Gen Z
Generation Z
ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮೌನ ವಹಿಸಿದ್ದೇಕೆ? ಕೊನೆಗೂ ಕಾರಣ ತಿಳಿಸಿದ ಸೋನು ನಿಗಮ್
ಖ್ಯಾತ ಗಾಯಕ ಸೋನು ನಿಗಮ್ ಅವರು ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದರು. ಹಾಗಾಗಿ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಅಷ್ಟಕ್ಕೂ ಸೋನು ನಿಗಮ್ ಅವರು ಮೌನ ವಹಿಸಿದ್ದಕ್ಕೆ ಕಾರಣ ಏನು ಎಂಬುದು ಈಗ ಗೊತ್ತಾಗಿದೆ. ಆ ಕುರಿತು ಮಾಹಿತಿ ಇಲ್ಲಿದೆ..
- Madan Kumar
- Updated on: Aug 13, 2026
- 7:04 pm
‘ಜಂತರ್ ಮಂತರ್ ಪ್ರತಿಭಟನೆಯಲ್ಲಿ ಇದ್ದ ಬಹುತೇಕರು ಜೆನ್ ಜಿ ಅಲ್ಲ’ ಎಂದ ಕಂಗನಾ ರಣಾವತ್
ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮುಗಿದು ಬಹಳ ದಿನಗಳೇ ಕಳೆದಿವೆ. ನಟಿ ಕಂಗನಾ ರಣಾವತ್ ಅವರು ಆ ಪ್ರತಿಭಟನೆಯ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರ ಪೈಕಿ ಹೆಚ್ಚಿನವರು ಜೆನ್ ಜಿ ಅಲ್ಲ ಎಂದು ಕಂಗನಾ ಹೇಳಿದ್ದಾರೆ.
- Madan Kumar
- Updated on: Aug 13, 2026
- 6:59 pm
‘ಜನರೇಷನ್ ಗಟಾರ್’ ಎಂದಿದ್ದ ಕಂಗನಾ ಈಗ ಯೂ ಟರ್ನ್; ‘ಜೆನ್ ಜಿ ಭಾರತದ ಶಕ್ತಿ’ ಎಂದ ನಟಿ
ನಟಿ ಕಂಗನಾ ರಣಾವತ್ ಅವರು ಈ ಮೊದಲು ಜೆನ್ ಜಿ ಯುವಜನತೆ ಬಗ್ಗೆ ನೀಡಿದ್ದ ಹೇಳಿಕೆಗಳು ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದವು. ಇದೀಗ ಕಂಗನಾ ರಣಾವತ್ ಅವರು ತಮ್ಮ ಹೇಳಿಕೆಯಿಂದ ಹಿಂದೆ ಸರಿದು, ಯುವ ಪೀಳಿಗೆಯನ್ನು ಕೊಂಡಾಡಿರುವುದು ಮತ್ತೆ ಸುದ್ದಿಯಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Aug 7, 2026
- 8:12 pm
ವಿದ್ಯಾರ್ಥಿಗಳ ವಿರುದ್ಧ ಧ್ವನಿ ಎತ್ತಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದ ನಟಿ ಭೂಮಿ ಪೆಡ್ನೇಕರ್
ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಬಗ್ಗೆ ಸೆಲೆಬ್ರಿಟಿಗಳಲ್ಲಿ ಪರ ಮತ್ತು ವಿರೋಧದ ಅಭಿಪ್ರಾಯಗಳಿವೆ. ನಟಿ ಭೂಮಿ ಪೆಡ್ನೇಕರ್ ಅವರು ವಿದ್ಯಾರ್ಥಿಗಳ ಭಾಷೆಯನ್ನು ಟೀಕಿಸಿದ್ದಾರೆ. ಆದರೆ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಅವರು ಖಂಡಿಸಿಲ್ಲ. ಹಾಗಾಗಿ ನಟಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
- Madan Kumar
- Updated on: Aug 3, 2026
- 6:04 pm
ಸೋನಾಕ್ಷಿ ಸಿನ್ಹಾ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್; ಖಾರದ ಮಾತುಗಳಲ್ಲಿ ಟೀಕೆ
ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ ನಟಿಯೊಬ್ಬರ ವಿರುದ್ಧ ಕಂಗನಾ ರಣಾವತ್ ಗರಂ ಆಗಿದ್ದಾರೆ. ಹೆಸರು ಹೇಳದೆಯೇ ಕಟುವಾಗಿ ಟೀಕೆ ಮಾಡಿದ್ದಾರೆ. ಆದರೆ ಅವರು ಟೀಕಿಸಿರುವುದು ಸೋನಾಕ್ಷಿ ಸಿನ್ಹಾ ಅವರನ್ನು ಎಂದು ನೆಟ್ಟಿಗರು ಊಹಿಸಿದ್ದಾರೆ. ಈ ಟೀಕೆಗೆ ಸೋನಾಕ್ಷಿ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ಕುತೂಹಲ ಸೃಷ್ಟಿ ಆಗಿದೆ.
