AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನಿರುವಾಗ್ಲೇ ಯಾರ ಜತೆಗೋ ಮಾತಾಡ್ತಾಳೆ, ಪತ್ನಿಯ ಕತ್ತು ಸೀಳಿ ಅತ್ತೆಗೆ ಕರೆ ಮಾಡಿದ ಅಳಿಯ

ಬಾಗ್​ಪತ್​ನ ಆಟೋ ಚಾಲಕ ಪ್ರಶಾಂತ್ ಪತ್ನಿ ನೇಹಾಳ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬಾಗ್​ಪತ್​ನಲ್ಲಿ ನಡೆದಿದೆ. ನೇಹಾ ತನ್ನ ತಾಯಿಯ ಮನೆಯಲ್ಲಿ ಒಂಟಿಯಾಗಿರುವಾಗ ಘಟನೆ ನಡೆಸಿದೆ. ಘಟನೆಯ ಮನಕಲಕುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ದಾಳಿಯ ನಂತರ ಆರೋಪಿ ಫೋನ್‌ನಲ್ಲಿ ಯಾರೊಂದಿಗೋ ಮಾತನಾಡುತ್ತಿರುವುದನ್ನು ಇದು ತೋರಿಸುತ್ತದೆ. ನನ್ನೆದುರು ನೀನು ಯಾರೊಂದಿಗಾದರೂ ಮಾತನಾಡಿದರೆ ಅಂದೇ ನಿನ್ನನ್ನು ಕೊಲ್ಲುತ್ತೇನೆ ಎಂದು ನಾನು ಮದುವೆಯಾದ ದಿನವೇ ಆಕೆಗೆ ಎಚ್ಚರಿಕೆ ನೀಡಿದ್ದೆ ಎಂದು ಆತ ತನ್ನ ಅತ್ತೆಗೆ ಹೇಳಿದ್ದಾನೆ.

ನಾನಿರುವಾಗ್ಲೇ ಯಾರ ಜತೆಗೋ ಮಾತಾಡ್ತಾಳೆ, ಪತ್ನಿಯ ಕತ್ತು ಸೀಳಿ ಅತ್ತೆಗೆ ಕರೆ ಮಾಡಿದ ಅಳಿಯ
Image Credit source: Hindustan Times
ನಯನಾ ರಾಜೀವ್
|

Updated on: May 08, 2025 | 11:24 AM

Share

ಬಾಗ್​ಪತ್, ಮೇ 08: ನಾನು ಎಷ್ಟು ಸಲ ಹೇಳಿದೀನಿ ನನ್ನ ಕಣ್ಣೆದುರು ಬೇರೆ ಯಾರ ಜತೆನೂ ಮಾತನಾಡಬಾರ್ದು ಎಂದು ಆದ್ರೂ ಮಾತಾಡಿದ್ಲು ಕೊಂದು ಬಿಟ್ಟೆ ಎಂದು ಹೆಂಡತಿಯನ್ನು ಕೊಲೆ(Murder) ಮಾಡಿ ಅಳಿಯ ಅತ್ತೆಗೆ ಕರೆ ಮಾಡಿ ಹೇಳಿದಾಗ ಒಮ್ಮೆ ಆಕೆಗೆ ಬರಸಿಡಿಲು ಬಡಿದಂತಾಗಿತ್ತು.  ಆಟೋ ಚಾಲಕ ಪ್ರಶಾಂತ್ ಪತ್ನಿ ನೇಹಾಳ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬಾಗ್​ಪತ್​ನಲ್ಲಿ ನಡೆದಿದೆ. ನೇಹಾ ತನ್ನ ತಾಯಿಯ ಮನೆಯಲ್ಲಿ ಒಂಟಿಯಾಗಿರುವಾಗ ಘಟನೆ ನಡೆಸಿದೆ.

ಘಟನೆಯ ಮನಕಲಕುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ದಾಳಿಯ ನಂತರ ಆರೋಪಿ ಫೋನ್‌ನಲ್ಲಿ ಯಾರೊಂದಿಗೋ ಮಾತನಾಡುತ್ತಿರುವುದನ್ನು ಇದು ತೋರಿಸುತ್ತದೆ. ನನ್ನೆದುರು ನೀನು ಯಾರೊಂದಿಗಾದರೂ ಮಾತನಾಡಿದರೆ ಅಂದೇ ನಿನ್ನನ್ನು ಕೊಲ್ಲುತ್ತೇನೆ ಎಂದು ನಾನು ಮದುವೆಯಾದ ದಿನವೇ ಆಕೆಗೆ ಎಚ್ಚರಿಕೆ ನೀಡಿದ್ದೆ ಎಂದು ಆತ ತನ್ನ ಅತ್ತೆಗೆ ಹೇಳಿದ್ದಾನೆ.

