ಆಸ್ಪತ್ರೆಯಲ್ಲಿ ಸೋನಿಯಾರನ್ನು ನೋಡಿಕೊಂಡ ಕೇರಳ ನರ್ಸ್ ಬಗ್ಗೆ ರಾಹುಲ್ ಶ್ಲಾಘನೆಗೆ ವೈದ್ಯರ ಪ್ರತಿಕ್ರಿಯೆ
ಆಸ್ಪತ್ರೆಯಲ್ಲಿ ತಾಯಿ ಸೋನಿಯಾ ಗಾಂಧಿ ಆರೈಕೆ ಮಾಡಿದ ಕೇರಳದ ನರ್ಸ್ ಬಗ್ಗೆ ರಾಹುಲ್ ಗಾಂಧಿ ಶ್ಲಾಘಿಸಿದರು. ರಾತ್ರಿ ಪಾಳಿಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ದಾದಿಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯ ಸುಧೀರ್ ಕುಮಾರ್, ಎಲ್ಲಾ ಆರೋಗ್ಯ ವೃತ್ತಿಪರರ ಬದ್ಧತೆಗೆ ಹೆಮ್ಮೆ ವ್ಯಕ್ತಪಡಿಸಿದರು. ಕೇರಳದ ನರ್ಸ್‌ಗಳು ಜಗತ್ತಿನಾದ್ಯಂತ ನೀಡುವ ಆತ್ಮೀಕ ಸಾಂತ್ವನವನ್ನು ರಾಹುಲ್ ಗಾಂಧಿ ಉಲ್ಲೇಖಿಸಿದರು.

ನವದೆಹಲಿ, ಮಾರ್ಚ್ 26: ಆಸ್ಪತ್ರೆಯಲ್ಲಿ ತಾಯಿ ಸೋನಿಯಾಗಾಂಧಿಯನ್ನು ಚೆನ್ನಾಗಿ ನೋಡಿಕೊಂಡ ಕೇರಳದ ನರ್ಸ್ ಬಗ್ಗೆ ರಾಹುಲ್ ಗಾಂಧಿ(Rahul Gandhi) ಶ್ಲಾಘಿಸಿದ್ದರು. ಅದಕ್ಕೆ ವೈದ್ಯರಾದ ಸುಧೀರ್ ಕುಮಾರ್ ಮಾತನಾಡಿದ್ದು, ಎಲ್ಲಾ ನರ್ಸ್, ವೈದ್ಯರು ಹಾಗೂ ಇತರೆ ಆರೋಗ್ಯ ವೃತ್ತಿಪರರ ಬಗ್ಗೆ ನಮಗೆ ಹೆಮ್ಮೆ ಇದೆ. ರಾತ್ರಿಯಲ್ಲಿ ಕೆಲಸ ಮಾಡದೆ ಬೇರೆ ಆಯ್ಕೆ ಅವರಿಗಿರುವುದಿಲ್ಲ.
ರಾತ್ರಿಯಲ್ಲಿ ಕೆಲಸ ಮಾಡುವ ನರ್ಸ್‌ಗಳು ಹಗಲಿನ ವೇಳೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಬಿಡುವಿನ ವೇಳೆ ಮಲಗುತ್ತಾರೆ. ರಾತ್ರಿ ಶಿಫ್ಟ್ ಸರದಿಯಲ್ಲಿ ಬರುತ್ತವೆ. ಹೆಚ್ಚಿನ ನರ್ಸ್‌ಗಳು ಕೇರಳದವರಾಗಿದ್ದರೂ, ಇತರ ಭಾರತೀಯ ರಾಜ್ಯಗಳ ನರ್ಸ್‌ಗಳು ಕೂಡ ಕೆಲಸ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ ಎಂದು ಬರೆದಿದ್ದಾರೆ.
