AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನದಲ್ಲಿನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಜನ್ಮ ದಿನಾಂಕ ಕಡ್ಡಾಯ

ರಾಜಸ್ಥಾನ ಸರ್ಕಾರವು ಮದುವೆ ಆಮಂತ್ರಣ ಪತ್ರಿಕೆಗಳಲ್ಲಿ ಜನ್ಮ ದಿನಾಂಕವನ್ನು ಕಡ್ಡಾಯಗೊಳಿಸಲಿದೆ. ಇದು ಬಾಲ್ಯ ವಿವಾಹಗಳ ಮೇಲಿನ ಕ್ರಮವನ್ನು ಬಲಪಡಿಸುತ್ತದೆ. ರಾಜಸ್ಥಾನ ರಾಜ್ಯದಲ್ಲಿ ಹಲವು ವರ್ಷಗಳಿಂದ ಬಾಲ್ಯ ವಿವಾಹಗಳನ್ನು ಆಚರಿಸುವ ಪ್ರಮುಖ ಸಂದರ್ಭಗಳೆಂದು ಪರಿಗಣಿಸಲಾದ ಅಕ್ಷಯ ತೃತೀಯ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆನಂದ್ ಕುಮಾರ್ ಮುಖ್ಯವಾದ ನಿರ್ದೇಶನಗಳನ್ನು ನೀಡಿದ್ದಾರೆ.

ರಾಜಸ್ಥಾನದಲ್ಲಿನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಜನ್ಮ ದಿನಾಂಕ ಕಡ್ಡಾಯ
Wedding Picture
ಸುಷ್ಮಾ ಚಕ್ರೆ
|

Updated on: Mar 01, 2025 | 6:26 PM

Share

ಜೈಪುರ (ಮಾರ್ಚ್ 1): ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಸಲುವಾಗಿ ರಾಜಸ್ಥಾನ ಸರ್ಕಾರವು ಮುದ್ರಣಾಲಯಗಳಿಗೆ ಸಂಬಂಧಪಟ್ಟ ಕುಟುಂಬಗಳಿಂದ ವಧು ಮತ್ತು ವರನ ವಯಸ್ಸಿನ ಪುರಾವೆಯನ್ನು ಪಡೆಯಬೇಕು. ಅವರಿಬ್ಬರ ಜನ್ಮ ದಿನಾಂಕವನ್ನು ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಬೇಕು ಎಂದು ನಿರ್ದೇಶಿಸಿದೆ. ರಾಜಸ್ಥಾನದಲ್ಲಿ ಬಾಲ್ಯ ವಿವಾಹಗಳನ್ನು (Child Marriage) ಹಲವು ವರ್ಷಗಳಿಂದ ಆಚರಿಸುವ ಪ್ರಮುಖ ಸಂದರ್ಭಗಳೆಂದು ಪರಿಗಣಿಸಲಾಗಿರುವ ಅಕ್ಷಯ ತೃತೀಯ (ಅಖಾ ತೀಜ್ ಮತ್ತು ಪೀಪಲ್ ಪೂರ್ಣಿಮೆ) ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆನಂದ್ ಕುಮಾರ್ ಕೆಲವು ಸೂಚನೆಗಳನ್ನು ನೀಡಿದ್ದಾರೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಸ್ಥಾನ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಎಸ್‌ಪಿಗಳು ಮತ್ತು ಪೊಲೀಸ್ ಉಪ ಆಯುಕ್ತರು ಹೆಚ್ಚು ಜಾಗರೂಕರಾಗಿರಬೇಕು. ಅಂತಹ ವಿವಾಹಗಳನ್ನು ತಡೆಗಟ್ಟಲು ಸರ್ಕಾರಿ ಯಂತ್ರವನ್ನು ಸಕ್ರಿಯವಾಗಿಡಬೇಕು ಎಂದು ನಿರ್ದೇಶಿಸಿದ್ದಾರೆ. “ಕಳೆದ ವರ್ಷಗಳಂತೆ, ಬಾಲ್ಯ ವಿವಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ನಿಬಂಧನೆಗಳನ್ನು ಗ್ರಾಮ ಮತ್ತು ತಹಸಿಲ್ ಮಟ್ಟದಲ್ಲಿ ನಿಯೋಜಿಸಲಾದ ವಿವಿಧ ಇಲಾಖೆಗಳ ನೌಕರರು ಅಥವಾ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಬೇಕು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗಡಿಯನ್ನೂ ಮೀರಿದ ಸ್ನೇಹ; ವಿಡಿಯೋ ಕಾಲ್‌ ಮೂಲಕ ಪಾಕ್ ಸ್ನೇಹಿತೆಯ ಮದುವೆಯಲ್ಲಿ ಭಾಗಿಯಾದ ಭಾರತೀಯ ಯುವತಿ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) 5 ದತ್ತಾಂಶದ ಪ್ರಕಾರ, ರಾಜಸ್ಥಾನವು ಬಾಲ್ಯವಿವಾಹಗಳನ್ನು ತಡೆಗಟ್ಟುವಲ್ಲಿ ಗಮನಾರ್ಹ ಸುಧಾರಣೆಯನ್ನು ತೋರಿಸಿದೆ. ಆದರೆ ರಾಜಸ್ಥಾನ ರಾಜ್ಯದಲ್ಲಿ ಇನ್ನೂ 20ರಿಂದ 24 ವರ್ಷ ವಯಸ್ಸಿನ ಶೇ. 20ರಿಂದ 29ರಷ್ಟು ಮಹಿಳೆಯರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿ ವಿವಾಹವಾಗಿದ್ದಾರೆ. ಇದನ್ನು ಗಮನಿಸಿದರೆ, ಪರಿಣಾಮಕಾರಿ ತಡೆಗಟ್ಟುವಿಕೆಗಾಗಿ ಗ್ರಾಮ ಮಟ್ಟದ ಸರ್ಕಾರಿ ನೌಕರರು ಬಾಲ್ಯವಿವಾಹಗಳ ಸಂದರ್ಭದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಬದ್ಧರಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