AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐ ಇಂಪ್ಯಾಕ್ಟ್ ಶೃಂಗಸಭೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

PM Narendra Modi inaugurates 4th AI Impact Summit at Delhi: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಭಾರತ್ ಮಂಟಪಂನಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಉದ್ಘಾಟಿಸಿದ್ದಾರೆ. 2023ರಲ್ಲಿ ಬ್ರಿಟನ್​ನಲ್ಲಿ ಮೊದಲ ಶೃಂಗಸಭೆ ನಡೆದಿತ್ತು. ಕೊರಿಯಾ ಮತ್ತು ಫ್ರಾನ್ಸ್​ನಲ್ಲಿ 2ನೇ ಮತ್ತು 3ನೇ ಸಮಿಟ್ ನಡೆದಿತ್ತು. ಭಾರತದಲ್ಲಿ ನಡೆಯುತ್ತಿರುವುದು ನಾಲ್ಕನೇ ಎಐ ಸಮಿಟ್ ಎನಿಸಿದೆ.

ಎಐ ಇಂಪ್ಯಾಕ್ಟ್ ಶೃಂಗಸಭೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 16, 2026 | 7:42 PM

Share

ನವದೆಹಲಿ, ಫೆಬ್ರುವರಿ 16: ನಾಲ್ಕನೇ ಆವೃತ್ತಿಯ ಎಐ ಇಂಪ್ಯಾಟ್ ಶೃಂಗಸಭೆಗೆ (AI Impact Summit) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇವತ್ತಿನಿಂದ ಫೆಬ್ರುವರಿ 20ರವರೆಗೂ ಐದು ದಿನಗಳ ಕಾಲ ಭಾರತ್ ಮಂಟಪಂನಲ್ಲಿ ಈ ಸಮಿಟ್​ನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ‘ಜನತೆ, ಭೂಮಿ ಮತ್ತು ಪ್ರಗತಿ’ ಥೀಮ್​ನಲ್ಲಿ ಈ ಶೃಂಗಸಭೆ ಆಯೋಜನೆಯಾಗುತ್ತಿದೆ.

ಹಿಂದಿನ ಮೂರು ಎಐ ಇಂಪ್ಯಾಕ್ಟ್ ಸಮಿಟ್​ಗಳು ಬ್ರಿಟನ್, ಕೊರಿಯಾ ಮತ್ತು ಫ್ರಾನ್ಸ್ ದೇಶಗಳಲ್ಲಿ ನಡೆದಿದ್ದವು. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಸಮಾವೇಶ ನಡೆಯುತ್ತಿರುವುದು. ಸಮಾವೇಶದಲ್ಲಿ ಏಳು ಅಂಶಗಳ ಥೀಮ್ ಒಳಗೊಳ್ಳಲಾಗಿದೆ. ಮಾನವ ಸಂಪನ್ಮೂಲ, ಒಳಗೊಳ್ಳುವಿಕೆ, ನಂಬಿಕೆ, ಪುಟಿದೇಳುವಿಕೆ, ವಿಜ್ಞಾನ, ಸಂಪನ್ಮೂಲ, ಸಾಮಾಜಿಕ ಒಳಿತು, ಈ ಅಂಶಗಳ ಆಧಾರದ ಮೇಲೆ ಜಾಗತಿಕ ಸಹಭಾಗಿತ್ವಗಳನ್ನು ಸೇರಿಸುವುದಕ್ಕೆ ಗಮನ ಕೊಡಲಾಗುತ್ತದೆ.

ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಪ್ರತೀ ದಿನ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳು ನಡೆಯುತ್ತವೆ. ಎಐ ಕ್ಷೇತ್ರದಲ್ಲಿ ಆಗಿರುವ ಹೊಸ ಹೊಸ ಆವಿಷ್ಕಾರಗಳ ಪ್ರದರ್ಶನಗಳನ್ನು ಕಾಣಬಹುದು. ವಿವಿಧ ಸ್ಟಾರ್ಟಪ್​ಗಳು ತಮ್ಮ ಉತ್ಪನ್ನಗಳನ್ನು ತೋರ್ಪಡಿಸುತ್ತಿವೆ. 300ಕ್ಕೂ ಹೆಚ್ಚು ಪ್ರದರ್ಶಕರು ಈ ಸಮಾವೇಶದಲ್ಲಿ ಕಾರ್ಯನಿರತರಾಗಿರುತ್ತಾರೆ.

