AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಆಗಮನಕ್ಕೂ ಮುನ್ನವೇ ತ್ರಿವರ್ಣ ದೀಪಗಳಿಂದ ಕಂಗೊಳಿಸಿದ ಇಸ್ರೇಲ್ ಸಂಸತ್ತು, ನಾಳೆ ಮೋದಿ ಭಾಷಣ

Narendra Modi Israel Visit: ಪ್ರಧಾನಿ ಮೋದಿ ಇಸ್ರೇಲ್ ಭೇಟಿಗೆ ಮುನ್ನ ಅಲ್ಲಿನ ಸಂಸತ್ತು (ನೆಸ್ಸೆಟ್) ತ್ರಿವರ್ಣ ದೀಪಗಳಿಂದ ಕಂಗೊಳಿಸಿದೆ. ಫೆಬ್ರವರಿ 26ರಂದು ಪ್ರಧಾನಿ ಮೋದಿ ಇಸ್ರೇಲ್ ಸಂಸತ್ ಉದ್ದೇಶಿಸಿ ಮಾತನಾಡಲಿದ್ದಾರೆ. ಜೆರುಸಲೇಂ ಪೋಸ್ಟ್ ಮುಖಪುಟದಲ್ಲಿ ಮೋದಿಯವರ ಸುದ್ದಿ ಪ್ರಕಟವಾಗಿದೆ. ಈ ಭೇಟಿ ಭಾರತ-ಇಸ್ರೇಲ್ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲಿದ್ದು, ರಕ್ಷಣೆ, ಕೃಷಿ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಚರ್ಚೆಗಳು ನಡೆಯಲಿವೆ.

ಮೋದಿ ಆಗಮನಕ್ಕೂ ಮುನ್ನವೇ ತ್ರಿವರ್ಣ ದೀಪಗಳಿಂದ ಕಂಗೊಳಿಸಿದ ಇಸ್ರೇಲ್ ಸಂಸತ್ತು, ನಾಳೆ ಮೋದಿ ಭಾಷಣ
ಇಸ್ರೇಲ್ ಸಂಸತ್ತು
ನಯನಾ ರಾಜೀವ್
|

Updated on:Feb 25, 2026 | 10:13 AM

Share

ಜೆರುಸಲೇಂ, ಫೆಬ್ರವರಿ 25: ಪ್ರಧಾನಿ ನರೇಂದ್ರ  ಮೋದಿ(Narendra Modi) ಇಂದಿನಿಂದ ಎರಡು ದಿನಗಳ ಕಾಲ ಇಸ್ರೇಲ್ ಪ್ರವಾಸದಲ್ಲಿರಲಿದ್ದಾರೆ. ಮೋದಿ ಆಗಮನಕ್ಕೂ ಮುನ್ನ ಸಂಸತ್(Knesset)ನಲ್ಲಿ ತ್ರಿವರ್ಣ ದೀಪಗಳು ಕಂಗೊಳಿಸಿವೆ. ಪ್ರಧಾನಿ ಮೋದಿ ಫೆಬ್ರವರಿ 26ರಂದು ಇಸ್ರೇಲ್ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದು, ಜೆರುಸಲೇಂ ಪೋಸ್ಟ್​​ನ ಮುಖಪುಟದಲ್ಲಿ ಪ್ರಧಾನಿಯದ್ದೇ ಸುದ್ದಿ ಪ್ರಕಟವಾಗಿದೆ.

ಇದಕ್ಕೂ ಮೊದಲು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ 2015 ರಲ್ಲಿ ಸಂಸತ್ತನ್ನುದ್ದೇಶಿಸಿ ಮಾತನಾಡಿದ್ದರು. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿರುವ ಸಮಯದಲ್ಲಿ ಈ ಭೇಟಿ ತುಂಬಾ ಮಹತ್ವದ್ದಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ತೆರಳುತ್ತಿದ್ದಾರೆ. ಪ್ರಧಾನಿ ಮೋದಿ ಫೆಬ್ರವರಿ 26ರಂದು ಸಂಸತ್ತು ಉದ್ದೇಶಿಸಿ ಮಾತನಾಡಲಿದ್ದಾರೆ.

ಇಸ್ರೇಲ್ ಸಂಸತ್ತಿನ ಸ್ಪೀಕರ್ ಅಮೀರ್ ಒಹಾನಾ ನೆಸ್ಸೆಟ್‌ನ ಫೋಟೋವನ್ನು ಹಂಚಿಕೊಂಡು, ಇಂದು ರಾತ್ರಿ, ನೆಸ್ಸೆಟ್ ಅನ್ನು ಭಾರತೀಯ ಧ್ವಜದ ಬಣ್ಣಗಳಲ್ಲಿ ಬೆಳಗಿಸಲಾಗುತ್ತದೆ, ಇದು ಪ್ರಧಾನಿ ಮೋದಿಗೆ ನಾವು ಕೊಡುತ್ತಿರುವ ಗೌರವ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಯನ್ನು ಇಸ್ರೇಲ್ ಸಂಸತ್ತು, ನೆಸ್ಸೆಟ್‌ನಿಂದ ಹಿಡಿದು ಪ್ರಮುಖ ಪತ್ರಿಕೆಗಳವರೆಗೆ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ.

