ಜಲ ಶಕ್ತಿ ಸಚಿವಾಲಯದ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಮಾಡಿದ ಹ್ಯಾಕರ್​​ಗಳು, ತನಿಖೆ ಆರಂಭ

ಖಾತೆಯ ಪ್ರೊಫೈಲ್ ಚಿತ್ರದಲ್ಲಿ ಈ ಹಿಂದೆ ಭಾರತೀಯ ಧ್ವಜವಿದ್ದಿದ್ದು ಅಲ್ಲಿ ಸುಯಿ ಅವರ ಲೋಗೋ ಅಪ್ಲೋಡ್ ಮಾಡಲಾಗಿದೆ. ಕವರ್ ಚಿತ್ರವೂ ಸುಯಿ ಲೋಗೋ ಮತ್ತು ಹೆಸರನ್ನು ಹೊಂದಿದೆ. ಸಚಿವಾಲಯದ ಹ್ಯಾಂಡಲ್‌ನಿಂದ ಮಾಡಲಾದ  ಟ್ವೀಟ್ ಹಲವಾರು ಅಪರಿಚಿತ ಖಾತೆಗಳನ್ನು ಟ್ಯಾಗ್ ಮಾಡಿದೆ

ಜಲ ಶಕ್ತಿ ಸಚಿವಾಲಯದ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಮಾಡಿದ ಹ್ಯಾಕರ್​​ಗಳು,  ತನಿಖೆ ಆರಂಭ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 01, 2022 | 3:45 PM

ಜಲ ಶಕ್ತಿ ಸಚಿವಾಲಯದ (Ministry of Jal Shakti) ಟ್ವಿಟರ್ ಹ್ಯಾಂಡಲ್​​ನ್ನು  ಗುರುವಾರ ಹ್ಯಾಕರ್​​ಗಳು ಹ್ಯಾಕ್ (hack) ಮಾಡಿದ್ದಾರೆ. ಕಳೆದ ವಾರ ಏಮ್ಸ್ (AIIMS) ದೆಹಲಿಯ ಸರ್ವರ್ ಅನ್ನು ಹ್ಯಾಕ್ ಮಾಡಿದ ನಂತರ ಸರ್ಕಾರಿ ಸೈಟ್‌ನಲ್ಲಿ ಇದು ಎರಡನೇ ಪ್ರಮುಖ ಸೈಬರ್ ದಾಳಿಯಾಗಿದೆ.  ಕ್ರಿಪ್ಟೋ ವ್ಯಾಲೆಟ್ ಸೂಯಿ ವಾಲೆಟ್ ಅನ್ನು ಪ್ರಚಾರ ಮಾಡುವ ಟ್ವೀಟ್ ಅನ್ನು ಮೊದಲು ಜಲ್ ಶಕ್ತಿ ಸಚಿವಾಲಯದ ಖಾತೆಯಿಂದ ಬೆಳಿಗ್ಗೆ 5:38 ಕ್ಕೆ ಪೋಸ್ಟ್ ಮಾಡಲಾಗಿದೆ. ಖಾತೆಯ ಪ್ರೊಫೈಲ್ ಚಿತ್ರದಲ್ಲಿ ಈ ಹಿಂದೆ ಭಾರತೀಯ ಧ್ವಜವಿದ್ದಿದ್ದು ಅಲ್ಲಿ ಸುಯಿ ಅವರ ಲೋಗೋ ಅಪ್ಲೋಡ್ ಮಾಡಲಾಗಿದೆ. ಕವರ್ ಚಿತ್ರವೂ ಸುಯಿ ಲೋಗೋ ಮತ್ತು ಹೆಸರನ್ನು ಹೊಂದಿದೆ. ಸಚಿವಾಲಯದ ಹ್ಯಾಂಡಲ್‌ನಿಂದ ಮಾಡಲಾದ  ಟ್ವೀಟ್ ಹಲವಾರು ಅಪರಿಚಿತ ಖಾತೆಗಳನ್ನು ಟ್ಯಾಗ್ ಮಾಡಿದೆ. ಸ್ವಲ್ಪ ಸಮಯದ ನಂತರ ಖಾತೆಯನ್ನು ಮರುಸ್ಥಾಪಿಸಲಾಗಿದೆ ಮತ್ತು ಅನುಮಾನಾಸ್ಪದ ಟ್ವೀಟ್‌ಗಳನ್ನು ಅಳಿಸಲಾಗಿದೆ. ಭದ್ರತಾ ಏಜೆನ್ಸಿಗಳು ಮತ್ತು ಸೈಬರ್ ತಜ್ಞರು ಈಗ ಘಟನೆಯನ್ನು ಪರಿಶೀಲಿಸುತ್ತಿದ್ದಾರೆ.

