Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆ ರಾಮನ ದರ್ಶನಕ್ಕೆ ಪಾಕಿಸ್ತಾನದಿಂದ ಬರುತ್ತಿದ್ದಾರೆ 200 ಮಂದಿ ಭಕ್ತರು

Pakistani sindhi community people at Ayodhya: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಸಿಂಧಿ ಸಮುದಾಯದ 200 ಮಂದಿ ನಿಯೋಗವೊಂದು ಭಾರತಕ್ಕೆ ಬರುತ್ತಿದ್ದು, ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಮಾಡಲಿದ್ದಾರೆ. ಉತ್ತರಪ್ರದೇಶದ ಪ್ರಯಾಗ್​ರಾಜ್ ನಗರಕ್ಕೆ ಬಂದು ಅಲ್ಲಿಂದ ಬಸ್ ಮೂಲಕ ಈ ನಿಯೋಗ ಶುಕ್ರವಾರ ಸಂಜೆ ಅಯೋಧ್ಯೆಗೆ ಬರಲಿದ್ದಾರೆ. ಭಾರತದ ಸಿಂಧಿ ಸಮುದಾಯಕ್ಕೆ ಸೇರಿದ 150 ಜನರೂ ಕೂಡ ಈ ನಿಯೋಗದ ಜೊತೆ ಇದ್ದಾರೆ. ಒಟ್ಟು 350 ಜನರು ಅಯೋಧ್ಯೆಗೆ ಬರುತ್ತಿದ್ದಾರೆ. ಪಾಕಿಸ್ತಾನದ ಬಾಂಧವರನ್ನು ಅಯೋಧ್ಯೆಗೆ ಸ್ವಾಗತ ಮಾಡಲು ಭಾರತೀಯ ಸಿಂಧಿ ಸಮುದಾಯದ ಸಂಘಟನೆಗಳು ಕಾಯುತ್ತಿವೆ.

ಅಯೋಧ್ಯೆ ರಾಮನ ದರ್ಶನಕ್ಕೆ ಪಾಕಿಸ್ತಾನದಿಂದ ಬರುತ್ತಿದ್ದಾರೆ 200 ಮಂದಿ ಭಕ್ತರು
ರಾಮಮಂದಿರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 03, 2024 | 10:57 AM

ನವದೆಹಲಿ, ಮೇ 3: ಪಾಕಿಸ್ತಾನದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ರಾಮಮಂದಿರಕ್ಕೆ (Ram Temple) ಪಾಕಿಸ್ತಾನದಿಂದ 200 ಮಂದಿ ಭಕ್ತರು ಭೇಟಿ ನೀಡಲಿದ್ದಾರೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಿಂಧಿ ಸಮುದಾಯಕ್ಕೆ ಸೇರಿದ ಈ ಜನರು ಬಾಲರಾಮನ ದರ್ಶನ ಪಡೆದು ಗೌರವಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಈ 200 ಜನರು ಪಾಕಿಸ್ತಾನದಿಂದ ಪ್ರಯಾಣ ಬೆಳೆಸಿದ್ದಾರೆ. ವರದಿಗಳ ಪ್ರಕಾರ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಹೊರಟಿರುವ ಈ ಗುಂಪು ಪ್ರಯಾಗ್​ರಾಜ್ ನಗರದಿಂದ (ಔರಂಗಾಬಾದ್) ಅಯೋಧ್ಯೆಗೆ ಬಸ್ ಮೂಲಕ ತೆರಳಲಿದೆಯಂತೆ. ಪಾಕಿಸ್ತಾನದ ಈ 200 ಮಂದಿ ಸಿಂಧಿ ಜನರ ಪ್ರಯಾಣದಲ್ಲಿ ಭಾರತೀಯ ಸಿಂಧಿ ಸಮುದಾಯದ 150 ಮಂದಿಯೂ ಜೊತೆಯಲ್ಲಿದ್ದಾರೆ ಎಂಬ ಮಾಹಿತಿ ಇದೆ. ಈ ಮಾಹಿತಿಯನ್ನು ರಾಮಮಂದಿರ ಟ್ರಸ್ಟ್ ಅಧಿಕಾರಿಗಳು ನೀಡಿದ್ದಾರೆ.

ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಅಯೋಧ್ಯೆಯಲ್ಲಿರುವ ರಾಮ್ ಕೀ ಪೈಡಿ ಎಂಬ ಘಾಟ್ ಪ್ರದೇಶದಲ್ಲಿ ಈ ಪಾಕ್ ಭಕ್ತರ ನಿಯೋಗವನ್ನು ಸ್ವಾಗತ ಮಾಡಲಿದ್ದಾರೆ. ಅದಕ್ಕಾಗಿ ವಿಶೇಷ ಕಾರ್ಯಕ್ರಮ ಯೋಜಿಸಲಾಗಿದೆ.

ಇದನ್ನೂ ಓದಿ: 370ನೇ ವಿಧಿ ರದ್ದುಪಡಿಸಿ ಸಂವಿಧಾನಕ್ಕೆ ಶ್ರೇಷ್ಟ ಸೇವೆ ಸಲ್ಲಿಸಿದ್ದೇನೆ; ಪ್ರಧಾನಿ ಮೋದಿ

ಕೇಂದ್ರ ಸರ್ಕಾರಕ್ಕೆ ಸೇರಿದ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಸಿಂಧಿ ವಿಕಾಸ್ ಪರಿಷದ್​ನ ಸದಸ್ಯ ವಿಶ್ವಪ್ರಕಾಶ್ ರೂಪನ್ ಪ್ರಕಾರ ಪಾಕಿಸ್ತಾನದಿಂದ ಬರುತ್ತಿರುವ ಸಿಂಧಿಗಳ ನಿಯೋಗವು ಮೊದಲಿಗೆ ಭರತ್ ಕುಂಡ್​ನಲ್ಲಿ ಸೇರಲಿದ್ದಾರೆ. ಬಳಿಕ ಗುಪ್ತರ್ ಘಾಟ್​ಗೆ ಬರಲಿದ್ದಾರೆ. ಉದಾಸಿನ್ ಋಷಿ ಆಶ್ರಮ್ ಮತ್ತು ಶಬರಿ ರಸೋಯ್​ನಲ್ಲಿ ಈ ನಿಯೋಗಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಇಂದು ಶುಕ್ರವಾರ ಸಂಜೆ ರಾಮ್ ಕೀ ಪೈಡಿಯಲ್ಲಿ ನಡೆಯಲಿರುವ ಸರಯೂ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಯೋಧ್ಯೆಯ ಸಿಂಧಿ ಧಾಮ್ ಆಶ್ರಮ್​ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಭಾರತದ ವಿವಿಧ ಸಿಂಧಿ ಸಂಘಟನೆಗಳು ಪಾಕಿಸ್ತಾನದಿಂದ ಬಂದಿರುವ ತಮ್ಮ ಬಾಂಧವರನ್ನು ಸ್ವಾಗತಿಸಲಿದ್ದಾರೆ. ಸಂತ್ ಸಾದಾ ರಾಮ್ ದರ್ಬಾರ್ ಪೀಠದ ಮುಖ್ಯಸ್ಥ ಯುದಿಷ್ಠಿರ್ ಲಾಲ್ ಕೂಡ ಈ ವೇಳೆ ಇರಲಿದ್ದಾರೆ.

ಇದನ್ನೂ ಓದಿ: 25 ವರ್ಷದ ರಾಜಕೀಯದಲ್ಲಿ ನನಗೆ ಒಂದೂ ಕಪ್ಪು ಚುಕ್ಕಿ ಅಂಟಿಲ್ಲ; ಪ್ರಧಾನಿ ಮೋದಿ

ಈ ಪಾಕ್ ಸಿಂಧಿ ಸಮುದಾಯದ ರಾಮಭಕ್ತರು ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಮಾಡಿದ ಬಳಿಕ ಇಂದು ರಾತ್ರಿ (ಮೇ 3) ಲಕ್ನೋಗೆ ಹೋಗಿ ಅಲ್ಲಿಂದ ಛತ್ತೀಸ್​ಗಡದ ರಾಜಧಾನಿ ರಾಯಪುರಕ್ಕೆ ಹೋಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