AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿತ್ರೋಂ ಇಂದ ಫ್ರೆಂಡ್ಸ್‌ವರೆಗೆ: ಮೋದಿ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಶೈಲಿ ಬದಲು, ಇದರ ಹಿಂದಿದೆಯಾ ಜೆನ್​-ಝಿ ಲೆಕ್ಕಾಚಾರ

ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾ ಶೈಲಿ 'ಮಿತ್ರೋಂ'ನಿಂದ 'ಫ್ರೆಂಡ್ಸ್'ಗೆ ಬದಲಾಗಿದೆ. ರೀಲ್ಸ್‌, ಮೀಮ್ಸ್‌, ರ್ಯಾಪ್‌ ಮೂಲಕ ಜೆನ್-ಝಿ ಯುವಜನರನ್ನು ಸೆಳೆಯುವ ಪ್ರಯತ್ನವಿದು. 2029ರ ಚುನಾವಣೆ ಗುರಿಯಾಗಿಸಿ, ಬಿಜೆಪಿ ತನ್ನ ಡಿಜಿಟಲ್ ಪ್ರಚಾರ ತಂತ್ರ ಬದಲಿಸಿದೆ. ಐಟಿ ಸೆಲ್‌ನಲ್ಲಿನ ಮಾರ್ಪಾಡುಗಳು ಇದಕ್ಕೆ ಪೂರಕವಾಗಿವೆ. ಯುವಕರ ನೈಜ ಸಮಸ್ಯೆಗಳನ್ನು ಪರಿಹರಿಸಿದಾಗ ಮಾತ್ರ ಈ ತಂತ್ರ ಯಶಸ್ವಿಯಾಗಬಹುದು.

ಮಿತ್ರೋಂ ಇಂದ  ಫ್ರೆಂಡ್ಸ್‌ವರೆಗೆ: ಮೋದಿ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಶೈಲಿ ಬದಲು, ಇದರ ಹಿಂದಿದೆಯಾ ಜೆನ್​-ಝಿ ಲೆಕ್ಕಾಚಾರ
ನರೇಂದ್ರ ಮೋದಿ Image Credit source: PTI
ನಯನಾ ರಾಜೀವ್
|

Updated on:Nov 05, 2026 | 2:06 PM

Share

ನವದೆಹಲಿ, ನವೆಂಬರ್ 05: Let me ask you..  ಸಾಮಾನ್ಯವಾಗಿ ಸ್ನೇಹಿತರೋ, ಪರಿಚಯಸ್ಥರೋ ಮಾತು ಆರಂಭಿಸುವಾಗ ಈ ಸರಳ ಪದಗಳನ್ನು ಬಳಸುವುದು ಸಾಮಾನ್ಯ.  ಆದರೆ ಈಗ ದೇಶದ ಪ್ರಧಾನಿಯ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಈ ಪದಗಳು ಕಾಣಸಿಗುತ್ತಿವೆ. ದೇಶದ ಪ್ರಧಾನಿ ಜನರೊಂದಿಗೆ ಮಾತನಾಡುವ ಶೈಲಿಯಲ್ಲೇ ಬದಲಾವಣೆ ಕಾಣಿಸುತ್ತಿದೆ. ಗಂಭೀರ ರಾಜಕೀಯ ಸಂದೇಶಗಳ ಬದಲು ಆತ್ಮೀಯವಾಗಿ ಪ್ರಶ್ನೆ ಕೇಳುವ ಪ್ರಯತ್ನ. ಮೋದಿ ಅವರ ಎಕ್ಸ್‌ ಖಾತೆ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಹೊಸ ಶೈಲಿ ಕುತೂಹಲಕ್ಕೆ ಕಾರಣವಾಗಿದೆ. ಹಾಗಾದರೆ ಈ ಬದಲಾವಣೆಯ ಹಿಂದಿನ ಉದ್ದೇಶವೇನು? ಯುವಜನರನ್ನು ತಲುಪುವ ಹೊಸ ಡಿಜಿಟಲ್ ತಂತ್ರವೇ? ಅಥವಾ ಜನರೊಂದಿಗೆ ಸಂವಹನ ನಡೆಸುವ ವಿಭಿನ್ನ ಪ್ರಯೋಗವೇ? ಈ ಕುರಿತು ಒಂದಿಷ್ಟು ವಿಚಾರಗಳ ಕಡೆಗೆ  ಒಂದಿಷ್ಟು ದೃಷ್ಟಿ ಹರಿಸೋಣ.

