AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿ ಕಚ್ಚಿತ್ತು, ರೇಬಿಸ್ ಬರಬಹುದೆಂದು ಹೆದರಿ ಆತ್ಮಹತ್ಯೆ ಮಾಡಿಕೊಂಡು ಬ್ಯಾಂಕ್ ನೌಕರ

ಕಲ್ಯಾಣ್‌ನಲ್ಲಿ ನಾಯಿ ಕಚ್ಚಿದ್ದಕ್ಕೆ ರೇಬಿಸ್ ಬರಬಹುದೆಂಬ ಭಯದಿಂದ ಬ್ಯಾಂಕ್ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಬಿಸ್ ಮಾರಣಾಂತಿಕವಾದರೂ, ಸರಿಯಾದ ಲಸಿಕೆ (PEP) ಮೂಲಕ ಸಂಪೂರ್ಣವಾಗಿ ತಡೆಗಟ್ಟಬಹುದು. ಮಾನಸಿಕ ಭಯವು ಕೆಲವೊಮ್ಮೆ ರೋಗಕ್ಕಿಂತ ಹೆಚ್ಚು ಅಪಾಯಕಾರಿ. ಆದ್ದರಿಂದ, ನಾಯಿ ಕಡಿತದ ನಂತರ ಸಮಗ್ರ ವೈದ್ಯಕೀಯ ಸಮಾಲೋಚನೆ ಮತ್ತು ಲಸಿಕೆ ಪಡೆಯುವುದು ಅತಿ ಮುಖ್ಯ.

ನಾಯಿ ಕಚ್ಚಿತ್ತು, ರೇಬಿಸ್ ಬರಬಹುದೆಂದು ಹೆದರಿ ಆತ್ಮಹತ್ಯೆ ಮಾಡಿಕೊಂಡು ಬ್ಯಾಂಕ್ ನೌಕರ
ಆಯುಷ್ Image Credit source: India Today
ನಯನಾ ರಾಜೀವ್
|

Updated on:Feb 25, 2026 | 7:14 AM

Share

ಕಲ್ಯಾಣ್, ಫೆಬ್ರವರಿ 25: ನಾಯಿ ಕಚ್ಚಿದ್ದಕ್ಕೆ ರೇಬಿಸ್(Rabies) ಬರಬಹುದೆಂದು ಹೆದರಿ ಬ್ಯಾಂಕ್ ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್​​ನಲ್ಲಿ ನಡೆದಿದೆ. ಮೃತರನ್ನು 30 ವರ್ಷದ ಆಯುಷ್ ವಿಶ್ವನಾಥ್ ಅಮೀನ್. ಕಲ್ಯಾಣ್ ಪೂರ್ವದ ಟಿಸ್ಗಾಂವ್ ನಾಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅವರು ಸಹಜೀವನ್ ಸೊಸೈಟಿಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಅವರು ಕಳೆದ ಎಂಟು ವರ್ಷಗಳಿಂದ ಭಾರತ್ ಬ್ಯಾಂಕಿನ ಥಾಣೆ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು.

ಕೆಲವು ದಿನಗಳ ಹಿಂದೆ ಟಿಸ್ಗಾಂವ್ ನಾಕಾ ಪ್ರದೇಶದಲ್ಲಿ ಅಮೀನ್ ಅವರ ಕಾಲಿಗೆ ಬೀದಿ ನಾಯಿ ಕಚ್ಚಿತ್ತು, ಘಟನೆಯ ನಂತರ ಅವರು ಕೇವಲ ಒಂದು ರೇಬಿಸ್ ನಿರೋಧಕ ಇಂಜೆಕ್ಷನ್ ತೆಗೆದುಕೊಂಡಿದ್ದರು.ಕಳೆದ ನಾಲ್ಕು ದಿನಗಳಿಂದ ಅವರ ನಡವಳಿಕೆಯಲ್ಲಿ ಅಸಾಮಾನ್ಯ ಬದಲಾವಣೆಗಳನ್ನು ಕುಟುಂಬ ಸದಸ್ಯರು ಗಮನಿಸಿದ್ದರು. ಭಾನುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ, ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪೊಲೀಸರು ಸ್ಥಳದಿಂದ ಒಂದು ಆತ್ಮಹತ್ಯಾ ಪತ್ರವನ್ನು ವಶಪಡಿಸಿಕೊಂಡಿದ್ದಾರೆ, ಅದರಲ್ಲಿ ಅವರು ರೇಬಿಸ್ ಲಕ್ಷಣಗಳು ಕಾಣಿಸಿಕೊಂಡಿರುವ ಬಗ್ಗೆ ಬರೆದಿದ್ದರು.

ಕೊಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ವರದಿ (ಎಡಿಆರ್) ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಗುರವ್ ದೃಢಪಡಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ರೇಬಿಸ್ ಖಂಡಿತವಾಗಿಯೂ ಮಾರಕ ಹೌದು, ಆದರೆ ಸರಿಯಾದ ಪಿಇಪಿ ಲಸಿಕೆ ತೆಗೆದುಕೊಳ್ಳುವ ಮೂಲಕ ಅದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಮಾನಸಿಕ ಭಯವು ಕೆಲವೊಮ್ಮೆ ರೋಗಕ್ಕಿಂತ ಹೆಚ್ಚು ಅಪಾಯಕಾರಿಯಾಗಬಹುದು, ಆದ್ದರಿಂದ ಅಂತಹ ಸಂದರ್ಭಗಳಲ್ಲಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಬೇಕಾಗುತ್ತದೆ.

ಸೋಂಕಿನ ನಂತರ ಲಕ್ಷಣಗಳು ಕಾಣಿಸಿಕೊಳ್ಳಲು ಒಂದರಿಂದ ಮೂರು ತಿಂಗಳುಗಳು ತೆಗೆದುಕೊಳ್ಳಬಹುದು. ಒಮ್ಮೆ ಲಕ್ಷಣಗಳು ಕಾಣಿಸಿಕೊಂಡರೆ, ರೋಗವು ಗಂಭೀರವಾಗಬಹುದು. ಈ ರೋಗವು ಮೆದುಳು ಮತ್ತು ಬೆನ್ನುಹುರಿಯ ಮೇಲೆ ನೇರವಾಗಿ ದಾಳಿ ಮಾಡುತ್ತದೆ.

ಮತ್ತಷ್ಟು ಓದಿ: Video: ತಾನು ರಕ್ಷಿಸಿದ ನಾಯಿಯಿಂದಲೇ ಪ್ರಾಣಬಿಟ್ಟ ಕಬಡ್ಡಿ ಆಟಗಾರ ಬ್ರಿಜೇಶ್

ಈ ರೋಗದ ಪ್ರಮುಖ ಆರಂಭಿಕ ಲಕ್ಷಣಗಳೆಂದರೆ ಕಚ್ಚಿದ ಸ್ಥಳದಲ್ಲಿ ತುರಿಕೆ, ಸುಡುವಿಕೆ ಅಥವಾ ಮರಗಟ್ಟುವಿಕೆಯ ಅನುಭವ, ಸೌಮ್ಯ ಜ್ವರ ಮತ್ತು ತಲೆನೋವು ಉಂಟಾಗಬಹುದು. ಹಸಿವು ಕಡಿಮೆಯಾಗುವುದು ಅಥವಾ ಗಂಟಲು ನೋವು, ಆಯಾಸ ಮತ್ತು ಸ್ನಾಯು ನೋವುಗಳು ಸಹ ಆರಂಭಿಕ ಲಕ್ಷಣಗಳಾಗಿರಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:13 am, Wed, 25 February 26

Follow Us