Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಸಾರಿಯಲ್ಲಿ ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ; ಫೋಟೊ ವೈರಲ್

8 ವರ್ಷಗಳ ಹಿಂದೆ ಗುಜರಾತ್‌ನ ಜನರು ತಮ್ಮನ್ನು ದೆಹಲಿಗೆ ಕಳುಹಿಸಿದ್ದನ್ನು ಮೋದಿ ನೆನಪಿಸಿಕೊಂಡರು. ಕಳೆದ 8 ವರ್ಷಗಳಲ್ಲಿ, ಅಭಿವೃದ್ಧಿ ಪ್ರಕ್ರಿಯೆ ಮತ್ತು ಆಕಾಂಕ್ಷೆಗಳೊಂದಿಗೆ ಜನರು ಮತ್ತು ಪ್ರದೇಶಗಳ ಅನೇಕ ಹೊಸ ವಿಭಾಗಗಳನ್ನು ಜೋಡಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ನವಸಾರಿಯಲ್ಲಿ ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ; ಫೋಟೊ ವೈರಲ್
ಮಾಜಿ ಶಿಕ್ಷಕರನ್ನು ಭೇಟಿ ಮಾಡಿದ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 10, 2022 | 7:25 PM

ನವಸಾರಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಗುಜರಾತ್‌ನ ನವಸಾರಿ (Navsari) ಜಿಲ್ಲೆಯಲ್ಲಿ ವಡೋದರಾದ (Vadodara) ತಮ್ಮ ಮಾಜಿ ಶಾಲಾ ಶಿಕ್ಷಕರನ್ನು ಭೇಟಿಯಾದರು. ನವಸಾರಿಯಲ್ಲಿ ಮೋದಿ  ಸುಮಾರು 3,050 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು. ತಮ್ಮ ಮಾಜಿ ಶಾಲಾ ಶಿಕ್ಷಕರೊಂದಿಗೆ ಪ್ರಧಾನಿ ಮೋದಿಯವರ ಭಾವನಾತ್ಮಕ ಪುನರ್ಮಿಲನದ ಚಿತ್ರವು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ ಪ್ರಧಾನಿಯವರು ತಮ್ಮ ಮಾಜಿ ಶಿಕ್ಷಕರನ್ನು ಕೈಮುಗಿದು ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಮೋದಿಯವರು 7 ಯೋಜನೆಗಳ ಉದ್ಘಾಟನೆ, 12 ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ 14 ಯೋಜನೆಗಳಿಗೆ ಭೂಮಿಪೂಜೆ ನೆರವೇರಿಸಿದ್ದಾರೆ. ನವಸಾರಿಯಲ್ಲಿ ‘ಗುಜರಾತ್ ಗೌರವ್ ಅಭಿಯಾನ’ದ ಸಮಯದಲ್ಲಿ ಪ್ರಾರಂಭಿಸಲಾದ ಈ ಯೋಜನೆಗಳು ಈ ಪ್ರದೇಶದಲ್ಲಿ ನೀರಿನ ಪೂರೈಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಸಂಪರ್ಕ ಮತ್ತು ಜೀವನ ಸೌಕರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪಿಐಬಿ ಅಧಿಕೃತ ಪ್ರಕಟಣೆ ತಿಳಿಸಿದೆ. ‘ಗುಜರಾತ್ ಗೌರವ ಅಭಿಯಾನ’ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಡಬಲ್ ಇಂಜಿನ್ ಸರ್ಕಾರವು ಈ ವೈಭವಯುತ ಸಂಪ್ರದಾಯವನ್ನು ಪ್ರಾಮಾಣಿಕವಾಗಿ ಮುನ್ನಡೆಸುತ್ತಿದೆ. ಈ ಅಭಿವೃದ್ಧಿ ಯೋಜನೆಗಳು ದಕ್ಷಿಣ ಗುಜರಾತ್‌ನ ಸೂರತ್, ನವಸಾರಿ, ವಲ್ಸಾದ್ ಮತ್ತು ತಾಪಿ ಜಿಲ್ಲೆಗಳ ಜನರ ಜೀವನವನ್ನು ಸುಲಭಗೊಳಿಸುತ್ತದೆ ಎಂದು ಹೇಳಿದ್ದಾರೆ.

