ಕೇರಳದಲ್ಲಿ ಹೆಚ್ಚುತ್ತಿರುವ ನಿಫಾ ವೈರಸ್; ಕೋಯಿಕ್ಕೋಡ್ನಲ್ಲಿ ಸೆ.24ರ ವರೆಗೆ ಶಾಲಾ ಕಾಲೇಜುಗಳಿಗೆ ರಜೆ
ನಿಫಾ ವೈರಸ್ ಹೆಚ್ಚಳ ಹಿನ್ನೆಲೆ ಕೇರಳದ ಕೋಯಿಕ್ಕೋಡ್ನಲ್ಲಿ ನೀಡಲಾದ ಶಾಲಾ ಕಾಲೇಜುಗಳಿಗೆ ರಜಾ ದಿನಗಳನ್ನು ಸೆ.24ರ ವರೆಗೆ ವಿಸ್ತರಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಯವರು ಶಾಲಾ ಕಾಲೇಜುಗಳಿಗೆ ಸೆಪ್ಟೆಂಬರ್ 16ರವರೆಗೆ ರಜೆ ವಿಸ್ತರಿಸಿ ಆದೇಶ ಹೊರಡಿಸಿದ್ದರು.
ಕೋಯಿಕ್ಕೋಡ್ ಸೆಪ್ಟೆಂಬರ್ 16: ಕೇರಳದಲ್ಲಿ ನಿಫಾ ವೈರಸ್ (Nipah Virus) ಹೆಚ್ಚಾಗುತ್ತಿದೆ. ಶುಕ್ರವಾರ ಕೋಯಿಕ್ಕೋಡ್ನಲ್ಲಿ ನಿಫಾ ವೈರಸ್ ಪ್ರಕರಣ ಪತ್ತೆಯಾದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಘೋಷಣೆ ಮಾಡಲಾಗಿತ್ತು. ಸದ್ಯ ಈ ರಜೆಯನ್ನು ಸೆ.24ರ ವರೆಗೆ ವಿಸ್ತರಿಸಲಾಗಿದೆ.
ಎಲ್ಲಾ ಶಾಲೆಗಳಿಗೆ ಸೆ.14 ಮತ್ತು 15 ರಂದು ರಜೆ ನೀಡುವಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು. ಅಲ್ಲದೆ, ಈ ಆದೇಶ ಅಂಗನವಾಡಿಗಳು, ಮದರಸಾಗಳು, ಬೋಧನಾ ಕೇಂದ್ರಗಳು ಮತ್ತು ವೃತ್ತಿಪರ ಕಾಲೇಜುಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಲಾಗಿತ್ತು. ಬಳಿಕ ಒಂದು ದಿನ ರಜೆಯನ್ನು ವಿಸ್ತರಿಸಲಾಗಿತ್ತು. ಇದೀಗ ಮುಂಜಾಗ್ರತಾ ಕ್ರಮವಾಗಿ ಸೆ.24 ರವರೆಗೆ ರಜೆ ವಿಸ್ತರಿಸಲಾಗಿದೆ.
ಶಾಲೆಗಳನ್ನು ಮುಚ್ಚುವುದು ಎಲ್ಲಾ ಅಂಗನವಾಡಿಗಳು, ಮದರಸಾಗಳು, ಬೋಧನಾ ಕೇಂದ್ರಗಳು ಮತ್ತು ವೃತ್ತಿಪರ ಕಾಲೇಜುಗಳಿಗೂ ಅನ್ವಯಿಸುತ್ತದೆ. ಸೆಪ್ಟೆಂಬರ್ 14 ಮತ್ತು 15 ರಂದು ಈ ಹಿಂದೆ ಘೋಷಿಸಲಾದ ಎರಡು ದಿನಗಳ ರಜೆಯ ಮುಂದುವರಿಕೆಯಲ್ಲಿ ಈ ನಿರ್ಧಾರವು ಪರಿಗಣನೆಗೆ ಬಂದಿದೆ.
ಇದನ್ನೂ ಓದಿ: Nipah Virus: ನಿಫಾ ವೈರಸ್ನಿಂದ ಸಾವುಗಳು ಹೆಚ್ಚುತ್ತಿವೆ.. ದೇಶದಲ್ಲಿ ಕೊರೊನಾ ಪರಿಸ್ಥಿತಿ ಮತ್ತೆ ಬರುತ್ತಿದೆಯಾ?
ಕೋಯಿಕ್ಕೋಡ್ನಲ್ಲಿ ಮೊದಲ ನಿಫಾ ವೈರಸ್ ಪತ್ತೆಯಾದ ಹಿನ್ನೆಲೆ ವೈರಸ್ನ ಮೂಲವನ್ನು ಪತ್ತೆ ಹಚ್ಚಲು ಕೇಂದ್ರದ ತಜ್ಞರ ತಂಡವು ಶುಕ್ರವಾರ ಮಾರುತೋಣಕರ ಪಂಚಾಯತ್ ವ್ಯಾಪ್ತಿಯಲ್ಲಿರುವ ರೋಗಿಯ ಮನೆ ಭೇಟಿ ನೀಡಿದರು. ಇದೇ ವೇಳೆ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಅವರ ಕೃಷಿ ಭೂಮಿಯನ್ನು ಪರಿಶೀಲಿಸಿತು.
ಪ್ರಸ್ತುತ ಸೋಂಕಿಗೆ ಸಂಬಂಧಿಸಿದಂತೆ ನಾಲ್ಕು ಸಕ್ರಿಯ ಪ್ರಕರಣಗಳು ವರದಿ ಆಗಿದ್ದು ಮತ್ತು ಎರಡು ಸಾವು ಸಂಭವಿಸಿದೆ. ಆರು ಮಂದಿಗೆ ನಿಫಾ ಸೋಂಕು ದೃಢಪಟ್ಟಿರುವುದರಿಂದ, ಸೋಂಕಿತರ ಎಲ್ಲಾ ಅಪಾಯಕಾರಿ ಸಂಪರ್ಕಗಳನ್ನು ಪರೀಕ್ಷಿಸಲು ಕೇರಳ ಸರ್ಕಾರ ನಿರ್ಧರಿಸಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 am, Sat, 16 September 23