ದಿ ಜೆರುಸಲೇಂ ಪೋಸ್ಟ್​ನಲ್ಲಿ ಹಿಂದಿ ಹಾಗೂ ಹಿಬ್ರೂ ಭಾಷೆಯಲ್ಲಿ ನಮಸ್ತೆ ಎಂದು ತನ್ನ ಮುಖಪುಟದಲ್ಲಿ ನಮಸ್ತೆ ಎಂದು ಬರೆದಿದ್ದು ಎರಡು ಪ್ರಾಚೀನ ರಾಷ್ಟ್ರಗಳು ಹೊಸ ಅಧ್ಯಾಯವನ್ನು ಪ್ರಾರಂಭಿಸಲಿವೆ ಎಂದು ಬರೆಯಲಾಗಿದೆ.

ಮತ್ತಷ್ಟು ಓದಿ: ಎಐ ಇಂಪ್ಯಾಕ್ಟ್​ ಶೃಂಗಸಭೆ: ವಿಶ್ವನಾಯಕರೊಂದಿಗೆ ಪ್ರಧಾನಿ ಮೋದಿ ಮಾತುಕತೆ

ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಮತ್ತು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಸಹ ಭೇಟಿ ಮಾಡಲಿದ್ದಾರೆ.ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ರಕ್ಷಣೆ ಮತ್ತು ಭದ್ರತೆ, ಕೃಷಿ, ನೀರು ನಿರ್ವಹಣೆ, ವ್ಯಾಪಾರ ಮತ್ತು ಆರ್ಥಿಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಅವಕಾಶಗಳ ಕುರಿತು ಚರ್ಚಿಸಲಿದ್ದಾರೆ.

ಭಾರತ ಮತ್ತು ಇಸ್ರೇಲ್ ದೀರ್ಘಕಾಲದಿಂದ ವಿಶ್ವಾಸಾರ್ಹ ಪಾಲುದಾರರಾಗಿದ್ದು, ಹಲವಾರು ಬಿಕ್ಕಟ್ಟುಗಳ ಸಮಯದಲ್ಲಿ ಈ ವಿಶ್ವಾಸವನ್ನು ಸಾಬೀತುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಒಪ್ಪಂದವು ಭಾರತ-ಇಸ್ರೇಲ್ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಮಟ್ಟಕ್ಕೆ ಏರಿಸುವ, ಭದ್ರತೆ, ರಕ್ಷಣೆ ಮತ್ತು ಕಾರ್ಯತಂತ್ರದ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.

ನೆಸ್ಸೆಟ್ ಹೆಸರು ಎಲ್ಲಿಂದ ಬಂತು? ನೆಸ್ಸೆಟ್ ಎಂಬುದು ಇಸ್ರೇಲಿ ಸಂಸತ್ತಿನ ಹೆಸರು, ಇದರ ಅರ್ಥ ಸಭೆ, ನೆಸ್ಸೆಟ್ ಒಂದು ಏಕಸಭೆಯ ಶಾಸಕಾಂಗ. ನೆಸ್ಸೆಟ್ ಎಂಬ ಹೆಸರು ಪ್ರಾಚೀನ ಹೀಬ್ರೂ ಪದ ಹಾಗ್ಡೋಲಾದಿಂದ ಬಂದಿದೆ, ಇದರರ್ಥ ಯಹೂದಿ ಸಂಪ್ರದಾಯದಲ್ಲಿ ಮಹಾ ಸಭೆ. ಇದನ್ನು 120 ವಿದ್ವಾಂಸರು, ಚಿಂತಕರು ಮತ್ತು ಪ್ರವಾದಿಗಳ ಸಭೆ ಎಂದು ಪರಿಗಣಿಸಲಾಗಿದೆ.

ಇಸ್ರೇಲಿ ಸಂಸತ್ತು , ನೆಸ್ಸೆಟ್ , ಎಲ್ಲಾ ಕಾನೂನುಗಳನ್ನು ಅಂಗೀಕರಿಸುತ್ತದೆ. ಇದು ಅಧ್ಯಕ್ಷ ಮತ್ತು ಪ್ರಧಾನಿಯ ಆಯ್ಕೆ ಮಾಡುತ್ತದೆ. ಇದು ಸಚಿವ ಸಂಪುಟವನ್ನು ಆಯ್ಕೆ ಮಾಡುತ್ತದೆ ಮತ್ತು ಸರ್ಕಾರದ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಇದು ರಾಜ್ಯ ನಿಯಂತ್ರಕರನ್ನು ಸಹ ಆಯ್ಕೆ ಮಾಡುತ್ತದೆ.

