೆದ ಒಂದು ತಿಂಗಳ ಹಿಂದೆ ಸಾಜಿದಾ ಮತ್ತು ಆಕೆಯ 9 ವರ್ಷದ ಮಗನನ್ನು ರಹಸ್ಯವಾಗಿ ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೆರಿ ಗ್ರಾಮದ ಮಸೀದಿಗೆ ಕರೆದುಕೊಂಡು ಹೋಗಿ ಒಂದು ತಿಂಗಳು ಅಲ್ಲೇ ಉಳಿದುಕೊಂಡಿದ್ದಾರೆ. ಈ ವೇಳೆ ಬಾಲಕನಿಗೆ ಬಲವಂತದಿಂದ ಮರ್ಮಾಂಗ ಕತ್ತರಿಸಿ ಸುನ್ನತ್ ಮಾಡಿಸಿ ಮತಾಂತರ ಮಾಡಿದ್ದಾರೆ. ಅಲ್ಲದೆ ಸಾಜಿದಾಳನ್ನ ಕೂಡ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕುಶಾಲನಗರದಲ್ಲಿ ಗುಸುಗುಸು ಶುರುವಾದಾಗ ಪತಿ ರಾಜೀವ್ ಕೆಲವು ಹಿಂದೂ ಪರ ಸಂಘಟನೆಗಳ ನೆರವು ಪಡೆದು ಕುಶಾಲನಗರಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಷ್ಟಪಟ್ಟು ಮತಾಂತರವಾಗಿರುವುದಾಗಿ ಸಾಜಿದಾ ಹೇಳಿಕೆ

ಮುಗ್ಧ ಬಾಲಕನನ್ನ ಕಾನೂನಿಗೆ ವಿರುದ್ಧವಾಗಿ ಮತಾಂತರ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಕುಶಾಲನಗರದ ಕೆಲವರು ತಂದೆ ರಾಜೀವ್ ಬೆಂಬಲಕ್ಕೆ ನಿಂತು ಕಾನೂನು ನೆರವು ನೀಡಿದ್ದಾರೆ. ಬಾಲಕನನ್ನ ಕೇರಳದ ಮಸೀದಿಯಿಂದ ರಕ್ಷಿಸಿ ಕರೆತಂದು ಸದ್ಯ ಸಾಂತ್ವನ ಕೇಂದ್ರಕ್ಕೆ ರವಾನಿಸಿದ್ದಾರೆ. ಕುರಾನ್​ನಿಂದ ಪ್ರೇರೇಪಿತಳಾಗಿ, ಇಷ್ಟಪಟ್ಟು ಮತಾಂತರವಾಗಿರುವುದಾಗಿ ಸಾಜಿದಾ ಹೇಳಿದ್ದಾರೆ ಎನ್ನಲಾಗುತ್ತಿದೆ.

ಸಲೀಂ ಮತ್ತು ಜಲೀಲ್ ಬಂಧನ

ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್​ ಸೆಂಟರ್​ನಲ್ಲಿ ಇಂತಹ ಬಹಳಷ್ಟು ಪ್ರಕರಣಗಳು ರಹಸ್ಯವಾಗಿ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಸದ್ಯ ಆರೋಪಿಗಳಾದ ಸಲೀಂ ಮತ್ತು ಜಲೀಲ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನಿಗೆ ಆಗಿರುವ ದೈಹಿಕ ಮತ್ತು ಮಾನಸಿಕ ಆಘಾತ ಊಹಿಸಲಾಗದು, ಹಾಗಾಗಿ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್​ಗಳನ್ನ ಹಾಕಿ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಬಾಲಕನ ನೆರವಿಗೆ ನಿಂತ ಅಮೃತ್ ರಾಜ್​​ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹಿಂದೂ ಯುವತಿ ಅಪಹರಣ ಕೇಸ್​​ಗೆ ಟ್ವಿಸ್ಟ್: ಮುಸ್ಲಿಂ ಯುವಕನ ವಿರುದ್ಧ ಕೇಸ್ ಬುಕ್, ಆಗಿದ್ದೇನು?

ಸದ್ಯ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಕೃತ್ಯಗಳು ಕೇವಲ ಮತಾಂತರಕ್ಕೆ ಮಾತ್ರ ಸೀಮಿತವೋ ಅಥವಾ ಮತಾಂತರದ ಬಳಿಕ ಕೇರಳದಲ್ಲಿ ಅಮಾಯಕ ಬಾಲಕರನ್ನ ಬೇರೆ ಕೃತ್ಯಗಳಿಗೆ ಬಳಸಿಕೊಳ್ಳುವ ಉದ್ದೇಶವಿತ್ತಾ, ಇಂತಹ ಇನ್ನೆಷ್ಟು ಪ್ರಕರಣಗಳು ನಡೆದಿವೆ ಎಂಬುದರ ಬಗ್ಗೆ ತನಿಖೆಯಲ್ಲಿ ಬಯಲಾಗಬೇಕಿದೆ. ಅಲ್ಲದೆ, ರಾಜ್ಯದ ಬೇರೆ ಬೇರೆ ಕಡೆ ಏಕಾಏಕಿ ನಾಪತ್ತೆಯಾಗುವ ಹಿಂದೂ ಹೆಣ್ಣು ಮಕ್ಕಳು ಮತ್ತು ವ್ಯಕ್ತಿಗಳು ಕೇರಳದ ಮಂಜೆರಿ ಗ್ರಾಮದ ಮಸೀದಿಯಲ್ಲಿ ಪತ್ತೆಯಾಗುತ್ತಿದ್ದಾರೆ ಎಂಬ ಆರೋಪವು ಇದೆ. ಈ ನಿಟ್ಟಿನಲ್ಲೂ ಆಳ ತನಿಖೆಯ ಅಗ್ಯವಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