PM-WANI: ರೈಲ್​ಟೆಲ್​ನಿಂದ 100 ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಆಧಾರಿತ ಪಿಎಂ ವಾಣಿ ಯೋಜನೆಗೆ ಚಾಲನೆ

PM-WANI: ರೈಲ್​ಟೆಲ್​ನಿಂದ 100 ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಆಧಾರಿತ ಪಿಎಂ ವಾಣಿ ಯೋಜನೆಗೆ ಚಾಲನೆ
ವೈಫೈ
Image Credit source: PTI

RailTel: ರೈಲ್ವೇ ನಿಲ್ದಾಣಗಳಲ್ಲಿ ಈ PM-WANI ವೈ-ಫೈ ಸೇವೆಯನ್ನು ಪಡೆಯಲು ಗೂಗಲ್ ಪ್ಲೇ ಸ್ಟೋರ್​​ನಿಂದ ಆ್ಯಂಡ್ರಾಯ್ಡ್​ ಆಧಾರಿತ ಅಪ್ಲಿಕೇಶನ್ Wi-DOT ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. 

TV9kannada Web Team

| Edited By: Sushma Chakre

May 11, 2022 | 8:22 PM

ನವದೆಹಲಿ: ರೈಲ್ವೆ ಸಚಿವಾಲಯದಿಂದ ಮಿನಿ ರತ್ನ ಪಿಎಸ್‌ಯು ರೈಲ್‌ಟೆಲ್​ಗೆ (RainlTel) ಚಾಲನೆ ನೀಡುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಲಾಗಿದೆ. ದೇಶದಾದ್ಯಂತ 22 ರಾಜ್ಯಗಳ 100 ರೈಲು ನಿಲ್ದಾಣಗಳಲ್ಲಿ ತನ್ನ ಸಾರ್ವಜನಿಕ ವೈಫೈ ಸೇವೆಗಳಿಗೆ ಪ್ರಧಾನ ಮಂತ್ರಿ ವೈ-ಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್‌ಫೇಸ್ (PM WANI) ಯೋಜನೆ ಆಧಾರಿತ ಪ್ರವೇಶವನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಭಾರತದ 100 ರೈಲು ನಿಲ್ದಾಣಗಳಲ್ಲಿ ತನ್ನ ವೈ-ಫೈಗೆ PM-WANI ಆಧಾರಿತ ಪ್ರವೇಶವನ್ನು ರೈಲ್‌ಟೆಲ್ ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಸಾರ್ವಜನಿಕ ಸ್ನೇಹಿ ಸೇವೆಗೆ ರೈಲ್‌ಟೆಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪುನೀತ್ ಚಾವ್ಲಾ ನಿನ್ನೆ ಚಾಲನೆ ನೀಡಿದ್ದಾರೆ. ಈ ವೈಫೈ ನೆಟ್‌ವರ್ಕ್ ಅನ್ನು ಪ್ರವೇಶಿಸಲು ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ‘ವೈ-ಡಾಟ್’ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಈ ಅಪ್ಲಿಕೇಶನ್ ಅನ್ನು C-DOTನೊಂದಿಗೆ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

