AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಗಿಲ್​ನಿಂದ ಆಪರೇಷನ್ ಸಿಂಧೂರ್​​ವರೆಗೆ; ರಾಮ ಮಂದಿರ ಟ್ರಸ್ಟ್​ನ ಸಿಇಒ ಜಿತೇಂದ್ರ ಮಿಶ್ರಾ ಯಾರು?

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಆಡಳಿತ ವ್ಯವಸ್ಥೆಯಲ್ಲಿ ಚಾರಿತ್ರಿಕ ಬದಲಾವಣೆ ತರಲು ಭಾರತೀಯ ವಾಯುಪಡೆಯ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ಟ್ರಸ್ಟ್‌ನ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ನೇಮಕ ಮಾಡಲಾಗಿದೆ. ರಾಮ ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನ ವಿವಾದ ಮತ್ತು ಆಡಳಿತ ವೈಫಲ್ಯಗಳ ನಂತರ, ಭಕ್ತರಲ್ಲಿ ನಂಬಿಕೆಯನ್ನು ಮರುಸ್ಥಾಪಿಸಲು ಮತ್ತು ಆಡಳಿತದಲ್ಲಿ ಮಿಲಿಟರಿ ಶಿಸ್ತು ತರಲು ರಾಮ ಮಂದಿರ ಟ್ರಸ್ಟ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಮ ಮಂದಿರ ಟ್ರಸ್ಟ್​ನ ಮೊದಲ ಸಿಇಒ ಜಿತೇಂದ್ರ ಮಿಶ್ರಾ ಯಾರು? ಇವರ ಸಾಧನೆಯೇನು? ಎಂಬ ಮಾಹಿತಿ ಇಲ್ಲಿದೆ.

ಕಾರ್ಗಿಲ್​ನಿಂದ ಆಪರೇಷನ್ ಸಿಂಧೂರ್​​ವರೆಗೆ; ರಾಮ ಮಂದಿರ ಟ್ರಸ್ಟ್​ನ ಸಿಇಒ ಜಿತೇಂದ್ರ ಮಿಶ್ರಾ ಯಾರು?
ಜಿತೇಂದ್ರ ಮಿಶ್ರಾ
ಸುಷ್ಮಾ ಚಕ್ರೆ
|

Updated on: Sep 02, 2026 | 8:57 PM

Share

ನವದೆಹಲಿ, ಸೆಪ್ಟೆಂಬರ್ 2: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ನೂತನ ಸಿಇಒ ಆಗಿ ಭಾರತೀಯ ವಾಯುಪಡೆಯ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ನೇಮಿಸಲಾಗಿದೆ. ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ವೈಮಾನಿಕ ತಂತ್ರಜ್ಞಾನ ಹಾಗೂ ದಾಳಿಯ ನೇತೃತ್ವ ವಹಿಸಿದ್ದ ಜಿತೇಂದ್ರ ಮಿಶ್ರಾ ಇನ್ಮುಂದೆ ರಾಮ ಮಂದಿರ ಟ್ರಸ್ಟ್‌ನ ದಿನನಿತ್ಯದ ಕಾರ್ಯನಿರ್ವಹಣೆಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಸುಮಾರು 4 ದಶಕಗಳ ಸುದೀರ್ಘ ಸೇವೆ ಸಲ್ಲಿಸಿರುವ ಇವರು ಲಾಜಿಸ್ಟಿಕ್ಸ್, ಮಾನವಸಂಪನ್ಮೂಲ ನಿರ್ವಹಣೆ ಮತ್ತು ರಕ್ಷಣಾ ಆಡಳಿತದಲ್ಲಿ ಅಪಾರ ಅನುಭವ ಹೊಂದಿದ್ದಾರೆ.

40 ವರ್ಷಗಳ ಮಿಲಿಟರಿ ಸೇವೆ:

1986ರ ಡಿಸೆಂಬರ್ 6ರಂದು ವಾಯುಪಡೆಗೆ ಸೇರಿದ ಜಿತೇಂದ್ರ ಮಿಶ್ರಾ 38 ವರ್ಷಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿ 2026ರ ಏಪ್ರಿಲ್ 30ರಂದು ನಿವೃತ್ತರಾದರು. ತಮ್ಮ ವೃತ್ತಿಜೀವನದಲ್ಲಿ 18ಕ್ಕೂ ಹೆಚ್ಚು ಮಾದರಿಯ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳಲ್ಲಿ 3,000ಕ್ಕೂ ಹೆಚ್ಚು ಗಂಟೆ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ S-400 ಕ್ಷಿಪಣಿ ಪತ್ತೆಗೆ ಪಾಕಿಸ್ತಾನದಿಂದ ಗೂಢಚಾರರ ನಿಯೋಜನೆ; ಭಾರತದ ಏರ್ ಮಾರ್ಷಲ್

ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಜಿತೇಂದ್ರ ಮಿಶ್ರಾ ಅಯೋಧ್ಯೆಯ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ. 2025ರ ಮೇಯಲ್ಲಿ ನಡೆದ ಮಿಲಿಟರಿ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ವಾಯುಪಡೆಯ ‘ವೆಸ್ಟರ್ನ್ ಏರ್ ಕಮಾಂಡ್’ ಅನ್ನು ಮುನ್ನಡೆಸಿದ್ದ ಇವರು, ಪ್ರಮುಖ ವೈಮಾನಿಕ ಕಾರ್ಯಾಚರಣೆಗಳ ಸುಪರ್ದಿ ವಹಿಸಿ ಭಾರತೀಯ ವಾಯುಪಡೆಯ ಪ್ರಾಬಲ್ಯವನ್ನು ಎತ್ತಿಹಿಡಿದಿದ್ದರು. ಈ ಕಾರ್ಯಾಚರಣೆಯ ಅಸಾಧಾರಣ ಯಶಸ್ಸಿಗಾಗಿ ಅವರಿಗೆ ಅತ್ಯುನ್ನತ ‘ಸರ್ವೋತ್ತಮ ಯುದ್ಧ ಸೇವಾ ಪದಕ’ (SYSM) ನೀಡಿ ಗೌರವಿಸಲಾಗಿತ್ತು.

ಉತ್ತಮ ತರಬೇತಿ ಹಾಗೂ ನಾಯಕತ್ವ:

ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA), ಬೆಂಗಳೂರಿನ ಏರ್ ಫೋರ್ಸ್ ಟೆಸ್ಟ್ ಪೈಲಟ್ಸ್ ಸ್ಕೂಲ್, ಅಮೆರಿಕದ ಏರ್ ಕಮಾಂಡ್ ಆ್ಯಂಡ್ ಸ್ಟಾಫ್ ಕಾಲೇಜ್ ಮತ್ತು ಯುಕೆಯ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನಲ್ಲಿ ಉನ್ನತ ಶಿಕ್ಷಣ ಪಡೆದಿರುವ ಇವರು ‘ಎಕ್ಸ್‌ಪರಿಮೆಂಟಲ್ ಟೆಸ್ಟ್ ಪೈಲಟ್’ ಮತ್ತು ‘ಫೈಟರ್ ಕಾಂಬ್ಯಾಟ್ ಲೀಡರ್’ ಆಗಿ ಕಾರ್ಯನಿರ್ವಹಿಸಿದ್ದಾರೆ.

ಕಾರ್ಗಿಲ್‌ನಿಂದ ‘ಆಪರೇಷನ್ ಸಿಂಧೂರ್’ವರೆಗೆ:

1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಮಿರಾಜ್ 2000 ಯುದ್ಧವಿಮಾನಗಳಲ್ಲಿ ಲೇಸರ್-ನಿರ್ದೇಶಿತ ಬಾಂಬ್‌ಗಳನ್ನು ಅಳವಡಿಸಿದ ತಜ್ಞರ ತಂಡದಲ್ಲಿ ಇವರು ಪ್ರಮುಖರಾಗಿದ್ದರು. 2025ರ ಮೇಯಲ್ಲಿ ನಡೆದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಮಯದಲ್ಲಿ ವಾಯುಪಡೆಯ ಅತ್ಯಂತ ಆಯಕಟ್ಟಿನ ‘ವೆಸ್ಟರ್ನ್ ಏರ್ ಕಮಾಂಡ್’ ನೇತೃತ್ವ ವಹಿಸಿ ಯಶಸ್ವಿ ವೈಮಾನಿಕ ದಾಳಿಗಳನ್ನು ನಿರ್ದೇಶಿಸಿದ್ದರು. ಪಹಲ್ಗಾಮ್ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡ ಮಿಲಿಟರಿ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ವೆಸ್ಟರ್ನ್ ಏರ್ ಕಮಾಂಡ್ ನೇತೃತ್ವ ವಹಿಸಿದ್ದು ಇವರ ಸೈನಿಕ ವೃತ್ತಿಜೀವನದ ಪ್ರಮುಖ ಮೈಲಿಗಲ್ಲಾಗಿದೆ. ಇವರ ಅಸಾಧಾರಣ ನಾಯಕತ್ವಕ್ಕಾಗಿ ಅತ್ಯುನ್ನತ ‘ಸರ್ವೋತ್ತಮ ಯುದ್ಧ ಸೇವಾ ಪದಕ’ (SYSM), ‘ಅತಿ ವಿಶಿಷ್ಟ ಸೇವಾ ಪದಕ’ (AVSM) ಮತ್ತು ‘ವಿಶಿಷ್ಟ ಸೇವಾ ಪದಕ’ (VSM) ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: ರಾಮ ಮಂದಿರ ಟ್ರಸ್ಟ್​ನ ಮೊದಲ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ನೇಮಕ

ಈ ಹುದ್ದೆಗೆ ಬರೋಬ್ಬರಿ 5,585 ಅರ್ಜಿಗಳು ಬಂದಿದ್ದು, ಅಂತಿಮವಾಗಿ ಪರಿಶೀಲಿಸಿದ ಮೂವರು ಅತ್ಯುತ್ತಮ ಅಭ್ಯರ್ಥಿಗಳಲ್ಲಿ ಜಿತೇಂದ್ರ ಮಿಶ್ರಾ ಅವರನ್ನು ಆಯ್ಕೆ ಮಾಡಲಾಯಿತು. ಅಯೋಧ್ಯೆ ರಾಮಮಂದಿರದಲ್ಲಿ ಇತ್ತೀಚೆಗೆ ನಡೆದ ಕಾಣಿಕೆ ಹಣ ಕಳವು ಪ್ರಕರಣದ ಭಾರಿ ವಿವಾದದ ಹಿನ್ನೆಲೆಯಲ್ಲಿ ಈ ನೇಮಕಾತಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಬಂಧಿಸಲಾಗಿದ್ದು, ಜೂನ್‌ನಲ್ಲಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಾರ್ವಜನಿಕರಲ್ಲಿ ನಂಬಿಕೆಯನ್ನು ಮರುಸ್ಥಾಪಿಸಲು ಮತ್ತು ಆಡಳಿತಕ್ಕೆ ಶಿಸ್ತು ತರಲು ವೃತ್ತಿಪರ ಸಿಇಒ ಅವರನ್ನು ನೇಮಿಸಲು ಟ್ರಸ್ಟ್ ನಿರ್ಧರಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!