ಭಾರತದಲ್ಲಿ, ಪ್ರಧಾನ ಮಂತ್ರಿಯನ್ನು ಜನರು ಆಯ್ಕೆ ಮಾಡುತ್ತಾರೆ, ಅವರು ಅತಿ ದೊಡ್ಡ ಬಹುಮತದ ಪಕ್ಷದ ನೇತೃತ್ವ ವಹಿಸುತ್ತಾರೆ. ರಾಷ್ಟ್ರಪತಿಯನ್ನು ಸಂಸತ್ತಿನ ಎರಡೂ ಸದನಗಳ ಚುನಾಯಿತ ಪ್ರತಿನಿಧಿಗಳು ಪರೋಕ್ಷ ಚುನಾವಣೆಯ ಮೂಲಕ ಆಯ್ಕೆ ಮಾಡುತ್ತಾರೆ.

ಮೆಡಿಟರೇನಿಯನ್ ಸಮುದ್ರ ಮತ್ತು ಡೆಡ್ ಸೀ ನಡುವಿನ ಜೂಡಿಯನ್ ಪರ್ವತಗಳಲ್ಲಿ ನೆಲೆಸಿರುವ ಜೆರುಸಲೆಮ್‌ನ ನೆರೆಹೊರೆಯ ಕಿರ್ಯತ್ ಹಮೆಮ್ಶಾಲಾ ಸ್ಥಳದಲ್ಲಿರುವ ಗಿವತ್ ರಾಮ್‌ನಲ್ಲಿರುವ ಕಟ್ಟಡದಲ್ಲಿ ನೆಸ್ಸೆಟ್ ಇದೆ. ಜನವರಿ 20 ರಂದು ನಡೆದ ಚುನಾವಣೆಗಳ ನಂತರ, ಮೊದಲ ನೆಸ್ಸೆಟ್ ಫೆಬ್ರವರಿ 14, 1948 ರಂದು ಸಭೆ ಸೇರಿತು. 2017 ರಲ್ಲಿ ಐತಿಹಾಸಿಕ ಪ್ರವಾಸದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್‌ಗೆ ನೀಡುತ್ತಿರುವ ಎರಡನೇ ಭೇಟಿ ಇದು. ಇದು ಅವರ ಮೂರನೇ ಅವಧಿಯಲ್ಲಿ ಅವರ ಮೊದಲ ಭೇಟಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:06 am, Wed, 25 February 26

Follow Us
ವ್ಯಕ್ತಿಯನ್ನು ಚೀಲಕ್ಕೆ ತುಂಬಿಕೊಂಡು ತಂದು ಕೊರಿಯರ್ ಮಾಡುವಂತೆ ಪಟ್ಟು
ವ್ಯಕ್ತಿಯನ್ನು ಚೀಲಕ್ಕೆ ತುಂಬಿಕೊಂಡು ತಂದು ಕೊರಿಯರ್ ಮಾಡುವಂತೆ ಪಟ್ಟು
ಅಪ್ಪು ಅಭಿಮಾನಿಗಳ ಪುಣ್ಯದ ಕೆಲಸ: ಮನಸಾರೆ ಹೊಗಳಿದ ನಟ ಪ್ರಥಮ್
ಅಪ್ಪು ಅಭಿಮಾನಿಗಳ ಪುಣ್ಯದ ಕೆಲಸ: ಮನಸಾರೆ ಹೊಗಳಿದ ನಟ ಪ್ರಥಮ್
ಧಾರವಾಡದಲ್ಲಿ ಭಾರೀ ಮಳೆ: ಕಲ್ಲಘಟಗಿ ರಸ್ತೆ ತುಂಬೆಲ್ಲಾ ಆಲಿಕಲ್ಲು
ಧಾರವಾಡದಲ್ಲಿ ಭಾರೀ ಮಳೆ: ಕಲ್ಲಘಟಗಿ ರಸ್ತೆ ತುಂಬೆಲ್ಲಾ ಆಲಿಕಲ್ಲು
ಮಂಗಳೂರಿನಲ್ಲಿ ಕಾರಿನಿಂದ ಗುದ್ದಿ ಕೊಲೆಗೆ ಯತ್ನ: ಭಯಾನಕ ವಿಡಿಯೋ
ಮಂಗಳೂರಿನಲ್ಲಿ ಕಾರಿನಿಂದ ಗುದ್ದಿ ಕೊಲೆಗೆ ಯತ್ನ: ಭಯಾನಕ ವಿಡಿಯೋ
ಐಪಿಎಲ್​ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ
ಐಪಿಎಲ್​ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ
ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನ, ಆಗಿದ್ದೇನು?
ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನ, ಆಗಿದ್ದೇನು?
‘ಕೆಡಿ’ ಚಿತ್ರತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಿಳಾ ಆಯೋಗ ಪತ್ರ
‘ಕೆಡಿ’ ಚಿತ್ರತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಿಳಾ ಆಯೋಗ ಪತ್ರ
ಇನ್ಸ್​​ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್​​
ಇನ್ಸ್​​ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್​​
ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ಅಪ್ಪು ಸಮಾಧಿಗೆ ಪೂಜೆ ಮಾಡಿದ ಶಿವರಾಜ್ ಕುಮಾರ್: ವಿಡಿಯೋ ನೋಡಿ
ಅಪ್ಪು ಸಮಾಧಿಗೆ ಪೂಜೆ ಮಾಡಿದ ಶಿವರಾಜ್ ಕುಮಾರ್: ವಿಡಿಯೋ ನೋಡಿ