Modi in Ukraine: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತ ತಟಸ್ಥವಾಗಿರಲಿಲ್ಲ, ಸದಾ ಶಾಂತಿಯ ಪರ; ಮೋದಿ
ಉಕ್ರೇನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಕೈವ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿದ್ದಾರೆ. ಝೆಲೆನ್ಸ್ಕಿ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ- ಉಕ್ರೇನ್ ಯುದ್ಧದಲ್ಲಿ ಭಾರತದ ನಿಲುವು ಏನೆಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕೈವ್: ರಷ್ಯಾದಿಂದ ಯುದ್ಧಕ್ಕೆ ಒಳಗಾಗಿರುವ ಉಕ್ರೇನ್ಗೆ ಭೇಟಿ ನೀಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತವು ರಷ್ಯಾ- ಉಕ್ರೇನ್ ಯುದ್ಧದಲ್ಲಿ ಎಂದಿಗೂ ತಟಸ್ಥ ನಿಲುವು ತೆಗೆದುಕೊಂಡಿರಲಿಲ್ಲ, ಯಾವಾಗಲೂ ಶಾಂತಿಯ ಪರವಾಗಿಯೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನಡುವಿನ ಚರ್ಚೆಯ ನಂತರ ಭಾರತ ಹಾಗೂ ಉಕ್ರೇನ್ ಕೃಷಿ, ಔಷಧ, ಸಂಸ್ಕೃತಿ ಮತ್ತು ಮಾನವೀಯ ನೆರವು ಈ 4 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದೆ. “ಈ ಯುದ್ಧದಲ್ಲಿ ಭಾರತ ಎಂದಿಗೂ ತಟಸ್ಥವಾಗಿಲ್ಲ, ನಾವು ಶಾಂತಿಯ ಪರವಾಗಿ ಇದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಸಂಘರ್ಷವನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಪ್ರತಿಪಾದಿಸಲು ಭಾರತದ ನಿರಂತರ ಪ್ರಯತ್ನಗಳನ್ನು ಎತ್ತಿ ತೋರಿಸಿದ್ದಾರೆ.
#WATCH UPDATED VISUALS | PM Narendra Modi and Ukrainian President Volodymyr Zelenskyy honoured the memory of children at the Martyrologist Exposition in Kyiv, today.
(Video: ANI/DD News) pic.twitter.com/EEiP7XnpRW
— ANI (@ANI) August 23, 2024
ಇದನ್ನೂ ಓದಿ: Modi Ukraine Visit: ಕೈವ್ಗೆ ಬಂದಿಳಿದ ಪ್ರಧಾನಿ ಮೋದಿಗೆ ಕೈ ಮುಗಿದು ಸ್ವಾಗತಿಸಿದ ಉಕ್ರೇನ್ ಅಧಿಕಾರಿಗಳು
ಯುದ್ಧ ಮತ್ತು ಹಿಂಸಾಚಾರವು ಯಾವುದಕ್ಕೂ ಪರಿಹಾರವಲ್ಲ ಎಂಬ ಭಾರತದ ನಿಲುವನ್ನು ಪುನರುಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ ಈ ಪ್ರದೇಶದಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ರಚನಾತ್ಮಕ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು.
#WATCH | Kyiv: Prime Minister Narendra Modi says, “…India was never neutral, we have always been on the side of peace…” https://t.co/HvUgzAiRx4 pic.twitter.com/VnkW6aheyy
— ANI (@ANI) August 23, 2024
ಇಂದು ಬೆಳಗ್ಗೆ ಕೈವ್‌ನಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್‌ಕಿಯವರನ್ನು ಭೇಟಿಯಾದ ಪ್ರಜ್ಞಾವಂತ ಪ್ರಧಾನಿ ಮೋದಿ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಅಪ್ಪಿಕೊಳ್ಳುವ ಮೊದಲು ಉಭಯ ನಾಯಕರು ಹಸ್ತಲಾಘವ ಮಾಡಿದರು. ಈ ಭೇಟಿಯ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಪ್ರಧಾನಿ ನರೇಂದ್ರ ಮೋದಿಯವರ ಉಕ್ರೇನ್ ಭೇಟಿಯನ್ನು “ಹೆಗ್ಗುರುತಿನ ಘಟನೆ” ಎಂದು ಬಣ್ಣಿಸಿದರು. 1991ರಲ್ಲಿ ಸ್ವಾತಂತ್ರ್ಯದ ನಂತರ ಭಾರತದ ಪ್ರಧಾನಿಯೊಬ್ಬರು ಉಕ್ರೇನ್ ದೇಶಕ್ಕೆ ಭೇಟಿ ನೀಡಿರುವುದು ಇದೇ ಮೊದಲು ಎಂದಿದ್ದಾರೆ.
#WATCH | Kyiv: Prime Minister Narendra Modi says, “I thank you (President Zelenskyy) for your warm welcome to me and my delegation…Today is a very historic day for India and Ukraine relations…A PM of India has come to Ukraine for the first time which is in itself a historic… pic.twitter.com/XJjXkcKzus
— ANI (@ANI) August 23, 2024
ಇದನ್ನೂ ಓದಿ: Modi in Ukraine: ರಷ್ಯಾ- ಉಕ್ರೇನ್ ಯುದ್ಧ; ಕೈವ್‌ನಲ್ಲಿ ಝೆಲೆನ್ಸ್ಕಿಯನ್ನು ತಬ್ಬಿಕೊಂಡ ಪ್ರಧಾನಿ ನರೇಂದ್ರ ಮೋದಿ
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯೊಂದಿಗಿನ ಅವರ ಸಭೆಯಲ್ಲಿ, ರಕ್ಷಣೆ, ವ್ಯಾಪಾರ ಮತ್ತು ಕೃಷಿಯ ಮೇಲೆ ಕೇಂದ್ರೀಕರಿಸುವ ಮಹತ್ವದ ಚರ್ಚೆಗಳು ನಡೆದವು. ಮಾತುಕತೆಯ ನಂತರ ಉಭಯ ದೇಶಗಳು ಶೀಘ್ರದಲ್ಲೇ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
#WATCH | Kyiv: Prime Minister Narendra Modi says, “When there were initial days of war you helped in the evacuation of Indian nationals and students. I express my gratitude to you for your help during this time of crisis…The world knows very well that during the war we played… pic.twitter.com/9YXo5qbYzE
— ANI (@ANI) August 23, 2024
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಝೆಲೆನ್ಸ್ಕಿ ನಡುವಿನ ಹೆಚ್ಚಿನ ಸಂಭಾಷಣೆಯು ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಮೇಲೆ ಕೇಂದ್ರೀಕೃತವಾಗಿದೆ ಎಂದು ಜೈಶಂಕರ್ ಎತ್ತಿ ತೋರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