AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಾರ ಗೌರವ ಪಡೆದ ನಾಯಕ; ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪುಟಿನ್, ಟ್ರಂಪ್

ಪ್ರಧಾನಿ ನರೇಂದ್ರ ಮೋದಿ ತಮ್ಮ 76ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಜನ್ಮದಿನದ ಶುಭಾಶಯಗಳನ್ನು ಸ್ವೀಕರಿಸಿದ್ದಾರೆ. ಈ ಸಂದೇಶಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿಯವರ ಪಾತ್ರ ಮತ್ತು ಮಸ್ಕೋ ಹಾಗೂ ವಾಷಿಂಗ್ಟನ್ ಜೊತೆಗಿನ ಭಾರತದ ದ್ವಿಪಕ್ಷೀಯ ಸಂಬಂಧಗಳ ಮಹತ್ವವನ್ನು ಎತ್ತಿಹಿಡಿದಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಸಂದೇಶದಲ್ಲಿ, "ನರೇಂದ್ರ ಮೋದಿ ಅವರು ಭಾರತೀಯರಲ್ಲಿ ತೀವ್ರ ಗೌರವಕ್ಕೆ ಪಾತ್ರರಾಗಿದ್ದಾರೆ ಹಾಗೂ ಜಾಗತಿಕ ಮಟ್ಟದಲ್ಲಿ ಅಪಾರ ಪ್ರಭಾವ ಹೊಂದಿದ್ದಾರೆ" ಎಂದು ಬಣ್ಣಿಸಿದ್ದಾರೆ.

ಅಪಾರ ಗೌರವ ಪಡೆದ ನಾಯಕ; ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪುಟಿನ್, ಟ್ರಂಪ್
ಪುಟಿನ್-ಮೋದಿ-ಟ್ರಂಪ್ Image Credit source: AP
ಸುಷ್ಮಾ ಚಕ್ರೆ
|

Updated on: Sep 17, 2026 | 3:55 PM

Share

ನವದೆಹಲಿ, ಸೆಪ್ಟೆಂಬರ್ 17: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ತಮ್ಮ 76ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಭಾರತದಲ್ಲಿರುವ ರಷ್ಯಾ ಮತ್ತು ಅಮೆರಿಕ ರಾಯಭಾರ ಕಚೇರಿಗಳು ಈ ಇಬ್ಬರೂ ನಾಯಕರ ಶುಭಾಶಯ ಸಂದೇಶಗಳನ್ನು ಹಂಚಿಕೊಂಡಿವೆ.

ಪ್ರಧಾನಿ ಮೋದಿಯವರನ್ನು ಶ್ಲಾಘಿಸಿರುವ ರಷ್ಯಾ ಅಧ್ಯಕ್ಷ ಪುಟಿನ್, “ನಿಮ್ಮ ದೇಶವಾಸಿಗಳಿಂದ ನೀವು ಅಪಾರ ಗೌರವವನ್ನು ಗಳಿಸಿದ್ದೀರಿ ಹಾಗೂ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಭಾವ ಹೊಂದಿದ್ದೀರಿ. ಭಾರತ ಮತ್ತು ರಷ್ಯಾದ ನಡುವಿನ ವಿಶೇಷ ಹಾಗೂ ಸಾಂಸ್ಥಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವಲ್ಲಿ ನಿಮ್ಮ ವೈಯಕ್ತಿಕ ಕೊಡುಗೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಅಮೆರಿಕ ರಾಯಭಾರ ಕಚೇರಿಯು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರವಾಗಿ ನಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ. ಮುಂಬರುವ ವರ್ಷದಲ್ಲಿಯೂ ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷ ಸಿಗಲಿ” ಎಂದು ಹಾರೈಸಿದೆ.

