AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಣಿಗೆ ಕಳ್ಳತನಕ್ಕೆ ಪ್ರಾಯಶ್ಚಿತ್ತ; ರಾಮ ಮಂದಿರದಲ್ಲಿ 10 ದಿನದ ಶುದ್ಧೀಕರಣ ಆರಂಭ

ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತರು ನೀಡಿದ್ದ ದೇಣಿಗೆ ಕಳ್ಳತನವಾದ ಸಂಗತಿ ದೊಡ್ಡ ವಿವಾದವಾಗಿ ಪರಿಣಮಿಸಿದೆ. ಈ ಘಟನೆಗೆ ದೇಶಾದ್ಯಂತ ಭಕ್ತರು ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ. ರಾಮ ಮಂದಿರ ಟ್ರಸ್ಟ್​ ಬಗ್ಗೆಯೂ ಆಕ್ರೋಶ ಹೆಚ್ಚಾಗಿದೆ. ರಾಮ ಮಂದಿರದ ಕಾಣಿಕೆಗಳು ಕಳುವಾದ ಬೆನ್ನಲ್ಲೇ ರಾಮ ಮಂದಿರದ ಇಡೀ ಆವರಣವನ್ನು ಶುದ್ಧೀಕರಲು ರಾಮ ಮಂದಿರದಲ್ಲಿ ಮಂತ್ರ ಪಠಣ, ರುದ್ರಾಭಿಷೇಕ ಮತ್ತು ಹವನ, ವಿಶೇಷ ಆಚರಣೆಗಳು ಶುರುವಾಗಿವೆ. 10 ದಿನಗಳ ಕಾಲ ರಾಮ ಮಂದಿರದ ಶುದ್ಧೀಕರಣ ಪ್ರಕ್ರಿಯೆ ನಡೆಯಲಿದೆ.

ದೇಣಿಗೆ ಕಳ್ಳತನಕ್ಕೆ ಪ್ರಾಯಶ್ಚಿತ್ತ; ರಾಮ ಮಂದಿರದಲ್ಲಿ 10 ದಿನದ ಶುದ್ಧೀಕರಣ ಆರಂಭ
Ram MandirImage Credit source: PTI
ಸುಷ್ಮಾ ಚಕ್ರೆ
|

Updated on:Jul 17, 2026 | 5:05 PM

Share

ಮುಖ್ಯಾಂಶಗಳು

  • ರಾಮನಿಗೆ ನೀಡಲಾದ ಕಾಣಿಕೆಯ ಕಳ್ಳತನ
  • ರಾಮ ಮಂದಿರ ಟ್ರಸ್ಟ್​ನಿಂದ ದೇವಾಲಯದ ಶುದ್ಧೀಕರಣ ಶುರು
  • ರಾಮ ಮಂದಿರದಲ್ಲಿ 10 ದಿನ ವಿಶೇಷ ಪೂಜೆ, ಹೋಮ, ಮಂತ್ರ ಪಠಣ

ಅಯೋಧ್ಯೆ, ಜುಲೈ 17: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರ (Ram Mandir) ಸಂಕೀರ್ಣದಿಂದ ಕಾಣಿಕೆ ಕಳ್ಳತನ ನಡೆದಿದೆ. ಈ ಘಟನೆಗೆ ರಾಮ ಭಕ್ತರು ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. ಇದರ ನಡುವೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇವಾಲಯದ ಪಾವಿತ್ರ್ಯ ಮತ್ತು ಘನತೆಯನ್ನು ಪುನಃಸ್ಥಾಪಿಸಲು 10 ದಿನಗಳ ವಿಶೇಷ ಪ್ರಾಯಶ್ಚಿತ್ತ ಮತ್ತು ಶುದ್ಧೀಕರಣ ಆಚರಣೆಯನ್ನು ಪ್ರಾರಂಭಿಸಿದೆ. ದೇವಾಲಯದ ಗರ್ಭಗುಡಿ, ಗೋಡೆಗಳು ಮತ್ತು ದೇವಾಲಯದ ಸಂಕೀರ್ಣದ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಸಲಾಗುವ ಈ ವಿಶೇಷ ಆಚರಣೆಯಲ್ಲಿ ಒಟ್ಟು 70 ವೈದಿಕ ಆಚಾರ್ಯರು ಭಾಗವಹಿಸುತ್ತಿದ್ದಾರೆ.

ಇತ್ತೀಚೆಗೆ ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನದ ಘಟನೆಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮತ್ತು ಭಗವಂತನಲ್ಲಿ ಕ್ಷಮೆ ಯಾಚಿಸಲು ಈ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಗೋವಿಂದ್ ದೇವ್ ಗಿರಿ ಅವರ ಸೂಚನೆಯಂತೆ ಬುಧವಾರದಿಂದ ಈ ಶುದ್ಧೀಕರಣ ವಿಧಿವಿಧಾನಗಳು ಆರಂಭವಾಗಿದ್ದು, ಅಯೋಧ್ಯೆಯ ವಿವಿಧ ಗುರುಕುಲಗಳ ಮೂಲಕ ಪ್ರತಿದಿನ ‘ವಿಷ್ಣು ಸಹಸ್ರನಾಮ ಸ್ತೋತ್ರ’ ಪಠಣವನ್ನು ನಡೆಸಲಾಗುತ್ತಿದೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಭಗವಾನ್ ವಿಷ್ಣುವಿನ 1,000 ವಿಭಿನ್ನ ನಾಮಗಳನ್ನು ಜಪಿಸುವ ಈ ಆಚರಣೆಯು ಸಕಾರಾತ್ಮಕತೆ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಅಯೋಧ್ಯೆ ದೇಣಿಗೆ ವಿವಾದ: ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್

