ರಾಜ್ಯಸಭೆಯಲ್ಲಿ ಸಿದ್ದರಾಮಯ್ಯರನ್ನು ಟ್ರೋಲ್ ಮಾಡಿದ ನಿರ್ಮಲಾ ಸೀತಾರಾಮನ್

Nirmala Sitharaman mentions Karnataka govt scams in Rajya Sabha: ರಾಜ್ಯಸಭೆಯಲ್ಲಿ ಇಂದು ಬಜೆಟ್ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡುತ್ತಾ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ಸರ್ಕಾರದ ಹಗರಣಗಳನ್ನು ಪ್ರಸ್ತಾಪಿಸಿದರು. ವಾಲ್ಮೀಕಿ ಹಗರಣ 189 ಕೋಟಿ ರೂ ಅಲ್ಲ 89 ಕೋಟಿ ರೂ ಎಂದು ಹೇಳಿದ್ದ ಸಿದ್ದರಾಮಯ್ಯರನ್ನು ಅವರು ಟ್ರೋಲ್ ಮಾಡಿದರು. ಎಸ್​ಸಿ ಎಸ್​ಟಿ ಬಗ್ಗೆ ಮಾತನಾಡುವವರು ಕರ್ನಾಟಕಕ್ಕೆ ಹೋಗಿ ಅಲ್ಲಿ ಆ ಸಮುದಾಯಗಳಿಗೆ ಹೋಗಬೇಕಾದ ಸಾವಿರಾರು ಕೋಟಿ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಲಿ ಎಂದರು.

ರಾಜ್ಯಸಭೆಯಲ್ಲಿ ಸಿದ್ದರಾಮಯ್ಯರನ್ನು ಟ್ರೋಲ್ ಮಾಡಿದ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 30, 2024 | 6:53 PM

ನವದೆಹಲಿ, ಜುಲೈ 30: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಗಳವಾರ ರಾಜ್ಯಸಭೆಯಲ್ಲಿ ಕರ್ನಾಟಕದ ವಾಲ್ಮೀಕಿ ಹಗರಣ ಪ್ರಸ್ತಾಪಿಸಿ, ಕಾಂಗ್ರೆಸ್ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಟ್ರೋಲ್ ಮಾಡಿದರು. ಬಜೆಟ್ ಬಗ್ಗೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ಎಸ್​ಸಿ ಎಸ್​ಟಿ ಮತ್ತು ಮಹಿಳೆಯರಿಗೆ ಬಜೆಟ್​ನಲ್ಲಿ ಹೆಚ್ಚು ಹಣ ನೀಡಲಾಗಿಲ್ಲ ಎನ್ನುವ ಆರೋಪದ ಬಗ್ಗೆ ಉತ್ತರಿಸುತ್ತಿದ್ದರು. ಕರ್ನಾಟಕ ಸರ್ಕಾರ ಎಸ್​ಸಿ ಎಸ್​ಟಿ ಫಂಡ್​ಗೆ ನೀಡಿದ ಬಜೆಟ್​ನಲ್ಲಿ ಸಾವಿರಾರು ಕೋಟಿ ರೂ ಲೂಟಿ ಮಾಡಲಾಗಿರುವ ವಿಚಾರವನ್ನು ಪ್ರಸ್ತಾಪಿಸಿದರು.

ಕರ್ನಾಟಕಕ್ಕೆ ಎಸ್​ಸಿ ಎಸ್​ಟಿ ಫಂಡ್​ಗೆ ನೀಡಲಾದ 9,980 ರೂ ಬಜೆಟ್​ನಲ್ಲಿ 4,301 ಕೋಟಿ ರೂ ಹಣವನ್ನು ಟ್ರೈಬಲ್ ಸಬ್​ಪ್ಲಾನ್​ನಿಂದಲೇ ತೆಗೆಯಲಾಗಿದೆ. ಆ ಹಣ ಎಲ್ಲೋ ಹೋಗಿದೆ ಎಂದೇ ಗೊತ್ತಿಲ್ಲ. ಇಲ್ಲಿಯವರೆಗೆ ಕರ್ನಾಟಕ ಸರ್ಕಾರ 2,220 ಕೋಟಿ ರೂ ವೆಚ್ಚ ಮಾಡಿದೆ. ಇದರಲ್ಲಿ ಎಸ್​ಸಿ ಎಸ್​ಟಿ ಸಬ್​ಪ್ಲಾನ್​ನಿಂದ 1,587 ಕೋಟಿ ರೂ, ಟ್ರೈಬಲ್ ಸಬ್​ಪ್ಲಾನ್​ನಿಂದ 641 ಕೋಟಿ ರೂ ಒಳಗೊಂಡಿದೆ. ಅದು ಎಲ್ಲಿಗೆ ಹೋಯಿತು ಅಂತ ಆ ದೇವರಿಗೇ ಗೊತ್ತಿರಬೇಕು. ಈ ವಿಚಾರವನ್ನು ಕರ್ನಾಟಕ ವಿಧಾನಸಭೆಯಲ್ಲಿ ವಿಪಕ್ಷದವರು ಪ್ರಶ್ನಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.