‘‘ ನಾನು ಆಸ್ಪತ್ರೆಯಲ್ಲಿ ತಾಯಿಯಿದ್ದ ಕೋಣೆಯಲ್ಲಿ ಒಂದು ಸಣ್ಣ ಸೋಫಾದ ಮೇಲೆ ಮಲಗಿದ್ದೆ, ಎಲ್ಲಾ ಮಕ್ಕಳಂತೆ ನಾನೂ ಕೂಡ ತಾಯಿಯ ಆರೋಗ್ಯದ ಬಗ್ಗೆ ಚಿಂತಿತನಾಗಿದ್ದೆ. ಕೇರಳದ ನರ್ಸ್ ಒಬ್ಬರು ನನ್ನ ತಾಯಿಯ ಬ್ಗಗೆ ತುಂಬಾ ಕಾಳಜಿವಹಿಸಿದ್ದರು, ಅದು ನನಗೆ ಸಮಾಧಾನ ತಂದಿತ್ತು’’ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಕೇರಳ ಒಂದರಲ್ಲೇ ಸುಮಾರು 5,00000 ನೋಂದಾಯಿತ ನರ್ಸ್ಗಳಿದ್ದಾರೆ. ಕೇರಳವು ಏಪ್ರಿಲ್ 9 ರಂದು ಒಂದೇ ಹಂತದ ವಿಧಾನಸಭಾ ಚುನಾವಣೆಯನ್ನು ನಡೆಸಲಿದೆ.
Thank you Rahul Gandhi sahab🙏. 🔸We are proud of all nurses, doctors and other healthcare professionals. Most of them work at nights (we have no choice and we love doing what we do- taking care of patients). 🔸Off course, nurses who work during nights, take off during daytime… https://t.co/DVSvIJBd8E
— Dr Sudhir Kumar MD DM (@hyderabaddoctor) March 25, 2026
‘‘ರಾತ್ರಿಯಿಡೀ, ಒಂದೇ ಒಂದು ವಿಷಯ ನನಗೆ ಸಮಾಧಾನ ನೀಡಿತ್ತು. ಪ್ರತಿ ಗಂಟೆಗೊಮ್ಮೆ ನನ್ನ ತಾಯಿಯನ್ನು ಪರೀಕ್ಷಿಸಲು ಕೇರಳದ ಒಬ್ಬ ನರ್ಸ್ ಬರುತ್ತಿದ್ದರು. ಪ್ರತಿ ಗಂಟೆಗೂ ಅವರು ಬಂದು ಅವರನ್ನು ಪರಿಶೀಲಿಸುತ್ತಿದ್ದರು. ಅವರು ನಗುತ್ತಾ ಅವರ ಕೈ ಹಿಡಿದುಕೊಳ್ಳುತ್ತಿದ್ದರು. ಕೇರಳದ ನರ್ಸ್‌ಗಳು ತಮ್ಮ ಅತ್ಯಂತ ಕಷ್ಟದ ಕ್ಷಣಗಳಲ್ಲಿ ಎಷ್ಟು ಮಂದಿಗೆ ಸಾಂತ್ವನ ನೀಡಿರಬಹುದು’’.
ಮತ್ತಷ್ಟು ಓದಿ: ರಾಹುಲ್ ಗಾಂಧಿಯವರೇ ಮೀಸಲು ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲೇಕೆ ನಿಮ್ಮ ತಾಯಿಗೆ ಚಿಕಿತ್ಸೆ: ಬಿಜೆಪಿ ಸಂಸದನ ಪ್ರಶ್ನೆ
ಬೆಳಗ್ಗೆ ನಾನು ಅವರನ್ನು ಕೇಳಿದೆ, “ನೀವು ರಾತ್ರಿ ಮಲಗುತ್ತೀರಾ ಅಥವಾ ರಾತ್ರಿಯಿಡೀ ಕೆಲಸ ಮಾಡುತ್ತೀರಾ? ಅದಕ್ಕೆ ಅವರು ನಾನು ರಾತ್ರಿಯಿಡೀ ಕೆಲಸ ಮಾಡುತ್ತೇನೆ ಎಂದರು, ಹಾಗಾಗಿ, ಪ್ರಪಂಚದಾದ್ಯಂತ ಜನರು ನಿದ್ರಿಸುತ್ತಿರುವಾಗ, ಕೇರಳದ ಮಹಿಳೆಯರು, ಕೇರಳದಲ್ಲಿ ಮಾತ್ರವಲ್ಲದೆ ದೆಹಲಿಯಲ್ಲಿ, ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ, ಜನರನ್ನು ಸಾಂತ್ವನ ನೀಡುತ್ತಿದ್ದಾರೆ’’ ಎಂದು ರಾಹುಲ್ ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
