ಭಾರತ್ ಮಂಟಪ ಮುಂಭಾಗದಲ್ಲಿ ಸ್ಥಾಪಿಸಿರುವ ನಟರಾಜ ಮೂರ್ತಿ ಚಿತ್ರ; ಎಕ್ಸ್ ಖಾತೆಯ ಕವರ್ ಇಮೇಜ್ ಬದಲಿಸಿದ ಮೋದಿ

ಪ್ರಕಾಶಮಾನವಾಗಿ ಬೆಳಗುತ್ತಿರುವ ಭಾರತ ಮಂಟದ ಮುಂದೆ ನಟರಾಜ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಫೋಟೊವನ್ನು ಮೋದಿ ತಮ್ಮ ಎಕ್ಸ್ ಖಾತೆಯ ಕವರ್ ಇಮೇಜ್ ಆಗಿ ಬಳಸಿದ್ದಾರೆ. ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಭಾರತ್ ಮಂಟಪ ಮುಂಭಾಗದಲ್ಲಿ ಸ್ಥಾಪಿಸಿರುವ ನಟರಾಜ ಮೂರ್ತಿ ಚಿತ್ರ; ಎಕ್ಸ್ ಖಾತೆಯ ಕವರ್ ಇಮೇಜ್ ಬದಲಿಸಿದ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Sep 08, 2023 | 6:28 PM

ದೆಹಲಿ ಸೆಪ್ಟೆಂಬರ್ 08: ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ತಮ್ಮ ಎಕ್ಸ್ ಖಾತೆಯ ಕವರ್ ಇಮೇಜ್ ಬದಲಿಸಿದ್ದಾರೆ. G20 ಶೃಂಗಸಭೆಯ (G20 Summit) ಅಧಿಕೃತ ಸ್ಥಳವಾದ ಭಾರತ್ ಮಂಟಪದ ಮುಂದೆ ಸ್ಥಾಪಿಸಲಾದ ಬೃಹತ್ ನಟರಾಜನ (Nataraja statue) ಪ್ರತಿಮೆಯ ಚಿತ್ರವನ್ನು ಮೋದಿ ಇಲ್ಲಿ ಬಳಸಿದ್ದಾರೆ.ಪ್ರಕಾಶಮಾನವಾಗಿ ಬೆಳಗುತ್ತಿರುವ ಭಾರತ ಮಂಟದ ಮುಂದೆ ನಟರಾಜ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ನವದೆಹಲಿಯ ಭಾರತ್ ಮಂಟಪಂ ಎಂದೂ ಕರೆಯಲ್ಪಡುವ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ (ಐಇಸಿಸಿ) ಸಂಕೀರ್ಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಈ ವರ್ಷ ಜುಲೈ 26 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಕೀರ್ಣವನ್ನು ಉದ್ಘಾಟಿಸಿದ್ದರು.

ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ (IGNCA) ಪ್ರಕಾರ, 18 ಟನ್ ತೂಕದ ನಟರಾಜ ಪ್ರತಿಮೆಯು ಅಷ್ಟಧಾತು (ಎಂಟು ಲೋಹಗಳು) ನಿರ್ಮಿತ ಪ್ರತಿಮೆಯಾಗಿದೆ. ತಾಮ್ರ, ಸತು, ಸೀಸ, ತವರ, ಬೆಳ್ಳಿ, ಚಿನ್ನ, ಪಾದರಸ ಮತ್ತು ಕಬ್ಬಿಣ ಹೀಗೆ ಎಂಟು ಲೋಹಗಳೇ ಅಷ್ಟಧಾತು.ಭಗವಾನ್ ಶಿವನನ್ನು ‘ನೃತ್ಯದ ಅಧಿಪತಿ’ (ನಟರಾಜ)ಎಂದು ಸಂಕೇತಿಸುವ ಪ್ರತಿಮೆಯನ್ನು ಭಾರತ ಮಂಟಪದ ಮುಂಭಾಗದಲ್ಲಿ ಸ್ಥಾಪಿಸಲಾಗಿದೆ.ತಮಿಳುನಾಡಿನ ಸ್ವಾಮಿ ಮಲೈಯ ಶಿಲ್ಪಿ ರಾಧಾಕೃಷ್ಣನ್ ಸ್ಥಪತಿ ಮತ್ತು ಅವರ ತಂಡವು ಏಳು ತಿಂಗಳಲ್ಲಿ ಈ ಶಿಲ್ಪವನ್ನು ನಿರ್ಮಾಣ ಮಾಡಿದ್ದರು.