ಪ್ರಧಾನಿ ನರೇಂದ್ರ ಮೋದಿ ಅವರ ಸಾಮಾಜಿಕ ಜಾಲತಾಣಗಳ ಪೋಸ್ಟ್​ಗಳನ್ನು ಗಮನಿಸಿದ್ದೀರಾ? ಹಿಂದೆ ಹೆಚ್ಚಾಗಿ ಭಾಷಣಗಳು, ಸರ್ಕಾರಿ ಕಾರ್ಯಕ್ರಮಗಳು, ಯೋಜನೆಗಳ ಮಾಹಿತಿ ಮತ್ತು ಅಧಿಕೃತ ಸಂದೇಶಗಳು ಕಾಣಿಸುತ್ತಿದ್ದವು. ಆದರೆ ಈಗ ಸೆಲ್ಫಿ ವಿಡಿಯೋ, ರೀಲ್ಸ್​, ಮೀಮ್ಸ್, ಸಂಗೀತ ಮತ್ತು ಯುವ ಜನತೆಯನ್ನು ಸಂಬೋಧಿಸುವ ಪೋಸ್ಟರ್​ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಮೋದಿ ಅವರ ಎಕ್ಸ್‌ , ಇನ್‌ಸ್ಟಾಗ್ರಾಂ ಸೇರಿದಂತೆ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲೂ ಈ ಬದಲಾವಣೆ ಕಂಡುಬರುತ್ತಿದೆ.

ಜೆನ್​-ಝಿ ಮೇಲೆ ಬಿಜೆಪಿ ಕಣ್ಣು

ಈ ಬದಲಾವಣೆಗೆ ಪ್ರಮುಖ ಕಾರಣಗಳಲ್ಲಿ ಒಂದು ಜೆನ್​ಝಿ ಯುವಜನರನ್ನು ತಲುಪುವ ಪ್ರಯತ್ನ. 1997ರಿಂದ 2012ರ ನಡುವೆ ಜನಿಸಿದವರನ್ನು ಸಾಮಾನ್ಯವಾಗಿ ಜೆನ್​-ಝಿ ಎಂದು ಕರೆಯಲಾಗುತ್ತದೆ. ಈ ಯುವಜನರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಇನ್‌ಸ್ಟಾಗ್ರಾಂ ರೀಲ್ಸ್‌, ಯೂಟ್ಯೂಬ್ ಶಾರ್ಟ್ಸ್‌ ಮತ್ತು ಚಿಕ್ಕ ವಿಡಿಯೋಗಳ ಮೂಲಕ ಮಾಹಿತಿ ಪಡೆಯುತ್ತಾರೆ.

2029ರ ಲೋಕಸಭೆ ಚುನಾವಣೆಯ ವೇಳೆಗೆ ಯುವ ಮತದಾರರು ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಯುವಜನರೊಂದಿಗೆ ಸಂಪರ್ಕ ಬೆಳೆಸಲು ರಾಜಕೀಯ ಪಕ್ಷಗಳು ತಮ್ಮ ಸಾಮಾಜಿಕ ಜಾಲತಾಣಗಳ ತಂತ್ರವನ್ನು ಬದಲಾಯಿಸುತ್ತಿವೆ ಎಂದು ವಿಶ್ಲೇಷಣೆಗಳು ಹೇಳುತ್ತವೆ.

ಪೋಸ್ಟ್​

ಯುವಕರ ಪ್ರತಿಭಟನೆಗಳೂ ಒಂದು ಕಾರಣವೇ?

2026ರಲ್ಲಿ ಪರೀಕ್ಷಾ ಅಕ್ರಮ, ಉದ್ಯೋಗಾವಕಾಶಗಳ ಕೊರತೆ ಮತ್ತು ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಯುವಜನರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗಳಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖ ವೇದಿಕೆಯಾಗಿದ್ದವು. ಯುವಜನರು ತಮ್ಮ ಅಸಮಾಧಾನವನ್ನು ರೀಲ್ಸ್‌ ಮತ್ತು ಕಿರು ವಿಡಿಯೋಗಳ ಮೂಲಕ ಹಂಚಿಕೊಂಡಿದ್ದರು.

ಇದನ್ನೂ ಓದಿ:

‘ಸುಳ್ಳು ಹೇಳಿ ನಂಬಿಸಬೇಡಿ, ವಿದೇಶಿ ನೆರವಿನಿಂದಲೇ ನೀವು ಪ್ರಧಾನಿಯಾಗಿದ್ದು’; ಮೋದಿ ಕುರಿತು ರಾಹುಲ್ ಗಾಂಧಿ ಆರೋಪ

‘ಮಿತ್ರೋಂ’ ಬದಲು ‘ಫ್ರೆಂಡ್ಸ್’

ಮೋದಿ ಅವರ ಹಿಂದಿನ ಭಾಷಣಗಳಲ್ಲಿ ‘ಮಿತ್ರೋಂ’ ಎಂಬ ಸಂಬೋಧನೆ ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ಕೆಲವು ಸೆಲ್ಫಿ ವಿಡಿಯೋಗಳಲ್ಲಿ ಹಾಯ್, ಫ್ರೆಂಡ್ಸ್​’ ಎಂದು ಹೇಳುವ ಮೂಲಕ ಹೆಚ್ಚು ಅನೌಪಚಾರಿಕ ಶೈಲಿಯಲ್ಲಿ ಯುವಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕೆಲವು ವಿಡಿಯೋಗಳಲ್ಲಿ ಬೈಕರ್ ಜಾಕೆಟ್‌, ಸನ್‌ಗ್ಲಾಸ್‌ ಮತ್ತು ರ್ಯಾಪ್ ಸಂಗೀತದ ಬಳಕೆಯೂ ಕಂಡುಬಂದಿದೆ. ಇವು ಸಾಂಪ್ರದಾಯಿಕ ರಾಜಕೀಯ ಪ್ರಚಾರದ ಶೈಲಿಗಿಂತ ಭಿನ್ನವಾಗಿವೆ.

ಬಿಜೆಪಿ ಐಟಿ ಸೆಲ್‌ನಲ್ಲೂ ಬದಲಾವಣೆ

ಬಿಜೆಪಿಯ ಸಾಮಾಜಿಕ ಜಾಲತಾಣ ನಿರ್ವಹಣೆಯಲ್ಲೂ ಬದಲಾವಣೆಗಳಾಗಿವೆ. 2026ರ ಆಗಸ್ಟ್‌ನಲ್ಲಿ ಅಮಿತ್ ಮಾಳವೀಯ ಅವರ ಬದಲಿಗೆ ದೀಪಕ್ ಮಾಸ್ಕೆ ಅವರನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು ಎಂದು ವರದಿಗಳು ತಿಳಿಸಿವೆ.

ಇದರ ಬೆನ್ನಲ್ಲೇ ಪಕ್ಷದ ಸಾಮಾಜಿಕ ಜಾಲತಾಣಗಳಲ್ಲಿ ರ್ಯಾಪ್ ವಿಡಿಯೋಗಳು, ಮೀಮ್‌ ಶೈಲಿಯ ಎಡಿಟಿಂಗ್‌, ಇಂಟರ್ನೆಟ್ ಸ್ಲ್ಯಾಂಗ್‌ ಮತ್ತು ಎಐ ಮೂಲಕ ಸಿದ್ಧಪಡಿಸಿದ ದೃಶ್ಯಗಳು ಹೆಚ್ಚಾಗಿವೆ. ಮೋದಿ ಅವರ ಭಾಷಣಗಳನ್ನೂ ಹಿನ್ನೆಲೆ ಸಂಗೀತ, ವೇಗದ ಎಡಿಟಿಂಗ್‌ ಮತ್ತು ಆಕರ್ಷಕ ಬರಹಗಳೊಂದಿಗೆ ರೀಲ್ಸ್‌ ರೂಪದಲ್ಲಿ ಪ್ರಕಟಿಸಲಾಗುತ್ತಿದೆ.

ಎಕ್ಸ್‌ನಿಂದ ಇನ್‌ಸ್ಟಾಗ್ರಾಂವರೆಗೆ: ಬದಲಾಗುತ್ತಿರುವ ಡಿಜಿಟಲ್ ಪ್ರಚಾರ

ಈ ಹಿಂದೆ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಎಕ್ಸ್‌ ಮತ್ತು ವಾಟ್ಸಾಪ್‌ ಮೂಲಕ ರಾಜಕೀಯ ಸಂದೇಶಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿತ್ತು. ಆದರೆ ಈಗ ಇನ್‌ಸ್ಟಾಗ್ರಾಂನಂತಹ ವೇದಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಅಧಿಕೃತವಾಗಿ ಸಿದ್ಧಪಡಿಸಿದ ಪೋಸ್ಟ್‌ಗಳಿಗಿಂತ ಸಹಜವಾಗಿ ಚಿತ್ರೀಕರಿಸಿದ, ಕಡಿಮೆ ಎಡಿಟಿಂಗ್‌ ಇರುವ ವಿಡಿಯೋಗಳು ಜನರ ಗಮನ ಸೆಳೆಯುತ್ತವೆ. ಹೀಗಾಗಿ ಪೋಸ್ಟ್‌ಗಳ ಪ್ರಸ್ತುತಿಯಲ್ಲೂ ಬದಲಾವಣೆ ತರಲಾಗುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ತಂತ್ರ ಯಶಸ್ವಿಯಾಗಬಹುದೇ?

