ಕಾಶ್ಮೀರದಲ್ಲಿ ಎಲ್ಲಾ ಮೂರು ಉಗ್ರರು ಹತ; ಸೇನೆಯ ಸೂಪರ್ಹೀರೋ ‘ಫ್ಯಾಂಟಮ್’ ಹುತಾತ್ಮ
Terrorism in Jammu and Kashmir: ಜಮ್ಮು ಜಿಲ್ಲೆಯ ಅಖ್ನೂರ್ ಸೆಕ್ಟರ್ನಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಸಂಹರಿಸಿವೆ. ಈ ಉಗ್ರರು ಸೋಮವಾರ ಬೆಳಗ್ಗೆ ಸೇನಾ ವಾಹನಗಳ ಮೇಲೆ ಗುಂಡಿನ ದಾಳಿ ಎಸಗಿದ್ದರು. ನಿನ್ನೆ ಸಂಜೆ ಒಬ್ಬ, ಇವತ್ತು ಬೆಳಗ್ಗೆ ಇಬ್ಬರು ಉಗ್ರರು ವಧೆಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸೇನೆಯ ವೀರ ಶ್ವಾನ ಎನಿಸಿದ ‘ಫ್ಯಾಂಟಂ’ ಬಲಿಯಾಗಿದೆ.

ಜಮ್ಮು, ಅಕ್ಟೋಬರ್ 29: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್ನಲ್ಲಿ ನಿನ್ನೆ ಭದ್ರತಾ ಪಡೆಗಳ ಮೇಲೆ ದಾಳಿ ಎಸಗಿದ್ದ ಎಲ್ಲಾ ಮೂವರು ಉಗ್ರಗಾಮಿಗಳು ಹತರಾಗಿದ್ದಾರೆ. ನಿನ್ನೆ ಸಂಜೆಯೇ ಒಬ್ಬ ಉಗ್ರನನ್ನು ಕೊಲ್ಲಲಾಗಿತ್ತು. ಇಂದು ಮಂಗಳವಾರ ಇಬ್ಬರು ಭಯೋತ್ಪಾದಕರನ್ನು ಸೈನಿಕರು ವಧಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಸೇನೆಯ ನಾಲ್ಕು ವರ್ಷದ ಶ್ವಾನ ‘ಫ್ಯಾಂಟಂ’ ಹುತಾತ್ಮವಾಗಿದೆ.
ಸೇನೆಯ ವಿಶೇಷ ಪಡೆಗಳು ಮತ್ತು ಎನ್ಎಸ್ಜಿ ಕಮಾಂಡೋಗಳು ಸೋಮವಾರ ಬೆಳಗ್ಗೆಯಿಂದಲೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿವೆ. ಸೋಮವಾರ ಬೆಳಗ್ಗೆ ಎಲ್ಒಸಿ ಸಮೀಪ ಸೇನಾ ವಾಹನಗಳು ಹಾದು ಹೋಗುತ್ತಿದ್ದಾಗ, ಆಂಬುಲೆನ್ಸ್ವೊಂದರ ಮೇಲೆ ಉಗ್ರನೊಬ್ಬ ಗುಂಡಿನ ದಾಳಿ ನಡೆಸಿದ್ದ. ಆತ ಹಾಗೂ ಆತನ ಜೊತೆ ಇದ್ದ ಉಗ್ರರ ಗುಂಪು ಅಲ್ಲಿಂದ ತಪ್ಪಿಸಿಕೊಂಡು ಹೋದರು.
ಇದನ್ನೂ ಓದಿ: ಕೇರಳದ ಕಾಸರಗೋಡಿನಲ್ಲಿ ಪಟಾಕಿ ಅವಘಡ: ಭಯಾನಕ ವಿಡಿಯೋ ಇಲ್ಲಿದೆ
ಅದೇ ಪ್ರದೇಶದಲ್ಲಿ ಇದ್ದ ಹಾಸನ ದೇವಸ್ಥಾನದಲ್ಲಿನ ವಿಗ್ರಹಗಳನ್ನು ಉಗ್ರರು ವಿರೂಪಗೊಳಿಸಿ ಹೋಗಿದ್ದರು. ನಂತರ, ಭದ್ರತಾ ಪಡೆಗಳು ಇಡೀ ಪ್ರದೇಶದ ಸುತ್ತಮುತ್ತ ನಾಕಾಬಂದಿ ಹಾಕಿ, ಶೋಧ ಕಾರ್ಯಾಚರಣೆ ಆರಂಭಿಸಿದವು.
#WATCH | Akhnoor Encounter | Search operation enters second day after one terrorist has been gunned down and two have been hiding after firing upon an Army convoy near Asan, Sunderbani Sector yesterday.
(Visuals deferred by unspecified time) pic.twitter.com/Ub9x3wgK5T
— ANI (@ANI) October 29, 2024
ಉಗ್ರರನ್ನು ಹುಡುಕಲು ಬಿಎಂಪಿ-2 ಇನ್ಫ್ಯಾಂಟ್ರಿ ಕಾಂಬ್ಯಾಟ್ ವಾಹನಗಳು ಹೆಲಿಕಾಪ್ಟರ್ ಮತ್ತು ಡ್ರೋನ್ಗಳನ್ನು ಬಳಸಲಾಯಿತು.
ಸೇನಾ ಶ್ವಾನ ‘ಫ್ಯಾಂಟಂ’ ವೀರಮರಣ
ಭದ್ರತಾ ಪಡೆಗಳು ಉಗ್ರರನ್ನು ಪತ್ತೆ ಮಾಡಿ ಅವರನ್ನು ಸುತ್ತುವರಿಯತೊಡಗಿದಾಗ ಉಗ್ರರು ಗುಂಡಿನ ದಾಳಿ ಎಸಗಿದರು. ಈ ವೇಳೆ ನಾಲ್ಕು ವರ್ಷದ ಸೇನಾ ಶ್ವಾನ ‘ಫ್ಯಾಂಟಂ’ ಬಲಿಯಾಗಿದೆ.
ಇದನ್ನೂ ಓದಿ: ಜಮ್ಮುವಿನ ಅಖ್ನೂರ್ನಲ್ಲಿ ಭದ್ರತಾ ಪಡೆಗಳ ವಾಹನಗಳ ಮೇಲೆ ಉಗ್ರರ ದಾಳಿ; ಗುಲ್ಮಾರ್ಗ್ನಲ್ಲಿ ಗುಂಡಿನ ಚಕಮಕಿ
‘ಧೈರ್ಯಶಾಲಿ ಸೇನಾ ಶ್ವಾನವಾದ ಫ್ಯಾಂಟಂ ನಿಜವಾದ ಹೀರೋ, ಈ ನಾಯಿಯ ಬಲಿದಾನಕ್ಕೆ ನಮ್ಮ ಸಲ್ಯೂಟ್. ಫ್ಯಾಂಟಂನ ಧೈರ್ಯ, ವಿಧೇಯತೆ ಮತ್ತು ಬದ್ಧತೆಯನ್ನು ಯಾವತ್ತೂ ಮರೆಯಲು ಆಗಲ್ಲ’ ಎಂದು ಜಮ್ಮುವಿನ ವೈಟ್ ನೈಟ್ ಕಾರ್ಪ್ಸ್ ವಿಭಾಗವು ತನ್ನ ಎಕ್ಸ್ ಪೋಸ್ಟ್ನಲ್ಲಿ ಬರೆದಿದೆ.
Update
We salute the supreme sacrifice of our true hero—a valiant #IndianArmy Dog, #Phantom.
As our troops were closing in on the trapped terrorists, #Phantom drew enemy fire, sustaining fatal injuries. His courage, loyalty, and dedication will never be forgotten.
In the… pic.twitter.com/XhTQtFQFJg
— White Knight Corps (@Whiteknight_IA) October 28, 2024
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




