ಮುಂಬೈ: ಇತ್ತೀಚೆಗಷ್ಟೇ ತನ್ನ ಮೊದಲ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿ ಸುದ್ದಿಯಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಗಂಡ ರಾಜ್ ಕುಂದ್ರಾ (Raj Kundra) ಇದೀಗ ಪೋರ್ನ್ ಸಿನಿಮಾ ನಿರ್ಮಾಣದ ಕೇಸಿನಲ್ಲಿ ಸಿಲುಕಿ ಬಂಧನಕ್ಕೊಳಗಾಗಿದ್ದಾರೆ. ಅಶ್ಲೀಲ ಸಿನಿಮಾಗಳನ್ನು ನಿರ್ಮಿಸಿ, ಮೊಬೈಲ್ ಆ್ಯಪ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಆರೋಪದಲ್ಲಿ ನಿನ್ನೆ ರಾತ್ರಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಬಂಧಿಸಲಾಗಿದೆ. ಈ ಹೈಫೈ ಉದ್ಯಮ ಬಯಲಾದ ಬೆನ್ನಲ್ಲೇ ರಾಜ್ ಕುಂದ್ರಾ ಅವರ ಹಳೇ ಟ್ವೀಟ್ಗಳು ಭಾರೀ ವೈರಲ್ ಆಗಿವೆ.
2012ರಲ್ಲಿ ಶಿಲ್ಪಾ ಶೆಟ್ಟಿ ಅವರ ಗಂಡ ರಾಜ್ ಕುಂದ್ರಾ ಮಾಡಿದ್ದ ಟ್ವೀಟ್ಗಳು ಈಗ ಮತ್ತೆ ಚರ್ಚೆಗೊಳಗಾಗಿವೆ. ವಿಪರ್ಯಾಸವೆಂದರೆ 9 ವರ್ಷಗಳ ಹಿಂದೆ ಪೋರ್ನೋಗ್ರಫಿ ಮತ್ತು ವೇಶ್ಯಾವಾಟಿಕೆಯ ಬಗ್ಗೆ ಟ್ವೀಟ್ಗಳನ್ನು ಮಾಡಿದ್ದ ರಾಜ್ ಕುಂದ್ರಾ ಇದೀಗ ಅದೇ ಅಶ್ಲೀಲ ಸಿನಿಮಾಗಳನ್ನು ಚಿತ್ರೀಕರಿಸಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ. ‘ವೇಶ್ಯಾವಾಟಿಕೆ ನಡೆಸುವುದು ಕಾನೂನು ಪ್ರಕಾರ ಅಕ್ರಮ. ಆದರೆ, ಸೆಕ್ಸ್ಗಾಗಿ ದುಡ್ಡು ಕೊಟ್ಟು ಕ್ಯಾಮೆರಾದಲ್ಲಿ ಚಿತ್ರೀಕರಿಸುವುದು ಏಕೆ ಕಾನೂನು ಪ್ರಕಾರ ಅಪರಾಧವಲ್ಲ?’ ಎಂದು 2021ರ ಮಾರ್ಚ್ 29ರಂದು ರಾಜ್ ಕುಂದ್ರಾ ಟ್ವೀಟ್ ಒಂದನ್ನು ಮಾಡಿದ್ದರು.
ಅದರ ಬೆನ್ನಲ್ಲೇ 2012ರ ಮೇ 3ರಂದು ಇನ್ನೊಂದು ಟ್ವೀಟ್ ಮಾಡಿದ್ದ ರಾಜ್ ಕುಂದ್ರಾ, ‘ಭಾರತದಲ್ಲಿ ನಟರು ಕ್ರಿಕೆಟ್ ಆಟವಾಡುತ್ತಿದ್ದಾರೆ, ಕ್ರಿಕೆಟರ್ಗಳು ರಾಜಕಾರಣ ಮಾಡುತ್ತಿದ್ದಾರೆ, ರಾಜಕಾರಣಿಗಳು ಪೋರ್ನ್ ಸಿನಿಮಾ (ಅಶ್ಲೀಲ ಚಿತ್ರ)ಗಳನ್ನು ನೋಡುತ್ತಿದ್ದಾರೆ, ನೀಲಿಚಿತ್ರ ತಾರೆಯರು ಸಿನಿಮಾಗಳ ನಾಯಕಿಯರಾಗುತ್ತಿದ್ದಾರೆ!’ ಎಂದು ಟ್ವೀಟ್ ಮಾಡಿದ್ದರು.
ಆ ಹಳೇ ಟ್ವೀಟ್ಗಳನ್ನು ಈಗ ಶೇರ್ ಮಾಡಿಕೊಳ್ಳುತ್ತಿರುವ ಟ್ವಿಟ್ಟಿಗರು ಈ ವಿಷಯದ ಬಗ್ಗೆ ಈಗ ರಾಜ್ ಕುಂದ್ರಾ ಅಧಿಕೃತವಾಗಿಯೇ ಮುಂಬೈ ಪೊಲೀಸರ ಜೊತೆ ಚರ್ಚೆ ನಡೆಸಬಹುದು. ಅವರಿಗೆ ಈಗ ಪೋರ್ನೋಗ್ರಫಿ ವಿಚಾರದಲ್ಲಿ ಸಾಕಷ್ಟು ತಿಳುವಳಿಕೆಯೂ ಇದೆ ಎಂದು ಲೇವಡಿ ಮಾಡಿದ್ದಾರೆ.
So #RajKundra will debate this with @MumbaiPolice now … ? pic.twitter.com/4YhupmokaK
— The DeshBhakt (@TheDeshBhakt) July 19, 2021
ಸೋಮವಾರ ರಾತ್ರಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಮೊಬೈಲ್ ಆ್ಯಪ್ಗಳಿಗೆ ಅಪ್ಲೋಡ್ ಮಾಡುತ್ತಿದ್ದ ಆರೋಪದಲ್ಲಿ ಮುಂಬೈ ಪೊಲೀಸರು ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ರಾಜ್ ಕುಂದ್ರಾ ವಿರುದ್ಧ ಸಾಕಷ್ಟು ಸಾಕ್ಷಿಗಳು ಲಭ್ಯವಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಈ ಹಗರಣದ ಪ್ರಮುಖ ಆರೋಪಿಯೂ ರಾಜ್ ಕುಂದ್ರಾ ಅವರೇ ಆಗಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಬಾಲಿವುಡ್ ಶಾಕ್ಗೆ ಒಳಗಾಗಿದೆ.
ಪೋರ್ನ್ ಸಿನಿಮಾಗಳನ್ನು ಚಿತ್ರೀಕರಿಸಿ ಅದನ್ನು ಮೊಬೈಲ್ ಆ್ಯಪ್ಗಳ ಮೂಲಕ ಎಲ್ಲ ಕಡೆ ಪ್ರಸಾರ ಮಾಡಲಾಗುತ್ತಿದೆ ಎಂದು 2021ರ ಫೆಬ್ರವರಿ ತಿಂಗಳಲ್ಲಿ ಮುಂಬೈನ ಕ್ರೈಂ ಬ್ರಾಂಚ್ ಪೊಲೀಸರಿಗೆ ದೂರು ಬಂದಿತ್ತು. ಈ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರು ಪ್ರಮುಖ ಆರೋಪಿ ಎಂಬುದಕ್ಕೆ ಸಾಕ್ಷಿಗಳು ಲಭ್ಯವಾಗಿದ್ದು ಅವರನ್ನು ಬಂಧಿಸಿದ್ದೇವೆ ಎಂದು ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗ್ರಾಲೆ ಖಚಿತಪಡಿಸಿದ್ದರು.
ಕೆಂಡ್ರಿಂಗ್ ಹೆಸರಿನ ಇಂಗ್ಲೆಂಡ್ ಮೂಲದ ಕಂಪನಿ ಮೇಲೆ ರಾಜ್ 10 ಕೋಟಿ ಹೂಡಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಉಮೇಶ್ ಎಂಬಾತನನ್ನು ಬಂಧಿಸಲಾಗಿದೆ. ರಾಜ್ ಕುಂದ್ರಾ ಹಾಗೂ ಉಮೇಶ್ ನಡುವೆ ಒಪ್ಪಂದ ಇತ್ತು ಎನ್ನಲಾಗಿದೆ. ಬಂಧನಕ್ಕೊಳಗಾಗಿರುವ ರಾಜ್ ಕುಂದ್ರಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಅವರನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: Raj Kundra: ರಾಜ್ ಕುಂದ್ರಾ ಬಂಧನ; ಶಿಲ್ಪಾ ಶೆಟ್ಟಿ ಪತಿ ನಡೆಸುತ್ತಿದ್ದರು ಪಾರ್ನ್ ಸಿನಿಮಾ ಜಾಲ
Sagarika Shona: ರಾಜ್ ಕುಂದ್ರಾ ನಗ್ನವಾಗಿ ಆಡಿಶನ್ ಕೊಡಲು ಹೇಳಿದ್ದರು: ನಟಿ ಸಾಗರಿಕಾ ಶೋನಾ ಗಂಭೀರ ಆರೋಪ
(Politicians Watching Porn Videos; Raj Kundra’s old tweets on Pornography vs Prostitution goes viral)
Published On - 1:41 pm, Tue, 20 July 21