ಬ್ಯಾಗ್ ಪಾಲಿಟಿಕ್ಸ್; ಪ್ರಿಯಾಂಕಾ ಗಾಂಧಿಗೆ 1984 ಎಂದು ಬರೆದ ಬ್ಯಾಗ್ ನೀಡಿದ ಬಿಜೆಪಿ ಸಂಸದೆ
ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಗೆ ಉಡುಗೊರೆಯಾಗಿ ನೀಡಿದ ಬ್ಯಾಗ್‌ನಲ್ಲಿ 1984 ಎಂದು ಬರೆಯಲಾಗಿತ್ತು. ಈ ಬ್ಯಾಗ್ನ ವಿನ್ಯಾಸವು 1984ರ ಸಿಖ್ ವಿರೋಧಿ ದಂಗೆಗಳನ್ನು ಪ್ರತಿನಿಧಿಸಲು ರಕ್ತದ ಚಿಮ್ಮುವಿಕೆಯನ್ನು ತೋರಿಸುತ್ತದೆ. ಹೇಗೆ ಪ್ರಿಯಾಂಕಾ ಗಾಂಧಿ ಬ್ಯಾಗ್ ಮೂಲಕ ಸಂದೇಶ ನೀಡುತ್ತಿದ್ದಾರೋ, ಅದೇ ರೀತಿ ಕಾಂಗ್ರೆಸ್‌ಗೆ ತನ್ನ ಇತಿಹಾಸವನ್ನು ನೆನಪಿಸುವಂತೆ ನಾನು ಈ ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಬ್ಯಾಗ್ ಪಾಲಿಟಿಕ್ಸ್ ಇದೀಗ ಭಾರೀ ಚರ್ಚೆಯಾಗುತ್ತಿದೆ. ಈ ಬಾರಿಯ ಸಂಸತ್ತಿನ ಚಳಿಗಾಲದ ಅಧಿವೇಶನ ಇತಿಹಾಸದಲ್ಲಿ ದಾಖಲಾಗುವಂಥದ್ದು. ಏಕೆಂದರೆ, ಈ ಅಧಿವೇಶನದಲ್ಲಿ ಜಟಾಪಟಿಯಿಂದ ಹಿಡಿದು ಬ್ಯಾಗ್ ರಾಜಕೀಯದವರೆಗಿನ ಹಕವು ರೀತಿಯ ಘಟನೆಗಳು ಕಂಡು ಬಂದಿವೆ. ಹೊಸ ಬ್ಯಾಗ್‌ಗಳೊಂದಿಗೆ ಸಂಸತ್ತಿಗೆ ಬಂದ ನಂತರ ಪ್ರಿಯಾಂಕಾ ಗಾಂಧಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವೊಮ್ಮೆ ಪ್ಯಾಲೆಸ್ತೀನ್ ಮತ್ತು ಕೆಲವೊಮ್ಮೆ ಬಾಂಗ್ಲಾದೇಶ ಎಂದು ಬರೆದಿರುವ ಬ್ಯಾಗ್ಗಳನ್ನು ಹಿಡಿದುಕೊಂಡು ಪ್ರಿಯಾಂಕಾ ಸಂಸತ್ಗೆ ಬಂದಿದ್ದರು. ಈ ಸಂದರ್ಭದಲ್ಲಿ, ಒಡಿಶಾದ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ‘1984’ ಎಂದು ಬರೆದ ಬ್ಯಾಗ್ ಅನ್ನು ಪ್ರಿಯಾಂಕಾ ಗಾಂಧಿಗೆ ನೀಡಿ ಬಿಜೆಪಿ ಪರವಾಗಿ ಬ್ಯಾಗ್ ರಾಜಕೀಯಕ್ಕೆ ಪ್ರವೇಶಿಸಿದರು. ಪ್ರಿಯಾಂಕಾ ಬ್ಯಾಗ್ ಮೂಲಕ ಬರುತ್ತಿರುವ ಸಂದೇಶಗಳಿಗೆ ಸ್ಪಂದಿಸಿ ಈ ಬ್ಯಾಗ್ ಅನ್ನು ವಿಶೇಷವಾಗಿ ಸಿದ್ಧಪಡಿಸಿದ್ದಾಗಿ ಅಪರಾಜಿತಾ ಹೇಳಿದ್ದಾರೆ.
ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಸಿಖ್ ಹತ್ಯಾಕಾಂಡವನ್ನು ನೆನಪಿಸಲು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಅವರಿಗೆ ‘ಉಡುಗೊರೆ’ ಎಂದು 1984 ಎಂದು ಬರೆದಿರುವ ಟೋಟ್ ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಪ್ರಿಯಾಂಕಾ ಗಾಂಧಿಗೆ ಉಡುಗೊರೆಯಾಗಿ ನೀಡಿದ ಬ್ಯಾಗ್‌ನಲ್ಲಿ ‘1984’ ಎಂದು ಬರೆಯಲಾಗಿತ್ತು.
.@priyankagandhi takes a bag which has 1984 mentioned on it – she was given this bag by @AprajitaSarangi . pic.twitter.com/Z1YYfbfLGI
— Utkarsh Singh (@utkarshs88) December 20, 2024
ಚೀಲದ ವಿನ್ಯಾಸವು 1984ರ ಸಿಖ್ ವಿರೋಧಿ ದಂಗೆಗಳನ್ನು ಪ್ರತಿನಿಧಿಸಿತ್ತು. ಕಾಂಗ್ರೆಸ್‌ನ ತಪ್ಪುಗಳು ಮತ್ತು ಆ ಅವಧಿಯ ದುರಂತವನ್ನು ನೆನಪಿಸುವ ಸಂಕೇತವಾಗಿದೆ ಎಂದು ಅಪರಾಜಿತಾ ಬಣ್ಣಿಸಿದ್ದಾರೆ. ಹೇಗೆ ಪ್ರಿಯಾಂಕಾ ಗಾಂಧಿ ಬ್ಯಾಗ್ ಮೂಲಕ ಸಂದೇಶ ನೀಡುತ್ತಿದ್ದಾರೋ ಅದೇ ರೀತಿ ಕಾಂಗ್ರೆಸ್ ಇತಿಹಾಸವನ್ನು ನೆನಪಿಸುವಂತೆ ಈ ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಹೇಳಿದ್ದಾರೆ.
ಬ್ಯಾಗ್‌ನಲ್ಲಿ ‘1984’ ಎಂಬ ಪದವನ್ನು ರಕ್ತದಲ್ಲಿ ಚಿತ್ರಿಸಲಾಗಿದೆ, ಇದು ಆ ವರ್ಷದ ಸಿಖ್ ವಿರೋಧಿ ಗಲಭೆಗಳನ್ನು ನೆನಪಿಸುತ್ತದೆ. ಇಂದಿರಾ ಗಾಂಧಿಯವರ ಹತ್ಯೆಯ ನಂತರ ದೆಹಲಿಯಲ್ಲಿ ಗಲಭೆ ಪ್ರಾರಂಭವಾಯಿತು. ಆ ಘಟನೆಯಲ್ಲಿ ಸಾವಿರಾರು ಸಿಖ್ಖರು ಪ್ರಾಣ ಕಳೆದುಕೊಂಡರು. ಇದು ಕಾಂಗ್ರೆಸ್ ಅಸಮಾಧಾನದ ಪ್ರತೀಕ ಎಂದು ಅಪರಾಜಿತಾ ಬಣ್ಣಿಸಿದ್ದು, ಕಾಂಗ್ರೆಸ್ ನ ಗತವೈಭವವನ್ನು ಜನರಿಗೆ ತಲುಪಿಸಲು ಈ ಬ್ಯಾಗ್ ನೀಡಲಾಗಿದೆ ಎಂದರು. ವಿಶೇಷವೆಂದರೆ ಈ ಬ್ಯಾಗ್ ಅನ್ನು ಪ್ರಿಯಾಂಕಾ ಗಾಂಧಿ ಏನೂ ಹೇಳದೆ ಸ್ವೀಕರಿಸಿದರು. ಅವರು ಅದಕ್ಕೆ ಪ್ರತಿಕ್ರಿಯಿಸಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