AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಂಡಿಯಾ’ ಅಧಿಕಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಅಥವಾ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ: ಶಶಿ ತರೂರ್

Shashi Tharoor: ಚುನಾವಣೋತ್ತರ ಸನ್ನಿವೇಶದ ಕುರಿತು ಮಾತನಾಡಿದ ಅವರು, ''ಒಮ್ಮೆ ಫಲಿತಾಂಶ ಬಂದರೆ, ಅದು ಒಂದು ಪಕ್ಷವಲ್ಲದ ಸಮ್ಮಿಶ್ರವಾಗಿರುವ ಕಾರಣ, ಆ ಪಕ್ಷಗಳ ನಾಯಕರು ಒಟ್ಟಾಗಿ ಯಾರನ್ನಾದರೂ ಆರಿಸಬೇಕಾಗುತ್ತದೆ ಎಂದು. ಆದರೆ ನನ್ನ ಊಹೆ ಏನೆಂದರೆ, ಕಾಂಗ್ರೆಸ್ ಪಕ್ಷದಿಂದ ಖರ್ಗೆ ಆಗಿರಬಹುದು, ಆಗ ಅವರು ಭಾರತದ ಮೊದಲ ದಲಿತ ಪ್ರಧಾನಿಯಾಗುತ್ತಾರೆ

'ಇಂಡಿಯಾ' ಅಧಿಕಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಅಥವಾ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ: ಶಶಿ ತರೂರ್
ಶಶಿ ತರೂರ್
ರಶ್ಮಿ ಕಲ್ಲಕಟ್ಟ
|

Updated on: Oct 17, 2023 | 3:11 PM

Share

ತಿರುವನಂತಪುರಂ ಅಕ್ಟೋಬರ್ 17: 2024ರ ಲೋಕಸಭಾ ಚುನಾವಣೆಯಲ್ಲಿ (2024 Lok Sabha polls) ಇಂಡಿಯಾ ಮೈತ್ರಿಕೂಟ (INDIA alliance) ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅಥವಾ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅವರನ್ನು ಪ್ರಧಾನಿಯಾಗಿ ನಾಮನಿರ್ದೇಶನ ಮಾಡಬಹುದು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಶಶಿ ತರೂರ್ (Shashi Tharoor) ಹೇಳಿದ್ದಾರೆ. ಪ್ರತಿಪಕ್ಷಗಳ ಒಕ್ಕೂಟದ ಉಪಸ್ಥಿತಿಯಿಂದಾಗಿ ಮುಂದಿನ ವರ್ಷದ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶದ ಸಾಧ್ಯತೆಯನ್ನು ತರೂರ್ ಸೂಚಿಸಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಸೋಲಿಸುವ ಮೂಲಕ ಇಂಡಿಯಾ ಮೈತ್ರಿಕೂಟವು ಕೇಂದ್ರದಲ್ಲಿ ಅಧಿಕಾರವನ್ನು ವಶಪಡಿಸಿಕೊಳ್ಳುವ ಅವಕಾಶವಿದೆ ಎಂದಿದ್ದಾರೆ ತರೂರ್.

ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಸೋಮವ ಟೆಕ್ನೋಪಾರ್ಕ್‌ನಲ್ಲಿ ತನ್ನ ಕಚೇರಿಯನ್ನು ಉದ್ಘಾಟಿಸಿದ ನಂತರ ಯುಎಸ್ ಮೂಲದ ಮತ್ತು ಸಿಲಿಕಾನ್ ವ್ಯಾಲಿ-ಇನ್‌ಕ್ಯುಬೇಟೆಡ್ ಡಿ2ಸಿ (ಡೈರೆಕ್ಟ್-ಟು-ಗ್ರಾಹಕ) ಮಾರುಕಟ್ಟೆಯ ವೇ ಡಾಟ್ ಕಾಮ್‌ನ ವೃತ್ತಿಪರರೊಂದಿಗೆ ಸಂವಾದ ನಡೆಸಿ ಮಾತನಾಡಿದ ತರೂರ್ ಕಾದು ನೋಡೋಣ ಎಂದು ಹೇಳಿದ್ದಾರೆ.

ಚುನಾವಣೋತ್ತರ ಸನ್ನಿವೇಶದ ಕುರಿತು ಮಾತನಾಡಿದ ಅವರು, ”ಒಮ್ಮೆ ಫಲಿತಾಂಶ ಬಂದರೆ, ಅದು ಒಂದು ಪಕ್ಷವಲ್ಲದ ಸಮ್ಮಿಶ್ರವಾಗಿರುವ ಕಾರಣ, ಆ ಪಕ್ಷಗಳ ನಾಯಕರು ಒಟ್ಟಾಗಿ ಯಾರನ್ನಾದರೂ ಆರಿಸಬೇಕಾಗುತ್ತದೆ ಎಂದು. ಆದರೆ ನನ್ನ ಊಹೆ ಏನೆಂದರೆ, ಕಾಂಗ್ರೆಸ್ ಪಕ್ಷದಿಂದ ಖರ್ಗೆ ಆಗಿರಬಹುದು, ಆಗ ಅವರು ಭಾರತದ ಮೊದಲ ದಲಿತ ಪ್ರಧಾನಿಯಾಗುತ್ತಾರೆ ಅಥವಾ ರಾಹುಲ್ ಗಾಂಧಿ ಆಗಿರಬಹುದು, ಏಕೆಂದರೆ ಅದು (ಕಾಂಗ್ರೆಸ್) ಅನೇಕ ವಿಧಗಳಲ್ಲಿ ಕುಟುಂಬ ನಡೆಸುವ ಪಕ್ಷವಾಗಿದೆ.

ಇದನ್ನೂ ಓದಿ:  ನಾ ಖಾವೂಂಗಾ,ನಾ ಖಾನೇ ದೂಂಗಾ ಎಂದು ಮೋದಿ ಹೇಳಿದ್ದು ಬೀಫ್ ಬಗ್ಗೆ ಆಗಿರಬೇಕು: ಶಶಿ ತರೂರ್ ಟ್ವೀಟ್

ಮಾಜಿ ಕೇಂದ್ರ ಸಚಿವರಾಗಿರುವ ತರೂರ್, ಪ್ರಧಾನಿ ಸಮಾನರಲ್ಲಿ ಮೊದಲಿಗರು. ಅವರಿಗೆ ವಹಿಸಲಾದ ಯಾವುದೇ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯದ ಬಗ್ಗೆ ಅವರು ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!
ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?