- Madan Kumar
- Updated on: Aug 3, 2026
- 3:27 pm
ಬೆಂಕಿಗೆ ತುಪ್ಪ ಸುರಿಯಬೇಡಿ: ಹೃತಿಕ್ ರೋಷನ್ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್
ಕಂಗನಾ ರಣಾವತ್ ಮತ್ತು ಹೃತಿಕ್ ರೋಷನ್ ನಡುವಿನ ಕಿರಿಕ್ ಇಂದು ನಿನ್ನೆಯದಲ್ಲ. ಹತ್ತು ವರ್ಷಗಳ ಹಳೆಯ ಜಗಳ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕಂಗನಾ ವಿರುದ್ಧ ಜೆನ್ ಜಿ ಯುವಜನತೆ ತಿರುಗಿ ಬಿದ್ದಿದ್ದಾರೆ. ಅದಕ್ಕೆ ಪರೋಕ್ಷವಾಗಿ ಹೃತಿಕ್ ರೋಷನ್ ಪ್ರೋತ್ಸಾಹ ನೀಡಿದ್ದಾರೆ. ಅದು ಕಂಗನಾ ಕೋಪಕ್ಕೆ ಕಾರಣ ಆಗಿದೆ.
- Madan Kumar
- Updated on: Aug 2, 2026
- 12:38 pm
ಸೀತೆಯ ವೇಷದಲ್ಲಿ ಜೆನ್ ಜಿ ಮಂದಿಗೆ ಆಶೀರ್ವಾದ ಮಾಡಿದ ನಟಿ, ಸಂಸದೆ ಕಂಗನಾ ರಣಾವತ್
ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಸೀತೆ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಈ ನಡುವೆಯೇ ಕಂಗನಾ ರಣಾವತ್ ಅವರು ತಮ್ಮ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಮೂಲಕ ಅವರು ಜೆನ್ ಜಿ ಯುವ ಜನತೆಯ ಕಾಲೆಳೆದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Jul 31, 2026
- 6:18 pm
ಮೋದಿ ಕಾಲು ತೊಳೆದು ನೀರು ಕುಡಿಯುತ್ತೇನೆ: ಪ್ರಧಾನಿಯನ್ನು ವಿಷ್ಣು ಅವತಾರ ಎಂದ ನಟ ಸುದೇಶ್ ಬೇರಿ
ಪ್ರಧಾನಿ ಮೋದಿ ಅವರನ್ನು ಟೀಕಿಸಿದ ‘ಕಾಕ್ರೋಜ್ ಜನತಾ ಪಕ್ಷ’ದ ವಿರುದ್ಧ ನಟ ಸುದೇಶ್ ಬೇರಿ ಕಿಡಿಕಾರಿದ್ದಾರೆ. ಪಕ್ಷದ ಹೆಸರನ್ನು ಲೇವಡಿ ಮಾಡುತ್ತಾ, ‘ವಿಚಿತ್ರ ಜೀವಿಗಳ ಹೆಸರಿನಲ್ಲಿ ಪಕ್ಷ ಕಟ್ಟುವ ಬದಲು ಕತ್ತೆಕಿರುಬ ಪಕ್ಷ ಎಂದು ಹೆಸರು ಇಟ್ಟುಕೊಳ್ಳಬಾರದಿತ್ತೇ?’ ಎಂದು ವ್ಯಂಗ್ಯವಾಡಿದ್ದಾರೆ. ಮೋದಿಯವರನ್ನು ಬೇರಿ ಅವರು ದೇವರಿಗೆ ಹೋಲಿಸಿದ್ದಾರೆ.