ತಮಿಳುನಾಡಿನಿಂದಲೇ ಬಂದಿತ್ತು ಸೆಂಗೋಲ್, ಈಗ ನಟರಾಜ ಪ್ರತಿಮೆ

ಹೊಸ ಸಂಸತ್ತಿನ ಕಟ್ಟಡದಲ್ಲಿರುವ ಸೆಂಗೋಲ್‌ನಿಂದ ಭಾರತ ಮಂಟಪದ ನಟರಾಜ ಪ್ರತಿಮೆಯವರೆಗೆ, ಕಾಶಿ ತಮಿಳು ಸಂಗಮದಿಂದ ಹಿಡಿದು ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ತಿರುಕ್ಕುರಲ್‌ನ ಉಲ್ಲೇಖ- ಇವೆಲ್ಲವೂ ತಮಿಳು ಸಂಸ್ಕೃತಿ ಮತ್ತು ಚೋಳರ ಕಾಲದ ಗತವೈಭವವನ್ನು ಸಾರುವ ಕುರುಹುಗಳು. ಬಿಜೆಪಿ ಸರ್ಕಾರ ತಮಿಳು ಸಂಸ್ಕೃತಿಗೆ ಏಕೆ ಒತ್ತು ನೀಡಿತ್ತಿದ್ದು, ಇದು ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಫಲ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ತಮಿಳುನಾಡಿನಲ್ಲಿ ಬಿಜೆಪಿ ಎಂದಿಗೂ ದೊಡ್ಡ ಚುನಾವಣಾ ಯಶಸ್ಸನ್ನು ಕಂಡಿಲ್ಲ. ಇದು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ದಕ್ಷಿಣದ ರಾಜ್ಯದಲ್ಲಿ ಸ್ಥಾನಗಳನ್ನು ಗಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಈಗ ಸತತ ಎರಡು ಅವಧಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ತಮಿಳುನಾಡಿನಿಂದ ಬಿಜೆಪಿ ಗೆಲ್ಲುವ ಲೋಕಸಭಾ ಸ್ಥಾನಗಳ ಸಂಖ್ಯೆ ನಿರ್ಣಾಯಕವಾಗಿದೆ. ಆದ್ದರಿಂದ, ಸಾಂಸ್ಕೃತಿಕ ಸಂಪರ್ಕದ ವಿಷಯಗಳನ್ನು ಹೈಲೈಟ್ ಮಾಡಲು ಪ್ರಯತ್ನಿಸುತ್ತಿದೆ.

ಹೊಸ ಸಂಸತ್ ಕಟ್ಟಡದಲ್ಲಿರುವ ಸೆಂಗೋಲ್ ಕೂಡ ಚೋಳರ ಕಾಲದ್ದು. ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ನೀಡಲಾದ ಸೆಂಗೋಲ್ 1947 ರಲ್ಲಿ ಭಾರತೀಯರಿಗೆ ಅಧಿಕಾರದ ಹಸ್ತಾಂತರವನ್ನು ಸೂಚಿಸುತ್ತದೆ. ಸೆಂಗೋಲ್ ತಮಿಳುನಾಡನ್ನು ಆಳಿದ ಚೇರ, ಚೋಳ, ಪಾಂಡಿಯರ್ ಮತ್ತು ಪಲ್ಲವ ರಾಜವಂಶಗಳ ನಡುವೆ ಅಧಿಕಾರದ ವರ್ಗಾವಣೆಯ ಸೂಚಕವಾಗಿದೆ. ನೆಹರೂ ಅವರಿಗೆ ನೀಡಲಾದ ಐತಿಹಾಸಿಕ ಸೆಂಗೋಲ್​​ನ್ನು ಅಲಹಾಬಾದ್ ಮ್ಯೂಸಿಯಂನಲ್ಲಿರಿಸಲಾಗಿತ್ತು. ಇದನ್ನು ಈಗ ನೂತನ ಸಂಸತ್ ಭವನದಲ್ಲಿ ಸ್ಥಾಪಿಸಲಾಗಿದೆ.

ವೆಲ್ಲೂರಿನಲ್ಲಿ ನಡೆದ ರ್ಯಾಲಿಯಲ್ಲಿ ಬೆಳ್ಳಿ ಸೆಂಗೋಲ್ ಹಿಡಿದ ಅಮಿತ್ ಶಾ, ಎನ್‌ಡಿಎಯ 25 ಸಂಸದರನ್ನು ಸಂಸತ್ತಿಗೆ ಕಳುಹಿಸುವಂತೆ ತಮಿಳುನಾಡಿನ ಜನರನ್ನು ಒತ್ತಾಯಿಸಿದರು. ನರೇಂದ್ರ ಮೋದಿಯವರು ಚೋಳ ಸಾಮ್ರಾಜ್ಯದ ಸಂಕೇತವಾದ ಸೆಂಗೋಲ್ ಅನ್ನು ಸ್ಥಾಪಿಸಿದರು. ಕೃತಜ್ಞತೆಯ ಸಂಕೇತವಾಗಿ ತಮಿಳುನಾಡಿನ ಜನರು 25 ಎನ್‌ಡಿಎ ಸಂಸದರನ್ನು ಆಯ್ಕೆ ಮಾಡಬೇಕು’ ಎಂದು ಶಾ ಹೇಳಿದ್ದರು.

2019 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಷಣದಲ್ಲಿ ಪಿಎಂ ಮೋದಿ ಸ್ವತಃ ತಮಿಳು ಶಾಸ್ತ್ರೀಯ ಪಠ್ಯ ತಿರುಕ್ಕುರಲ್ ಮತ್ತು ಪ್ರಸಿದ್ಧ ಗಾದೆಯಾದ ‘ಯದುಮ್ ಊರೇ, ಯಾವರುಮ್ ಕೇಳಿರ್’ (“ಎಲ್ಲಾ ಸ್ಥಳಗಳು ನಮ್ಮದು, ಎಲ್ಲಾ ಮಾನವರು ನಮ್ಮ ಸಂಬಂಧಿಕರು”) ಅನ್ನು ಬಳಸಿದ್ದಾರೆ.

ಇದನ್ನೂ ಓದಿ: G20 ನಡೆಯಲಿರುವ ಭಾರತ ಮಂಟಪದಲ್ಲಿ ಶಿವ ನಟರಾಜನ ಅಷ್ಟಧಾತು ಪ್ರತಿಮೆ ಸ್ಥಾಪನೆ; ಏನಿದರ ವಿಶೇಷತೆ?

ಈ ವರ್ಷವೂ ತಮ್ಮ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ, ಪಿಎಂ ಮೋದಿ ಅವರು ಇಡೀ ಪ್ರಪಂಚದಲ್ಲಿ ತಮಿಳು ಅತ್ಯಂತ ಹಳೆಯ ಭಾಷೆ ಎಂದು ಮಕ್ಕಳಿಗೆ ನೆನಪಿಸಿದ್ದು,  ಭಾಷೆ ಕಲಿಯುವಂತೆ ಒತ್ತಾಯಿಸಿದರು.

ಕಳೆದ ವರ್ಷ, ತಮಿಳುನಾಡಿನಿಂದ ಯುವ ನಿಯೋಗವನ್ನು ಕಾಶಿ ತಮಿಳು ಸಂಗಮಂಗಾಗಿ ಪ್ರಧಾನಿ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಕಳುಹಿಸಲಾಗಿತ್ತು. ಕಾಶಿ ಮತ್ತು ತಮಿಳುನಾಡು ನಡುವೆ ನೇರ ನಾಗರಿಕ ಸಂಬಂಧವನ್ನು ಸೆಳೆಯಲು, ಕಾಶಿ-ತಮಿಳು ಸಂಗಮವು ಗಂಗಾ-ಯಮುನಾ ಸಂಗಮದಷ್ಟೇ ಪವಿತ್ರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್