ಇದನ್ನೂ ಓದಿ: ಚುನಾವಣೆಯಲ್ಲೇ ಸ್ಪರ್ಧಿಸದ ನರೇಂದ್ರ ಮೋದಿಗೆ ಗುಜರಾತ್​ ಸಿಎಂ ಪಟ್ಟ ಒಲಿದಿದ್ದು ಹೇಗೆ?

ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುವ ದೇಶಗಳ ಮೇಲೆ ಚಾಟಿ ಬೀಸಲು ಅಧ್ಯಕ್ಷ ಟ್ರಂಪ್‌ಗೆ ಹೊಸ ಅಧಿಕಾರ ನೀಡುವ ನಿರ್ಬಂಧಗಳ ಮಸೂದೆಗೆ ಅಮೆರಿಕ ಕಾಂಗ್ರೆಸ್ ಅನುಮೋದನೆ ನೀಡಿ, ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿರುವ ಬೆನ್ನಲ್ಲೇ ಈ ನಾಯಕರ ಶುಭಾಶಯಗಳು ಬಂದಿವೆ.

ಭಾರತ-ರಷ್ಯಾ ಸಂಬಂಧವನ್ನು ಶ್ಲಾಘಿಸಿದ ಪುಟಿನ್:

ಈ ತಿಂಗಳ ಆರಂಭದಲ್ಲಿ ಬ್ರಿಕ್ಸ್ ಶೃಂಗಸಭೆಗಾಗಿ ನವದೆಹಲಿಗೆ ಆಗಮಿಸಿದ್ದ ರಷ್ಯಾ ಅಧ್ಯಕ್ಷ ಪುಟಿನ್, ತಮಗೆ ಮತ್ತು ರಷ್ಯಾದ ನಿಯೋಗಕ್ಕೆ ನೀಡಿದ ಆತಿಥ್ಯಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ. “ನಮ್ಮ ನಡುವೆ ನಡೆದ ಚರ್ಚೆಗಳು ಅತ್ಯಂತ ಅರ್ಥಪೂರ್ಣ ಹಾಗೂ ಫಲಪ್ರದವಾಗಿದ್ದವು. ನಿಮ್ಮೊಂದಿಗೆ ಮಾತನಾಡುವುದು ಯಾವಾಗಲೂ ಅತ್ಯಂತ ಸಂತಸದ ವಿಷಯ. ಈ ಭೇಟಿಯು ನಿಮ್ಮ ಅಸಾಧಾರಣ ರಾಜಕೀಯ ಪ್ರಜ್ಞೆ ಮತ್ತು ದೂರದೃಷ್ಟಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ 76ನೇ ಜನ್ಮದಿನ: ಯೂಟ್ಯೂಬ್‌ನಲ್ಲಿ 3 ಕೋಟಿ, ಇನ್‌ಸ್ಟಾಗ್ರಾಮ್‌ನಲ್ಲಿ 10 ಕೋಟಿ; ವಿಶ್ವದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ನಾಯಕ ನರೇಂದ್ರ ಮೋದಿ

ಪ್ರಧಾನಿ ಮೋದಿಯ ಹುಟ್ಟುಹಬ್ಬ:

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 1950ರಲ್ಲಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ವಾಡ್‌ನಗರದಲ್ಲಿ ಹೀರಾಸೌ ಹಾಗೂ ದಾಮೋದರ್‌ದಾಸ್ ಮೋದಿ ದಂಪತಿಗೆ ಜನಿಸಿದರು. ಇಂದು ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಬಿಜೆಪಿ ದೇಶಾದ್ಯಂತ ಅಕ್ಟೋಬರ್ 17ರವರೆಗೆ ‘ಸೇವಾ ಸಂಕಲ್ಪ ಅಭಿಯಾನ’ವನ್ನು ಆಯೋಜಿಸಿದ್ದು, ಬೃಹತ್ ಮಟ್ಟದ ಸೇವಾ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಂಪರ್ಕ ಅಭಿಯಾನಗಳನ್ನು ಹಮ್ಮಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’