Patanjali University: ಜ್ಞಾನ ಭಾರತಂ ಮಿಷನ್‌ನ ಕ್ಲಸ್ಟರ್ ಸೆಂಟರ್ ಆಗಿ ಪತಂಜಲಿ ವಿವಿಗೆ ಮಾನ್ಯತೆ
Patanjali University recognized as cluster center: ಪತಂಜಲಿ ವಿಶ್ವವಿದ್ಯಾಲಯವು ತನ್ನ ಸಾಧನೆಗಳಿಗೆ ಮತ್ತೊಂದು ಹೊಸ ಅಧ್ಯಾಯ ಸೇರಿಸಿದೆ. ಈ ಸಂಸ್ಥೆಯನ್ನು ಸಂಸ್ಕೃತಿ ಸಚಿವಾಲಯದ ಜ್ಞಾನ ಭಾರತಂ ಮಿಷನ್ ಕ್ಲಸ್ಟರ್ ಕೇಂದ್ರವೆಂದು ಗುರುತಿಸಿದೆ. ಈ ಮನ್ನಣೆಗಾಗಿ ಯೋಗ ಗುರು ಬಾಬಾ ರಾಮದೇವ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷವಾಗಿ ಧನ್ಯವಾದ ಅರ್ಪಿಸಿದ್ದಾರೆ.

ನವದೆಹಲಿ, ಡಿಸೆಂಬರ್ 17: ಪತಂಜಲಿ ಯೂನಿವರ್ಸಿಟಿಯನ್ನು ಕ್ಲಸ್ಟರ್ ಕೇಂದ್ರವೆಂದು ಮಾನ್ಯ ಮಾಡಲಾಗಿದೆ ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸಂಸ್ಕೃತಿ ಸಚಿವಾಲಯದ ಜ್ಞಾನ ಭಾರತಂ ಮಿಷನ್ನಿಂದ (Gyan Bharat Mission) ಪತಂಜಲಿ ವಿಶ್ವವಿದ್ಯಾಲಯವನ್ನು ಕ್ಲಸ್ಟರ್ ಕೇಂದ್ರವೆಂದು ಗುರುತಿಸಲಾಯಿತು. ಪತಂಜಲಿ ವಿಶ್ವವಿದ್ಯಾಲಯದ ಕುಲಪತಿ ಯೋಗ ಗುರು ಬಾಬಾ ರಾಮದೇವ್ (Baba Ramdev), ಉಪಕುಲಪತಿ ಡಾ. ಆಚಾರ್ಯ ಬಾಲಕೃಷ್ಣ ಮತ್ತು ಜ್ಞಾನ ಭಾರತಂ ಮಿಷನ್‌ನ ಯೋಜನಾ ನಿರ್ದೇಶಕರಾದ ಡಾ. ಅನಿರ್ವಾನ್ ದಾಶ್, ಡಾ. ಶ್ರೀಧರ್ ಬಾರಿಕ್ (ಸಂಯೋಜಕರು, NMM), ಮತ್ತು ವಿಶ್ವರಂಜನ್ ಮಲಿಕ್ (ಸಂಯೋಜಕರು, ಡಿಜಿಟಲೀಕರಣ, NMM) ಅವರ ಸಮ್ಮುಖದಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಯೋಗ ಗುರು ಬಾಬಾ ರಾಮದೇವ್ ಅವರು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಂಸ್ಕೃತಿ ಸಚಿವ ಗಜೇಂದ್ರ ಶೇಖಾವತ್ ಮತ್ತು ಜ್ಞಾನ ಭಾರತಂ ಮಿಷನ್‌ನ ಸಂಪೂರ್ಣ ತಂಡಕ್ಕೆ ಧನ್ಯವಾದ ಅರ್ಪಿಸಿದರು. ಜ್ಞಾನ ಭಾರತಂ ಮಿಷನ್ನಿಂದ ಭಾರತೀಯ ಜ್ಞಾನ ಸಂಪ್ರದಾಯವನ್ನು ಸಂರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ಯೋಗಗುರುಗಳು ಈ ವೇಳೆ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯ ಕಾಪಾಡುವ ಆಹಾರ ಬಾಜ್ರಾ ಚುರ್ಮಾ: ಬಾಬಾ ರಾಮದೇವ್ಗೆ ಪ್ರಿಯವಾದ ತಿಂಡಿಯೂ ಇದು
ಇಲ್ಲಿಯವರೆಗೆ 33 ಒಪ್ಪಂದಗಳಿಗೆ ಸಹಿ: ಆಚಾರ್ಯ ಬಾಲಕೃಷ್ಣ
ಈ ಮಿಷನ್ ಅಡಿಯಲ್ಲಿ ಇದುವರೆಗೆ 33 ಎಂಒಯುಗಳಿಗೆ ಸಹಿ ಹಾಕಲಾಗಿದೆ ಎಂದು ಪತಂಜಲಿ ಸಹ-ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಹೇಳಿದರು. ಪತಂಜಲಿ ವಿಶ್ವವಿದ್ಯಾಲಯವು ಯೋಗ ಶಿಕ್ಷಣಕ್ಕೆ ಮೀಸಲಾಗಿರುವ ಮೊದಲ ಕ್ಲಸ್ಟರ್ ಕೇಂದ್ರವಾಗಿದೆ. ಪತಂಜಲಿ ವಿಶ್ವವಿದ್ಯಾಲಯವು ಇಲ್ಲಿಯವರೆಗೆ 50,000 ಕ್ಕೂ ಹೆಚ್ಚು ಪ್ರಾಚೀನ ಗ್ರಂಥಗಳನ್ನು ಸಂರಕ್ಷಿಸಿದೆ. 42 ಲಕ್ಷ ಪುಟಗಳನ್ನು ಡಿಜಿಟಲೀಕರಣಗೊಳಿಸಿದೆ. ಮತ್ತು 40 ಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಪರಿಷ್ಕರಿಸಿದೆ ಮತ್ತು ಮರುಪ್ರಕಟಿಸಿದೆ ಎಂದು ಅವರು ಹೇಳಿದರು.
ಜ್ಞಾನ ಭಾರತಂನ ಕ್ಲಸ್ಟರ್ ಸೆಂಟರ್ ಆಗಿ ಪತಂಜಲಿ ಈಗ 20 ಕೇಂದ್ರಗಳಿಗೆ ತರಬೇತಿ ನೀಡುವ ಮತ್ತು ಪ್ರೋತ್ಸಾಹಿಸುವ ಕೆಲಸ ಮಾಡಬಹುದು. ಈ ಮೂಲಕ ಭಾರತೀಯ ಜ್ಞಾನ ಮತ್ತು ಸಂಸ್ಕೃತಿ ರಕ್ಷಣೆಯ ಕಾರ್ಯಕ್ಕೆ ನೆರವಾಗಬಹುದು.
ಇದನ್ನೂ ಓದಿ: ಚಳಿಗಾಲಕ್ಕೆ ಆರೋಗ್ಯ ಕಾಪಾಡುವ ಸೂಪರ್ ಟಾನಿಕ್; ಬಾಬಾ ರಾಮದೇವ್ ಮಾಹಿತಿ
ಯೋಗಕ್ಕೆ ಸಂಬಂಧಿಸಿದ ಹಸ್ತಪ್ರತಿಗಳ ಕುರಿತು ಸಂಶೋಧನೆ
ಜ್ಞಾನ ಭಾರತಂ ಮಿಷನ್‌ನ ಯೋಜನಾ ನಿರ್ದೇಶಕ ಡಾ. ಅನಿರ್ವಾನ್ ದಾಶ್ ಈ ಸಂದರ್ಭದಲ್ಲಿ ಮಾತನಾಡುತ್ತಾ, ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ ಕ್ಲಸ್ಟರ್ ಕೇಂದ್ರವಾಗಿ, ಪತಂಜಲಿ ವಿಶ್ವವಿದ್ಯಾಲಯವು ಯೋಗ ಮತ್ತು ಆಯುರ್ವೇದ ಆಧಾರಿತ ಹಸ್ತಪ್ರತಿಗಳ ಕುರಿತು ಸಂಶೋಧನೆ ನಡೆಸುವುದಲ್ಲದೆ, ಅದನ್ನು ಶಿಕ್ಷಣ ಕ್ರಾಂತಿಯೊಂದಿಗೆ ಸಂಪರ್ಕಿಸುತ್ತದೆ ಮತ್ತು ದೇಶ ಮತ್ತು ಸಮಾಜವನ್ನು ತಲುಪುವಂತೆ ಮಾಡುತ್ತದೆ ಎಂದು ಹೇಳಿದರು.
ಪತಂಜಲಿ ವಿಶ್ವವಿದ್ಯಾಲಯದ ಮಾನವಿಕ ಮತ್ತು ಪ್ರಾಚೀನ ಅಧ್ಯಯನ ವಿಭಾಗದ ಡೀನ್ ಡಾ. ಸಾಧ್ವಿ ದೇವಪ್ರಿಯಾ, ಪತಂಜಲಿ ಸಂಶೋಧನಾ ಸಂಸ್ಥೆಯ ಡಾ. ಅನುರಾಗ್ ವರ್ಷ್ಣಿ, ಡಾ. ಸತ್ಪಾಲ್, ಡಾ. ಕರುಣಾ, ಡಾ. ಸ್ವಾತಿ, ಡಾ. ರಾಜೇಶ್ ಮಿಶ್ರಾ, ಡಾ. ರಶ್ಮಿ ಮಿತ್ತಲ್ ಮತ್ತು ಎಲ್ಲಾ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳು ಉಪಸ್ಥಿತರಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




