ಪ್ರಧಾನಿ ಮೋದಿಗೆ ಭೂತಾನ್ ರಾಜನಿಂದ ಬೌದ್ಧ ಸ್ತೂಪ ಸಮರ್ಪಣೆ; ‘ಭಾರತಕ್ಕೆ ಸಿಕ್ಕ ದೊಡ್ಡ ಗೌರವ’ ಎಂದ ಸಚಿವ ಕಿರಣ್ ರಿಜಿಜು
ಭಾರತ ಮತ್ತು ಭೂತಾನ್ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ನಿಕಟ ಸ್ನೇಹವನ್ನು ಗೌರವಿಸುವ ಸಂಕೇತವಾಗಿ ಭೂತಾನ್ ಮಹಾರಾಜ ಜಿಗ್ಮೆ ಖೇಸರ್ ನಾಮ್ಗೇಲ್ ವಾಂಗ್ಚುಕ್ ಪವಿತ್ರ ಬೌದ್ಧ ಸ್ತೂಪವನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಮರ್ಪಿಸಿದ್ದಾರೆ. ಭೂತಾನ್ ಸರ್ಕಾರದ ಈ ವಿಶೇಷ ಹಾಗೂ ಪವಿತ್ರ ಗೌರವವನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು "ಭಾರತಕ್ಕೆ ಸಿಕ್ಕ ಅತ್ಯಂತ ದೊಡ್ಡ ಗೌರವ" ಎಂದು ಬಣ್ಣಿಸಿದ್ದಾರೆ. ಭೂತಾನ್ ಪ್ರವಾಸದಲ್ಲಿರುವ ಕಿರಣ್ ರಿಜಿಜು ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೇ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ.

ನವದೆಹಲಿ, ನವೆಂಬರ್ 2: ಭೂತಾನ್‌ನ ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿಯಲ್ಲಿ 108 ಪವಿತ್ರ ಬೌದ್ಧ ಸ್ತೂಪಗಳ ಪ್ರತಿಷ್ಠಾಪನಾ ಸಮಾರಂಭದಲ್ಲಿ 76ನೇ ಕ್ರಮಾಂಕದ ಸ್ತೂಪವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಮರ್ಪಿಸಲಾಗಿದೆ. ಇದನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು “ಭಾರತಕ್ಕೆ ಸಿಕ್ಕ ಅತ್ಯಂತ ದೊಡ್ಡ ಗೌರವ” ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 31ರಿಂದ ನವೆಂಬರ್ 2ರವರೆಗೆ ಭೂತಾನ್ ಪ್ರವಾಸದಲ್ಲಿರುವ ಸಚಿವ ಕಿರಣ್ ರಿಜಿಜು ಭಾರತ ಸರ್ಕಾರದ ಪರವಾಗಿ ಈ ಐತಿಹಾಸಿಕ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿದ್ದರು.
“ಭಾರತ ಮತ್ತು ಭೂತಾನ್ ನಡುವಿನ ಸ್ನೇಹ ಬಾಂಧವ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯುತ್ತಮ ದೂರದರ್ಶಿತ್ವಕ್ಕೆ ಗೌರವಾರ್ಥವಾಗಿ ಅತ್ಯಂತ ಪವಿತ್ರವಾದ 76ನೇ ಬೌದ್ಧ ಸ್ತೂಪವನ್ನು ಮೋದಿ ಅವರಿಗೆ ಸಮರ್ಪಿಸಿರುವುದು ಭಾರತಕ್ಕೆ ಸಿಕ್ಕ ಭಾರಿ ದೊಡ್ಡ ಗೌರವವಾಗಿದೆ. ‘ಲಹಾಬಾಬ್ ದುಚೆನ್’ ಎಂಬ ಶುಭ ಸಂದರ್ಭದಲ್ಲಿ ಭೂತಾನ್‌ನ ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿಯಲ್ಲಿ 108 ಸ್ತೂಪಗಳನ್ನು ಎತ್ತಿ ಪ್ರತಿಷ್ಠಾಪಿಸುವ ಪವಿತ್ರ ಸಮಾರಂಭದಲ್ಲಿ ನಾನು ಭಾಗವಹಿಸಿದೆ” ಎಂದು ಹೇಳಿದ್ದಾರೆ.
Union Minister Kiren Rijiju tweeted, “It’s a huge honour for India that very sacred stupa 76 is dedicated to PM Narendra Modi for his outstanding vision and commitment to friendship between India and Bhutan.
On the auspicious occasion of Lhabab Duchen, joined the sacred ceremony in Gelephu Mindfulness City, Bhutan marking the raising and consecration of 108 stupas, accompanied by the blowing of Dungchens.
Paid my respects and offered prayers in the presence of His Majesty the King of Bhutan, Her Majesty The Gyaltsuen, H.E. Dasho Tshering Tobgay, Prime Minister of Bhutan & the people of Bhutan.
A deeply meaningful spiritual occasion, reflecting Bhutan’s rich Buddhist heritage and the enduring bonds of friendship between our two nations.”