ವಿವಿಧ ದೇಶಗಳ ಪ್ರಧಾನಿ, ಅಧ್ಯಕ್ಷ ಅಥವಾ ಉನ್ನತ ಸ್ತರದ ನಾಯಕರುಗಳು, ಸಚಿವರುಗಳು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಓಪನ್ ಎಐ, ಗೂಗಲ್, ಎನ್​ವಿಡಿಯಾ, ಮೈಕ್ರೋಸಾಫ್ಟ್, ರಿಲಾಯನ್ಸ್, ಆಂಥ್ರೋಪಿಕ್ ಇತ್ಯಾದಿ ದೈತ್ಯ ಕಂಪನಿಗಳ ಪಾತಿನಿಧ್ಯವನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: ಭಾರತದ ಎಐ ಇಂಪ್ಯಾಕ್ಟ್ ಸಮಿಟ್​ಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?

ಜಾಗತಿಕ ಟೆಕ್ ದಿಗ್ಗಜ ಸಂಸ್ಥೆಗಳು ಭಾರತದಲ್ಲಿ ಎಐ ಅಭಿವೃದ್ಧಿಗೆ ಬಂಡವಾಳ ಹೂಡಿಕೆ ಮಾಡಬಹುದು. ಭಾರತದ ಎಐ ಯೋಜನೆಗಳು ಜಗತ್ತಿನ ಗಮನ ಸೆಳೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ
ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ
ಜೈಲಿನಲ್ಲೇ ದರ್ಶನ್ ಹುಟ್ಟುಹಬ್ಬ: ವಿಶ್ ಮಾಡಲು ಬಂದ ವಿಜಯಲಕ್ಷ್ಮಿ, ಧನ್ವೀರ್
ಜೈಲಿನಲ್ಲೇ ದರ್ಶನ್ ಹುಟ್ಟುಹಬ್ಬ: ವಿಶ್ ಮಾಡಲು ಬಂದ ವಿಜಯಲಕ್ಷ್ಮಿ, ಧನ್ವೀರ್
ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ
ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ
ರಣಜಿ ಟ್ರೋಫಿ ಸೆಮಿಫೈನಲ್‌; ಸ್ಮರಣೀಯ ಶತಕ ಸಿಡಿಸಿದ ಸ್ಮರಣ್
ರಣಜಿ ಟ್ರೋಫಿ ಸೆಮಿಫೈನಲ್‌; ಸ್ಮರಣೀಯ ಶತಕ ಸಿಡಿಸಿದ ಸ್ಮರಣ್
ಭಾರತದ ವಿರುದ್ಧ ಸೋಲು; ಪಾಕಿಸ್ತಾನದಲ್ಲಿ ಟಿವಿಗಳು ಪುಡಿಪುಡಿ
ಭಾರತದ ವಿರುದ್ಧ ಸೋಲು; ಪಾಕಿಸ್ತಾನದಲ್ಲಿ ಟಿವಿಗಳು ಪುಡಿಪುಡಿ
ಅಪಘಾತಕ್ಕೆ 2 ವರ್ಷದ ಮಗು ಬಲಿ: ರಸ್ತೆ ದುಃಸ್ಥಿತಿ ಖಂಡಿಸಿ ಪ್ರತಿಭಟನೆ
ಅಪಘಾತಕ್ಕೆ 2 ವರ್ಷದ ಮಗು ಬಲಿ: ರಸ್ತೆ ದುಃಸ್ಥಿತಿ ಖಂಡಿಸಿ ಪ್ರತಿಭಟನೆ
ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಮಣಿಶಂಕರ್ ಅಯ್ಯರ್
ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಮಣಿಶಂಕರ್ ಅಯ್ಯರ್
ನಾಪತ್ತೆಯಾದ ಮಹಿಳೆ ಪರಪುರುಷನ ಮನೆಯಲ್ಲಿ ಪತ್ತೆ: ಇಲ್ಲಿದೆ Exclusive ದೃಶ್ಯ
ನಾಪತ್ತೆಯಾದ ಮಹಿಳೆ ಪರಪುರುಷನ ಮನೆಯಲ್ಲಿ ಪತ್ತೆ: ಇಲ್ಲಿದೆ Exclusive ದೃಶ್ಯ
ಮಿತಿಮೀರಿ ನಡೆದುಕೊಂಡ ದರ್ಶನ್ ಅಭಿಮಾನಿಗೆ ಪೊಲೀಸ್ ಅಧಿಕಾರಿಯಿಂದ ಕಪಾಳಮೋಕ್ಷ
ಮಿತಿಮೀರಿ ನಡೆದುಕೊಂಡ ದರ್ಶನ್ ಅಭಿಮಾನಿಗೆ ಪೊಲೀಸ್ ಅಧಿಕಾರಿಯಿಂದ ಕಪಾಳಮೋಕ್ಷ