AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jharkhand Crime: ಸೋದರ ಸಂಬಂಧಿಯ ತಲೆ ಕತ್ತರಿಸಿ, ಸೆಲ್ಫಿ ತೆಗೆದು ವಿಕೃತಿ ಮೆರೆದ ವ್ಯಕ್ತಿ

ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣವನ್ನು ಜನರು ಮರೆಯುವ ಮುನ್ನವೇ ಮತ್ತೊಂದು ಘಟನೆ ಭಯ ಬೀಳಿಸಿದೆ. ವ್ಯಕ್ತಿಯೊಬ್ಬ ಸೋದರ ಸಂಬಂಧಿಯ ತಲೆ ಕತ್ತರಿಸಿ, ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ವಿಕೃತಿ ಮೆರೆದಿದ್ದಾನೆ.

Jharkhand Crime: ಸೋದರ ಸಂಬಂಧಿಯ ತಲೆ ಕತ್ತರಿಸಿ, ಸೆಲ್ಫಿ ತೆಗೆದು ವಿಕೃತಿ ಮೆರೆದ ವ್ಯಕ್ತಿ
PoliceImage Credit source: NDTV
TV9 Web
| Edited By: |

Updated on: Dec 06, 2022 | 9:53 AM

Share

ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣವನ್ನು ಜನರು ಮರೆಯುವ ಮುನ್ನವೇ ಮತ್ತೊಂದು ಘಟನೆ ಭಯ ಬೀಳಿಸಿದೆ. ವ್ಯಕ್ತಿಯೊಬ್ಬ ಸೋದರ ಸಂಬಂಧಿಯ ತಲೆ ಕತ್ತರಿಸಿ, ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ವಿಕೃತಿ ಮೆರೆದಿದ್ದಾನೆ. ಈ ಘಟನೆ ಜಾರ್ಖಂಡ್​ನ ಖುಂಟಿ ಜಿಲ್ಲೆಯಲ್ಲಿ ನಡೆದಿದೆ.

ಎಫ್​ಐಆರ್​ ದಾಖಲಿಸಿರುವ ಮೃತರ ತಂದೆ, 55 ವರ್ಷದ ಮುಂಡಾ ಕೊಲೆಯಾಗುವ ದಿನ ಡಿಸೆಂಬರ್ 1 ರಂದು ತನ್ನ ಮಗ ಕನು ಮುಂಡಾ ಮನೆಯಲ್ಲಿ ಒಬ್ಬಂಟಿಯಾಗಿದ್ದ ಎಂದು ಹೇಳಿದ್ದಾರೆ.

ಆ ವೇಳೆ ಕುಟುಂಬದ ಉಳಿದವರು ಗದ್ದೆ ಕೆಲಸಕ್ಕೆ ಹೋಗಿದ್ದರು. ಮನೆಗೆ ಹಿಂದಿರುಗಿದಾಗ, ಅವರ ಸೋದರಳಿಯ ಸಾಗರ್ ಮುಂಡಾ ಮತ್ತು ಅವರ ಸ್ನೇಹಿತರು ಅವರ ಮಗನನ್ನು ಅಪಹರಿಸಿದ್ದಾರೆ ಎಂದು ಗ್ರಾಮಸ್ಥರ ಮೂಲಕ ತಿಳಿದುಬಂದಿದೆ. ಅವರು ತಕ್ಷಣ ಕಾರ್ಯಪ್ರವೃತ್ತರಾದರು ಮತ್ತು ಪೊಲೀಸ್ ತಂಡವು ತನಿಖೆಯಲ್ಲಿ ತೊಡಗಿತು.

ಇಲ್ಲಿನ ಖುಂಟಿ ಜಿಲ್ಲೆಯಲ್ಲಿ 20 ವರ್ಷದ ಬುಡಕಟ್ಟು ವ್ಯಕ್ತಿಯೊಬ್ಬ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತನ್ನ 24 ವರ್ಷದ ಸಂಬಂಧಿಯ ಶಿರಚ್ಛೇದ ಮಾಡಿದ್ದಾನೆ. ಈ ಘಟನೆಯಲ್ಲಿ ಇನ್ನೂ ಅಚ್ಚರಿಯ ಸಂಗತಿಯೆಂದರೆ, ಕತ್ತರಿಸಿದ ತಲೆಯೊಂದಿಗೆ ಆರೋಪಿಯ ಸ್ನೇಹಿತರು ‘ಸೆಲ್ಫಿ’ ತೆಗೆದುಕೊಂಡಿದ್ದಾರೆ. ಹತ್ಯೆಯ ಬಳಿಕ ಸಾಗರ್ ಶವವನ್ನು ಗೋಪ್ಲಾ ಕಾಡಿನಲ್ಲಿ ಹೂತಿಟ್ಟು, ತಲೆಯನ್ನು 15 ಕಿ.ಮೀ ದೂರದ ದುಲುವಾ ಟೋಂಗ್ರಿ ಬಳಿಯ ಚರಂಡಿಗೆ ಎಸೆದಿದ್ದ ಎನ್ನಲಾಗಿದೆ.

ಈ ಘಟನೆ ಇತ್ತೀಚೆಗೆ ಮುರ್ಹು ಪ್ರದೇಶದಲ್ಲಿ ನಡೆದಿದೆ, ಮೃತರ ತಂದೆ ದಾಸಾಯಿ ಮುಂಡಾ ಅವರು ಡಿಸೆಂಬರ್ 2, 2022 ರಂದು ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಪ್ರಮುಖ ಆರೋಪಿ ಮತ್ತು ಅವರ ಪತ್ನಿ ಸೇರಿದಂತೆ ಆರು ಜನರನ್ನು ಭಾನುವಾರ ಬಂಧಿಸಲಾಗಿದೆ.

ಅಫ್ತಾಬ್ ಪೂನಾವಾಲಾ ಎಂಬಾತ ಲಿವ​-ಇನ್​ ಅಲ್ಸಂಲಿದ್ಗಾದ ತಿ ಶ್ರದ್ಧಾಳನ್ನು ಹತ್ಯೆ ಮಾಡಿ 31 ತುಂಡುಗಳಾಗಿ ಕತ್ತರಿಸಿ, ನಗರದ ವಿವಿಧೆಡೆ ಎಸೆದಿದ್ದ ಘಟನೆ ಕೆಲವು ದಿನಗಳ ಹಿಂದಷ್ಟೇ ವರದಿಯಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