— ANI (@ANI) November 2, 2026
ಇದನ್ನೂ ಓದಿ: ‘ಸುಳ್ಳು ಹೇಳಿ ನಂಬಿಸಬೇಡಿ, ವಿದೇಶಿ ನೆರವಿನಿಂದಲೇ ನೀವು ಪ್ರಧಾನಿಯಾಗಿದ್ದು’; ಮೋದಿ ಕುರಿತು ರಾಹುಲ್ ಗಾಂಧಿ ಆರೋಪ
“ಭೂತಾನ್ ಮಹಾರಾಜ, ರಾಣಿ ಗ್ಯಾಲ್ಚುಯೆನ್, ಭೂತಾನ್ ಪ್ರಧಾನಿ ದಾಶೋ ತ್ಶೆರಿಂಗ್ ಟೋಬ್ಗೇ ಹಾಗೂ ಭೂತಾನ್ ಜನರ ಸಮ್ಮುಖದಲ್ಲಿ ನಾನು ಗೌರವ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದೆ. ಇದು ಭೂತಾನ್‌ನ ಶ್ರೀಮಂತ ಬೌದ್ಧ ಪರಂಪರೆ ಮತ್ತು ನಮ್ಮೆರಡು ದೇಶಗಳ ನಡುವಿನ ಸುದೀರ್ಘ ಸ್ನೇಹ ಬಾಂಧವ್ಯವನ್ನು ಪ್ರತಿಬಿಂಬಿಸುವ ಅತ್ಯಂತ ಆಳವಾದ ಆಧ್ಯಾತ್ಮಿಕ ಕ್ಷಣವಾಗಿದೆ” ಎಂದು ಕಿರಣ್ ರಿಜಿಜು ತಿಳಿಸಿದ್ದಾರೆ.
Honoured to have a royal audience with His Majesty the King of Bhutan in Gelephu today. Conveyed the warm greetings of Hon’ble Prime Minister Shri @narendramodi ji and reaffirmed India’s steadfast commitment to our unique and enduring bilateral partnership.
Congratulated Bhutan on the historic achievement of constructing 108 Buddhist Stupas (Jangchub Chortens) in just six hours on 1st November 2026, with the extraordinary participation of over 40,000 volunteers, monks and artisans who started the work after midnight. Expressed my heartfelt gratitude to His Majesty for graciously dedicating Stupa 76 to the Prime Minister of India, making this remarkable milestone an enduring symbol of the deep spiritual and civilisational bonds between our two nations. 🇮🇳🇧🇹
#IndiaBhutan #Project108 @MEAIndia @Indiainbhutan
— Kiren Rijiju (@KirenRijiju) November 1, 2026
ಅಸ್ಸಾಂ ಗಡಿಗೆ ಸಮೀಪವಿರುವ ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿಯಲ್ಲಿನ ‘ಐ’ (ಮೌ) ನದಿ ದಂಡೆಯ 11.7 ಕಿ.ಮೀ ವ್ಯಾಪ್ತಿಯಲ್ಲಿ ಸಾವಿರಾರು ಸ್ವಯಂಸೇವಕರು ಒಂದೇ ದಿನದಲ್ಲಿ ಈ 108 ಬೌದ್ಧ ಸ್ತೂಪಗಳನ್ನು ನಿರ್ಮಿಸಿದ್ದಾರೆ. ಪ್ರತಿಯೊಂದು ಸ್ತೂಪವು 15 ಮೀಟರ್ ಎತ್ತರವಿದ್ದು, ಒಂದರಿಂದ ಮತ್ತೊಂದಕ್ಕೆ 108 ಮೀಟರ್ ಅಂತರವಿದೆ.
ಇದನ್ನೂ ಓದಿ: ಭಾರತದಲ್ಲಿ ಬಡತನಕ್ಕೆ ಬಿತ್ತು ಬ್ರೇಕ್, 49.6 ಕೋಟಿ ಜನರು ಬಡತನದಿಂದ ಹೊರಗೆ: ವಿಶ್ವಬ್ಯಾಂಕ್ ವರದಿ ಉಲ್ಲೇಖಿಸಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಪರ ಧನ್ಯವಾದ:
ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಸಚಿವ ಕಿರಣ್ ರಿಜಿಜು ಅವರು ಭೂತಾನ್ ರಾಜರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿಯನ್ನು ವಜ್ರಯಾನ ಬೌದ್ಧಧರ್ಮದ ಪ್ರಮುಖ ಜಾಗತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು ಮತ್ತು ಭೂತಾನ್ ಸಂಸ್ಕೃತಿಯನ್ನು ಜಗತ್ತಿಗೆ ಸಾರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ತಮ್ಮ ಪ್ರವಾಸದ ವೇಳೆ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಭೂತಾನ್ ಪ್ರಧಾನಿ ಜೊತೆ ದ್ವಿಪಕ್ಷೀಯ ಸಭೆ ನಡೆಸಿದ್ದು, ವ್ಯಾಪಾರ, ಅಭಿವೃದ್ಧಿ ಸಹಕಾರ, ಇಂಧನ, ಹೂಡಿಕೆ, ಸಂಪರ್ಕ ಹಾಗೂ ಸಾಂಸ್ಕೃತಿಕ ವಿನಿಮಯ ಕ್ಷೇತ್ರಗಳಲ್ಲಿ ಭಾರತ-ಭೂತಾನ್ ಬಾಂಧವ್ಯವನ್ನು ಮತ್ತಷ್ಟು ದೃಢಗೊಳಿಸುವ ಕುರಿತು ಚರ್ಚಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