ಇದನ್ನೂ ಓದಿ
Image
ಕಣ್ಮುಚ್ಚಿ ಬಿಡುವಷ್ಟರಲ್ಲೇ ಕಗ್ಗೊಲೆ: ಸತ್ತು ಬಿದ್ದವನ ಮುಂದೆ ಡಾನ್ಸ್!
Image
ಬೆಂಗಳೂರು: ತಂದೆಯ ಕೊಲೆ ಪ್ರತೀಕಾರಕ್ಕಾಗಿ ಮಾವನನ್ನು ಕೊಂದ ಪುತ್ರ
Image
ಸಿದ್ದರಾಮಯ್ಯನ ಕೊಂದ್ರೆ ಹಿಂದೂಗಳಿಗೆ ನೆಮ್ಮದಿ ಎಂದ ಹೋಂ ಗಾರ್ಡ್​ ಅರೆಸ್ಟ್​​
Image
ತನಗಿಂತ 2 ವರ್ಷ ದೊಡ್ಡವಳೊಂದಿಗೆ ಲವ್​: ಯುವತಿ ಹಿಂದೆ ಬಿದ್ದ ಯುವಕನ ಹತ್ಯೆ

ಆರೋಪಿಯು ಸುಮಾರು 15 ನಿಮಿಷಗಳ ಕಾಲ ಶವದ ಬಳಿ ಓಡಾಡಿ ಬಳಿಕ ಅತ್ತೆಗೆ ಕರೆ ಮಾಡಿದ್ದಾನೆ. ನಾನು ಆಕೆಯನ್ನು ಕೊಂದು ಎಸೆದಿದ್ದೇನೆ, ಈಗ ನಾನು ಪೊಲೀಸ್​ ಠಾಣೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಇಬ್ಬರೂ ಪರಸ್ಪರ ಪ್ರೀತಿಸಿ 8 ವರ್ಷಗಳ ಹಿಂದೆ ಮದುವೆಯಾಗಿದ್ದರು. ನಾಲ್ಕು ವರ್ಷದ ಮಗನಿದ್ದಾನೆ. ಮೂಲತಃ ಸಹರಾನ್​ಪುರದವರಾದ ನೇಹಾ ಈಗ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೊದಲು ಬ್ಯೂಟಿಪಾರ್ಲರ್ ನಡೆಸುತ್ತಿದ್ದರು. ಕುಟುಂಬವು ಪ್ರಶಾಂತ್ ಅವರ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು.

ಅಕ್ಕಪಕ್ಕದ ಮನೆಯವರು ಹೇಳುವ ಪ್ರಕಾರ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಪ್ರಶಾಂತ್ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸುತ್ತಿದ್ದ. ನಿರಂತರ ಜಗಳದಿಂದ ಬೇಸತ್ತ ನೇಹಾ ಇತ್ತೀಚೆಗೆ ತನ್ನ ತಾಯಿ ರಂಜಿತಾ ಅವರೊಂದಿಗೆ ಅದೇ ಪ್ರದೇಶದಲ್ಲಿ ಮತ್ತೊಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಮತ್ತಷ್ಟು ಓದಿ:ರಾಯಚೂರು: ನಾಪತ್ತೆಯಾಗಿದ್ದ ಆರೋಗ್ಯ ಇಲಾಖೆ ಲ್ಯಾಬ್ ಟೆಕ್ನಿಷಿಯನ್​​ ಶವವಾಗಿ ಪತ್ತೆ, ದೂರು ನೀಡಿದ ಪತ್ನಿ

ನಾವು ಮದುವೆಯಾದ ದಿನ, ನಾನು ಅವಳಿಗೆ ಬೇರೆಯವರೊಂದಿಗೆ ಮಾತನಾಡಬಾರದೆಂದು ಹೇಳಿದ್ದೆ. ನೀನು ಏನಾದರೂ ತಪ್ಪು ಮಾಡುತ್ತಿರುವುದು ನನಗೆ ಸಿಕ್ಕಿದ ದಿನ, ನಾನು ನಿನ್ನನ್ನು ಕೊಲ್ಲುತ್ತೇನೆ ಎಂದು ಮೊದಲೇ ಹೇಳಿದ್ದಾಗಿ ತಿಳಿಸಿದ್ದಾನೆ.

ಪ್ರಶಾಂತ್ ಮೊದಲ ಆಕೆಯ ಕೈಗಳ ಮೇಲೆ ಹಲ್ಲೆ ನಡೆಸಿದ್ದಾನೆ, ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಆಕೆಯ ಬೆರಳುಗಳನ್ನು ಕತ್ತರಿಸಿದ್ದಾನೆ. ನಂತರ ಗಂಟಲು ಸೀಳಿದ್ದಾನೆ. ಸಂತ್ರಸ್ತೆಯ ತಾಯಿ ರಂಜಿತಾ ಕೊಟ್ಟಿರುವ ಹೇಳಿಕೆಯಲ್ಲಿ ಆತ ನಿತ್ಯ ಕುಡಿದುಬಂದು ತನ್ನ ಮಗಳಿಗೆ ಹಿಂಸೆ ಕೊಡುತ್ತಿದ್ದ, ಈ ಹಿಂದೆಯೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ, ನೇಹಾ 20 ದಿನಗಳ ಹಿಂದೆ ಸೂರು ನೀಡಿದ್ದರೂ ಕೂಡ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿ ಅಪರಾಧ ಒಪ್ಪಿಕೊಂಡಿದ್ದಾನೆ. ಕೊಲೆಗೆ ಬಳಸಿದ್ದ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ತನಿಖೆ ಮುಂದುವರೆಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