ಮಹಾಕುಂಭದ ಕಾಲ್ತುಳಿತದಲ್ಲಿ ಸತ್ತವರ ಶವವನ್ನು ನದಿಗೆ ಎಸೆಯಲಾಗಿದೆ; ಜಯಾ ಬಚ್ಚನ್ ಆರೋಪ
ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ನೀರಿನ ಗುಣಮಟ್ಟ ಕಲುಷಿತವಾಗಿದೆ ಎಂದು ಹೇಳಿದ್ದಾರೆ. ಸಂಸತ್ತಿನ ಅಧಿವೇಶನದಲ್ಲಿ ಮಹಾಕುಂಭವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಜಯಾ ಬಚ್ಚನ್, ಮಹಾಕುಂಭದ ನೀರು ಅತ್ಯಂತ ಕಲುಷಿತವಾಗಿದೆ. ಪವಿತ್ರ ಗಂಗೆ ಕಲುಷಿತಳಾಗಿದ್ದಾಳೆ ಎಂಬುದು ಬೇಸರದ ಸಂಗತಿ ಎಂದಿದ್ದಾರೆ. ಹಾಗೇ, ಕಾಲ್ತುಳಿತದಲ್ಲಿ ಮೃತಪಟ್ಟವರ ಶವಗಳನ್ನು ಗಂಗಾ ನದಿಗೆ ಎಸೆಯಲಾಗಿದೆ ಎಂದು ಕೂಡ ಆರೋಪಿಸಿದ್ದಾರೆ.

ನವದೆಹಲಿ: ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವನ್ನು ಗುರಿಯಾಗಿಸಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗಂಗಾ ನೀರು ಅತ್ಯಂತ ಕಲುಷಿತವಾಗಿದೆ. “ಈಗ ದೇಶದ ಅತ್ಯಂತ ಕಲುಷಿತ ನೀರು ಎಲ್ಲಿದೆ? ಎಂಬ ಪ್ರಶ್ನೆಯನ್ನು ಯಾರನ್ನೇ ಕೇಳಿದರೂ ಅದಕ್ಕೆ ಉತ್ತರ ಮಹಾಕುಂಭದಲ್ಲಿದೆ ಎಂಬ ಉತ್ತರ ಬರುತ್ತದೆ. ಕಾಲ್ತುಳಿತದಲ್ಲಿ ಮೃತಪಟ್ಟವರ ಶವಗಳನ್ನು ನದಿಗೆ ಎಸೆಯಲಾಗಿದೆ. ಇದರಿಂದಾಗಿ ನೀರು ಇನ್ನಷ್ಟು ಕಲುಷಿತವಾಗಿದೆ ಎಂದು ಜಯಾ ಬಚ್ಚನ್ ಗಂಭೀರ ಆರೋಪ ಮಾಡಿದ್ದಾರೆ.