- Madan Kumar
- Updated on: Jul 30, 2026
- 8:12 pm
ಜೆನ್ ಜಿ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತ ವಿಶಾಲ್ ದದ್ಲಾನಿ: ಕಂಗನಾ ಮಾತಿಗೆ ತಿರುಗೇಟು
ನಟಿ ಕಂಗನಾ ರಣಾವತ್ ಅವರು ಜೆನ್ ಜಿ ಯುವಕ-ಯುವತಿಯರ ಪ್ರತಿಭಟನೆಯನ್ನು ಖಂಡಿಸಿದ್ದರು. ಆದರೆ ಗಾಯಕ ವಿಶಾಲ್ ದದ್ಲಾನಿ ಅವರು ಜೆನ್ ಜಿಗಳ ಪರ ನಿಂತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಆದ ಹಲ್ಲೆಯನ್ನು ವಿಶಾಲ್ ದದ್ಲಾನಿ ಟೀಕಿಸಿದ್ದಾರೆ.
- Madan Kumar
- Updated on: Jul 29, 2026
- 5:31 pm
‘ಜೆನ್ ಜಿ’ಗಳನ್ನು ‘ಜನರೇಷನ್ ಗಟಾರ್’ ಎಂದಿದ್ದಕ್ಕೆ ಸ್ಪಷ್ಟನೆ ನೀಡಿದ ಕಂಗನಾ ರಣಾವತ್
‘ಮಾನವ ಜೀವನವು ವಿಕಸನದ ಮೇಲೆ ಆಧಾರಿತವಾಗಿದೆ ಎಂದು ವಿಜ್ಞಾನ ಹೇಳುತ್ತದೆ. ಆದರೆ ಫೆಮಿನಾಜಿಗಳು ಪ್ರಾಣಿ ಪ್ರವೃತ್ತಿಯನ್ನು ಉತ್ತೇಜಿಸುತ್ತಿದ್ದಾರೆ’ ಎಂದು ಕಂಗನಾ ರಣಾವತ್ ಅವರು ಹೇಳಿದ್ದಾರೆ. ಗುರುಪೂರ್ಣಿಮೆ ಪ್ರಯುಕ್ತ ವಿಡಿಯೋ ಹಂಚಿಕೊಂಡಿರುವ ಅವರು ಜಿನ್ ಜಿಗಳ ಬಗ್ಗೆ ತಾವು ಮಾತನಾಡಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ.
- Madan Kumar
- Updated on: Jul 29, 2026
- 4:17 pm
ಎಲ್ಲೆಲ್ಲೂ ಜೆನ್ ಝೀಗಳದ್ದೇ ಹವಾ; Gen-Z ಅಂದ್ರೆ ಯಾರು? ಈ ಪೀಳಿಗೆ ಏಕೆ ಇಷ್ಟೊಂದು ಪವರ್‌ಫುಲ್?
ನೇಪಾಳದಲ್ಲಿ ಜೆನ್ ಝೀಗಳು ದಂಗೆ ಎದ್ದು ಸರ್ಕಾರವನ್ನು ಬುಡಮೇಲು ಮಾಡಿದಂತೆ, ಇತ್ತೀಚಿಗಷ್ಟೆ ಭಾರತದಲ್ಲೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ವಿರುದ್ಧ ಇಲ್ಲಿನ ಜೆನ್ ಝೀಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನು ನಡೆಸಿ ಕೇಂದ್ರ ಶಿಕ್ಷಣ ಸಚಿವರನ್ನು ರಾಜೀನಾಮೆ ಕೊಡಿಸುವಂತೆ ಮಾಡಿದ್ದಾರೆ. ಸರ್ಕಾರವನ್ನೇ ಅಲ್ಲಾಡಿಸುವ ಶಕ್ತಿ ಇರುವ ಈ ಜನರೇಷನ್ ಝಡ್ ಯಾರು? ಈ ಪೀಳಿಗೆ ಇಷ್ಟೊಂದು ಪವರ್‌ಫುಲ್ ಏಕೆ? ಈ ಎಲ್ಲದರ ಕುತೂಹಲಕಾರಿ ಮಾಹಿತಿ ಇಲ್ಲಿದೆ.
- Malashree anchan
- Updated on: Jul 29, 2026
- 10:25 am