ಹೃದಯದಲ್ಲಿ ರಾಮನಿದ್ದಾನೆ, ಶೋ ಆಫ್ ಮಾಡುವ ಅಗತ್ಯವಿಲ್ಲ: ಕಪಿಲ್ ಸಿಬಲ್
ನನ್ನ ಹೃದಯದಲ್ಲಿ ರಾಮನಿದ್ದಾನೆ, ಶೋ ಆಫ್ಗಾಗಿ ನಾನು ಏನನ್ನೂ ಮಾಡುವುದಿಲ್ಲ. ಅದಕ್ಕಾಗಿಯೇ ನಾನು ಏನು ಹೇಳಿದರೂ ನನ್ನ ಹೃದಯದಿಂದ ಹೇಳುತ್ತೇನೆ, ನನಗೆ ಯಾರೊಂದಿಗೂ ಸಂಬಂಧವಿಲ್ಲ. ರಾಮ ನನ್ನ ಹೃದಯದಲ್ಲಿರುವಾಗ ಮತ್ತು ರಾಮ ನನ್ನನ್ನು ಇಲ್ಲಿವರೆಗೆ ಕರೆದುಕೊಂಡು ಬಂದಿರುವಾಗ ನಾನು ಸರಿಯಾದುದನ್ನೇ ಮಾಡುತ್ತಿದ್ದೇನೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ದೆಹಲಿ ಡಿಸೆಂಬರ್ 26: ಅಯೋಧ್ಯೆಯಲ್ಲಿ (Ayodhya) ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಪೂರ್ಣ ವಿಧಿವಿಧಾನಗಳೊಂದಿಗೆ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಿದ್ದಾರೆ. ಇನ್ನು ರಾಮಮಂದಿರ ವಿಚಾರದಲ್ಲಿ ವಿಪಕ್ಷಗಳ ನಿಲುವಿನ ಬಗ್ಗೆ ಮಾತನಾಡಿರುವ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ (Kapil Sibal) ಬಿಜೆಪಿ ರಾಮನ ಬಗ್ಗೆ ಮಾತನಾಡುತ್ತದೆ. ಆದರೆ ಅವರ ನಡವಳಿಕೆಯು ಭಗವಾನ್ ರಾಮನಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಹೇಳಿದ್ದಾರೆ.
ನೋಡಿ, ಈ ಎಲ್ಲಾ ವಿಚಾರಗಳು ಕೇವಲ ಪ್ರದರ್ಶನವಾಗಿದೆ. ನಾವು ರಾಮನ ಬಗ್ಗೆ ಮಾತನಾಡುತ್ತೇವೆ, ಆದರೆ ನಮ್ಮ ನಡವಳಿಕೆ ಏನು?. ಅವರು ಭಗವಾನ್ ರಾಮನ ನಡವಳಿಕೆಯಿಂದ ದೂರವಿದ್ದಾರೆ. ಸತ್ಯ, ಸಹಿಷ್ಣುತೆ, ತ್ಯಾಗ, ಯಾರನ್ನೂ ಅವಮಾನಿಸದಿರುವುದು ಮತ್ತು ಇತರರನ್ನು ಗೌರವಿಸುವುದು ರಾಮನ ನಡವಳಿಕೆ, ಆದರೆ ಅವರು (ಬಿಜೆಪಿ) ಇದಕ್ಕೆ ತದ್ವಿರುದ್ಧ ಮಾಡುತ್ತಾರೆ. ನಂತರ ಅವರು ರಾಮಮಂದಿರವನ್ನು ನಿರ್ಮಿಸುತ್ತಾರೆ. ನಾವು ರಾಮನನ್ನು ಪೂಜಿಸಬೇಕೆಂದು ಹೇಳುತ್ತಾರೆ.
#WATCH | On the opposition’s stance on the Ram Temple, Rajya Sabha MP Kapil Sibal says, “This whole issue is a show-off. They (BJP) talk about Ram but their behaviour, their character are nowhere close to Lord Ram’s. Truthfulness, tolerance, sacrifice, and respect for others are… pic.twitter.com/ufpBBLkpew
— ANI (@ANI) December 25, 2023
ಹೇ ಸಹೋದರ, ನಿನ್ನ ಹೃದಯದಲ್ಲಿ ಕುಳಿತಿರುವವನು ಭಗವಾನ್ ರಾಮನಲ್ಲ. ಭಗವಾನ್ ರಾಮನನ್ನು ನಿಮ್ಮ ಹೃದಯದಲ್ಲಿ ಇರಿಸಿ ಮತ್ತು ರಾಮನ ನಡವಳಿಕೆಯೊಂದಿಗೆ ಸಂವಿಧಾನದ ಮಿತಿಗಳನ್ನು ಪೂರೈಸಿಕೊಳ್ಳಿ ಎಂದಿದ್ದಾರೆ ಸಿಬಲ್.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸುತ್ತಾರಾ ಖರ್ಗೆ-ಸೋನಿಯಾ ಗಾಂಧಿ?
ನಾನು ಶೋ ಆಫ್ ಮಾಡಲ್ಲ
ಇದೇ ವೇಳೆ ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನ ಬಂದರೆ ಅಯೋಧ್ಯೆಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಹೃದಯದಲ್ಲಿ ರಾಮನಿದ್ದಾನೆ, ಶೋ ಆಫ್ಗಾಗಿ ನಾನು ಏನನ್ನೂ ಮಾಡುವುದಿಲ್ಲ. ಅದಕ್ಕಾಗಿಯೇ ನಾನು ಏನು ಹೇಳಿದರೂ ನನ್ನ ಹೃದಯದಿಂದ ಹೇಳುತ್ತೇನೆ, ನನಗೆ ಯಾರೊಂದಿಗೂ ಸಂಬಂಧವಿಲ್ಲ. ರಾಮ ನನ್ನ ಹೃದಯದಲ್ಲಿರುವಾಗ ಮತ್ತು ರಾಮ ನನ್ನನ್ನು ಇಲ್ಲಿವರೆಗೆ ಕರೆದುಕೊಂಡು ಬಂದಿರುವಾಗ ನಾನು ಸರಿಯಾದುದನ್ನೇ ಮಾಡುತ್ತಿದ್ದೇನೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ಕ್ರಿಮಿನಲ್ ಮಸೂದೆಗಳ ಬಗ್ಗೆ ಕಪಿಲ್ ಸಿಬಲ್
ಸಂಸತ್ತಿನಲ್ಲಿ ಅಂಗೀಕರಿಸಿದ ಇತ್ತೀಚಿನ ಕ್ರಿಮಿನಲ್ ಮಸೂದೆಗಳನ್ನು ಚರ್ಚಿಸಿದ ಸಿಬಲ್, ಅವುಗಳ ಸ್ವರೂಪ ಮತ್ತು ಅವುಗಳನ್ನು ಜಾರಿಗೊಳಿಸುವ ಪ್ರಕ್ರಿಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಹಲವಾರು ಸಂಸದರ ಅಮಾನತು ಮತ್ತು ಮಸೂದೆ ರಚನೆಯ ಸಂದರ್ಭದಲ್ಲಿ ಕಾನೂನು ತಜ್ಞರೊಂದಿಗೆ ಸಮಾಲೋಚನೆಯ ಕೊರತೆಯನ್ನು ಅವರು ಗಮನಸೆಳೆದರು. ವಸಾಹತುಶಾಹಿ ಯುಗದ ಶಾಸನಗಳಿಗಿಂತ ಹೆಚ್ಚು ಕಟ್ಟುನಿಟ್ಟಾದ ಅಸ್ತಿತ್ವದಲ್ಲಿರುವ ಕಾನೂನುಗಳ ಕೇವಲ ಭಾಷಾಂತರ ಇದು.ಈ ಮಸೂದೆಗಳಲ್ಲಿ ‘ಭಾರತೀಯತೆಯ’ ಕೊರತೆ ಇದೆ ಎಂದು ಸಿಬಲ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:38 pm, Tue, 26 December 23