AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ: ತಿರುವನಂತಪುರಂನಲ್ಲಿರುವ ಸಿನಿಮಾ ಥಿಯೇಟರ್​​ನಲ್ಲಿ ಅಳುವ ಮಕ್ಕಳನ್ನು ಸಂಭಾಳಿಸಲು ಪ್ರತ್ಯೇಕ ಕ್ರೈ ರೂಂ

ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮವು (KSFDC) 'ಕ್ರೈ ರೂಂ' ಅನ್ನು ಸ್ಥಾಪಿಸಿದ್ದು ಪೋಷಕರು ತಮ್ಮ ಅಳುವ ಮಕ್ಕಳನ್ನು ನಿರ್ವಹಿಸಲು ಮತ್ತು ಅದೇ ಸಮಯದಲ್ಲಿ ಇತರರಿಗೆ ತೊಂದರೆಯಾಗದಂತೆ ಚಲನಚಿತ್ರವನ್ನು ಆನಂದಿಸಬಹುದಾಗಿದೆ.

ಕೇರಳ: ತಿರುವನಂತಪುರಂನಲ್ಲಿರುವ ಸಿನಿಮಾ ಥಿಯೇಟರ್​​ನಲ್ಲಿ ಅಳುವ ಮಕ್ಕಳನ್ನು ಸಂಭಾಳಿಸಲು ಪ್ರತ್ಯೇಕ ಕ್ರೈ ರೂಂ
ಥಿಯೇಟರ್​​ನಲ್ಲಿ ಕ್ರೈ ರೂಂ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Dec 06, 2022 | 8:01 PM