ಮಹಾಕುಂಭ ನಡೆಯುತ್ತಿರುವ ಸ್ಥಳದ ನಿಜವಾದ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಮಹಾಕುಂಭಕ್ಕೆ ಭೇಟಿ ನೀಡುವ ಸಾಮಾನ್ಯ ಜನರಿಗೆ ಯಾವುದೇ ವಿಶೇಷ ಚಿಕಿತ್ಸೆ ಸಿಗುತ್ತಿಲ್ಲ. ಅವರಿಗೆ ಸರಿಯಾದ ಯಾವುದೇ ವ್ಯವಸ್ಥೆ ಇಲ್ಲ. 34ಕ್ಕೂ ಹೆಚ್ಚು ಕೋಟಿ ಜನರು ಮಹಾಕುಂಭಕ್ಕೆ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಸುಳ್ಳು ಹೇಳುತ್ತಿದೆ. ಒಂದು ಸ್ಥಳದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ಹೇಗೆ ಸೇರಲು ಸಾಧ್ಯ? ಎಂದು ಜಯಾ ಬಚ್ಚನ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಹಾಕುಂಭದ ಅಮೃತ ಸ್ನಾನದ ವೇಳೆ ಸಂತರು, ಋಷಿಗಳ ಮೇಲೆ ಹೆಲಿಕಾಪ್ಟರ್ನಿಂದ ಹೂವಿನ ಮಳೆ
ಪ್ರಸ್ತುತ ಮಹಾಕುಂಭದಲ್ಲಿ ಅತ್ಯಂತ ಕಲುಷಿತ ನೀರು ಇದೆ. ಮೃತ ದೇಹಗಳನ್ನು ನದಿಗೆ ಎಸೆಯಲಾಗಿದ್ದು, ಇದು ಪ್ರಯಾಗರಾಜ್‌ನಲ್ಲಿ ನೀರು ವಿಪರೀತ ಕಲುಷಿತಗೊಂಡಿದೆ. ಅದೇ ನೀರನ್ನು ಸಾಮಾನ್ಯ ಜನರಿಗೆ ಪೂರೈಸಲಾಗುತ್ತಿದೆ. ಉತ್ತರ ಪ್ರದೇಶ ಸರ್ಕಾರ ಈ ವಾಸ್ತವದ ಸಮಸ್ಯೆಗಳಿಗೆ ಯಾವುದೇ ಉತ್ತರಗಳನ್ನು ನೀಡುತ್ತಿಲ್ಲ ಎಂದಿದ್ದಾರೆ.
#WATCH | Delhi: Samajwadi Party MP Jaya Bachchan says, “… Where is the water most contaminated right now? It’s in Kumbh. Bodies (of those who died in the stampede) have been thrown in the river because of which the water has been contaminated… The real issues are not being… pic.twitter.com/9EWM2OUCJj
— ANI (@ANI) February 3, 2025
ಮಹಾ ಕುಂಭಕ್ಕೆ ಭೇಟಿ ನೀಡುವ ಸಾಮಾನ್ಯ ಅಥವಾ ಬಡ ಜನರಿಗೆ ಯಾವುದೇ ವ್ಯವಸ್ಥೆಯನ್ನು ಒದಗಿಸಲಾಗಿಲ್ಲ. ಆದರೆ ವಿಐಪಿಗಳಿಗೆ ಮಾತ್ರ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಯಾ ಬಚ್ಚನ್ ಆರೋಪಿಸಿದರು.
ಇದನ್ನೂ ಓದಿ: ಸಂಸತ್ ಅಧಿವೇಶನದಲ್ಲಿ ಗದ್ದಲ, ಸರ್ಕಾರದ ವಿರುದ್ಧ ಘೋಷಣೆ; ಮಹಾಕುಂಭದ ಕಾಲ್ತುಳಿತದ ಬಗ್ಗೆ ಚರ್ಚೆಗೆ ವಿಪಕ್ಷಗಳ ಒತ್ತಾಯ
ಮಹಾ ಕುಂಭಮೇಳದಲ್ಲಿ ಸೇರಿದ ಜನರ ಬಗ್ಗೆ ಜಯಾ ಬಚ್ಚನ್ ಪ್ರಶ್ನಿಸಿದ್ದಾರೆ. “ಕೋಟ್ಯಂತರ ಜನರು ಆ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಸುಳ್ಳು ಹೇಳುತ್ತಿದೆ. ಯಾವುದೇ ಸಮಯದಲ್ಲಿ ಒಂದು ಸ್ಥಳದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ಹೇಗೆ ಸೇರಲು ಸಾಧ್ಯ? ಇದನ್ನು ನಂಬಲು ಸಾಧ್ಯವೇ” ಎಂದು ಕೇಳಿದ್ದಾರೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಗಳಲ್ಲಿ ಒಂದಾದ ಮಹಾಕುಂಭದಲ್ಲಿ ಗಂಗಾ ನದಿಯ ಪವಿತ್ರ ನೀರಿನಲ್ಲಿ ಸ್ನಾನ ಮಾಡಲು ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Mon, 3 February 25