ಹಳೇ ರಾಜೀಂದರ್ ನಗರದಲ್ಲಿ 3 ಐಎಎಸ್ ಆಕಾಂಕ್ಷಿಗಳ ಸಾವು ಪ್ರಕರಣ; ಸಿಬಿಐ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ
ಜುಲೈ 27 ರಂದು ಓಲ್ಡ್ ರಾಜಿಂದರ್ ನಗರದಲ್ಲಿರುವ ರಾವೂಸ್ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಯೊಳಗೆ ಮಳೆ ನೀರು ನುಗ್ಗಿದ್ದರಿಂದ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳಾದ ಶ್ರೇಯಾ ಯಾದವ್, ತಾನ್ಯಾ ಸೋನಿ ಮತ್ತು ನೆವಿನ್ ಡಾಲ್ವಿನ್ ಸಾವಿಗೀಡಾಗಿದ್ದರು. ಈ ಘಟನೆಯ ನಂತರ ವಿವಿಧ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳು ತಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಕೋಚಿಂಗ್ ಸೆಂಟರ್‌ಗಳಲ್ಲಿ ಸುಧಾರಿತ ಸುರಕ್ಷತಾ ಕ್ರಮಗಳನ್ನು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ದೆಹಲಿ ಆಗಸ್ಟ್ 02: ದೆಹಲಿಯ (Delhi) ಹಳೇ ರಾಜೀಂದರ್ ನಗರದಲ್ಲಿರುವ ಕೋಚಿಂಗ್ ಸೆಂಟರ್ನಲ್ಲಿ ನೀರು ನುಗ್ಗಿ ಮೂವರು ಐಎಎಸ್ (IAS) ಆಕಾಂಕ್ಷಿಗಳು ಸಾವಿಗೀಡಾದ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುವಂತೆ ದೆಹಲಿ ಹೈಕೋರ್ಟ್ (Delhi High Court) ಶುಕ್ರವಾರ ಆದೇಶಿಸಿದೆ. ಸಿಬಿಐ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಮಯಕ್ಕೆ ಸರಿಯಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಯನ್ನು ನೇಮಿಸುವಂತೆ ನ್ಯಾಯಾಲಯವು ಕೇಂದ್ರ ಜಾಗೃತ ಆಯುಕ್ತರಿಗೆ ನಿರ್ದೇಶಿಸಿದೆ.
“ಘಟನೆಯ ಸ್ವರೂಪಕ್ಕೆ ಸಂಬಂಧಿಸಿದಂತೆ ಮತ್ತು ತನಿಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವುದೇ ಸಂದೇಹವಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಈ ನ್ಯಾಯಾಲಯವು ತನಿಖೆಯನ್ನು ಸಿಬಿಐಗೆ ವರ್ಗಾಯಿಸುತ್ತದೆ” ಎಂದು ಹೈಕೋರ್ಟ್ ಹೇಳಿದೆ.
“ಕೇಂದ್ರ ಜಾಗೃತ ಆಯುಕ್ತರು ಮೇಲ್ವಿಚಾರಣೆ ನಡೆಸುವುದರಿಂದ ತನಿಖೆಯ ಮೇಲ್ವಿಚಾರಣೆಗೆ ಸದಸ್ಯರನ್ನು ನೇಮಿಸುವಂತೆ ಈ ನ್ಯಾಯಾಲಯವು ಆಯುಕ್ತರಿಗೆ ನಿರ್ದೇಶಿಸುತ್ತದೆ” ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಿದೆ
ದೆಹಲಿಯಲ್ಲಿನ ಚರಂಡಿಯಂತಹ ಭೌತಿಕ ಮೂಲಸೌಕರ್ಯಗಳು ಸಮರ್ಪಕವಾಗಿಲ್ಲ. ಆದರೆ ಕಳಪೆಯಾಗಿ ನಿರ್ವಹಣೆ ಮಾಡುತ್ತಿವೆ. ಇತ್ತೀಚಿನ ದುರಂತಗಳು ನಾಗರಿಕ ಸಂಸ್ಥೆಗಳಿಗೆ ನೀಡಿದ ಆದೇಶಗಳನ್ನು ಪಾಲಿಸುತ್ತಿಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ
ವಿಚಾರಣೆಯ ಸಂದರ್ಭದಲ್ಲಿ, ನಾಗರಿಕ ಸೇವಾ ಆಕಾಂಕ್ಷಿಗಳ ಸಾವಿನ ಬಗ್ಗೆ ಹೈಕೋರ್ಟ್ ದೆಹಲಿ ಪೊಲೀಸರು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಅನ್ನು ತರಾಟೆಗೆ ತೆಗೆದುಕೊಂಡಿತು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ಪೀಠವು ಎಂಸಿಡಿ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ, ಇದು ರೂಢಿಯಾಗಿದೆ ಎಂದು ಹೇಳಿದರು.
ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ನುಗ್ಗಿದ ಎಸ್‌ಯುವಿ ಚಾಲಕನನ್ನು ದೆಹಲಿ ಪೊಲೀಸರು ಬಂಧಿಸಿರುವುದನ್ನು ಉಲ್ಲೇಖಿಸಿದ ನ್ಯಾಯಾಲಯ, ನೀವು ಎಸ್‌ಯುವಿ ಚಾಲಕನನ್ನು ಅಲ್ಲಿ ಬಂಧಿಸಿದ ರೀತಿಯಲ್ಲಿ ನೆಲಮಾಳಿಗೆಯಲ್ಲಿ ಮಳೆನೀರು ಪ್ರವೇಶಿಸಲು ನೀವು ತಡೆದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Pune: ಆಟವಾಡುತ್ತಿದ್ದಾಗ ಮೈ ಮೇಲೆ ಬಿದ್ದ ಕಬ್ಬಿಣದ ಗೇಟ್, ಮಗು ಸ್ಥಳದಲ್ಲೇ ಸಾವು; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಜುಲೈ 27 ರಂದು ಓಲ್ಡ್ ರಾಜೀಂದರ್ ನಗರದಲ್ಲಿರುವ ರಾವು ಅವರ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಯೊಳಗೆ ಮಳೆ ನೀರು ನುಗ್ಗಿದ್ದರಿಂದ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳಾದ ಶ್ರೇಯಾ ಯಾದವ್, ತಾನ್ಯಾ ಸೋನಿ ಮತ್ತು ನೆವಿನ್ ಡಾಲ್ವಿನ್ ಸಾವಿಗೀಡಾಗಿದ್ದರು.
ಈ ಘಟನೆಯ ನಂತರ ವಿವಿಧ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳು ತಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಕೋಚಿಂಗ್ ಸೆಂಟರ್‌ಗಳಲ್ಲಿ ಸುಧಾರಿತ ಸುರಕ್ಷತಾ ಕ್ರಮಗಳನ್ನು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Fri, 2 August 24