‘ಸುಳ್ಳು ವರದಿ’; ಬ್ರಿಕ್ಸ್​ ಶೃಂಗಸಭೆಯ ನಂತರ ಜಾಗತಿಕ ನಾಯಕರ ಆರೋಗ್ಯ ಕೆಟ್ಟಿದೆ ಎಂಬ ವರದಿ ತಳ್ಳಿಹಾಕಿದ ಭಾರತ

ಭಾರತದಲ್ಲಿ ನಡೆದ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಹಲವಾರು ಜಾಗತಿಕ ನಾಯಕರು ಅಸ್ವಸ್ಥಗೊಂಡಿದ್ದಾರೆ ಎಂಬ ವರದಿಗಳನ್ನು ಭಾರತದ ವಿದೇಶಾಂಗ ಸಚಿವಾಲಯವು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಈ ವರದಿಗಳು "ಹಸಿಸುಳ್ಳು" ಎಂದು ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವಾಲಯದ ಫ್ಯಾಕ್ಟ್-ಚೆಕಿಂಗ್ ವಿಭಾಗವು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ದುರುದ್ದೇಶಪೂರಿತ ಪೋಸ್ಟ್‌ಗಳ ವಿರುದ್ಧ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

‘ಸುಳ್ಳು ವರದಿ’; ಬ್ರಿಕ್ಸ್​ ಶೃಂಗಸಭೆಯ ನಂತರ ಜಾಗತಿಕ ನಾಯಕರ ಆರೋಗ್ಯ ಕೆಟ್ಟಿದೆ ಎಂಬ ವರದಿ ತಳ್ಳಿಹಾಕಿದ ಭಾರತ
ಬ್ರಿಕ್ಸ್ ಶೃಂಗಸಭೆ
Image Credit source: PTI

Updated on: Sep 17, 2026 | 5:36 PM

ನವದೆಹಲಿ, ಸೆಪ್ಟೆಂಬರ್ 17: ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಹಲವು ಜಾಗತಿಕ ನಾಯಕರು ಅನಾರೋಗ್ಯಕ್ಕೊಳಗಾಗಿದ್ದಾರೆ ಎಂದು ಪ್ರತಿಪಾದಿಸುವ ಮಾಧ್ಯಮ ವರದಿಗಳನ್ನು ಭಾರತದ ವಿದೇಶಾಂಗ ಸಚಿವಾಲಯವು ಸಂಪೂರ್ಣವಾಗಿ ನಿರಾಕರಿಸಿದ್ದು, ಇವು ಹಸಿಸುಳ್ಳು ಮತ್ತು ಜನರ ದಾರಿ ತಪ್ಪಿಸುವ ಆಧಾರರಹಿತ ವರದಿಗಳು” ಎಂದು ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ದುರುದ್ದೇಶಪೂರಿತ ಪೋಸ್ಟ್‌ಗಳ ವಿರುದ್ಧ ಸಾರ್ವಜನಿಕರಿಗೆ ವಿದೇಶಾಂಗ ಸಚಿವಾಲಯದ ಫ್ಯಾಕ್ಟ್-ಚೆಕ್ ವಿಭಾಗವು ತೀವ್ರ ಎಚ್ಚರಿಕೆ ನೀಡಿದೆ.

“ಫೇಕ್ ಅಲರ್ಟ್!!! ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಇಂತಹ ದುರುದ್ದೇಶಪೂರಿತ ಪೋಸ್ಟ್‌ಗಳ ವಿರುದ್ಧ ನಾವು ಸಾರ್ವಜನಿಕರನ್ನು ಎಚ್ಚರಿಸುತ್ತಿದ್ದೇವೆ!” ಎಂದು ಸಚಿವಾಲಯದ ಫ್ಯಾಕ್ಟ್-ಚೆಕ್ ಘಟಕವು ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಸೇರಿದಂತೆ ಬ್ರಿಕ್ಸ್ ನಾಯಕರ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುಳ್ಳು ಸುದ್ದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.


ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆ: ಮೋದಿ ಆಯೋಜಿಸಿದ್ದ ಭೋಜನಕೂಟದಿಂದ ದೂರ ಉಳಿದ ಚೀನಾ ಅಧ್ಯಕ್ಷ ಷಿ

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರ ಕಚೇರಿಯು, ಭಾರತದ ಶೃಂಗಸಭೆಯಿಂದ ಹಿಂತಿರುಗಿದ ನಂತರ ಅವರು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ ಎಂದು ಪ್ರಕಟಿಸಿದ ಬೆನ್ನಲ್ಲೇ ಈ ಗೊಂದಲಗಳು ಶುರುವಾಗಿದ್ದವು. 73 ವರ್ಷದ ಅಧ್ಯಕ್ಷರಿಗೆ ಅನಾರೋಗ್ಯದ ಕಾರಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಅಧ್ಯಕ್ಷೀಯ ಕಚೇರಿ ತಿಳಿಸಿತ್ತು. ಆದರೆ, ಇದಕ್ಕೆ ಬ್ರಿಕ್ಸ್ ಶೃಂಗಸಭೆಯೇ ಕಾರಣವೆಂಬುದನ್ನು ದಕ್ಷಿಣ ಆಫ್ರಿಕಾ ಹೇಳಿರಲಿಲ್ಲ. ಆದರೂ ಮಾಧ್ಯಮಗಳಲ್ಲಿ ಈ ಸುದ್ದಿಗಳು ಹರಿದಾಡಿದ್ದವು.

18ನೇ ಬ್ರಿಕ್ಸ್ ಶೃಂಗಸಭೆಯು ಸೆಪ್ಟೆಂಬರ್ 12 ಮತ್ತು 13ರಂದು ಭಾರತದ ರಾಜಧಾನಿ ನವದೆಹಲಿಯಲ್ಲಿ ಯಶಸ್ವಿಯಾಗಿ ನೆರವೇರಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us