ಹ್ಯುಂಡೈ ಟ್ಯೂಸಾನ್ ಫೇಸ್ಲಿಫ್ಟ್ ಅನಾವರಣ
ಬೆಂಗಳೂರು, ಆಗಸ್ಟ್ 18: ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ (3D Printed Post Office) ನಿರ್ಮಾಣ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಹಲಸೂರು ಬಳಿಯ ಕೇಂಬ್ರಿಡ್ಜ್ ಲೇಔಟ್ನಲ್ಲಿ ಎಲ್ ಅಂಡ್ ಟಿ ಸಂಸ್ಥೆ 3ಡಿ ಪ್ರಿಂಟಿಂಗ್ ಟೆಕ್ನಾಲಜಿ ಬಳಸಿ ನಿರ್ಮಿಸಲಾಗಿರುವ ಅಂಚೆ ಕಚೇರಿ ಬಗ್ಗೆ ಮೋದಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಇದು ಭಾರತದಲ್ಲಿ ಯಾವುದೇ ಸರ್ಕಾರಿ ಕಟ್ಟಡವೊಂದನ್ನು 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ನಿರ್ಮಿಸಿದ್ದು ಇದೇ ಮೊದಲು.
‘ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ನಲ್ಲಿ ಭಾರತದ ಮೊದಲ 3ಡಿ ಪ್ರಿಂಟೆಡ್ ಪೋಸ್ಟ್ ಆಫೀಸ್ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಆಗುತ್ತದೆ. ನಮ್ಮ ದೇಶದ ಪ್ರಗತಿ ಮತ್ತು ನಾವೀನ್ಯತೆಗೆ ಇದು ನಿದರ್ಶನವಾಗಿದೆ. ಸ್ವಾವಲಂಬಿ ಭಾರತದ ಆಶಯಕ್ಕೆ ಇದು ದ್ಯೋತಕವಾಗಿದೆ. ಪೋಸ್ಟ್ ಆಫೀಸ್ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಶ್ರಮಿಸಿದವರಿಗೆ ಅಭಿನಂದನೆಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Every Indian would be proud to see India’s first 3D printed Post Office at Cambridge Layout, Bengaluru. A testament to our nation’s innovation and progress, it also embodies the spirit of a self-reliant India. Compliments to those who have worked hard in ensuring the Post… pic.twitter.com/Y4TrW4nEhZ
— Narendra Modi (@narendramodi) August 18, 2023
ಎಲ್ ಅಂಡ್ ಟಿ ಸಂಸ್ಥೆ 1,100 ಚದರಡಿ ಸ್ಥಳದಲ್ಲಿ 3ಡಿ ಪ್ರಿಂಟಿಂಗ್ ಟೆಕ್ನಾಲಜಿ ಬಳಸಿ ಅಂಚೆ ಕಚೇರಿ ನಿರ್ಮಿಸಿದೆ. ಕೇವಲ 44 ದಿನಗಳಲ್ಲಿ ಇದನ್ನು ಕಟ್ಟಲಾಗಿದ್ದು, 23ರಿಂದ 26 ಲಕ್ಷ ರೂ ವೆಚ್ಚವಾಗಿರುವುದು ತಿಳಿದುಬಂದಿದೆ.
3ಡಿ ಮುದ್ರಿತ ಟೆಕ್ನಾಲಜಿ ಬಳಸಿ ಕಟ್ಟಡ ನಿರ್ಮಿಸಿದರೆ ವೆಚ್ಚ ಶೇ. 40ರಷ್ಟು ಕಡಿಮೆ ಆಗುತ್ತದೆ. ಎಲ್ ಅಂಡ್ ಸಂಸ್ಥೆ ತಮಿಳುನಾಡಿನ ಕಾಂಚೀಪುರಂನಲ್ಲಿ 3ಡಿ ಪ್ರಿಂಟಿಂಗ್ ಕೇಂದ್ರ ಹೊಂದಿದ್ದು ಕಟ್ಟಡದ ಹಲವು ಭಾಗಗಳನ್ನು ಅಲ್ಲಿಯೇ ತಯಾರು ಮಾಡಿ, ಬಳಿಕ ಬೆಂಗಳೂರಿಗೆ ತಂದು ಅಸೆಂಬಲ್ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿಗನ ಖಾತೆಯಿಂದ 90 ಲಕ್ಷ ಹಣ ಕಾಣದಂತೆ ಮಾಯ; ಖದೀಮರು 2 ವರ್ಷದಲ್ಲಿ5,000 ಬಾರಿ ಕನ್ನ ಹಾಕಿದರೂ ಗೊತ್ತಾಗದೇಹೋಯಿತಾ?
ಭಾರತದಲ್ಲಿ 3ಡಿ ಪ್ರಿಂಟಿಂಗ್ ಬಳಸಿ ಕಟ್ಟಡ ನಿರ್ಮಿಸಿರುವುದು ಇದೇ ಮೊದಲಲ್ಲ. ಆದರೆ, ಈ ತಂತ್ರಜ್ಞಾನದಲ್ಲಿ ಕಟ್ಟಡಲಾದ ಮೊದಲ ಸರ್ಕಾರಿ ಕಟ್ಟಡ ಎಂಬ ಶ್ರೇಯಸ್ಸು ಬೆಂಗಳೂರಿನ ಈ ಅಂಚೆ ಕಚೇರಿಯದ್ದಾಗಿದೆ. ಎಲ್ ಅಂಡ್ ಮೂರು ವರ್ಷಗಳ ಹಿಂದೆ ಈ ತಂತ್ರಜ್ಞಾನದಲ್ಲಿ ಕಟ್ಟಡವೊಂದನ್ನು ಕಟ್ಟಿತ್ತು. ವಿಶ್ವದ ಹಲವು ಕಡೆ 3ಡಿ ಪ್ರಿಂಟೆಡ್ ಟೆಕ್ನಾಲಜಿಯಲ್ಲಿ ಕಟ್ಟಡಗಳನ್ನು ಕಟ್ಟಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Fri, 18 August 23