PM-WANI ಎಂಬುದು ಟೆಲಿಕಾಂ ಇಲಾಖೆಯ (DoT) ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಎಲ್ಲಾ ವೈ-ಫೈ ನೆಟ್‌ವರ್ಕ್‌ಗಳನ್ನು ಸುಲಭವಾಗಿ ಬಳಸಲು ಮತ್ತು ಜನಸಾಮಾನ್ಯರಿಗೆ ಬ್ರಾಡ್‌ಬ್ಯಾಂಡ್ ಬಳಕೆಯನ್ನು ವೃದ್ಧಿಸಲು ಸಂಪರ್ಕಿಸುತ್ತದೆ. 2022ರ ಜೂನ್ ಅಂತ್ಯದ ವೇಳೆಗೆ ಹಂತ ಹಂತವಾಗಿ ಎಲ್ಲಾ 6,102 ರೈಲು ನಿಲ್ದಾಣಗಳಿಗೆ ರೈಲ್‌ಟೆಲ್‌ನ ಸಾರ್ವಜನಿಕ ವೈ-ಫೈ ಸೇವೆಗಳ PM-WANI ಆಧಾರಿತ ಪ್ರವೇಶವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ರೈಲ್‌ಟೆಲ್ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲು 7000ಕ್ಕೂ ಹೆಚ್ಚು ಸೇವಾ ಪೂರೈಕೆದಾರರೊಂದಿಗೆ ತನ್ನ ಸಹಭಾಗಿತ್ವವನ್ನು ಹೆಚ್ಚಿಸುವ ಮೂಲಕ ರೈಲ್ವೇ ನಿಲ್ದಾಣಗಳ ಆಚೆಗೆ ತನ್ನ ವೈ-ಫುಟ್‌ಪ್ರಿಂಟ್‌ಗಳನ್ನು ವಿಸ್ತರಿಸುತ್ತದೆ ಎಂದು ಚವಾಲಾ ಹೇಳಿದ್ದಾರೆ. ಡಿಜಿಟಲ್ ಇಂಡಿಯಾ ಮಿಷನ್‌ನ ಭಾಗವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲು ಸರ್ಕಾರ ಮುಂದಾಗಿದೆ. ಪ್ರಸ್ತುತ, 22 ರಾಜ್ಯಗಳಲ್ಲಿ 2384 ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಹೊಂದಿರುವ 100 ರೈಲು ನಿಲ್ದಾಣಗಳಲ್ಲಿ PM-WANI ಸೇವೆಗಳನ್ನು ಪ್ರಾರಂಭಿಸಿದೆ. ಈ 100 ರೈಲು ನಿಲ್ದಾಣಗಳಲ್ಲಿ, 71 ಎ1 ಮತ್ತು ಎ ವರ್ಗಗಳ ಅಡಿಯಲ್ಲಿ ಬರುತ್ತವೆ ಮತ್ತು 29 ನಿಲ್ದಾಣಗಳು ಇತರ ವರ್ಗಗಳ ರೈಲ್ವೆಗಳ ಅಡಿಯಲ್ಲಿ ಬರುತ್ತವೆ.

ರೈಲ್ವೇ ನಿಲ್ದಾಣಗಳಲ್ಲಿ ಈ PM-WANI ವೈ-ಫೈ ಸೇವೆಯನ್ನು ಪಡೆಯಲು ಗೂಗಲ್ ಪ್ಲೇ ಸ್ಟೋರ್​​ನಿಂದ ಆ್ಯಂಡ್ರಾಯ್ಡ್​ ಆಧಾರಿತ ಅಪ್ಲಿಕೇಶನ್ Wi-DOT ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.  ರೈಲ್‌ಟೆಲ್ ರೈಲ್ವೇ ನಿಲ್ದಾಣಗಳಲ್ಲಿ ಮೊದಲ 30 ನಿಮಿಷಗಳ ಕಾಲ ಉಚಿತ ವೈಫೈ ನೀಡುತ್ತದೆ, ಅದನ್ನು ಮೀರಿ ಆನ್‌ಲೈನ್ ಡಿಜಿಟಲ್ ಚಾನೆಲ್‌ಗಳ ಮೂಲಕ ಪಾವತಿಸಿದ ವೈಫೈ ಬಳಕೆಯನ್ನು ಖರೀದಿಸಬಹುದು.

ಪ್ರಸ್ತುತ ಭಾರತೀಯ ರೈಲ್ವೆಯಾದ್ಯಂತ Wi-Fi ನೆಟ್‌ವರ್ಕ್ ದೇಶದ 6,102 ರೈಲ್ವೆ ನಿಲ್ದಾಣಗಳಲ್ಲಿ 17,792 ವೈ-ಫೈ ಹಾಟ್‌ಸ್ಪಾಟ್‌ಗಳೊಂದಿಗೆ ಹರಡಿದೆ. 6,012 ರೈಲು ನಿಲ್ದಾಣಗಳಲ್ಲಿ ರೈಲ್‌ಟೆಲ್‌ನ ವೈ-ಫೈ ಸೇವೆಗಳ PM-WANI ಆಧಾರಿತ ಪ್ರವೇಶವು ಈ ವರ್ಷ ಜೂನ್ 30ರೊಳಗೆ ಪೂರ್ಣಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada