AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರು ನನ್ನ ಹತ್ಯೆಗೆ ಷಡ್ಯಂತ್ರ ರೂಪಿಸಿದ್ದಾರೆ.. ನನ್ನನ್ನು ಅವರು ಬಂಧಿಸಿದರೆ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ತೇನೆ -ರಾಕೇಶ್ ಟಿಕಾಯತ್

ಪೊಲೀಸರು ನನ್ನ ಹತ್ಯೆಗೆ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಯಾವ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ. ಪೊಲೀಸರು ಬಂಧಿಸಿದರೆ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಹೇಳಿದ್ದಾರೆ.

ಪೊಲೀಸರು ನನ್ನ ಹತ್ಯೆಗೆ ಷಡ್ಯಂತ್ರ ರೂಪಿಸಿದ್ದಾರೆ.. ನನ್ನನ್ನು ಅವರು ಬಂಧಿಸಿದರೆ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ತೇನೆ -ರಾಕೇಶ್ ಟಿಕಾಯತ್
ಭಾರತೀಯ ಕಿಸಾನ್ ಯೂನಿಯನ್​ ಮುಖಂಡ ರಾಕೇಶ್ ಟಿಕಾಯತ್
KUSHAL V
|

Updated on:Jan 28, 2021 | 7:44 PM

Share

ದೆಹಲಿ: ಪೊಲೀಸರಿಗೆ ಶರಣಾಗಲು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಗಾಜೀಪುರ ಗಡಿಯಲ್ಲಿ ಪೊಲೀಸರಿಗೆ ಶರಣಾಗಲು ರಾಕೇಶ್ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.

ಜೊತೆಗೆ, ಗಾಜೀಪುರ ಗಡಿಯಲ್ಲಿ ರಾಕೇಶ್ ಟಿಕಾಯತ್ ಕಣ್ಣೀರು ಹಾಕಿದ್ದು ಪೊಲೀಸರು ನನ್ನ ಹತ್ಯೆಗೆ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಯಾವ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ. ಪೊಲೀಸರು ಬಂಧಿಸಿದರೆ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಸಹ ಹೇಳಿದ್ದಾರೆ.

ಕೆಂಪುಕೋಟೆಯಲ್ಲಿ ಹೋರಾಟಗಾರರು ಧ್ವಜಾರೋಹಣ ಮಾಡಿಲ್ಲ ಎಂದು ಗಾಜೀಪುರ ಗಡಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ದೆಹಲಿಯ ಕೆಂಪುಕೋಟೆಯಲ್ಲಿ ಯಾರಿದ್ದರೆಂದು ತನಿಖೆ ಆಗಲಿ. ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲೇ ತನಿಖೆ ಮಾಡಿಸಲಿ ಎಂದು ರಾಕೇಶ್​ ಟಿಕಾಯತ್​ ಹೇಳಿದ್ದಾರೆ.

ಇದೀಗ, ರಾಕೇಶ್ ಟಿಕಾಯತ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. ದೆಹಲಿಯ ಗಾಜೀಪುರ ಗಡಿಯಲ್ಲಿ ಟಿಕಾಯತ್​ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಪೊಲೀಸರು ಗಾಜೀಪುರ ಗಡಿಯ ಎರಡೂ ಕಡೆಗಳನ್ನು ಬಂದ್​ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಗಾಜೀಪುರ ಗಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸರು ಆದೇಶ ಸಹ ಹೊರಡಿಸಿದ್ದಾರೆ.

ಇತ್ತ, ಜ.26ರಂದು ರೈತರಿಂದ ಟ್ರ್ಯಾಕ್ಟರ್ ಪರೇಡ್‌ ವೇಳೆ ದೆಹಲಿಯ ಹಿಂಸಾಚಾರ ಸಂಬಂಧ 33 FIR ದಾಖಲಾಗಿದೆ. ದೆಹಲಿ ನಗರದ ವಿವಿಧ ಠಾಣೆಗಳಲ್ಲಿ 33 FIR ದಾಖಲಾಗಿದೆ. ಜೊತೆಗೆ, ರೈತ ಮುಖಂಡರು ಸೇರಿ 44 ಜನರಿಗೆ ಲುಕ್‌ಔಟ್‌ ನೋಟಿಸ್ ಸಹ ನೀಡಲಾಗಿದೆ.

ಇದರ ಜೊತೆಗೆ, ಪ್ರತಿಭಟನಾ ನಿರತ ರೈತರ ತೆರವಿಗೆ ಜಿಲ್ಲಾಡಳಿತದಿಂದ ಸೂಚನೆ ಹೊರಡಿಸಲಾಗಿದೆ. ಗಾಜಿಪುರ, ಟಿಕ್ರಿ ಗಡಿಯನ್ನು ಖಾಲಿ ಮಾಡಲು ಜಿಲ್ಲಾಡಳಿತ ಸೂಚನೆ ನೀಡಿದೆ. ಇದಲ್ಲದೆ, ಗಾಜಿಪುರ, ಟಿಕ್ರಿ ಗಡಿಯಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.

ಪೊಲೀಸ್ ಕಾರ್ಯಾಚರಣೆ ಮೂಲಕ ರೈತರ ತೆರವಿಗೆ ಪ್ಲ್ಯಾನ್ ಮಾಡಲಾಗಿದೆ. ಇಂದು ರಾತ್ರಿಯೇ ರೈತರನ್ನ ಜಾಗ ಖಾಲಿ ಮಾಡಿಸಲು ಪ್ಲ್ಯಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇಂಟರ್​​ನೆಟ್, SMS​ ಸೇವೆ ಸ್ಥಗಿತ ಮುಂದುವರಿಕೆ ಇದೀಗ, ಟ್ರ್ಯಾಕ್ಟರ್ ಪರೇಡ್‌ ವೇಳೆ ದೆಹಲಿಯ ಹಿಂಸಾಚಾರದ ಹಿನ್ನೆಲೆಯಲ್ಲಿ ಹರಿಯಾಣದ 3ಜಿಲ್ಲೆಗಳಲ್ಲಿ ಇಂಟರ್​​ನೆಟ್ ಹಾಗೂ SMS ಸೇವೆಯನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ, ನಾಳೆ ಸಂಜೆ 5 ರವರೆಗೆ ಇಂಟರ್​​ನೆಟ್ ಮತ್ತು ಸೇವೆಯನ್ನು ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ. ಹಾಗಾಗಿ, ಸೋನಿಪತ್, ಪಾಲ್ವಾಲ್, ಝಜ್ಜರ್ ಜಿಲ್ಲೆಗಳಲ್ಲಿ ಸೇವೆ ಸ್ಥಗಿತ ಆದೇಶವನ್ನು ಹರಿಯಾಣ ಸರ್ಕಾರ ಮುಂದುವರಿಸಿದೆ.

ರೈತರ ಹೋರಾಟಕ್ಕೆ ಅಣ್ಣಾ ಹಜಾರೆ ಬೆಂಬಲ: ಕೃಷಿಕರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

Published On - 7:05 pm, Thu, 28 January 21

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು