AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಕ್ಸ್ ಶೃಂಗಸಭೆ: ಮೋದಿ ಆಯೋಜಿಸಿದ್ದ ಭೋಜನಕೂಟದಿಂದ ದೂರ ಉಳಿದ ಚೀನಾ ಅಧ್ಯಕ್ಷ ಷಿ

ದೆಹಲಿಯ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಆಯೋಜಿಸಿದ್ದ ಭೋಜನಕೂಟಕ್ಕೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಗೈರುಹಾಜರಾಗಿದ್ದರು. ಸುದೀರ್ಘ ಪ್ರಯಾಣದ ಆಯಾಸ, ಜೆಟ್‌ಲ್ಯಾಗ್ ಕಾರಣ ಎಂದು ಮೂಲಗಳು ತಿಳಿಸಿವೆ. ಭೋಜನಕೂಟಕ್ಕೂ ಮುನ್ನ ಮೋದಿ ಮತ್ತು ಷಿ ಯಶಸ್ವಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಭಾರತ-ಚೀನಾ ಸಂಬಂಧ ಸುಧಾರಣೆಗೆ ಮೋದಿ ಮೂರು ತತ್ವಗಳನ್ನು ಪ್ರತಿಪಾದಿಸಿದರು. ಶೃಂಗಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಬ್ರಿಕ್ಸ್ ಶೃಂಗಸಭೆ: ಮೋದಿ ಆಯೋಜಿಸಿದ್ದ ಭೋಜನಕೂಟದಿಂದ ದೂರ ಉಳಿದ ಚೀನಾ ಅಧ್ಯಕ್ಷ ಷಿ
ನರೇಂದ್ರ ಮೋದಿ-ಷಿImage Credit source: India Today
ನಯನಾ ರಾಜೀವ್
|

Updated on: Sep 13, 2026 | 1:01 PM

Share

ನವದೆಹಲಿ, ಸೆಪ್ಟೆಂಬರ್ 13: ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದ್ದ 18ನೇ ಬ್ರಿಕ್ಸ್ ಶೃಂಗಸಭೆಯ ಮೊದಲ ದಿನದ ಮುಕ್ತಾಯದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಿಗೆ ಭವ್ಯ ಔತಣಕೂಟ ಏರ್ಪಡಿಸಿದ್ದರು. ಆದರೆ ಈ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಹಾಗೂ ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಗೈರುಹಾಜರಾಗಿದ್ದರು. ಶನಿವಾರ ಮಧ್ಯಾಹ್ನವಷ್ಟೇ ದೆಹಲಿಗೆ ಬಂದಿಳಿದಿದ್ದ ಷಿ ಜಿನ್‌ಪಿಂಗ್, ದೀರ್ಘ ವಿಮಾನ ಪ್ರಯಾಣ, ಸಮಯದ ವ್ಯತ್ಯಾಸ (ಜೆಟ್‌ಲ್ಯಾಗ್) ಹಾಗೂ ಸತತ ಸಭೆಗಳಿಂದ ತೀವ್ರ ದಣಿದಿದ್ದ ಕಾರಣ ವಿಶ್ರಾಂತಿ ಪಡೆದರು ಎಂದು ಮೂಲಗಳು ತಿಳಿಸಿವೆ.

ಡಿನ್ನರ್ ಮಿಸ್ ಮಾಡಿಕೊಂಡ ನಾಯಕರು: ದೀರ್ಘ ಪ್ರಯಾಣದ ಆಯಾಸದ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಹಾಗೂ ಯುಎಇ ಪ್ರತಿನಿಧಿಸಿದ್ದ ಅಬುಧಾಬಿ ಯುವರಾಜ ಭೋಜನಕೂಟಕ್ಕೆ ಹಾಜರಾಗಲಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಬ್ರಿಕ್ಸ್ ಒಕ್ಕೂಟದ ಇತರ ಸದಸ್ಯ ರಾಷ್ಟ್ರಗಳ ನಾಯಕರು ಔತಣಕೂಟದಲ್ಲಿ ಭಾಗಿಯಾದರು.

ಕೇಂದ್ರ ಸಚಿವರು ಮತ್ತು ಸಿಎಂಗಳ ಸಮಾಗಮ: ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ಅಶ್ವಿನಿ ವೈಷ್ಣವ್, ಶಿವರಾಜ್ ಸಿಂಗ್ ಚೌಹಾಣ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ದೇವೇಂದ್ರ ಫಡ್ನವಿಸ್, ಹಿಮಂತ ಬಿಸ್ವಾ ಶರ್ಮಾ ಮತ್ತು ಸುವೇಂದು ಅಧಿಕಾರಿ ಭಾಗವಹಿಸಿದ್ದರು. ಇವರೆಲ್ಲರೂ ಸಂಸತ್ ಭವನದಿಂದ ಎರಡು ವಿಶೇಷ ಬಸ್‌ಗಳಲ್ಲಿ ಭಾರತ್ ಮಂಟಪಕ್ಕೆ ಆಗಮಿಸಿದರು.

ಮತ್ತಷ್ಟು ಓದಿ: ಬ್ರಿಕ್ಸ್ ಯಾರ ವಿರುದ್ಧವೂ ಇಲ್ಲ: ಪಾಶ್ಚಿಮಾತ್ಯರಿಗೆ ಪ್ರಧಾನಿ ಮೋದಿ ಖಡಕ್ ಸಂದೇಶ, ಜಾಗತಿಕ ಆಡಳಿತಕ್ಕೆ 10 ಅಂಶಗಳ ಸೂತ್ರ

ದ್ವಿಪಕ್ಷೀಯ ಮಾತುಕತೆ ಯಶಸ್ವಿ: ಭೋಜನಕೂಟಕ್ಕೆ ಗೈರಾಗುವ ಮುನ್ನವೇ ಪ್ರಧಾನಿ ಮೋದಿ ಮತ್ತು ಷಿ ಜಿನ್‌ಪಿಂಗ್ ದ್ವಿಪಕ್ಷೀಯ ಮಾತುಕತೆ ಪೂರ್ಣಗೊಳಿಸಿದ್ದರು. ಗಡಿ ಮತ್ತು ವ್ಯಾಪಾರ ಸಂಬಂಧಗಳಲ್ಲಿ “ಭಿನ್ನಾಭಿಪ್ರಾಯಗಳು ವಿವಾದಗಳಾಗಬಾರದು” ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು.

ಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಾರತ-ಚೀನಾ ಬಾಂಧವ್ಯ ಸುಧಾರಣೆಗೆ ಮೂರು ಪ್ರಮುಖ ತತ್ವಗಳನ್ನು ಪ್ರಸ್ತಾಪಿಸಿದರು, ಪರಸ್ಪರ ಗೌರವ , ಪರಸ್ಪರ ಸೂಕ್ಷ್ಮತೆ , ಮತ್ತು ಪರಸ್ಪರ ಹಿತಾಸಕ್ತಿ. ಈ ಸೂತ್ರಗಳ ಅಡಿಯಲ್ಲೇ ಎರಡೂ ದೇಶಗಳು ದೀರ್ಘಾವಧಿಯ ಕಾರ್ಯತಂತ್ರ ರೂಪಿಸಬೇಕೆಂದು ಕರೆ ನೀಡಿದರು.

ಟಿಯಾಂಜಿನ್ ಸಭೆಯ ಮುಂದುವರಿಕೆ: ಆಗಸ್ಟ್ 2025 ರಲ್ಲಿ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಭೇಟಿಯ ನಂತರ ಉಭಯ ದೇಶಗಳ ಸಂಬಂಧದಲ್ಲಿ ಕಂಡುಬಂದಿರುವ ಸಕಾರಾತ್ಮಕ ಬೆಳವಣಿಗೆಯನ್ನು ಇಬ್ಬರೂ ನಾಯಕರು ಶ್ಲಾಘಿಸಿದರು.

ಶೃಂಗಸಭೆಯ ಅಂತಿಮ ಹಂತ: 11 ಸದಸ್ಯ ರಾಷ್ಟ್ರಗಳು ಹಾಗೂ 10 ಪಾಲುದಾರ ರಾಷ್ಟ್ರಗಳ ಭಾಗವಹಿಸುವಿಕೆಯೊಂದಿಗೆ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯು ಇಂದು ಮುಕ್ತಾಯಗೊಳ್ಳಲಿದ್ದು, ಪ್ರಧಾನಿ ಮೋದಿ ಅವರು ಇಂದು ಇನ್ನೂ ಏಳು ಪ್ರಮುಖ ದೇಶಗಳ ನಾಯಕರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ರಾಷ್ಟ್ರೀಯ ಸುದ್ದುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us