“ಶ್ರೀ ರಾಮ ಜನ್ಮಭೂಮಿ ದೇವಾಲಯದ ಆವರಣದಲ್ಲಿ ಕಾಣಿಕೆ ಕಳ್ಳತನವಾದ ಘಟನೆಯ ನಂತರ, ಮಂದಿರದ ಪವಿತ್ರತೆ ಮತ್ತು ಘನತೆಯನ್ನು ಮರುಸ್ಥಾಪಿಸಲು ಟ್ರಸ್ಟ್ ವತಿಯಿಂದ ದೇವಾಲಯದ ಆವರಣ ಮತ್ತು ವಿವಿಧ ಗುರುಕುಲಗಳಲ್ಲಿ 10 ದಿನಗಳ ವಿಶೇಷ ಪ್ರಾಯಶ್ಚಿತ್ತ ಮತ್ತು ಶುದ್ಧೀಕರಣ ವಿಧಿಯನ್ನು ಆರಂಭಿಸಲಾಗಿದೆ” ಎಂದು ಟ್ರಸ್ಟ್‌ನ ಖಜಾಂಚಿ ಗೋವಿಂದ್ ದೇವ್ ಗಿರಿ ತಿಳಿಸಿದ್ದಾರೆ. ಪ್ರತಿದಿನ ಕನಿಷ್ಠ 251 ಬಾರಿ ವಿಷ್ಣು ಸಹಸ್ರನಾಮ ಸ್ತೋತ್ರದ ಪಠಣ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ.

ದೇವಾಲಯದ ಶುದ್ಧೀಕರಣ ಹೇಗೆ?:

ವೇದ ಪಠಣ, ರುದ್ರಾಭಿಷೇಕ, ಹೋಮ, ಹವನ, ರಾಮಾರ್ಚನೆ ಮತ್ತು ಇತರ ಧಾರ್ಮಿಕ ಆಚರಣೆಗಳ ಮೂಲಕ ದೇವಾಲಯ ಸಂಕೀರ್ಣವನ್ನು ಶುದ್ಧೀಕರಿಸಲಾಗುತ್ತಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ದೇವಾಲಯದ ಪಾವಿತ್ರ್ಯತೆ ಮತ್ತು ಧಾರ್ಮಿಕ ಘನತೆಯನ್ನು ಕಾಪಾಡಿಕೊಳ್ಳಲು ಕಳ್ಳತನ, ಅಪವಿತ್ರಗೊಳಿಸುವಿಕೆ ಅಥವಾ ದೇವಾಲಯದೊಳಗೆ ಯಾವುದೇ ಇತರ ಅನುಚಿತ ಘಟನೆಯ ನಂತರ ಪ್ರಾಯಶ್ಚಿತ್ತ ಮತ್ತು ಶುದ್ಧೀಕರಣ ಆಚರಣೆಗಳು ಅಗತ್ಯವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ: ಜುಲೈ 20 ರಂದು ಸುಪ್ರೀಂಗೆ ಮಧ್ಯಂತರ ವರದಿ ಸಲ್ಲಿಸಲಿದೆ ಎಸ್​ಐಟಿ

ಎಸ್‌ಐಟಿ ತನಿಖೆ:

ಜೂನ್ 13ರಂದು ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಯಿತು. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ರಾಮ ಮಂದಿರದ ದೇಣಿಗೆ ಎಣಿಕೆಗೆ ಸಂಬಂಧಿಸಿದ್ದ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿವಾದ ತಾರಕಕ್ಕೇರುತ್ತಿದ್ದಂತೆಯೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಂದಿನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:02 pm, Fri, 17 July 26

Follow Us
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ
ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ
ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ
ಸುಪ್ರೀಂಕೋರ್ಟ್​​ ನೋಟಿಸ್ ಬಗ್ಗೆ ರೇವಣ್ಣ ಫಸ್ಟ್​​ ರಿಯಾಕ್ಷನ್​​
ಸುಪ್ರೀಂಕೋರ್ಟ್​​ ನೋಟಿಸ್ ಬಗ್ಗೆ ರೇವಣ್ಣ ಫಸ್ಟ್​​ ರಿಯಾಕ್ಷನ್​​
ಅಂಕೋಲಾದಲ್ಲಿ ಭಾರಿ ಮಳೆ: ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ
ಅಂಕೋಲಾದಲ್ಲಿ ಭಾರಿ ಮಳೆ: ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ
Live: ಮೊದಲ ಆಶಾಢ ಶುಕ್ರವಾರದಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆಯ ನೇರಪ್ರಸಾರ
Live: ಮೊದಲ ಆಶಾಢ ಶುಕ್ರವಾರದಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆಯ ನೇರಪ್ರಸಾರ
'ಆಷಾಢ ಮಾಸ ಶಕ್ತಿ ದೇವತೆಗಳ ಆರಾಧನೆಗೆ ಪ್ರಶಸ್ತವಾದ ಮಾಸ'
'ಆಷಾಢ ಮಾಸ ಶಕ್ತಿ ದೇವತೆಗಳ ಆರಾಧನೆಗೆ ಪ್ರಶಸ್ತವಾದ ಮಾಸ'