Share

ಕೇರಳದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (IFFK) ಮುಂಚಿತವಾಗಿ, ತಿರುವನಂತಪುರಂನಲ್ಲಿರುವ ಕೈರಳಿ ಶ್ರೀನಿಲಾ ಥಿಯೇಟರ್ ಕಾಂಪ್ಲೆಕ್ಸ್ ನಲ್ಲಿ (Kairali-Sree-Nila theatre)  ಕ್ರೈ ರೂಂ (Cry Room) ಎಂಬ ಪ್ರತ್ಯೇಕ ಕೋಣೆಯೊಂದನ್ನು ಸಜ್ಜುಗೊಳಿಸಲಾಗಿದೆ. ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮವು (KSFDC) ‘ಕ್ರೈ ರೂಂ’ ಅನ್ನು ಸ್ಥಾಪಿಸಿದ್ದು ಪೋಷಕರು ತಮ್ಮ ಅಳುವ ಮಕ್ಕಳನ್ನು ನಿರ್ವಹಿಸಲು ಮತ್ತು ಅದೇ ಸಮಯದಲ್ಲಿ ಇತರರಿಗೆ ತೊಂದರೆಯಾಗದಂತೆ ಚಲನಚಿತ್ರವನ್ನು ಆನಂದಿಸಬಹುದಾಗಿದೆ. ಕೆಲವು ತಿಂಗಳ ಹಿಂದೆ, ಕೇರಳದಲ್ಲಿ ಇತರ ಚಲನಚಿತ್ರ ವೀಕ್ಷಕರಿಗೆ ತೊಂದರೆಯಾಗಬಹುದು ಎಂಬ ಕಾರಣದಿಂದ ಚಿಕ್ಕ ಮಕ್ಕಳನ್ನು ಚಿತ್ರಮಂದಿರಗಳಿಗೆ ಅನುಮತಿಸಬೇಕೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆದಿತ್ತು. ಈ ವಿಷಯದ ಒಂದು ವಿಭಾಗವು ಚಿಕ್ಕ ಮಕ್ಕಳನ್ನು ಚಿತ್ರಮಂದಿರಗಳ ಒಳಗೆ ಬಿಡಬಾರದು ಎಂದು ಹೇಳುವುದು ಸರಿಯಲ್ಲ ಎಂದು ವಾದಿಸಿತ್ತು. ಗಾಜಿನ ಕಿಟಕಿಗಳು ಮತ್ತು ಪ್ರತ್ಯೇಕ ಧ್ವನಿ ವ್ಯವಸ್ಥೆಯನ್ನು ಹೊಂದಿರುವ ಕ್ರೈ ರೂಂ ಅನ್ನು ಯುವ ಪೋಷಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಇದೇ ಕೋಣೆಯಲ್ಲಿ ಡೈಪರ್ ಬದಲಾಯಿಸಲು ಮತ್ತು ಮಗುವಿಗೆ ಹಾಲುಣಿಸಲು,ಆಹಾರ ನೀಡಲು ಪ್ರತ್ಯೇಕ ಸೌಕರ್ಯವಿದೆ.ತಮ್ಮ ಮಕ್ಕಳು ಅಳಲು ಪ್ರಾರಂಭಿಸಿದರೆ ಪೋಷಕರು ಚಿತ್ರಮಂದಿರದಿಂದ ಹೊರಬರುವ ಅಗತ್ಯವಿಲ್ಲ ಎಂದು ಸೋಮವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಕೇರಳದ ಸಂಸ್ಕೃತಿ ಸಚಿವ ವಿಎನ್ ವಾಸವನ್ ಹೇಳಿದ್ದಾರೆ. “ಚಿಕ್ಕ ಮಕ್ಕಳಿರುವ ಪೋಷಕರು ನೆಮ್ಮದಿಯಾಗಿ ಸಿನಿಮಾ ನೋಡುವುದು ತೀರಾ ಅಪರೂಪ. ಮಕ್ಕಳು ಸಿನಿಮಾ ಹಾಲ್‌ನ ಒಳಗಿನ ಕತ್ತಲೆ, ಧ್ವನಿ ಮತ್ತು ಬೆಳಕಿನಿಂದ ಅನಾನುಕೂಲತೆಯನ್ನು ಅನುಭವಿಸಬಹುದು. ಮಕ್ಕಳು ತಮ್ಮ ಅಸ್ವಸ್ಥತೆಯನ್ನು ತೋರಿಸಲು ಪ್ರಾರಂಭಿಸಿದಾಗ ಪೋಷಕರು ಅಲ್ಲಿಂದ ಹೊರಹೋಗಬೇಕಾಗುತ್ತದೆ. ಥಿಯೇಟರ್‌ಗಳನ್ನು ಮಕ್ಕಳ ಮತ್ತು ಮಹಿಳಾ ಸ್ನೇಹಿಯಾಗಿ ಮಾಡಲು, ಕೈರಳಿ-ಶ್ರೀ-ನಿಲಾ ಸಂಕೀರ್ಣದ ಒಳಗೆ ಕ್ರೈ ರೂಂ ವ್ಯವಸ್ಥೆ ಮಾಡಲಾಗಿದೆ. ಧ್ವನಿ ನಿರೋಧಕ ಕ್ರೈ ರೂಮ್‌ನಲ್ಲಿ ತೊಟ್ಟಿಲು ಮತ್ತು ಡೈಪರ್ ಬದಲಾಯಿಸುವ ಸೌಲಭ್ಯವಿದೆ ಎಂದು ಸಚಿವರು ಹೇಳಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಥಿಯೇಟರ್ ಸಂಕೀರ್ಣದ ನವೀಕರಣ ಕಾಮಗಾರಿಯ ಭಾಗವಾಗಿ ಕ್ರೈ ರೂಂ ಅನ್ನು ಪರಿಚಯಿಸಲಾಯಿತು. ನಿಗಮದ ಹೊಸ ಯೋಜನೆಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೆಎಸ್‌ಎಫ್‌ಡಿಸಿ ಅಧ್ಯಕ್ಷ ಶಾಜಿ ಎನ್ ಕರುಣ್ ತಿಳಿಸಿದರು. “ನಾವು ತ್ರಿಶೂರ್ ಮತ್ತು ಕಾಯಂಕುಳಂ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸುಮಾರು ಆರು ಥಿಯೇಟರ್‌ಗಳನ್ನು ಹೊಂದಿದ್ದೇವೆ. ಭವಿಷ್ಯದಲ್ಲಿ, ಎಲ್ಲಾ ಥಿಯೇಟರ್‌ಗಳು ಅಂತಹ ಸೌಲಭ್ಯಗಳನ್ನು ಹೊಂದಿರುತ್ತವೆ. ಇದು ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಮತ್ತು ವಿಕಲಚೇತನರು ಸೇರಿದಂತೆ ಎಲ್ಲರಿಗೂ ಚಿತ್ರಮಂದಿರಗಳನ್ನು ಪ್ರವೇಶಿಸುವಂತೆ ಮಾಡುವ ಭಾಗವಾಗಿದೆ ಎಂದಿದ್ದಾರೆ.

ಐರೋಪ್ಯ ರಾಷ್ಟ್ರಗಳ ಚರ್ಚ್ ಗಳಲ್ಲಿ ಇಂತಹ ಸೌಲಭ್ಯಗಳನ್ನು ಕಂಡಿದ್ದೇನೆ ಎಂದು ಕರುಣ್ ಹೇಳಿದ್ದಾರೆ. “ಥಿಯೇಟರ್‌ಗಳು ಕೂಡ ದೇವಸ್ಥಾನಗಳಿದ್ದಂತೆ, ನಾವು ಅದನ್ನು ಎಲ್ಲರಿಗೂ ಪ್ರವೇಶಿಸುವಂತೆ ಮಾಡಬೇಕು. ವಿಶೇಷವಾಗಿ ವಿಭಕ್ತ ಕುಟುಂಬಗಳಿಗೆ ಮಕ್ಕಳನ್ನು ಕರೆದುಕೊಂಡು ಬರದೇ ಇರಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

Published On - 8:01 pm, Tue, 6 December 22

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್