AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗೆ ಸಿಂಗಾಪುರದಿಂದ ಬಂದಿದ್ದ ವ್ಯಕ್ತಿಯ ದಾರುಣ ಹತ್ಯೆ; ಪಾರ್ಕಿಂಗ್ ವಿಷಯಕ್ಕೆ ಗುಂಡಿಕ್ಕಿ ಕೊಂದ ಪಕ್ಕದ ಮನೆಯವ

ಹರಿಯಾಣದ ಫರೀದಾಬಾದ್‌ನಲ್ಲಿ ಧನತೇರಸ್ ರಾತ್ರಿ ಅತ್ಯಂತ ಭೀಕರ ಘಟನೆಯೊಂದು ನಡೆದಿದ್ದು, ಅನಿವಾಸಿ ಭಾರತೀಯರೊಬ್ಬರನ್ನು ಕಾರು ಪಾರ್ಕಿಂಗ್ ಗಲಾಟೆಗೆ ಸಂಬಂಧಿಸಿದಂತೆ ನೆರೆಮನೆಯವನು ತನ್ನ ಲೈಸೆನ್ಸ್ ಹೊಂದಿದ್ದ ಪಿಸ್ತೂಲಿನಿಂದ 15 ಸುತ್ತು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಮೃತರನ್ನು ಸಿಂಗಾಪುರದಲ್ಲಿ ನೆಲೆಸಿದ್ದ 42 ವರ್ಷದ ಪರಂಜೀತ್ ಧನಕರ್ ಎಂದು ಗುರುತಿಸಲಾಗಿದೆ. ಅವರ ದೇಹಕ್ಕೆ ಸುಮಾರು 8ರಿಂದ 9 ಗುಂಡುಗಳು ತಗುಲಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಣ್ಣನ ಮಗನ ಮದುವೆಗೆ ಸಿಂಗಾಪುರದಿಂದ ಬಂದಿದ್ದ ಅವರು ದಾರುಣವಾಗಿ ಕೊಲೆಯಾಗಿದ್ದಾರೆ.

ಮದುವೆಗೆ ಸಿಂಗಾಪುರದಿಂದ ಬಂದಿದ್ದ ವ್ಯಕ್ತಿಯ ದಾರುಣ ಹತ್ಯೆ; ಪಾರ್ಕಿಂಗ್ ವಿಷಯಕ್ಕೆ ಗುಂಡಿಕ್ಕಿ ಕೊಂದ ಪಕ್ಕದ ಮನೆಯವ
ಪರಂಜೀತ್ ಧನಕರ್
ಸುಷ್ಮಾ ಚಕ್ರೆ
|

Updated on: Nov 07, 2026 | 4:51 PM

Share

ಫರೀದಾಬಾದ್, ನವೆಂಬರ್ 7: ಹರಿಯಾಣದ ಫರೀದಾಬಾದ್‌ನ ಸೆಕ್ಟರ್ 21ಸಿಯಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಿಂಗಾಪುರದಲ್ಲಿ ನೆಲೆಸಿದ್ದ 42 ವರ್ಷದ ಕಾರ್ಪೊರೇಟ್ ಅಧಿಕಾರಿ ಪರಂಜೀತ್ ಧನಕರ್ ಅವರನ್ನು ಪಾರ್ಕಿಂಗ್ ಗಲಾಟೆಗೆ ಸಂಬಂಧಿಸಿದಂತೆ ನೆರೆಮನೆಯವನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಸುಮಾರು 15 ಸುತ್ತು ಗುಂಡು ಹಾರಿಸಿದ್ದು, ಪರಂಜೀತ್ ಅವರ ದೇಹಕ್ಕೆ 8ರಿಂದ 9 ಗುಂಡುಗಳು ತಗುಲಿವೆ. ತೀವ್ರವಾಗಿ ಗಾಯಗೊಂಡಿದ್ದ ಅವರು ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೂಲತಃ ಹಿಸಾರ್‌ನವರಾದ ಪರಂಜೀತ್ ಅವರು ಸಿಂಗಾಪುರದ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ನವೆಂಬರ್ 24ರಂದು ನಡೆಯಲಿದ್ದ ಅಣ್ಣನ ಮಗನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಅವರು ಘಟನೆ ನಡೆಯುವ ಕೇವಲ 2 ದಿನಗಳ ಹಿಂದಷ್ಟೇ ಫರೀದಾಬಾದ್‌ಗೆ ಆಗಮಿಸಿದ್ದರು. ಧನತೇರಸ್ ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಪರಂಜೀತ್ ಜಿಮ್‌ನಿಂದ ಮನೆಗೆ ಹಿಂತಿರುಗಿದಾಗ, ಅದೇ ಕಟ್ಟಡದ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದ ಮೋಹನ್ ಶರ್ಮಾ ಎಂಬಾತನೊಂದಿಗೆ ಕಾರು ಪಾರ್ಕ್ ಮಾಡುವ ವಿಚಾರದಲ್ಲಿ ಗಲಾಟೆ ಪ್ರಾರಂಭವಾಯಿತು.

ಇದನ್ನೂ ಓದಿ: ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರು ಸರಣಿ ಕೊಲೆ ಪ್ರಕರಣ; ಆ 15 ದಿನಗಳಲ್ಲಿ ಏನಾಯಿತು? ಇಲ್ಲಿದೆ ಕಂಪ್ಲೀಟ್ ಟೈಮ್‌ಲೈನ್

ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಆಕ್ರೋಶಗೊಂಡ ಮೋಹನ್ ಶರ್ಮಾ, ತನ್ನ ಪಿಸ್ತೂಲ್‌ನಿಂದ ಪರಂಜೀತ್ ಅವರ ಮೇಲೆ ಸತತವಾಗಿ ಗುಂಡಿನ ಮಳೆಗರೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಪರಂಜೀತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಾಯಿಯ ವಿಚಾರದಲ್ಲಿ ಗಲಾಟೆ:

ಪೊಲೀಸರ ಮಾಹಿತಿಯ ಪ್ರಕಾರ, ಎರಡೂ ಕುಟುಂಬಗಳ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ನಿರಂತರ ಜಗಳ ನಡೆಯುತ್ತಿತ್ತು. ಈ ಘಟನೆಗೆ 5 ದಿನಗಳ ಮೊದಲು ಸಾಕುನಾಯಿಯ ವಿಚಾರದಲ್ಲಿ ಉಂಟಾದ ವಿವಾದಕ್ಕೆ ಆರೋಪಿ ಮೋಹನ್, ಪರಂಜೀತ್ ಅವರ ಮಗನಿಗೆ ಅಸಭ್ಯವಾಗಿ ನಿಂದಿಸಿದ್ದ ಎನ್ನಲಾಗಿದೆ. ಇದೀಗ ಕೊಲೆ ಮಾಡಿರುವ ಮೋಹನ್ ಶರ್ಮಾ ತನ್ನ ಸಂಪೂರ್ಣ ಕುಟುಂಬದೊಂದಿಗೆ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಬೆಂಗಳೂರು ಸರಣಿ ಕೊಲೆ: ಇನ್ನಷ್ಟು ಜನರ ಹತ್ಯೆಯನ್ನು ತಡೆಯಿತು ಆ ಒಂದು ಕನ್ನಡ ಮೆಸೇಜ್! ಹೇಗೆ ಗೊತ್ತೇ? ಇಲ್ಲಿದೆ ಮಾಹಿತಿ

ಈ ದುರಂತ ನಡೆದ ತಕ್ಷಣ ಮೃತರ ಮಗ ಶೌರ್ಯ ಧನಕರ್ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸೂರಜ್‌ಕುಂಡ್ ಪೊಲೀಸ್ ಠಾಣೆಯಲ್ಲಿ ಮೋಹನ್ ಶರ್ಮಾ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕೊಲೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಫೋರೆನ್ಸಿಕ್ ತಂಡ ಮತ್ತು ಕ್ರೈಂ ಬ್ರಾಂಚ್ ಪೊಲೀಸರು ಭೇಟಿ ನೀಡಿ ಖಾಲಿ ಕ್ಯಾಟ್ರಿಜ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹವನ್ನು ಇಎಸ್‌ಐಸಿ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕಾಗಿ ಸೂರಜ್‌ಕುಂಡ್ ಪೊಲೀಸರು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಕೃಷ್ಣ ಭೈರೇಗೌಡ ಎದುರೇ ಕಾಂಗ್ರೆಸ್ ಮಾಜಿ MLC, ಬಿಜೆಪಿ MLA ​ಹೈಡ್ರಾಮಾ!
ಕೃಷ್ಣ ಭೈರೇಗೌಡ ಎದುರೇ ಕಾಂಗ್ರೆಸ್ ಮಾಜಿ MLC, ಬಿಜೆಪಿ MLA ​ಹೈಡ್ರಾಮಾ!
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್