AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮಂದಿರ ದಿನಕ್ಕೆ ಮೋದಿಗೆ ವಿಶೇಷ ಉಡುಗೊರೆ; ತಾಯಿಯ ನೆನೆದು ಭಾವುಕರಾದ ಪ್ರಧಾನಿ

ಪಶ್ಚಿಮ ಬಂಗಾಳದಲ್ಲಿ ನಡೆದ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇಂದು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಮೋದಿ ಅಲ್ಲಿ ನೆರೆದಿದ್ದ ಮಹಿಳೆಯರಿಗೆ ತಾಯಂದಿರ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ಅಮ್ಮಂದಿರ ದಿನಕ್ಕೆ ಮೋದಿಗೆ ವಿಶೇಷ ಉಡುಗೊರೆ; ತಾಯಿಯ ನೆನೆದು ಭಾವುಕರಾದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ- ತಾಯಿ ಹೀರಾಬೆನ್
ಸುಷ್ಮಾ ಚಕ್ರೆ
|

Updated on: May 12, 2024 | 3:33 PM

Share

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಲೋಕಸಭಾ ಚುನಾವಣಾ (Lok Sabha Elections) ರ್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ಅಲ್ಲಿ ನೆರೆದಿದ್ದ ಕೆಲವು ಜನರು ಸರ್​ಪ್ರೈಸ್ ಉಡುಗೊರೆಯೊಂದನ್ನು ನೀಡಿದ್ದಾರೆ. ಅಲ್ಲಿ ಕೆಲವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿಯ ಚಿತ್ರಗಳನ್ನು ಹಿಡಿದು ನಿಂತಿದ್ದರು. ಈ ವೇಳೆ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿ, ನೀವು ಬಹಳ ಸಮಯದಿಂದ ಕೈ ಎತ್ತಿ ನಿಂತಿದ್ದೀರಿ, ನೀವು ನನ್ನ ತಾಯಿಯ ಚಿತ್ರವನ್ನೂ ತಂದಿದ್ದೀರಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಪ್ರಧಾನಿ ಮೋದಿಯವರ ಹೃದಯ ಗೆದ್ದ ಫೋಟೋದ ವಿಡಿಯೋ ಇದೀಗ ವೈರಲ್ ಆಗಿದೆ.

ನನ್ನ ವಾರಸುದಾರರಿಗೆ, ನನ್ನ ದೇಶವಾಸಿಗಳಿಗೆ, ನಾನು ಪಕ್ಕಾ ಮನೆಗಳನ್ನು ಒದಗಿಸುತ್ತೇನೆ, ನಲ್ಲಿ ನೀರನ್ನು ಒದಗಿಸುತ್ತೇನೆ ಮತ್ತು ನನ್ನ ತಾಯಿ ಮತ್ತು ಸಹೋದರಿಯರಿಗೆ ಪೋಷಣೆ ಮತ್ತು ಭದ್ರತೆಯನ್ನು ಖಚಿತಪಡಿಸುತ್ತೇನೆ ಎಂದು ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿಗೆ ಮಾಡಿದ ಅವಮಾನ; ರಾಮ ಮಂದಿರ ಶುದ್ಧೀಕರಣ ಹೇಳಿಕೆಗೆ ಪ್ರಧಾನಿ ಮೋದಿ ಅಸಮಾಧಾನ

ಈ ವೇಳೆ ವಿಶ್ವ ಅಮ್ಮಂದಿರ ದಿನದ ಶುಭಾಶಯಗಳನ್ನು ತಿಳಿಸಿದ ಮೋದಿ, ಭಾರತೀಯರು ಪ್ರತಿದಿನ ತಾಯಂದಿರ ದಿನವನ್ನು ಆಚರಿಸುತ್ತಾರೆ. ನಾವು ನಮ್ಮ ಸ್ವಂತ ತಾಯಂದಿರಿಗೆ ಮಾತ್ರವಲ್ಲದೆ ದುರ್ಗಾ, ಕಾಳಿ ಮತ್ತು ಭಾರತ ಮಾತೆಯಂತಹ ದೇವತೆಗಳನ್ನೂ ತಾಯಿಯಂತೆ ಪೂಜಿಸುತ್ತೇವೆ ಎಂದು ಹೇಳಿದ್ದಾರೆ.

ಇಂದು ಬೆಳಗ್ಗೆ ಹೂಗ್ಲಿ ರ್ಯಾಲಿಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಮತ್ತು ತಮ್ಮ ತಾಯಿಯ ರೇಖಾಚಿತ್ರವನ್ನು ಹಿಡಿದು ನಿಂತಾಗ ಅದನ್ನು ಕಂಡು ಪ್ರಧಾನಿ ಮೋದಿ ಭಾವುಕರಾದರು. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಕಳೆದ ವರ್ಷ ನಿಧನರಾದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