ಸಾಮಾಜಿಕ ಜಾಲತಾಣಗಳಲ್ಲಿ ಯುವಜನರ ಗಮನ ಸೆಳೆಯುವುದು ಒಂದು ಸವಾಲಾದರೆ, ಅವರ ವಿಶ್ವಾಸ ಗಳಿಸುವುದು ಮತ್ತೊಂದು ಸವಾಲು. ಮೋದಿ ಅವರ ಕೆಲವು ಹೊಸ ವಿಡಿಯೋಗಳಿಗೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಇನ್ನು ಕೆಲವು ವಿಡಿಯೋಗಳು ಟ್ರೋಲ್‌ಗೂ ಒಳಗಾಗಿವೆ. ಯುವಜನರನ್ನು ತಲುಪಲು ಕೇವಲ ರೀಲ್ಸ್‌ ಅಥವಾ ಮೀಮ್ಸ್‌ ಸಾಕಾಗುವುದಿಲ್ಲ. ಉದ್ಯೋಗ, ಶಿಕ್ಷಣ, ಪರೀಕ್ಷಾ ಅಕ್ರಮ ಮತ್ತು ಭವಿಷ್ಯದ ಅವಕಾಶಗಳಂತಹ ಅವರ ನೈಜ ಸಮಸ್ಯೆಗಳಿಗೂ ಉತ್ತರ ನೀಡಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ, ಮೋದಿ ಅವರ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಶೈಲಿಯಲ್ಲಿನ ಬದಲಾವಣೆ ಯುವಜನರನ್ನು ತಲುಪುವ ಬಿಜೆಪಿ ಡಿಜಿಟಲ್ ಪ್ರಚಾರದ ಹೊಸ ಪ್ರಯತ್ನದ ಭಾಗವಾಗಿ ಕಾಣುತ್ತಿದೆ. ಗಂಭೀರ ರಾಜಕೀಯ ಸಂದೇಶಗಳ ಜೊತೆಗೆ ಯುವಜನರಿಗೆ ಇಷ್ಟವಾಗುವ ಕಂಟೆಂಟ್‌ಗೂ ಆದ್ಯತೆ ನೀಡಲಾಗುತ್ತಿದೆ. ಆದರೆ ಈ ಹೊಸ ಶೈಲಿ ಯುವಜನರ ವಿಶ್ವಾಸ ಗಳಿಸುತ್ತದೆಯೇ ಅಥವಾ ಕೇವಲ ಸಾಮಾಜಿಕ ಜಾಲತಾಣಗಳ ಗಮನ ಸೆಳೆಯುವುದಕ್ಕಷ್ಟೇ ಸೀಮಿತವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:05 pm, Thu, 5 November 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಏಳನೇ ದಿನವೂ ಸಾವಿರಾರು ಭಕ್ತರು
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಏಳನೇ ದಿನವೂ ಸಾವಿರಾರು ಭಕ್ತರು
‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ: ವಿಡಿಯೋ
‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ: ವಿಡಿಯೋ
ನಂಜನಗೂಡಿನ ಆಕಳ ಸುತ್ತಮುತ್ತ ನಾಲ್ಕು ಹುಲಿಗಳ ಓಡಾಟ
ನಂಜನಗೂಡಿನ ಆಕಳ ಸುತ್ತಮುತ್ತ ನಾಲ್ಕು ಹುಲಿಗಳ ಓಡಾಟ
ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು
ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು
‘ರಾಮಾಯಣ’ ಸಿನಿಮಾನ ಸಂಭ್ರಮಿಸಿದ ಫ್ಯಾನ್ಸ್; ಯಶ್ ನಟನೆಗೆ ಫುಲ್ ಮಾರ್ಕ್ಸ್
‘ರಾಮಾಯಣ’ ಸಿನಿಮಾನ ಸಂಭ್ರಮಿಸಿದ ಫ್ಯಾನ್ಸ್; ಯಶ್ ನಟನೆಗೆ ಫುಲ್ ಮಾರ್ಕ್ಸ್