8 ವರ್ಷಗಳ ಹಿಂದೆ ಗುಜರಾತ್‌ನ ಜನರು ತಮ್ಮನ್ನು ದೆಹಲಿಗೆ ಕಳುಹಿಸಿದ್ದನ್ನು ಮೋದಿ ನೆನಪಿಸಿಕೊಂಡರು. ಕಳೆದ 8 ವರ್ಷಗಳಲ್ಲಿ, ಅಭಿವೃದ್ಧಿ ಪ್ರಕ್ರಿಯೆ ಮತ್ತು ಆಕಾಂಕ್ಷೆಗಳೊಂದಿಗೆ ಜನರು ಮತ್ತು ಪ್ರದೇಶಗಳ ಅನೇಕ ಹೊಸ ವಿಭಾಗಗಳನ್ನು ಜೋಡಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ
Image
ಜೂನ್ 11 ರಂದು ‘ತನ್ನನ್ನು ತಾನು ಮದುವೆಯಾಗಬೇಕಿದ್ದ’ ಕ್ಷಮಾ 3 ದಿನ ಮೊದಲೇ ಮಂಗಳ ಕಾರ್ಯ ನೆರವೇರಿಸಿಕೊಂಡರು!!
Image
Amul: ಪ್ಲಾಸ್ಟಿಕ್ ಸ್ಟ್ರಾ ಬ್ಯಾನ್ ಮಾಡದಂತೆ ಪ್ರಧಾನಿ ಮೋದಿಗೆ ಅಮುಲ್ ಮನವಿ; ಕಾರಣವೇನು?
Image
ವ್ಯತ್ಯಾಸ ನೋಡಿ!; ED ನೋಟಿಸ್​ಗೆ ಹೋರಾಟಕ್ಕೆ ಕರೆ ಕೊಟ್ಟ ರಾಹುಲ್ ಗಾಂಧಿ: 2010ರಲ್ಲಿ SIT ತನಿಖೆಗೆ ಸಹಕರಿಸಿದ್ದ ಮೋದಿ

ಬಡವರು, ವಂಚಿತರು, ದಲಿತರು, ಬುಡಕಟ್ಟುಗಳು, ಮಹಿಳೆಯರು ಮತ್ತು ಇತರ ದುರ್ಬಲ ವರ್ಗಗಳು ತಮ್ಮ ಸಂಪೂರ್ಣ ಜೀವನವನ್ನು ಕೇವಲ ಮೂಲಭೂತ ಅಗತ್ಯಗಳಿಗಾಗಿ ಕಳೆಯುತ್ತಿದ್ದ ಕಾಲವಿತ್ತು. ಹಿಂದಿನ ಸರ್ಕಾರಗಳು ಅಭಿವೃದ್ಧಿಯನ್ನು ತಮ್ಮ ಆದ್ಯತೆಯನ್ನಾಗಿ ಮಾಡಲಿಲ್ಲ, ಹೆಚ್ಚಿನ ಅಗತ್ಯವಿರುವ ವಿಭಾಗಗಳು ಮತ್ತು ಪ್ರದೇಶಗಳು ಸೌಲಭ್ಯಗಳಿಂದ ವಂಚಿತವಾಗಿವೆ.

ತಾಪಿ, ನವಸಾರಿ ಮತ್ತು ಸೂರತ್ ಜಿಲ್ಲೆಗಳ ನಿವಾಸಿಗಳಿಗೆ 961 ಕೋಟಿ ರೂ.ಗಳ 13 ನೀರು ಸರಬರಾಜು ಯೋಜನೆಗಳಿಗೆ ಪ್ರಧಾನಿ ಭೂಮಿಪೂಜೆ ನೆರವೇರಿಸಿದರು. ನವಸಾರಿ ಜಿಲ್ಲೆಯ ಸುಮಾರು 542 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವೈದ್ಯಕೀಯ ಕಾಲೇಜಿನ ಭೂಮಿಪೂಜೆಯನ್ನೂ ಪ್ರಧಾನಿ ನೆರವೇರಿಸಿದ್ದಾರೆ. ಸುಮಾರು 586 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮಧುಬನ್ ಅಣೆಕಟ್ಟು ಆಧಾರಿತ ಅಸ್ಟೋಲ್ ಪ್ರಾದೇಶಿಕ ನೀರು ಸರಬರಾಜು ಯೋಜನೆಯನ್ನು ಮೋದಿ ಉದ್ಘಾಟಿಸಿದ್ದ, 163 ಕೋಟಿ ರೂ.ಗಳ ‘ನಲ್ ಸೇ ಜಲ್’ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಈ ಯೋಜನೆಗಳು ಸೂರತ್, ನವಸಾರಿ, ವಲ್ಸಾದ್ ಮತ್ತು ತಾಪಿ ಜಿಲ್ಲೆಗಳ ನಿವಾಸಿಗಳಿಗೆ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುತ್ತವೆ.

ಸೂರತ್, ನವಸಾರಿ, ವಲ್ಸಾದ್ ಮತ್ತು ತಾಪಿ ಜಿಲ್ಲೆಗಳ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು 549 ಕೋಟಿ ರೂಪಾಯಿ ಮೌಲ್ಯದ 8 ನೀರು ಸರಬರಾಜು ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮಾಡಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 7:20 pm, Fri, 10 June 22

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !