AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಗಲಭೆಗಳ ಪ್ರಮಾಣದಲ್ಲಿ ತೀವ್ರ ಕುಸಿತ: ಎನ್‌ಸಿಆರ್‌ಬಿ ಡೇಟಾ

ಎನ್‌ಸಿಆರ್‌ಬಿ ಅಂಕಿಅಂಶಗಳನ್ನು ತೋರಿಸುವ ಗ್ರಾಫ್ ಪ್ರಕಾರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಇದು ಏರಿಕೆಯಾಗಿದ್ದು ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಗಲಭೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.

ಮೋದಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಗಲಭೆಗಳ ಪ್ರಮಾಣದಲ್ಲಿ ತೀವ್ರ ಕುಸಿತ: ಎನ್‌ಸಿಆರ್‌ಬಿ ಡೇಟಾ
ದೆಹಲಿ ಗಲಭೆಯ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Jun 15, 2023 | 5:52 PM

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಯ ಇತ್ತೀಚಿನ ವಿಶ್ಲೇಷಣೆಯ ಪ್ರಕಾರ, ದೇಶದಲ್ಲಿ ಗಲಭೆಗಳ (riots)ಪ್ರಮಾಣವು ಕಳೆದ 50 ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ಸಮುದಾಯದಲ್ಲಿ ಧಾರ್ಮಿಕ ದ್ವೇಷವನ್ನು ಆಡಳಿತಾರೂಢ ಬಿಜೆಪಿ ಹುಟ್ಟುಹಾಕುತ್ತದೆ ಎಂದು ಪ್ರತಿಪಕ್ಷಗಳು  ಟೀಕಿಸುತ್ತಿದ್ದರೂ ದೇಶದಲ್ಲಿ ಗಲಭೆಗಳಲ್ಲಿ ಕುಸಿತ ಕಂಡು ಬಂದಿದೆ ಎಂದು ಎನ್‌ಸಿಆರ್‌ಬಿ ಗ್ರಾಫ್ (NCRB graph) ತೋರಿಸಿದೆ. ಭಾರತದ ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾದ ಪ್ರೊಫೆಸರ್ ಶಮಿಕಾ ರವಿ ಅವರು ಟ್ವೀಟ್ ಮಾಡಿದ ಗ್ರಾಫ್ ಪ್ರಕಾರ 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಗಲಭೆಗಳು ತೀವ್ರವಾಗಿ ಕಡಿಮೆಯಾಗಿದೆ. 2021 ರಲ್ಲಿ ಒಟ್ಟು ದಂಗೆ ಪ್ರಕರಣಗಳ ಸಂಖ್ಯೆಯೂ ಅತೀ ಕಡಿಮೆ ಆಗಿದೆ.

1980 ರ ದಶಕದಲ್ಲಿ ಗಲಭೆ ಮತ್ತು ಹಿಂಸಾಚಾರವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿತ್ತು, ನಂತರ 1990 ರ ದಶಕದ ಉತ್ತರಾರ್ಧದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಅಧಿಕಾರಾವಧಿಯಲ್ಲಿ ತೀವ್ರ ಕುಸಿತವನ್ನು ಕಂಡಿದೆ ಎಂದು NCRB ಹೇಳಿದೆ.

ಎನ್‌ಸಿಆರ್‌ಬಿ ಅಂಕಿಅಂಶಗಳನ್ನು ತೋರಿಸುವ ಗ್ರಾಫ್ ಪ್ರಕಾರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಇದು ಏರಿಕೆಯಾಗಿದ್ದು ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಗಲಭೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಪ್ರೊಫೆಸರ್ ಶಮಿಕಾ ರವಿ ಭಾರತದಲ್ಲಿ ಗಲಭೆಗಳು (ಹಿಂಸಾಚಾರ) ಇಳಿಮುಖವಾಗುತ್ತಿದೆ. ದೇಶವು 50 ವರ್ಷಗಳಲ್ಲಿ ಅತ್ಯಂತ ಶಾಂತಿಯುತವಾಗಿದೆ ಎಂದಿದ್ದಾರೆ. ಹೇಳಿದ ಕೇಳಿದ ಕತೆಗಳು ಏನೇ ಇರಬಹುದು ಆದರೆ ವಸ್ತುನಿಷ್ಠ ಡೇಟಾ ವಿಶ್ಲೇಷಣೆಯನ್ನು ಬದಲಿಸುವುದಿಲ್ಲ. ಭಾರತದಲ್ಲಿ ಗಲಭೆಗಳು 1998 ರಿಂದ ತೀವ್ರವಾಗಿ ಕಡಿಮೆಯಾಗುತ್ತಿವೆ ಎಂದು ಡೇಟಾ ನಮಗೆ ಹೇಳುತ್ತದೆ. (1981 ರಲ್ಲಿ ಗರಿಷ್ಠ ಗಲಭೆಗಳು: 110361) ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಗುಜರಾತ್‌ನಲ್ಲಿ ಒಂದು ತಿಂಗಳ ಹೆಣ್ಣು ಮಗುವಿಗೆ ಬಿಪೋರ್‌ಜಾಯ್ ಎಂದು ಹೆಸರಿಟ್ಟ ದಂಪತಿ

ಕೊನೆಯ ಭಾರಿ ಹಿಂಸಾಚಾರ ಮತ್ತು ಗಲಭೆಗಳು 2020 ರಲ್ಲಿ ಕಾಣಿಸಿಕೊಂಡವು, ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳಲ್ಲಿ 53 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Thu, 15 June 23

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