ಒನ್ ಸೈಡ್ ಲವ್; 12ನೇ ತರಗತಿ ವಿದ್ಯಾರ್ಥಿನಿಗೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಕಟ್ಟಡ ಕಾರ್ಮಿಕ
ಮಾಧ್ಯಮ ವರದಿಗಳ ಪ್ರಕಾರ ಅಂಕಿತಾ ಮಂಗಳವಾರ ಬೆಳಗ್ಗೆ ತನ್ನ ಮನೆಯಲ್ಲಿ ಮಲಗಿದ್ದಾಗ ಶಾರುಖ್ ಹುಸೇನ್ ಆಕೆಯ ಮನೆಗೆ ಬಂದು ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬೆಂಕಿ ಹಚ್ಚಿದ್ದಾನೆ
ದುಮ್ಕಾ: ಶಾರುಖ್ ಹುಸೇನ್ ಎಂಬ ಕಟ್ಟಡ ಕಾರ್ಮಿಕನೊಬ್ಬ ಹಿಂದೂ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು ಆಕೆಯನ್ನು ಪೆಟ್ರೋಲ್ ಸುರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ನಡೆದಿದೆ. ಹುಡುಗಿ ಅವನ ಮನೆಯ ನೆರೆಹೊರೆಯಲ್ಲಿ ವಾಸಿಸುತ್ತಿದ್ದಳು. ಆಕೆಯನ್ನು ಅಂಕಿತಾ ಕುಮಾರಿ ಎಂದು ಗುರುತಿಸಲಾಗಿದೆ. ಈಕೆ 12ನೇ ತರಗತಿಯ ವಿದ್ಯಾರ್ಥಿನಿ. ಆಕೆಯನ್ನು ಶಾರುಖ್ ಪ್ರೀತಿಸುತ್ತಿದ್ದ, ಇದು ಒನ್ ಸೈಡ್ ಲವ್ ಆಗಿತ್ತು. ಘಟನೆಯ ನಂತರ ಅಂಕಿತಾಳನ್ನು ಫೂಲೋ ಜಾನೋ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಅಂಕಿತಾ ದೇಹದ ಹಲವು ಭಾಗಗಳು ಸುಟ್ಟು ಹೋಗಿವೆ ಎಂದು ಸಂತ್ರಸ್ತೆಯನ್ನು ಭೇಟಿಯಾದ ಬಳಿಕ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ. ಫೋಟೋಗಳಲ್ಲಿ ಅಂಕಿತಾಳ ಕೈ ಮತ್ತು ಮುಖ ತೀವ್ರವಾಗಿ ಸುಟ್ಟುಹೋಗಿರುವುದು ಕಾಣುತ್ತದೆ.
ಮಾಧ್ಯಮ ವರದಿಗಳ ಪ್ರಕಾರ ಅಂಕಿತಾ ಮಂಗಳವಾರ ಬೆಳಗ್ಗೆ ತನ್ನ ಮನೆಯಲ್ಲಿ ಮಲಗಿದ್ದಾಗ ಶಾರುಖ್ ಹುಸೇನ್ ಆಕೆಯ ಮನೆಗೆ ಬಂದು ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬೆಂಕಿ ಹಚ್ಚಿದ್ದಾನೆ. ಈ ಹಿಂದೆ ಅಂಕಿತಾಗೆ ಆತ ಕಿರುಕುಳ ನೀಡುತ್ತಿದ್ದ. ಅಂಕಿತಾ ನಂಬರ್ ಕೂಡ ಎಲ್ಲಿಂದಲೋ ತೆಗೆದಿದ್ದ ಆತ, ಆ ಬಳಿಕ ಆಕೆಗೆ ಕರೆ ಮಾಡಿ ಫ್ರೆಂಡ್ ಎಂದು ಕೇಳುತ್ತಿದ್ದ. ನಿರಂತರವಾಗಿ ಕರೆಗಳು ಬರುತ್ತಿರುವುದಕ್ಕೆ ಅಂಕಿತಾ ಬೈದಾಗ ಶಾರುಖ್ ಆಕೆಗೆ ಬೆದರಿಕೆ ಹಾಕಿದ್ದ. ನಾನು ಹೇಳಿದಂತೆ ಕೇಳದಿದ್ದರೆ ಕೊಲ್ಲುವುದಾಗಿ ಬೆದರಿಸಿದ್ದ
ಫೋನ್ ಕರೆ ಮೂಲಕ ಬೆದರಿಕೆ ಬಂದಿರುವ ಬಗ್ಗೆ ತನ್ನ ತಂದೆಗೆ ತಿಳಿಸಿದ ನಂತರ ಆಕೆ ತನ್ನ ಕೋಣೆಗೆ ಮಲಗಲು ಹೋಗಿದ್ದಳು. ಆದರೆ ಬೆಳಿಗ್ಗೆ ಕಣ್ಣು ತೆರೆದಾಗ ತನಗೆ ಸುಟ್ಟ ವಾಸನೆ ಮತ್ತು ಬೆನ್ನು ನೋವು ಕಾಣಿಸಿಕೊಂಡಿತು ಎಂದು ಅಂಕಿತಾ ಹೇಳುತ್ತಾರೆ. ನನ್ನ ಮುಂದೆ ಬೆಂಕಿ ಇತ್ತು. ನಾನು ಸುಡುತ್ತಿದ್ದೆ ಗಾಬರಿಯಿಂದ ಅಪ್ಪನ ಕೋಣೆಗೆ ಹೋದೆ. ಮನೆಯವರು ಬೆಂಕಿ ನಂದಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಆಕೆ ಹೇಳಿದ್ದಾಳೆ. ಅಂಕಿತಾ ದೇಹದಲ್ಲಿ ಶೇ 90ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದು, ಶಾರುಖ್ ಹುಸೇನ್ ಅವರನ್ನು ಬಂಧಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:20 pm, Mon, 29 August 22