Mumbai: ಚೈನೀಸ್ ಫುಡ್ ಸ್ಟಾಲ್ನ ಗ್ರೈಂಡರ್ ಯಂತ್ರದಲ್ಲಿ ಸಿಲುಕಿ ಯುವಕ ಸಾವು
ಮುಂಬೈನ ವರ್ಲಿಯಲ್ಲಿರುವ ಚೈನೀಸ್ ಫುಡ್ ಸ್ಟಾಲ್ನ ಗ್ರೈಂಡರ್ನಲ್ಲಿ ಸಿಲುಕಿ ಜಾರ್ಖಂಡ್ ಮೂಲದ 19 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಸೂರಜ್ ನಾರಾಯಣ ಯಾದವ್ ಎಂದು ಗುರುತಿಸಲಾಗಿದೆ, ಯಾದವ್ ಮೂರ್ನಾಲ್ಕು ತಿಂಗಳಿನಿಂದ ಈ ಫುಡ್ ಸ್ಟಾಲ್ನಲ್ಲಿ ಕೆಲಸ ಮಾಡುತ್ತಿದ್ದ. ಇದರ ಮಾಲೀಕ ಸಚಿನ್ ಕೊಥೇಕರ್. ಗ್ರೈಂಡರ್ ಯಾದವ್ರನ್ನು ಎಳೆದುಕೊಂಡಿತ್ತು. ಚೀನೀ ಆಹಾರವನ್ನು ಸಿದ್ಧಪಡಿಸುತ್ತಿದ್ದಾಗ ಈ ಘಟನೆ ನಡೆದಿದೆ. ಯಂತ್ರಗಳನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಸಮರ್ಪಕ ಮಾಹಿತಿಯನ್ನು ನೀಡಿರದ ಕಾರಣ ಈ ಘಟನೆ ನಡೆದಿದೆ. ಸರಿಯಾದ ಸುರಕ್ಷತಾ ಕ್ರಮಗಳ ಕುರಿತು ಕೂಡ ತರಬೇತಿ ನೀಡಿರಲಿಲ್ಲ, ದಾದರ್ ಪೊಲೀಸ್ ಠಾಣೆಯಲ್ಲಿ ಸ್ಟಾಲ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮುಂಬೈನ ವರ್ಲಿಯಲ್ಲಿರುವ ಚೈನೀಸ್ ಫುಡ್ ಸ್ಟಾಲ್ನ ಗ್ರೈಂಡರ್ ಯಂತ್ರದಲ್ಲಿ ಸಿಲುಕಿ ಜಾರ್ಖಂಡ್ ಮೂಲದ 19 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಸೂರಜ್ ನಾರಾಯಣ ಯಾದವ್ ಎಂದು ಗುರುತಿಸಲಾಗಿದೆ, ಯಾದವ್ ಮೂರ್ನಾಲ್ಕು ತಿಂಗಳಿನಿಂದ ಈ ಫುಡ್ ಸ್ಟಾಲ್ನಲ್ಲಿ ಕೆಲಸ ಮಾಡುತ್ತಿದ್ದ. ಇದರ ಮಾಲೀಕ ಸಚಿನ್ ಕೊಥೇಕರ್.
ಗ್ರೈಂಡರ್ ಮೊದಲು ಯಾದವ್ ಶರ್ಟ್ ಅನ್ನು ಎಳೆದುಕೊಂಡಿತ್ತು. ಬಳಿಕ ಅವರೇ ಹೋಗಿ ಯಂತ್ರದೊಳಗೆ ಬಿದ್ದಿದ್ದರು. ಚೀನೀ ಆಹಾರವನ್ನು ಸಿದ್ಧಪಡಿಸುತ್ತಿದ್ದಾಗ ಈ ಘಟನೆ ನಡೆದಿದೆ. ಯಂತ್ರಗಳನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಸಮರ್ಪಕ ಮಾಹಿತಿಯನ್ನು ನೀಡಿರದ ಕಾರಣ ಈ ಘಟನೆ ನಡೆದಿದೆ. ಸರಿಯಾದ ಸುರಕ್ಷತಾ ಕ್ರಮಗಳ ಕುರಿತು ಕೂಡ ತರಬೇತಿ ನೀಡಿರಲಿಲ್ಲ, ದಾದರ್ ಪೊಲೀಸ್ ಠಾಣೆಯಲ್ಲಿ ಸ್ಟಾಲ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಆಗಸ್ಟ್‌ನಲ್ಲಿ, ಹರಿಯಾಣದ ಗುರುಗ್ರಾಮ್‌ನ ಬಿಲಾಸ್‌ಪುರ್ ಚೌಕ್‌ನಲ್ಲಿ ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇ ರಿಪೇರಿ ನೋಡಿಕೊಳ್ಳುತ್ತಿದ್ದ 40 ವರ್ಷದ ವ್ಯಕ್ತಿ ಗ್ರೈಂಡಿಂಗ್ ಯಂತ್ರದಲ್ಲಿ ಸಿಲುಕಿ ಸಾವನ್ನಪ್ಪಿದ್ದರು. ಏತನ್ಮಧ್ಯೆ, ವರ್ಲಿಯಲ್ಲಿರುವ ಪೂನಂ ಚೇಂಬರ್ಸ್ ಕಟ್ಟಡದೊಳಗೆ ಇರುವ ರಾಜಶ್ರೀ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಪ್ರೊಡಕ್ಷನ್ ಸ್ಟುಡಿಯೋದ ಎರಡನೇ ಮಹಡಿಯಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿತ್ತು.
ಮತ್ತಷ್ಟು ಓದಿ: ಜೋಗದ ಬಳಿ ಪ್ರವಾಸಿ ಬಸ್ ಪಲ್ಟಿ: 21ಕ್ಕೂ ಹೆಚ್ಚು ಜನರಿಗೆ ಗಾಯ
ಎಂಟು ಅಗ್ನಿಶಾಮಕ ಇಂಜಿನ್‌ಗಳು ಮತ್ತು ಆರು ಜಂಬೋ ಟ್ಯಾಂಕರ್‌ಗಳನ್ನು ರವಾನಿಸಲಾಗಿತ್ತು. ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಎಡಿಟಿಂಗ್ ಪ್ಯಾನಲ್‌ಗಳು, ಕಂಪ್ಯೂಟರ್‌ಗಳು, ಕ್ಯಾಮೆರಾಗಳು ಮತ್ತು ಸ್ಟುಡಿಯೋದ ಉಪಕರಣಗಳು ಬೆಂಕಿಗೀಡಾಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