ಸ್ವಚ್ಛ ಭಾರತ್ ಮಿಷನ್ ಟ್ವಿಟರ್ ಹ್ಯಾಂಡಲ್ ಕೂಡಾ ಹ್ಯಾಕ್ ಆಗಿದೆ ಎಂದು ಪತ್ರಕರ್ತೆಯೊಬ್ಬರು ಟ್ವೀಟ್ ಮಾಡಿದ್ದಾರೆ

ನವೆಂಬರ್ 23 ರಂದು, AIIMS ಸರ್ವರ್ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು, 24 ಗಂಟೆಗಳ ನಂತರವೂ ಸರ್ವರ್ ಅನ್ನು ಸರಿಪಡಿಸಲು ಸಾಧ್ಯವಾಗದಿರುವುದನ್ನು ಕಂಡು, ಏಮ್ಸ್ ಅಧಿಕಾರಿಗಳು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದರು. ಏಮ್ಸ್ ದೂರಿನ ಮೇರೆಗೆ ದೆಹಲಿ ಪೊಲೀಸರು ಪ್ರಕರಣವನ್ನು ತೆರೆದಿದ್ದರು. ದೆಹಲಿ ಪೊಲೀಸರ ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ (IFSO) ವಿಭಾಗವು ಪ್ರಕರಣವನ್ನು ನಿರ್ವಹಿಸಿದೆ.ಹ್ಯಾಕಿಂಗ್ ಸಾಧ್ಯತೆ ಇದೆ ಎಂದು ಸ್ಪಷ್ಟವಾದಾಗ ಸೈಬರ್ ಸೆಲ್‌ಗೆ ತಕ್ಷಣವೇ ತಿಳಿಸಲಾಯಿತು. ಏಮ್ಸ್ ಸರ್ವರ್ ಹ್ಯಾಕಿಂಗ್ ಬಗ್ಗೆ  ಕೇಂದ್ರ ಗೃಹ ಸಚಿವಾಲಯವೂ ಕ್ರಮ ತೆಗೆದುಕೊಂಡಿತು. ಈ ನಿಟ್ಟಿನಲ್ಲಿ, ಹಿರಿಯ IB ಅಧಿಕಾರಿಗಳು, AIIMS ನ ಆಡಳಿತದಲ್ಲಿ ತೊಡಗಿರುವ ಅಧಿಕಾರಿಗಳು, NIC ನ ಅಧಿಕಾರಿಗಳು, ಹಿರಿಯ NIA ಅಧಿಕಾರಿಗಳು, ಹಿರಿಯ ದೆಹಲಿ ಪೊಲೀಸ್ ಅಧಿಕಾರಿಗಳು, ಹಿರಿಯ MHA ಅಧಿಕಾರಿಗಳು ಮತ್ತು ಇತರರು ಉನ್ನತ ಮಟ್ಟದ ಸಮ್ಮೇಳನವನ್ನು ಗೃಹ ಸಚಿವಾಲಯದಲ್ಲಿ ನಡೆಸಲಾಯಿತು ಎಂದು ಮೂಲಗಳು ಹೇಳಿವೆ.

ನವೆಂಬರ್ 29 ರಂದು AIIMS ನ ಹೇಳಿಕೆಯ ಪ್ರಕಾರ ಡೇಟಾವನ್ನು ಸರ್ವರ್‌ಗೆ ಮರುಸ್ಥಾಪಿಸಲಾಗಿದೆ. ಸೇವೆಗಳ ಮರುಸ್ಥಾಪನೆಗೆ ಮುಂಚಿತವಾಗಿ, ನೆಟ್‌ವರ್ಕ್ ಅನ್ನು ಸರಿಪಡಿಸಲಾಗುತ್ತಿದೆ.

ಕಂಪ್ಯೂಟರ್ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ. ಸೈಬರ್ ಸುರಕ್ಷತಾ ಕ್ರಮಗಳನ್ನು ಸಹ ಅಳವಡಿಸಲಾಗಿದೆ. ಹೊರರೋಗಿ ಒಳರೋಗಿಗಳಿಗೆ ಲ್ಯಾಬ್‌ಗಳು ಮತ್ತು ಇತರ ಎಲ್ಲಾ ಆಸ್ಪತ್ರೆ ಸೇವೆಗಳು ಕಂಪ್ಯೂಟರ್ ಬಳಸದೆ ಅಲ್ಲಿನ ಸಿಬ್ಬಂದಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಏಮ್ಸ್ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:20 pm, Thu, 1 December 22