ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ, 6 ಮಂದಿ ದುರ್ಮರಣ

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ, 6 ಮಂದಿ ದುರ್ಮರಣ

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮ್ಹಾಸವೆ ಗ್ರಾಮದಲ್ಲಿ ಭೀಕರ ರಸ್ತೆ ಅಪಘಾತಯೊಂದು ಸಂಭವಿಸಿದೆ.  ಬೆಳಿಗ್ಗಿನ ಜಾವ ಏಳು ಗಂಟೆಯ ಸುಮಾರು ಖಾಸಗಿ ಬಸ್ ಗೆ ಟ್ರಕ್ ಡಿಕ್ಕಿಯಾದ ಪರಿಣಾಮ ಟ್ರಾವಲ್ಸ್ ಚಾಲಕ ಸೇರಿ ಸ್ಥಳದಲ್ಲೇ 6 ಜನರು ದುರ್ಮರಣ ಹೊಂದಿದ್ದಾರೆ.  ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದ್ದು, 10 ಜನರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಗಾಯಾಳುಗಳಿಗೆ ಸಾತಾರಾ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಭೀಕರ ಅಪಘಾತದಿಂದ […]

sadhu srinath

|

Sep 12, 2019 | 1:37 PM

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮ್ಹಾಸವೆ ಗ್ರಾಮದಲ್ಲಿ ಭೀಕರ ರಸ್ತೆ ಅಪಘಾತಯೊಂದು ಸಂಭವಿಸಿದೆ.  ಬೆಳಿಗ್ಗಿನ ಜಾವ ಏಳು ಗಂಟೆಯ ಸುಮಾರು ಖಾಸಗಿ ಬಸ್ ಗೆ ಟ್ರಕ್ ಡಿಕ್ಕಿಯಾದ ಪರಿಣಾಮ ಟ್ರಾವಲ್ಸ್ ಚಾಲಕ ಸೇರಿ ಸ್ಥಳದಲ್ಲೇ 6 ಜನರು ದುರ್ಮರಣ ಹೊಂದಿದ್ದಾರೆ.

 ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದ್ದು, 10 ಜನರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಗಾಯಾಳುಗಳಿಗೆ ಸಾತಾರಾ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಭೀಕರ ಅಪಘಾತದಿಂದ ಟ್ರಾವೆಲ್ಸ್ ಬಸ್ ನ ಮುಂಬಾಗ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಸಂಕೇಶ್ವರ, ಹುಕ್ಕೇರಿ ತಾಲೂಕಿನ ವಿಶ್ವನಾಥ ವಿರೂಪಾಕ್ಷ ಗೌಡಿ (57) , ವಡಗಾಂವ್ ನ ರವೀಂದ್ರ ಕಲೇಗಾರ (45), ಅಬ್ಬಾಸಾಲಿ ಕಟಗಿ (45) ಮೃತರು. ಇನ್ನು ಮೂವರ ಹೆಸರು ವಿಳಾಸ ತಿಳಿದು ಬಂದಿಲ್ಲ.

Follow us on

Related Stories

Most Read Stories

Click on your DTH Provider to Add TV9 Kannada