ಇದನ್ನೂ ಓದಿ: ನೀವ್ಯಾವ ಬಜೆಟ್​ನಲ್ಲಿ ಎಲ್ಲಾ ರಾಜ್ಯಗಳ ಹೆಸರು ಎತ್ತಿದ್ದೀರಿ? ಕಾಂಗ್ರೆಸ್​ಗೆ ನಿರ್ಮಲಾ ಸೀತಾರಾಮನ್ ಸವಾಲು

ಎಸ್​ಸಿ ಎಸ್​ಟಿ ಬಗ್ಗೆ ಮಾತನಾಡುವ ಮಾಜಿ ಪಂಜಾಬ್ ಮುಖ್ಯಮಂತ್ರಿ ಚರಣ್​ಜೀತ್ ಸಿಂಗ್ ಚನ್ನಿ ಅವರೇ, ಕರ್ನಾಟಕಕ್ಕೆ ಹೋಗಿ ಎಸ್​ಸಿ ಎಸ್​ಟಿ ಫಂಡ್ ಏನಾಯಿತು ಎಂದು ಅಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿ… ಇಲ್ಲಿ ಕೇಳುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವೆ ಕುಟುಕಿದರು.

ಎಸ್​ಸಿ ಎಸ್​ಟಿ ಬಗ್ಗೆ ಮಾತನಾಡುವವರು ಕರ್ನಾಟಕಕ್ಕೆ ಹೋಗಿ ಅಲ್ಲಿ ಹಣ ಎನಾಗುತ್ತಿದೆ ಎಂದು ನೋಡಲಿ. ಅಲ್ಲಿ ಪ್ರೈವೇಟ್ ಅಕೌಂಟ್​ಗಳಿಗೆ ಹಾಕಲಾಗುತ್ತಿದೆ. ಇಲ್ಲಿ ಬಂದು ಪ್ರಶ್ನೆ ಮಾಡುತ್ತೀರಿ ಎಂದು ವಿಪಕ್ಷಗಳನ್ನು ಅವರು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ನನ್ನ ಅವಧಿಯಲ್ಲೇ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ: ನರೇಂದ್ರ ಮೋದಿ

ವಾಲ್ಮೀಕಿ ಹಗರಣ; ಸಿದ್ದರಾಮಯ್ಯರನ್ನು ಟ್ರೋಲ್ ಮಾಡಿದ ನಿರ್ಮಲಾ

ರಾಜ್ಯಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ವಾಲ್ಮೀಕಿ ಹಗರಣ ಪ್ರಸ್ತಾಪಿಸಿ ಸಿದ್ದರಾಮಯ್ಯರನ್ನು ಟ್ರೋಲ್ ಮಾಡಿದರು. ವಾಲ್ಮೀಕಿ ನಿಗಮದಲ್ಲಿ 189 ಕೋಟಿ ರೂ ಎಸ್​ಸಿ ಎಸ್​ಟಿ ಹಣ ಲಪಟಾಯಿಸಲಾಗಿದೆ ಎನ್ನುವ ಆರೋಪಕ್ಕೆ ಅಲ್ಲಿನ ಮುಖ್ಯಮಂತ್ರಿಗಳು, ಲೂಟಿ ಆಗಿರುವುದು 189 ಕೋಟಿ ರೂ ಅಲ್ಲ, 89 ಕೋಟಿ ರೂ ಎನ್ನುತ್ತಾರೆ ಎಂದು ಹಣಕಾಸು ಸಚಿವೆ ವ್ಯಂಗ್ಯ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